1) ಸಹಜವಾಗಿ ನೀವು ಗಮನಿಸಿರಬಹುದು, ಪ್ಲಾಸ್ಟಿಕ್ ಬಾಟಲಿಯ ಕೆಳ ಭಾಗದಲ್ಲಿ bumps ಗಳಿರುತ್ತವೆ. ಆದರೆ ಈ ರೀತಿ ಏಕೆ ಇರುತ್ತವೆ ಗೊತ್ತೆ? ಬಾಟಲಿಯ strength ಅನ್ನು ವೃದ್ದಿಗೊಳಿಸುವ ನಿಟ್ಟಿನಲ್ಲಿ ಈ ರೀತಿ bumps ಗಳನ್ನು manufacture ಮಾಡಲಾಗಿರುತ್ತದೆ. ನಮಗೆಲ್ಲ ತಿಳಿದ ಹಾಗೆ ತಂಪು ಪಾನೀಯಗಳನ್ನು ಸದಾ ಫ್ರಿಡ್ಜ್ ಒಳಗೆ ಇಡಲಾಗಿರುತ್ತದೆ. ಇದರಿಂದಾಗಿ ಬಾಟಲಿಯ ಒಳಗಿರುವ ಪಾನೀಯದ ತಾಪಮಾನದಲ್ಲಿ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಇದರಿಂದಾಗಿ ಬಾಟಲಿಯ ಒಳಗೆ ಇಂಗಾಲದ ಡೈ ಆಕ್ಸೈಡ್ ಒತ್ತಡವು ಕೂಡ ಹೆಚ್ಚಾಗುತ್ತದೆ. ಆ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಪ್ಲಾಸ್ಟಿಕ್ ಬಾಟಲಿಗೆ ಇಲ್ಲವೆಂದರೆ ಒಡೆದುಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಬಾಟಲಿಯ ತಳಭಾಗದಲ್ಲಿ ಈ ರೀತಿಯ bumps ಗಳನ್ನು ಮಾಡಲಾಗಿರುತ್ತದೆ. ಈ bumps ಗಳು ಅದೆಷ್ಟು ಗಟ್ಟಿಯಾಗಿರುತ್ತದೆಯೆಂದರೆ ಬಾಟಲಿಯ ಮೇಲ್ಭಾಗವನ್ನು ನಾವು ಸಹಜವಾಗಿ crush ಮಾಡಬಹುದು ಆದರೆ ಕೆಳ ಭಾಗವನ್ನು crush ಮಾಡುವುದು ಅಷ್ಟು ಸುಲಭವಲ್ಲ. ಪ್ರತಿಯೊಂದರ ನಿರ್ಮಾಣದ ಹಿಂದೆ ಒಂದು ಕಾರಣವಿರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.

January 17th 2025 Current Affairs

2) ನಮಗೆಲ್ಲ ತಿಳಿದ ಹಾಗೆ ಪ್ರತಿವರ್ಷ ಸಮುದ್ರಕ್ಕೆ 14 ಬಿಲಿಯನ್ ಪೌಂಡ್ಸ್ ಗಳಷ್ಟು ಪ್ಲಾಸ್ಟಿಕ್ ಅನ್ನು ಮನುಷ್ಯರು ಎಸೆಯುತ್ತಿದ್ದಾರೆ. ಇದರಿಂದಾಗಿ ಸಮುದ್ರದಲ್ಲಿ ವಾಸಿಸುತ್ತಿರುವ ಜೀವಿಗಳು ಬದುಕುವುದು ಕಷ್ಟವಾಗುತ್ತಿದೆ. ಹೀಗೆ ಸಮುದ್ರಕ್ಕೆ ಎಸೆದ ಕಸವನ್ನು ಹೊರ ತೆಗೆದು ಅದರಿಂದ ಶೂ ತಯಾರಿಸಬೇಕೆಂದು ಪ್ರಪಂಚದ ಅತ್ಯಂತ ಪ್ರಸಿದ್ದ ಕಂಪನಿಗಳಲ್ಲಿ ಒಂದಾದ “adidas” 2015 ರಲ್ಲಿ ಪ್ರಸಿದ್ದ “PARLE” ಕಂಪನಿಯ ಜೊತೆಗೂಡಿ ಸಮುದ್ರದಲ್ಲಿ ಇರುವ 2810 ಟನ್ ಗಳಷ್ಟು ಪ್ಲಾಸ್ಟಿಕ್ ಕಸವನ್ನು ಹೊರತೆಗೆದು ಅದರಿಂದ ಲಕ್ಷಾಂತರ ಶೂ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದರೊಂದಿಗೆ ಯಾವುದನ್ನು ನಾವು ಉಪಯೋಗಕ್ಕೆ ಬಾರದ ವಸ್ತುಗಳೆಂದು ಸಮುದ್ರಕ್ಕೆ ಎಸೆದಿದ್ದೇವೆ ಅದೇ ವಸ್ತುಗಳನ್ನು ನಾವುಗಳು ಹೇಗೆ ಬಳಸಿಕೊಳ್ಳಬಹುದು ಎಂದು adidas ಜಗತ್ತಿಗೆ ತೋರಿಸಿಕೊಟ್ಟಿತು.

January 17th 2025 Current Affairs

3) ನಗರ ಪ್ರದೇಶಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ವೇಳೆ ಸರಿಯಾದ ವಿಳಾಸವನ್ನು ತಲುಪುವ ಸಲುವಾಗಿ ಗೂಗಲ್ ಮ್ಯಾಪ್ ಅನ್ನು ನಾವೆಲ್ಲರು ಬಳಸುವುದು ಸಾಮಾನ್ಯ. ಆದರೆ ಹೀಗೆ ಚಲಿಸುವಾಗ ಟ್ರಾಫಿಕ್ ಹೇಗಿದೆ ಎನ್ನುವ ಮಾಹಿತಿಯನ್ನು ಕೂಡ ಈ ಗೂಗಲ್ ಮ್ಯಾಪ್ ನಿಂದ ನಾವುಗಳು ಪಡೆಯಬಹುದು. ಆದರೆ ಎಂದಾದರು ಈ ರೀತಿ ಗೂಗಲ್ ಗೆ ಅದು ಹೇಗೆ ಟ್ರಾಫಿಕ್ ಹೆಚ್ಚು ಅಥವ ಕಡಿಮೆ ಇರುವ ಮಾಹಿತಿ ತಿಳಿಯುತ್ತದೆ ಎಂದು ಯೋಚಿಸಿದ್ದೀರ? ಬನ್ನಿ ಈ ಸಂಗತಿಯಲ್ಲಿ ಅದನ್ನು ವಿವರಿಸುತ್ತೇನೆ. ನಾವು ಬಳಸುವ smartphone ಅದೆಷ್ಟು ವೇಗವಾಗಿ ಚಲಿಸುತ್ತಿದೆ ಎನ್ನುವ ಆಧಾರದ ಮೇರೆ ಟ್ರಾಫಿಕ್ ಕಡಿಮೆ ಇದೆಯೋ ಅಥವ ಹೆಚ್ಚಿದೆಯೋ ಎನ್ನುವ ಮಾಹಿತಿಯನ್ನು ನಮಗೆ ತೋರಿಸುತ್ತದೆ. ನಮಗೆಲ್ಲ ತಿಳಿದ ಹಾಗೆ ನಾವು ಬಳಸುವ ಮೊಬೈಲ್ ಗಳಲ್ಲಿ ಅರ್ಧದಷ್ಟು applications ಗಳು ಗೂಗಲ್ ಕಂಪನಿಗೆ ಸೇರಿವೆ. ಈ ಎಲ್ಲಾ apps ಗಳ ಮೂಲಕ ನಾವುಗಳು ಯಾವ ಸ್ಥಳದಲ್ಲಿದ್ದೇವೆ ಎನ್ನುವುದನ್ನು ಗೂಗಲ್ ಪತ್ತೆ ಮಾಡುತ್ತದೆ. ಇದರ ಆಧಾರದ ಮೇರೆಗೆ ನಾವು ಚಲಿಸುವ ರಸ್ತೆಯಲ್ಲಿ ಅದೆಷ್ಟು ಟ್ರಾಫಿಕ್ ಇದೆ ಎನ್ನುವ ಮಾಹಿತಿಯನ್ನು ಗೂಗಲ್ ನಮಗೆ ಮ್ಯಾಪ್ ನಲ್ಲಿ ತೋರಿಸುತ್ತದೆ.

4) ಸಹಜವಾಗಿ ನೀವು ಗಮನಿಸಿರಬಹುದು ಕತ್ತಲು ಇರುವ ಸ್ಥಳದಲ್ಲಿ ಫೋಟೋಗಳನ್ನು ತೆಗೆದಾಗ ನಮ್ಮ ಕಣ್ಣುಗಳು ಕೆಂಪು ಬಣ್ಣದಲ್ಲಿ ಕಾಣುತ್ತವೆ. ಇದಕ್ಕೆ ಕಾರಣವೇನು ಗೊತ್ತೆ? ನಮ್ಮ ಕಣ್ಣಿನಲ್ಲಿರುವ Retina ನಮ್ಮ ದೇಹದಲ್ಲಿರುವ ಅನೇಕ ಪದರಗಳ ಹಾಗೆ ಇದು ಕೂಡ ಒಂದು ಪದರವಾಗಿದ್ದು ಇದರ ಒಳಗೆ “Light sensitive cells” ಗಳಿರುತ್ತವೆ. ಯಾವಾಗ ಕ್ಯಾಮೆರಾದ flash ಕಣ್ಣಿನ ಒಳಗಿರುವ ಈ cells ಗಳ ಮೇಲೆ ಬೀಳುತ್ತದೆ ಆಗ “Electric Impulses” ಸಹಾಯದಿಂದ ನಮ್ಮ ಮೆದುಳಿನಲ್ಲಿ ಒಂದು image ಮೂಡುತ್ತದೆ. ಇನ್ನು ನಮ್ಮ ಕಣ್ಣಿನ ಒಳಗಿರುವ pupil ಕ್ಯಾಮೆರಾದ ಬೆಳಕನ್ನು control ಮಾಡಲು ಪ್ರಯತ್ನಿಸುತ್ತದೆ. ಆದರೆ ಕತ್ತಲಿನಲ್ಲಿ ಫೋಟೋ ತೆಗೆದಾಗ ಕ್ಯಾಮೆರಾದಿಂದ ಹೊರ ಬಂದ ಬೆಳಕು ಒಮ್ಮೆಲೆ ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ pupil ಗೆ ಆ ಬೆಳಕನ್ನು control ಮಾಡುವಷ್ಟು ಶಕ್ತಿ ಕೂಡ ಇರುವುದಿಲ್ಲ. ಇದರಿಂದಾಗಿ ಬೆಳಕು reflect ಆಗಿ ಮರಳಿ ಕ್ಯಾಮೆರಾ ಕಡೆಗೆ ಬರುತ್ತದೆ. ಆದ್ದರಿಂದಲೇ ಕಣ್ಣುಗಳು ಕೆಂಪು ಬಣ್ಣದಲ್ಲಿ ಕಾಣುತ್ತವೆ.

5) ನಮಗೆಲ್ಲ ತಿಳಿದ ಹಾಗೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿನಿಮಾದಲ್ಲೂ VFX effect ಬಳಸುವುದು ಸಾಮಾನ್ಯವಾಗಿದೆ. ಇವುಗಳನ್ನು ಬಳಸಿಕೊಂಡು ನಿರ್ಮಿಸಿದ ಸಿನಿಮಾಗಳನ್ನು ನೋಡಲು ಜನರು ಸಾಕಷ್ಟು ಇಷ್ಟ ಪಡುತ್ತಾರೆ. ಆದರೆ ಈ VFX ಎನ್ನುವುದನ್ನು ಇತ್ತೀಚೆಗೆ ಸಿನಿಮಾಗಳಲ್ಲಿ ಬಳಸಲಾಗುತ್ತಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇವುಗಳ ಬಳಕೆಯು 1940 ರಿಂದಲೇ ನಡೆಯುತ್ತಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ “Lawrence Butler” ಅವರು “The Thief Of Bagdad” ಎನ್ನುವ ಸಿನಿಮಾದಲ್ಲಿ ಇದನ್ನು ಮೊದಲ ಬಾರಿಗೆ ಬಳಸಿದ್ದರು. ವರ್ಷಗಳು ಕಳೆಯುತ್ತ ಹೋದಂತೆ ಇದರ ಬಳಕೆ ಹೆಚ್ಚಾಗುತ್ತ ಹೋಯಿತು. ಈಗ ಹೇಗಾಗಿದೆಯೆಂದರೆ ಇದನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.