ಒಮ್ಮೆ ಒಬ್ಬ ಬಡ ವೈದ್ಯಕೀಯ ವಿದ್ಯಾರ್ಥಿ ತನ್ನ ಓದಿನ ಖರ್ಚುಗಳನ್ನು ನಿರ್ವಹಿಸಲು ಕಾಲೇಜಿನ ನಂತರ ಮನೆ-ಮನೆಗೆ ಹೋಗಿ ಮನೆ ಅಲಂಕಾರದ ವಸ್ತುಗಳನ್ನು ಮಾರುತ್ತಿದ್ದ. ವ್ಯಾಪಾರವು ಚೆನ್ನಾಗಿಯೇ ನಡೆಯುತ್ತಿತ್ತು, ತನ್ನ ಓದಿಗೆ ಬೇಕಾದಷ್ಟು ಹಣವನ್ನು ಅವನು ಸಂಪಾದಿಸುತ್ತಿದ್ದ.

ಆದರೆ, ಎಲ್ಲರ ವ್ಯಾಪಾರದಲ್ಲಿಯೂ ಒಂದಲ್ಲಾ ಒಂದು ಕೆಟ್ಟ ದಿನ ಬಂದೇ ಬರುತ್ತದೆ. ವ್ಯಾಪಾರವೆಂದ ಮೇಲೆ ಏಳು ಬೀಳುಗಳು ಸಹಜ. ಆದರೆ, ಆ ವ್ಯಾಪಾರದಿಂದ ಅವನ ನಿತ್ಯದ ಊಟಕ್ಕೆ ಸಹಾಯವಾಗುತ್ತಿತ್ತು. ಬೇಸಿಗೆಯ ದಿನಗಳು ಬೇರೆ ಮದ್ಯಾಹ್ನದ ಹೊತ್ತಿಗೆ ಅವನು ಬಿಸಿಲಿನ ತಾಪಕ್ಕೆ ನರಳಿದ್ದ, ಬೆಳಗಿನಿಂದ ವ್ಯಾಪಾರವೂ ಇಲ್ಲ ಊಟವೂ ಇಲ್ಲ.

ಊಟ ಮಾಡಲು ಹಣವಿಲ್ಲದ ಕಾರಣ, ಸಂಕೋಚದ ನಡುವೆಯೂ ರಸ್ತೆಯ ಬದಿಯಲ್ಲಿದ್ದ ಒಂದು ಮನೆಗೆ ಹೋಗಿ ಒಂದು ಗ್ಲಾಸ್ ನೀರು ಕೇಳಿದ. ಮನೆಯಲ್ಲಿದ್ದ ಯುವತಿ ಇವನ ಪರಿಸ್ಥಿತಿ ನೋಡಿ ಒಂದು ಗ್ಲಾಸ್ ಹಾಲು ಮತ್ತು 4 ಬಾಳೆಹಣ್ಣನ್ನು ತಂದುಕೊಟ್ಟಳು. ಅವನ್ನು ಸೇವಿಸಿದ ನಂತರ ನನ್ನ ಬಳಿ ಈಗ ಹಣವಿಲ್ಲ ಆದರೆ ಇದನ್ನು ನಂತರ ಕೊಡುತ್ತೇನೆ ಎಂದು ಹೇಳಿದ ಅದಕ್ಕೆ ಅವಳು ಮಾನವೀಯತೆಗೆ ಬೆಲೆ ಕಟ್ಟಬೇಡಿ ಎಂದಳು.

ಕೆಲ ವರ್ಷಗಳು ಕಳೆಯಿತು ಆ ಹುಡುಗ ಕಷ್ಟಪಟ್ಟು ಒಳ್ಳೆಯ ಹೆಸರಾಂತ ವೈದ್ಯನಾದ. ಒಂದಿನ ಆ ಹುಡುಗಿ ಕಾಯಿಲೆಗೆ ಬಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳನ್ನು ಕಂಡ ಆ ವೈದ್ಯನಿಗೆ ಹಿಂದೆ ಆ ಹುಡುಗಿ ಮಾಡಿದ ಸಹಾಯ ನೆನಪಾಯಿತು. ತನಗೆ ಸಾಧ್ಯವಾದಷ್ಟು ಒಳ್ಳೆಯ ಚಿಕಿತ್ಸೆ ನೀಡಿದ. ಆ ಹುಡುಗಿ ಬೇಗ ಗುಣಮುಖಳಾದಳು.

ಆಸ್ಪತ್ರೆಯವರು ಚಿಕೆತ್ಸೆಯ ಬಿಲ್ ನೀಡಿದರು. ಆದರೆ ಅವಳು ತುಂಬಾ ಬಡವಳಾಗಿದ್ದ ಕಾರಣ ಆಸ್ಪತ್ರೆಯ ಬಿಲ್ಲನ್ನು ಕಟ್ಟಲು ಹಣವಿರಲಿಲ್ಲ ಏನು ಮಾಡುವುದೆಂದು ದಿಕ್ಕು ತೋಚಲಿಲ್ಲ, ಕೊನೆಗೆ ಬಿಲ್ ಎಷ್ಟಾಗಿದೆ ಎಂದು ನೋಡಿದಳು ಅಚ್ಚರಿಯೆಂಬಂತೆ ಅದರಲ್ಲಿ ಒಂದು ಗ್ಲಾಸ್ ಹಾಲು ಮತ್ತು 4 ಬಾಳೆ ಹಣ್ಣನ್ನು ನೀಡಿ ನಿಮ್ಮ ಬಿಲ್ ಪಾವತಿಸಿಲಾಗಿದೆ ಎಂದು ಬರೆಯಲಾಗಿತ್ತು.

ಯಾವಾಗಲು ಇತರರಿಗೆ ಸಹಾಯ ಮಾಡಿ, ಅದು ನಿಮಗೆ ಗೊತ್ತಿರದ ರೀತಿಯಲ್ಲಿ ನಿಮಗೆ ತಿರುಗಿ ಬರುತ್ತದೆ..

For more Stories follow Karunadu Today

Click here to Join Our Whatsapp Group