
ನಮ್ಮ ಸೌರ ಮಂಡಲದಲ್ಲಿರುವ ಗುರು, ಶನಿ, ಯುರೇನಸ್ ಮತ್ತು ನೆಪ್ಚುನ್ ಗ್ರಹಗಳು ತಮ್ಮ ಸುತ್ತಲೂ rings ಗಳನ್ನು ಹೊಂದಿರುವ ವಿಷಯ ನಮಗೆಲ್ಲ ತಿಳಿದೆ ಇದೆ. ಆದರೆ ಎಂದಾದರು ನಮ್ಮ ಭೂಮಿಯ ಸುತ್ತ ಏಕೆ ಈ ರೀತಿಯ rings ಗಳು ಇಲ್ಲವೆಂದು ಯೋಚಿಸಿದ್ದೀರ? ಬನ್ನಿ ಇಂದು ನಿಮಗೆ ಈ rings ಗಳು ಹೇಗೆ ಸೃಷ್ಟಿಯಾಗುತ್ತವೆ ಎಂದು ವಿವರಿಸುತ್ತ ಅಕಸ್ಮಾತ್ ನಮ್ಮ ಭೂಮಿಯ ಸುತ್ತ rings ಗಳು ಇದ್ದಿದ್ದರೆ ಎನಾಗುತ್ತಿತ್ತು ಎನ್ನುವ ಸಂಗತಿಯನ್ನು ತಿಳಿಸಿಕೊಡುತ್ತೇವೆ.
ಗುರು ಗ್ರಹವು halo ring, main ring, Amalthea gossamer ring ಮತ್ತು Thebe gossamer ring ಎನ್ನುವ 4 ಜೊತೆಯ rings ಅನ್ನು ಹೊಂದಿದೆ. ಇದರಲ್ಲಿ halo ring ಗುರು ಗ್ರಹಕ್ಕೆ ಸಮೀಪವಾದದ್ದು ಬರೋಬ್ಬರಿ 12,500 ಕಿಲೋಮೀಟರ್ ವರೆಗು ಇದು ವಿಸ್ತರಿಸಿದೆ. ಗುರು ಗ್ರಹದ ಸುತ್ತ ಸುತ್ತುತ್ತಿರುವ ಚಂದ್ರನ ಮೇಲೆ ಕ್ಷುದ್ರ ಗ್ರಹಗಳ ತುಂಡು ಬಂದು ಅಪ್ಪಳಿಸಿದಾಗ ಅದರಿಂದ ಸೃಷ್ಟಿಯಾದ dust particles ಗುರು ಗ್ರಹದ ಗುರುತ್ವಾಕರ್ಷಣೆಯ ಬಲಕ್ಕೆ ಸಿಕ್ಕು ಅದರ ಸುತ್ತ ಸುತ್ತಲು ಶುರು ಮಾಡುತ್ತದೆ. ಇದೇ ರೀತಿ ಶನಿ ಗ್ರಹದ ಸುತ್ತ 12 rings ಗಳಿದ್ದು ಅದರ ಸುತ್ತಲು ಕೂಡ ಅನೇಕ dust particles ಗಳಿವೆ. ನಮ್ಮ ಸೌರ ಮಂಡಲ ರಚನೆಯಾಗಬೇಕಾದರೆ ಉಳಿದಿರುವ ಅನೇಕ dust particles ಮತ್ತು ಅನೇಕ ಕ್ಷುದ್ರ ಗ್ರಹದ ತುಂಡುಗಳು ಇದರಲ್ಲಿವೆ. ಗುರು ಮತ್ತು ಶನಿ ಗ್ರಹದ ಗುರುತ್ವಾಕರ್ಷಣೆ ಬಲವು ಸಾಕಷ್ಟು ಹೆಚ್ಚಿರುವುದರಿಂದ ನಮ್ಮ ಸೌರ ಮಂಡಲದಲ್ಲಿರುವ ಅನೇಕ ಕ್ಷುದ್ರ ಗ್ರಹಗಳನ್ನು ತನ್ನೆಡೆಗೆ ಈ ಗ್ರಹಗಳು ಸೆಳೆದುಕೊಳ್ಳುತ್ತವೆ. ಇದೇ ರೀತಿ ಯುರೇನಸ್ ಮತ್ತು ನೆಪ್ಚುನ್ ಗ್ರಹಗಳು ಕೂಡ ತಮ್ಮ ಸುತ್ತ rings ಗಳನ್ನು ಹೊಂದಿದ್ದು ಕೈಪರ್ ಬೆಲ್ಟ್ ನಿಂದ ಬರುವ ಅನೇಕ ಕ್ಷುದ್ರ ಗ್ರಹಗಳನ್ನು ಈ ಗ್ರಹಗಳು ತಮ್ಮ ಗುರುತ್ವಾಕರ್ಷಣೆಯ ಬಲದಿಂದ ತಮ್ಮೆಡೆಗೆ ಸೆಳೆದುಕೊಳ್ಳುತ್ತಿವೆ.
ಈಗ ನಿಮಗೆ ನಮ್ಮ ಭೂಮಿಯು ಏಕೆ ತನ್ನ ಸುತ್ತ rings ಗಳನ್ನು ಹೊಂದಿಲ್ಲ ಎನ್ನುವುದನ್ನು ವಿವರಿಸುವೆ ಕೇಳಿ. ನಮ್ಮ ಭೂಮಿಯ ಸುತ್ತ rings ಗಳು ಇರದೆ ಇರುವುದಕ್ಕೆ ಪ್ರಮುಖ ಕಾರಣ “Roche limit”. ನಮಗೆಲ್ಲ ತಿಳಿದ ಹಾಗೆ ಭೂಮಿಯ ಸುತ್ತ ಚಂದ್ರನು ಸುತ್ತಲು ಪ್ರಮುಖ ಕಾರಣ ಭೂಮಿಯ ಗುರುತ್ವಾಕರ್ಷಣೆಯ ಬಲದ ತೆಕ್ಕೆಯ ಒಳಗೆ ಚಂದ್ರನು ಸಿಲುಕಿಕೊಂಡಿರುವುದರಿಂದ. ಆದರೆ ಅಕಸ್ಮಾತ್ ಚಂದ್ರನು ಗ್ರಹದ ಗುರುತ್ವಾಕರ್ಷಣೆಯ ಬಲದ ಕಡೆಗೆ ಹೆಚ್ಚು ಆಕರ್ಷಿತವಾದರೆ ಆಗ ಒಂದು ರೇಖೆಯನ್ನು ದಾಟಿ ಗ್ರಹದ ಹತ್ತಿರ ಬರುತ್ತಾನೆ. ಆ ರೇಖೆಯ ಒಳಗೆ ಬರುತ್ತಿದ್ದಂತೆ tidal force ನಿಂದಾಗಿ ಚಂದ್ರನು ಸ್ಪೋಟವಾಗಿ ಗ್ರಹದ ಸುತ್ತ ಸುತ್ತಲು ಶುರು ಮಾಡುತ್ತಾನೆ. ಆ ರೇಖೆಗೆ roche limit ಎಂದು ಕರೆಯುತ್ತಾರೆ. ಈ ರೇಖೆಯನ್ನು ದಾಟಿ ಒಳಬರುವ ಯಾವುದೇ ಚಂದ್ರ, ಕ್ಷುದ್ರ ಗ್ರಹಗಳು ಛಿದ್ರವಾಗಿ ಗ್ರಹದ ಸುತ್ತ ಸುತ್ತಲು ಶುರು ಮಾಡುತ್ತವೆ. ಈ roche limit ಎಲ್ಲಾ ಗ್ರಹಗಳಿಗೂ ಒಂದೇ ತರಹ ಇರುವುದಿಲ್ಲ. ಗ್ರಹಗಳ ಗುರುತ್ವಾಕರ್ಷಣೆಯ ಬಲ ಮತ್ತು ಅದರ ವೃತ್ತಾಕಾರದ ಆಧಾರದ ಮೇಲೆ ಈ ರೇಖೆಯು ವಿಸ್ತಾರವಾಗಿರುತ್ತದೆ. ಇನ್ನು ಇದುವರೆಗು ನಮ್ಮ ಭೂಮಿಯ roche limit ಒಳಗೆ ಚಂದ್ರ, ಕ್ಷುದ್ರ ಗ್ರಹ ಅಥವ ಧೂಮಕೇತುಗಳು ಪ್ರವೇಶಿಸಿಲ್ಲ. ಆದ್ದರಿಂದಲೆ ಭೂಮಿಯ ಸುತ್ತ ಯಾವುದೆ rings ಗಳು ಸೃಷ್ಟಿಯಾಗಿಲ್ಲ.
ಇನ್ನು ಈ roche limit ಅನ್ನು ಒಂದು ಸೂತ್ರದಿಂದ ಕಂಡುಹಿಡಿಯಲಾಗುತ್ತದೆ. ಆ ಸೂತ್ರ ಈ ರೀತಿ ಇದೆ. d=2.4xR(pM/pm)1/3.
Where Pm = Density of primary body, pm = density of object entering,
R = Radius of main body.
ಈ ಸೂತ್ರದ ಪ್ರಕಾರ ತಿಳಿಯುವುದೇನೆಂದರೆ ಕೇವಲ roche limit ರೇಖೆಯನ್ನು ಪ್ರವೇಶಿಸಿದ ಮಾತ್ರಕ್ಕೆ ಒಂದು object ಛಿದ್ರವಾಗಿ ಗ್ರಹದ ಸುತ್ತ ಸುತ್ತಲು ಶುರು ಮಾಡುವುದಿಲ್ಲ. ಅದು ಆ object ಮತ್ತು ಗ್ರಹದ ಸಾಂದ್ರತೆ ಮೇಲೆ ಕೂಡ ಅವಲಂಭಿತವಾಗಿರುತ್ತದೆ.
ಈ roche limit ಎನ್ನುವುದು ಕೇವಲ ಗ್ರಹಗಳಿಗೆ ಮಾತ್ರವಲ್ಲ ಚಂದ್ರಗಳಿಗು ಇರುತ್ತದೆ.ನಮ್ಮ ಚಂದ್ರನ roche limit 18 ಸಾವಿರ ಕಿಲೋಮೀಟರ್ ಇದೆ. ಇದರ ಒಳಗೆ ಯಾವುದೆ ಕ್ಷುದ್ರ ಗ್ರಹದ ತುಂಡುಗಳು ಪ್ರವೇಶಿಸಿದರೆ tidal force ನಿಂದಾಗಿ ಅವುಗಳು ಛಿದ್ರವಾಗಿ ಚಂದ್ರನನ್ನು ಸುತ್ತಲು ಶುರು ಮಾಡುತ್ತವೆ. ಇನ್ನು ಭೂಮಿಗೆ ಇರುವ roche limit 35 ಸಾವಿರ ಕಿಲೋಮೀಟರ್. ಇದರ ಒಳಗೆ ಪ್ರವೇಶಿಸಿದ ಕ್ಷುದ್ರ ಗ್ರಹದ ತುಂಡುಗಳು ಛಿದ್ರವಾಗಿ ಭೂಮಿಯ ಸುತ್ತ ಸುತ್ತಲು ಶುರು ಮಾಡುತ್ತವೆ. ನೆನಪಿರಲಿ ಅಕಸ್ಮಾತ್ ನಮ್ಮ ಚಂದ್ರನು ಈ roche limit ಒಳಗೆ ಪ್ರವೇಶಿಸಿದರೆ ಅದು ಕೂಡ ಛಿದ್ರವಾಗಿ ಅದರ ತುಂಡುಗಳು ಭೂಮಿಯ ಸುತ್ತ ಸುತ್ತಲು ಶುರು ಮಾಡುತ್ತವೆ. ಇದರಿಂದ ಭೂಮಿಯ ಸುತ್ತ ಒಂದು ring ಸೃಷ್ಟಿಯಾಗುತ್ತದೆ.
Follow Karunadu Today for more Interesting Facts & Stories.
Click here to Join Our Whatsapp Group