"ಅಧ್ಯಾತ್ಮಿಕ ಮಾಹಿತಿ"

ಭಾರತೀಯ ಸಂಪ್ರದಾಯದಲ್ಲಿ ಹಲವಾರು ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತಿದು ಕೆಲವೊಂದು ಹಬ್ಬಗಳು ಅದರದೇ ಆದ ಆಚಾರ ವಿಚಾರಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನ ನಿಯಮ ಅನುಸಾರವಾಗಿ ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಕೆಲವೇ ಕೆಲವು ಹಬ್ಬಗಳಲ್ಲಿ ಮನೆಯಿಂದ ಹಿಡಿದುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿ ಪೂಜಿಸುವ ಏಕೈಕ ಹಬ್ಬವೆಂದರೆ ಅದು ಗಣಪತಿ ಹಬ್ಬ, ಈ ಗಣಪತಿ ಹಬ್ಬ ಎಷ್ಟೊಂದು ವಿಶೇಷವೆಂದರೆ ಈ ಹಬ್ಬಗಳಲ್ಲಿ ಯಾವುದೇ ರೀತಿಯ ಜಾತಿಯ ಧರ್ಮ ಬೇಧ ಭಾವ ಅನ್ನುವುದು ಅವಿತುಕೊಂಡಿರುವುದಿಲ್ಲ, ಪ್ರತಿಯೊಬ್ಬರೂ ಕೂಡ ಈ ಹಬ್ಬದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಹಾಗೆ ಭಾದ್ರಪದ ಸುದ್ದ ಚವಿತಿಯ ದಿನದಂದು ವಿನಾಯಕ ಚತುರ್ಥಿಯನ್ನ ಆಚರಿಸಲಾಗುತ್ತದೆ.

ಇದಾದ ನಂತರ ಕೆಲವೊಬ್ಬರು ಮೂರು ದಿನಗಳ ನಂತರ ಗಣಪತಿ ವಿಸರ್ಜನೆ ಮಾಡುತ್ತಾರೆ ಇನ್ನು ಕೆಲವೊಬ್ಬರು ಒಂಬತ್ತು ದಿನ, ಏಳು ದಿನ, 11 ದಿನ ಅಥವಾ ಮಾಸಿಕ ದಿನಗಳು ಮುಗಿಯುವವರೆಗೂ ಗಣಪತಿಯನ್ನು ಕೂರಿಸಿಕೊಂಡು ಆನಂತರ ವಿಸರ್ಜನೆ ಮಾಡಲು ಮುಂದಾಗುತ್ತಾರೆ. ವಿಸರ್ಜನೆ ಮಾಡುವಾಗ ಅದರದೇ ಆದ ನಿಯಮ ಅನುಸಾರಗಳನ್ನ ಅನುಸರಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ಪ್ರತಿಯೊಬ್ಬರಿಗೂ ಪ್ರಸಾದವನ್ನು ನೀಡಿ ಆನಂತರ ಗಣಪತಿಯನ್ನು ನದಿಗಳಲ್ಲಿ, ಕೊಳಗಳಲ್ಲಿ ಅಥವಾ ಹರಿಯುವ ನೀರಿನ ಕಾಲುವೆಗಳಲ್ಲಿ ಗಣಪತಿ ವಿಸರ್ಜನೆಯನ್ನು ಮಾಡಲಾಗುತ್ತದೆ. ಅದಕ್ಕೂ ಮುನ್ನ ಗಣಪತಿಯನ್ನ ರಸ್ತೆ ಉದ್ದಕ್ಕೂ ಸಂಭ್ರಮದ ಮೂಲಕ ಡಿಜೆ ,ತಮಟೆಗಳು, ಮೇಳ ತಾಳ, ಡೋಲು ಹಾಗೂ ಸಂಗೀತದ ಮೂಲಕ ಗಣಪತಿಯನ್ನು ವಿಸರ್ಜನೆ ಮಾಡಲು ಮುಂದಾಗುತ್ತಾರೆ.

ಗಣಪತಿ ಆಚರಣೆಯನ್ನು ಬಲ್ಲಮೂಲಗಳ ಪ್ರಕಾರ ಮೊದಲು ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದಲ್ಲಿ ವಿನಾಯಕ ಚೌತಿಯನ್ನ ಆರಂಭಿಸಿದರು ಎಂದು ಹೇಳಲಾಗುತ್ತದೆ. ಇದಾದ ನಂತರ ಬಾಲಗಂಗಾಧರ್ ತಿಲಕ್ ಅವರು ಪಶ್ಚಿಮ ಬಂಗಾಳದಲ್ಲಿ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಮುಂದಾದರು. ಇದಕ್ಕೂ ಮುನ್ನವು ಹಿಂದಿನ ಕಾಲದಲ್ಲಿ ಶಾತವಾಹನರು ಮತ್ತು ಚೋಳರು ವಿನಾಯಕ ಚೌತಿ ಹಬ್ಬವನ್ನು ಆಚರಿಸುತ್ತಿದ್ದರು ಎಂದು ಕೆಲವು ತಜ್ಞರು ಮತ್ತು ಇತಿಹಾಸಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಗಣಪತಿ ಹಬ್ಬಗಳು ಮಳೆಗಾಲದಲ್ಲಿ ಅಂದರೆ ವರ್ಷದಲ್ಲಿ ಒಮ್ಮೆ ಬಂದು ಹೋಗುವ ಈ ಹಬ್ಬವು ಆಗಸ್ಟ್ ತಿಂಗಳು ಕಳೆದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಮಳೆಗಾಲದಲ್ಲಿ ಬರುತ್ತದೆ. ಈ ಸಮಯದಲ್ಲಿ ಗಣಪತಿ ಮೂರ್ತಿಯನ್ನ ತಯಾರಿಸುವ ತಯಾರಿಕರು ನದಿಯಲ್ಲಿರುವಂತಹ ಮಣ್ಣನ್ನು ತೆಗೆದುಕೊಂಡು ಗಣಪತಿ ಮೂರ್ತಿಯನ್ನು ತಯಾರಿಸುತ್ತಾರೆ, ಹಾಗೆ ಗಣಪತಿ ಹಬ್ಬವು ಒಂದು ತಿಂಗಳು ಇರುವ ಮುನ್ನವೇ ಈ ಗಣಪತಿ ಮೂರ್ತಿಗಳನ್ನು ತಯಾರಿಸಲು ಮುಂದಾಗುತ್ತಾರೆ. ಮಾರುಕಟ್ಟೆಗಳಲ್ಲಿ ಹಲವಾರು ರೀತಿಯ ವಿಭಿನ್ನವಾದ ಗಣೇಶ ಮೂರ್ತಿಗಳನ್ನು ನೀವು ಕಾಣಬಹುದು ಕೆಲವು ಗಣಪತಿಗಳು ನೋಡಲು ಮುದ್ದು ಮುದ್ದಾಗಿ ಚಿಕ್ಕದಾಗಿ ಇರುತ್ತದೆ ಇನ್ನು ಕೆಲವು ಗಣಪತಿ ಮೂರ್ತಿಗಳು ಬಹುದೊಡ್ಡದಾಗಿ ತಲೆಯೆತ್ತಿ ನೋಡುವಂತಹ ಮೂರ್ತಿಗಳನ್ನು ತಯಾರಿಸಲಾಗಿರುತ್ತದೆ.

“ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಬಳಸುವ ಮಣ್ಣು, ಕಾಗದ ಮತ್ತು ಗರಿಕೆಗಳಂತಹ ಪರಿಸರ ಸ್ನೇಹಿ ವಸ್ತುಗಳು ಜಲಮೂಲಗಳ ಮೇಲೆ ಶುದ್ಧೀಕರಣದ ಪರಿಣಾಮವನ್ನು ಬೀರುತ್ತವೆ. ಈ ನೈಸರ್ಗಿಕ ವಸ್ತುಗಳು ಸಣ್ಣ ಕೀಟಗಳು ಮತ್ತು ಕ್ರಿಮಿಕೀಟಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ, ಸಂಪ್ರದಾಯದ ಪ್ರಕಾರ, ಮಣ್ಣಿನ ವಿಗ್ರಹಗಳು 9 ದಿನಗಳ ಕಾಲ ಮಾತ್ರ ಪೂಜಿಸಲಾಗುತ್ತದೆ, ನಂತರ ದೈವಿಕ ಶಕ್ತಿಯು ಕರಗುತ್ತದೆ ಎಂದು ನಂಬಲಾಗಿದೆ, ಆದ್ದರಿಂದ ಈ ಸಮಯದೊಳಗೆ ಗಣೇಶನ ವಿಗ್ರಹಗಳನ್ನು ಜಲಮೂಲಗಳಲ್ಲಿ ಮುಳುಗಿಸುವುದು ಅತ್ಯಗತ್ಯ, ಇದು ಪ್ರಕೃತಿಗೆ ಸಾಂಕೇತಿಕವಾಗಿ ಮರಳಲು ಮತ್ತು ಪರಿಸರದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

“ಅನಂತ ಚತುರ್ದಶಿಯಂದು ಗಣೇಶನ ವಿಗ್ರಹಗಳ ನಿಮಜ್ಜನವು ಪುರಾಣಗಳಲ್ಲಿ ವಿವರಿಸಿದಂತೆ ಜನನ ಮತ್ತು ಮರಣದ ಚಕ್ರವನ್ನು ಸಂಕೇತಿಸುತ್ತದೆ. ದಂತಕಥೆಯ ಪ್ರಕಾರ, ವಿನಾಯಕನು ಈ ದಿನದಂದು ತನ್ನ ಹೆತ್ತವರಾದ ಪಾರ್ವತಿಪರಮೇಶ್ವರನ ಬಳಿಗೆ ಹಿಂದಿರುಗುತ್ತಾನೆ. ನಿಮಜ್ಜನ ಆಚರಣೆಯು ಸಮೃದ್ಧಿ ಮತ್ತು ಸಾಮರಸ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಗಳು, ಎಲ್ಲಾ ತೊಂದರೆಗಳು ಮತ್ತು ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ಭಕ್ತರು ಗಣಪತಿಯನ್ನು ಜಲಮೂಲಗಳಲ್ಲಿ ಮುಳುಗಿಸುವುದರಿಂದ ತಮ್ಮ ಜೀವನದ ಅಡೆತಡೆಗಳು ಮತ್ತು ಸವಾಲುಗಳನ್ನು ತೆರವುಗೊಳಿಸುತ್ತದೆ ಮತ್ತು ಶಾಂತಿ ಮತ್ತು ಶಾಂತಿಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ನಂಬುತ್ತಾರೆ.

Follow Karunadu Today for more spiritual information like this

Click here to Join Our Whatsapp Group