2016ರ ಮೇ 13 ರಂದು ಬಿಡುಗಡೆಯಾದ “Train to busan”ಸಿನಿಮಾವು ಒಂದು ಕೊರಿಯನ್ ಚಲನಚಿತ್ರವಾಗಿದೆ.118 ನಿಮಿಷಗಳ ಈ ಸಿನಿಮಾವು “ಜಾಂಬಿಗಳ” ಕುರಿತು ಇದೆ. 8.5 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಪ್ರಪಂಚದೆಲ್ಲೆಡೆ ಬಿಡುಗಡೆಯಾಗಿಗಳಿಸಿದ್ದು ಬರೋಬ್ಬರಿ 98.4 ಮಿಲಿಯನ್ ಡಾಲರ್ ಹಣ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ “GongYoo,JungYumi ಮತ್ತು MaDongseok” ಇರುವರು. “Yeonsangho” ನಿರ್ದೇಶನದ ಈ ಸಿನಿಮಾವು ನೋಡುವವರ ಎದೆಯಲ್ಲಿ ಭಯ ಮೂಡಿಸುತ್ತದೆ.ಈ ಸಿನಿಮಾದ ಕುರಿತು ಹೇಳುವುದಕ್ಕಿಂತ ಮೊದಲು ನಿಮಗೆ “zombie” ಗಳೆಂದರೆ ಏನು ಎಂದು ತಿಳಿಸಿಕೊಡುತ್ತೇನೆ. ಈ zombie ಗಳು ಮನುಷ್ಯರು ಅಲ್ಲ ಮತ್ತು ದೆವ್ವಗಳು ಕೂಡ ಅಲ್ಲ. ಭಯಾನಕ ವೈರಸ್ ಗಳಿಂದ ಮನುಷ್ಯರು ಕೆಲವೇ ಕ್ಷಣಗಳಲ್ಲಿ ಮಾಂಸವನ್ನು ತಿನ್ನುವ ಪ್ರಾಣಿಗಳ ಹಾಗೆ ಆಗಿಬಿಡುತ್ತಾರೆ. Zombie ಆದ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಕಡಿದರೆ ಆ ವ್ಯಕ್ತಿಯು ಕೂಡ ಕೆಲವೇ ಕ್ಷಣಗಳಲ್ಲಿ zombie ಆಗಿ ಬಿಡುತ್ತಾನೆ. ಹೀಗೆ ಒಬ್ಬರಿಗೊಬ್ಬರು ಕಡಿದುಕೊಂಡು ಸಂಪೂರ್ಣ ದೇಶದ ಜನರೇ zombie ಗಳಾದರೆ ಹೇಗಾಗಬಾರದು ನೀವೇ ಹೇಳಿ. ಈ ಸಿನಿಮಾದಲ್ಲೂ ಕೂಡ ಹಾಗೆಯೇ ಆಗಿದೆ. 

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group