ಮನುಷ್ಯನೆಂದ ಮೇಲೆ ಬೇರೆಯವರ ಮೇಲೆ ಅವಲಂಬಿತವಾಗಿರುವುದು ಸಾಮಾನ್ಯ, ಆದರೆ ಅದು ಅತಿಯಾದರೆ ಏನಾಗುತ್ತದೆ ಎಂದು ತಿಳಿಯಲು ಈ ಕಥೆಯನ್ನು ಓದಿ.

ಅದೊಂದು ಕಾಡಿನಲ್ಲಿ ಒಂದು ಪುಟ್ಟ ಮೊಲವಿತ್ತು ಆ ಮೊಲಕ್ಕೆ ಪ್ರತಿದಿನವೂ ಒಂದೇ ಭಯ, ಅದೇನೆಂದರೆ ಭೇಟೆ ನಾಯಿ. ಪ್ರತಿ ಬಾರಿ ಮೊಲವು ಆಹಾರವನ್ನು ಹುಡುಕಿಕೊಂಡು ಹೊರಗಡೆ ಹೋದಾಗ ಆ ಭೇಟೆ ನಾಯಿಯು ಮೊಲವನ್ನು ಬೆನ್ನಟ್ಟುತಿತ್ತು. ಆ ಭೇಟೆ ನಾಯಿಯ ಕೈಯಿಂದ ತಪ್ಪಿಸಿಕೊಂಡು ಮರಳಿ ಮನೆಗೆ ಬರುವಷ್ಟರಲ್ಲಿ ಮೊಲಕ್ಕೆ ಸಾಕಾಗಿ ಹೋಗುತ್ತಿತ್ತು. ಇದರಿಂದ ಮೊಲಕ್ಕೆ ಹೊರಗಡೆ ಹೋಗಿ ಆಹಾರವನ್ನು ತರುವುದು ಕಷ್ಟವಾಗ ತೊಡಗಿತು. ಈ ಬೇಟೆ ನಾಯಿಯ ಕಾಟದಿಂದ ಹೇಗಾದರು ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಪ್ರತಿನಿತ್ಯವೂ ಉಪಾಯವನ್ನು ಹುಡುಕತೊಡಗಿತು.

ಅದೊಂದು ದಿನ ಮೊಲವು ಆಹಾರವನ್ನು ತರಲೆಂದು ಹೊರಗಡೆ ಹೋದಾಗ ಆಕಳು, ಕುದುರೆ, ಮೇಕೆ ಮತ್ತು ಕತ್ತೆಯು ಒಟ್ಟಿಗೆ ಹುಲ್ಲು ಮೇಯುತ್ತಿರುವುದನ್ನು ಕಂಡಿತು. ಈ ನಾಲ್ಕು ಪ್ರಾಣಿಗಳು ಅನ್ಯೋನ್ಯವಾಗಿ ಇರುವುದನ್ನು ಕಂಡ ಮೊಲಕ್ಕೆ ಖುಷಿಯಾಯಿತು. ಅಬ್ಬಾ ಎಷ್ಟು ಒಗ್ಗಟ್ಟಾಗಿ ಇದ್ದಾರೆ ಇವರು. ಹೇಗಾದರು ಮಾಡಿ ಇವರ ಸ್ನೇಹ ಬೆಳೆಸಿಕೊಂಡರೆ ನಾನು ಕೂಡ ಇವರ ಜೊತೆಗೆ ಇರಬಹುದು ಮತ್ತು ಪದೇ ಪದೇ ತನಗೆ ಕಾಟ ಕೊಡುತ್ತಿರುವ ಭೇಟೆ ನಾಯಿಯಿಂದ ರಕ್ಷಣೆ ಸಿಕ್ಕ ಹಾಗೆ ಆಗುತ್ತದೆ ಎಂದು ಆಲೋಚಿಸಿತು.

ಅಂದುಕೊಂಡಂತೆ ಮೊಲವು ಹೋಗಿ ಆ ನಾಲ್ಕು ಪ್ರಾಣಿಗಳನ್ನು ಪರಿಚಯ ಮಾಡಿಕೊಳ್ಳುತ್ತದೆ. ಪ್ರತಿದಿನವು ಆ ನಾಲ್ಕು ಪ್ರಾಣಿಗಳು ಹುಲ್ಲು ಮೇಯಲು ಬರುವ ಸಮಯವನ್ನು ತಿಳಿದುಕೊಂಡು ಅದೇ ಸಮಯದಲ್ಲಿ ತಾನೂ ಕೂಡ ಹೋಗಿ ಹುಲ್ಲು ಮೇಯಲು ಶುರು ಮಾಡುತ್ತದೆ. ಆ ನಾಲ್ಕು ಪ್ರಾಣಿಗಳ ಮದ್ಯೆ ಮೊಲವು ಇರುವುದನ್ನು ಕಂಡ ಭೇಟೆ ನಾಯಿಯು ಇದನ್ನು ಭೇಟೆ ಆಡಲು ಹೋದರೆ ನನಗೆ ಕಷ್ಟವಾಗುತ್ತದೆ, ಏಕೆಂದರೆ ಅದರ ರಕ್ಷಣೆಗೆ ಆ ನಾಲ್ಕು ಪ್ರಾಣಿಗಳಿವೆ ಎಂದು ಸುಮ್ಮನಾಗುತ್ತಿತ್ತು. ಹೀಗೆ ಎಷ್ಟೋ ದಿನಗಳು ಕಳೆದವು. ಪ್ರತಿ ದಿನ ಮೊಲವನ್ನು ಭೇಟೆ ಆಡಲೆಂದು ಬರುತ್ತಿದ್ದ ಭೇಟೆ ನಾಯಿಯು ಭೇಟೆ ಮಾಡಲು ಆಗದೆ ಸಪ್ಪೆ ಮುಖವನ್ನು ಹಾಕಿಕೊಂಡು ವಾಪಸ್ ಹೋಗುತ್ತಿತ್ತು.

ಇದರಿಂದ ಮೊಲಕ್ಕೆ ತುಂಬಾ ಖುಷಿಯಾಗತೊಡಗಿತು. ತಾನು ಅಂದುಕೊಂಡಂತೆ ಆ ನಾಲ್ಕು ಪ್ರಾಣಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದು ಉಪಯೋಗವಾಯಿತು ಮತ್ತು ಇನ್ನು ಮುಂದೆ ತನಗೆ ಭೇಟೆ ನಾಯಿಯ ಕಾಟವಿಲ್ಲದೆ ಹಾಯಾಗಿ ಆಹಾರ ಸೇವಿಸುತ್ತ ಇರಬಹುದು ಎಂದು ಆಲೋಚಿಸಿತು.ಆದರೆ ಭೇಟೆ ನಾಯಿಯು ಮಾತ್ರ ಒಂದಲ್ಲ ಒಂದು ದಿನ ಆ ಮೊಲವನ್ನು ಭೇಟೆ ಆಡಲೇಬೇಕು ಎಂದು ತೀರ್ಮಾನಿಸಿತ್ತು.

ಅದೊಂದು ದಿನ ಮೊಲವು ಆ ನಾಲ್ಕು ಪ್ರಾಣಿಗಳ ಜೊತೆಗೆ ಹುಲ್ಲು ತಿಂದು ವಾಪಾಸ್ ಮನೆಗೆ ಬರುತ್ತಿದ್ದಾಗ ಮೊಲ ಬರುವುದನ್ನೇ ಕಾಯುತ್ತಾ ಕುಳಿತಿದ್ದ ಭೇಟೆ ನಾಯಿಯು ಒಮ್ಮೆಲೆ ಮೊಲದ ಮೇಲೆ ಹಾರಿತು. ಇದರಿಂದ ವಿಚಲಿತನಾದ ಮೊಲವು ಪ್ರಾಣ ಉಳಿಸಿಕೊಳ್ಳಲು ಆ ನಾಲ್ಕು ಪ್ರಾಣಿಗಳು ಇರುವ ಕಡೆಗೆ ಓಡತೊಡಗಿತು. ಗಾಬರಿಯಿಂದ ಓಡಿ ಬರುತ್ತಿದ್ದ ಮೊಲವನ್ನು ತಡೆದು ಏನಾಯಿತು ಸ್ನೇಹಿತ ಎಂದು ಆ ನಾಲ್ಕು ಪ್ರಾಣಿಗಳು ಕೇಳಿದವು. ಅದಕ್ಕೆ ಮೊಲವು ಸ್ನೇಹಿತರೆ ನನ್ನನ್ನು ಭೇಟೆ ನಾಯಿಯು ಬೆನ್ನಟ್ಟಿ ಬರುತ್ತಿದ್ದೆ. ದಯವಿಟ್ಟು ನನ್ನನ್ನು ಅದರಿಂದ ಕಾಪಾಡಿ ಇಲ್ಲವಾದರೆ ಅದು ನನ್ನನ್ನು ಕೊಂದು ಹಾಕುತ್ತದೆ ಎಂದು ಹೇಳಿತು. ಆಗ ಆ ನಾಲ್ಕು ಪ್ರಾಣಿಗಳು ನೀನು ನಮ್ಮ ಸ್ನೇಹಿತ ನಿನ್ನನ್ನು ಸಾಯಲು ಬಿಡುವುದಿಲ್ಲ ನಾವು ನಿನಗೆ ರಕ್ಷಣೆ ಕೊಡುತ್ತೇವೆ ನೀನೇನು ಹೆದರಬೇಡ ಎಂದು ಹೇಳಿದವು.

ಮೊಲವನ್ನು ತಿನ್ನಲೆಂದು ಬರುತ್ತಿದ್ದ ಭೇಟೆ ನಾಯಿಯನ್ನು ತಡೆದು ಹೇಯ್ ದುಷ್ಟ ನಾಯಿಯೇ ನಮ್ಮ ಸ್ನೇಹಿತನನ್ನು ತಿನ್ನಲು ಹಂಬಲಿಸುತ್ತ ಇರುವೆಯ ನೀನು, ಅವನನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳಿ ಮೊಲಕ್ಕೆ ರಕ್ಷಣೆ ನೀಡಿದವು. ಇದನ್ನು’ ಕಂಡು ಭೇಟೆ ನಾಯಿಯು ಇನ್ನು ನಾನು ಮೊಲವನ್ನು ತಿನ್ನಲು ಸಾದ್ಯವಿಲ್ಲವೆಂದು ಸಪ್ಪೆ ಮುಖವನ್ನು ಹಾಕಿಕೊಂಡು ತಿರುಗಿ ಕಾಡಿನ ಕಡೆಗೆ ಹೋಗುತ್ತದೆ. ಇದನ್ನು ಕಂಡು ಮೊಲಕ್ಕೆ ತುಂಬಾ ಖುಷಿಯಾಗುತ್ತದೆ ಹಾಗೂ ಆ ನಾಲ್ಕು ಪ್ರಾಣಿಗಳಿಗೆ ಧನ್ಯವಾದವನ್ನು ಅರ್ಪಿಸುತ್ತದೆ.

ಹಲವು ದಿನಗಳ ನಂತರ ಮತ್ತೇ ಇದೇ ಪ್ರಸಂಗವು ಉದ್ಬವಿಸುತ್ತದೆ. ಆಗ ಮತ್ತೆ ಆ ನಾಲ್ಕು ಪ್ರಾಣಿಗಳು ಮೊಲವನ್ನು ಭೇಟೆ ನಾಯಿಯಿಂದ ಕಾಪಾಡುತ್ತವೆ. ಸ್ವಲ್ಪ ದಿನಗಳು ಕಳೆದ ನಂತರ ಮೊಲವು ಮತ್ತೇ ಅದೇ ತರಹ ಆ ನಾಲ್ಕು ಪ್ರಾಣಿಗಳ ಸಹಾಯ ಕೇಳಿಕೊಂಡು ಓಡಿ ಬರುತ್ತದೆ. ಆಗ ಆ ನಾಲಕ್ಕು ಪ್ರಾಣಿಗಳು ಪ್ರಿಯ ಗೆಳೆಯನೆ ನಿನಗೆ ಸಹಾಯ ಮಾಡುವ ಮನಸ್ಸು ನಮಗೂ ಇದೆ ಆದರೆ ಇಂದು ಬೇಗನೆ ಮರಳಿ ಬರಲು ನಮ್ಮ ಮಾಲಿಕನು ಆಜ್ಞೆ ಮಾಡಿದ್ದಾನೆ ಆದ್ದರಿಂದ ಈಗ ನಾವು ಹೊರಡಲೇ ಬೇಕು ಇಲ್ಲವಾದರೆ ನಮ್ಮನ್ನು ತಳಿಸುತ್ತಾನೆ ಎಂದು ಹೇಳುತ್ತವೆ.

ಇದನ್ನು ಕೇಳಿದ ಮೊಲವು ಕಕ್ಕಾಬಿಕ್ಕಿಯಾಗಿ ಅಯ್ಯೋ ದಯವಿಟ್ಟು ಆ ತರ ಹೇಳಬೇಡಿ ನೀವು ಈ ಸಮಯದಲ್ಲಿ ನನ್ನನ್ನು ಬಿಟ್ಟು ಹೋದರೆ ನಾನು ಭೇಟೆ ನಾಯಿಗೆ ಆಹಾರವಾಗುತ್ತೇನೆ ಎಂದು ಅಂಗಲಾಚಿ ಬೇಡಿಕೊಳ್ಳುತ್ತದೆ. ಆದರೆ ಆ ನಾಲ್ಕು ಪ್ರಾಣಿಗಳು ದಯವಿಟ್ಟು ನಮ್ಮನ್ನು ಕ್ಷಮಿಸು ನಾವು ಹೊರಡಲೇಬೇಕು ಎಂದು ಅಲ್ಲಿಂದ ಹೊರಡಲು ಶುರು ಮಾಡುತ್ತವೆ. ಆಗ ಮೊಲವು ಮಿತ್ರರೇ ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ ಎಂದು ಕಿರುಚುತ್ತ ಆ ನಾಲ್ಕು ಪ್ರಾಣಿಗಳ ಹಿಂದೆ ಓಡಿ ಹೋಗುತ್ತದೆ. ಮೊಲವು ತಮ್ಮನ್ನು ಹಿಂಬಾಲಿಸುತ್ತ ಬರುತ್ತಿರುವುದನ್ನು ನೋಡಿ ಇದೇನಿದು ಒಂದು ಬಾರಿ ಈ ಮೊಲಕ್ಕೆ ಹೇಳುವುದು ಅರ್ಥವಾಗುವುದಿಲ್ಲವೆ ಎಂದು ಆ ನಾಲ್ಕು ಪ್ರಾಣಿಗಳು ಕೇಳಿಸಿದರೂ ಕೇಳಿಸದಂತೆ ಹೋಗುತ್ತವೆ.

ಆ ನಾಲ್ಕು ಪ್ರಾಣಿಗಳ ಮಾಲೀಕನು ದೂರದಿಂದ ತನ್ನ ಪ್ರಾಣಿಗಳು ಬರುತ್ತಿರುವುದನ್ನು ಕಂಡು ಖುಷಿಯಾಗುತ್ತಾನೆ ಹಾಗೂ ತನ್ನ ನಾಲ್ಕು ಪ್ರಾಣಿಗಳ ಜೊತೆಗೆ ಒಂದು ಸುಂದರವಾದ ಮೊಲವು ಬರುತ್ತಿರುವುದನ್ನು ಗಮನಿಸಿ ಅದನ್ನು ಕೊಂದು ಆಹಾರ ಸೇವಿಸಬೇಕು ಎಂದು ಮೊಲಕ್ಕೆ ಗುಂಡು ಹೊಡೆಯುತ್ತಾನೆ. ಬಾಣವು ತಾಗಿ ಮೊಲವು ಅಲ್ಲೇ ಸತ್ತು ಹೋಗುತ್ತದೆ.

ಇದರಿಂದ ನಾವು ಕಲಿಯಬೇಕಾಗಿರುವ ಪಾಠವೇನೆಂದರೆ ಜೀವನದಲ್ಲಿ ಯಾರೊಬ್ಬರ ಮೇಲೂ ಅತಿಯಾಗಿ ಅವಲಂಬಿತವಾಗಬಾರದು. ಅಕಸ್ಮಾತ್ ಆದರೆ ನಾವೂ ಮೊಲದ ತರಹ ಸಾವು ಕಾಣಬಹುದು.

For more Stories follow Karunadu Today

Click here to Join Our Whatsapp Group