ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರಬಹುದು ಎಂದು ಊಹಾಕೋಹಗಳು ಹರದಾಡುತ್ತಿದ್ದವು.
77ನೇ ಬ್ರಿಟಿಷ್ ಅಕಾಡೆಮಿ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುವ ಸಂದರ್ಭದಲ್ಲಿ ಅವರು ತಮ್ಮ ಹೊಟ್ಟೆಯ ಭಾಗವನ್ನು ಮರೆಮಾಚಿಕೊಂಡಿದ್ದರು. ಆ ಬಳಿಕ ದೀಪಿಕಾ ಪಡುಕೋಣೆ ಯವರು ಗರ್ಭಿಣಿಯಾಗಿರಬಹುದು ಎಂದು ವದಂತಿಗಳು ಹರದಾಡುತ್ತಿದ್ದವು.

ಈ ಎಲ್ಲಾ ವದಂತಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ
ತಾವು ಗರ್ಭವತಿ ಆಗಿರುವುದನ್ನು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ತಮ್ಮ ಅಭಿನಯದಿಂದಲೇ ಪ್ರತಿಯೊಬ್ಬರನ್ನು ರಂಜಿಸಿರುವ ಬಾಲಿವುಡ್ ನ ಕ್ಯೂಟ್ ಕಪಲ್ ಎಂದು ಹೆಸರುವಾಸಿಯಾಗಿರುವ, ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಗರ್ಭಿಣಿ ಆಗಿರುವುದನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಸೆಪ್ಟೆಂಬರ್ ನಲ್ಲಿ ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

14 ನವೆಂಬರ್ 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು. ಆರು ವರ್ಷಗಳ ಬಳಿಕ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆಯವರು. ತಮ್ಮ ಖುಷಿಯನ್ನ ಸೋಶಿಯಲ್ ಮೀಡಿಯಾದ ಮೂಲಕ ವ್ಯಕ್ತಪಡಿಸಿದ್ದಾರೆ. ಕೊನೆಯದಾಗಿ ಹೃತಿಕ್ ರೋಷನ್ ಅವರ ಜೊತೆಗೆ ಪೈರೆಟ್ ಸಿನಿಮಾದಲ್ಲಿ ಅಭಿನಯಿಸಿದ್ದ ದೀಪಿಕಾ ಪಡುಕೋಣೆಯವರು. ಸ್ವಲ್ಪ ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ.