
ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರೂ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭವೆಂದು ತಿಳಿಸುತ್ತದೆ. ಅದೇ ರೀತಿ ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಪಾವನರಾಗಬೇಕೆಂದು ಹೇಳುತ್ತದೆ. ಅನೇಕ ರೀತಿಯ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ ರೀತಿಯ ಬೆಳವಣಿಗೆಯನ್ನು ನಾವು ಕಾಣಬಹುದು ಹಾಗೆ ಹಿರಿಯರು ಹೇಳುವ ಪ್ರಕಾರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ದೇವಸ್ಥಾನಗಳಿಗೆ ಹೋಗಬೇಕೆಂದು ಹೇಳುತ್ತಾರೆ. ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದರಿಂದ ನಮಗೆ ಒಳ್ಳೆಯ ರೀತಿಯ ಭವಿಷ್ಯದಲ್ಲಿ ಅಭಿವೃದ್ಧಿಯಾಗುವುದು ಹಾಗೂ ದೇವಾನು ದೇವತೆಗಳು ನಮಗೆ ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಇದೆ. ಅದೇ ರೀತಿ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಬದಲಾವಣೆ ಆಗಿರುವುದನ್ನು ನಾವು ಕಂಡಿರುತ್ತೇವೆ ಆದರೆ ನೀವೆಂದಾದರೂ ಯೋಚಿಸಿದ್ದೀರಾ ದೇವಸ್ಥಾನಕ್ಕೆ ಹೋಗಲು ಸನಾತನ ಧರ್ಮದಲ್ಲಿ ಸಮಯವನ್ನು ನಿಗದಿಪಡಿಸಿದ್ದಾರೆ, ಹಿಂದೂ ಧರ್ಮಗಳ ಪ್ರಕಾರ ನಾವುಗಳು ದೇವಸ್ಥಾನಕ್ಕೆ ಬೆಳಗ್ಗೆ ಮತ್ತು ಸಂಜೆ ಭೇಟಿ ನೀಡುವುದು ಸೂಕ್ತವೆಂದು ಹೇಳುತ್ತದೆ. ಆದರೆ ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಸೂಕ್ತವಲ್ಲ ಹಾಗೂ ಇಂತಹ ಸಮಯದಲ್ಲಿ ದೇವರಿಗೆ ಪೂಜೆಯನ್ನು ಮಾಡಿದರು ಕೂಡ ಯಾವುದೇ ರೀತಿಯ ಪೂಜಾ ಫಲವು ದೊರಕುವುದಿಲ್ಲ.
ಧಾರ್ಮಿಕ ಗ್ರಂಥಗಳ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಸೂಕ್ತವಲ್ಲ ಹಾಗೂ ಮಧ್ಯಾಹ್ನ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ? ಇಂದು ನಾವು ನಿಗದಿತ ಸಮಯಕ್ಕೆ ದೇವಸ್ಥಾನಕ್ಕೆ ಹೋಗುವುದರಿಂದ ಅಥವಾ ಸಮಯಪ್ರಜ್ಞೆಯನ್ನು ಮರೆತು ದೇವಸ್ಥಾನಕ್ಕೆ ಹೋಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.

1) ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸೂಕ್ತವಲ್ಲ ಏಕೆಂದರೆ ಆ ಸಮಯದಲ್ಲಿ ಮನುಷ್ಯನ ದೇಹದಲ್ಲಿ ಸೋಮಾರಿತನ ಅನ್ನುವುದು ಹೆಚ್ಚಾಗಿರುತ್ತದೆ ಹಾಗೆ ನಮ್ಮ ಮೆದುಳು ಕೂಡ ನಿದ್ರೆಯಲ್ಲಿರುತ್ತೆ. ಇಂಥ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಯಾವುದೇ ರೀತಿಯ ಪೂಜೆಯನ್ನು ಮಾಡಿಸಿದರು ಕೂಡ ನಮಗೆ ಪ್ರತಿಫಲ ದೊರಕುವುದಿಲ್ಲ, ಹಾಗೆ ಸ್ವಚ್ಛ ಮನಸ್ಸಿನಿಂದ ದೇವರನ್ನು ಕೂಡ ನೋಡಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ಮಧ್ಯಾನದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.

2) ಇನ್ನು ಎರಡನೇ ಕಾರಣ ಏನೆಂದರೆ ಮಧ್ಯಾಹ್ನದ ಸಮಯದಲ್ಲಿ ಹೆಚ್ಚಾಗಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ದೇವರು ನಿದ್ರಿಸುವ ಸಮಯವಾಗಿರುತ್ತದೆ. ಇದರಿಂದಾಗಿ ಇಂತಹ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಿದ್ರಿಸುತ್ತಿರುವ ದೇವರಿಗೆ ಅಡ್ಡಿಯಾಗುತ್ತದೆ, ಹಾಗಾಗಿ ಇಂತಹ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸೂಕ್ತವಲ್ಲದ ವಿಷಯ.

3) ಹಿಂದೂ ಗ್ರಂಥಗಳ ಪ್ರಕಾರ ಬೆಳಗ್ಗೆ ಮತ್ತು ಸಂಜೆ ಮಾನವರು ಮತ್ತು ಸಕಲ ಜೀವರಾಶಿಗಳು ದೇವಸ್ಥಾನಕ್ಕೆ ಭೇಟಿ ನೀಡುವುದು ಸೂಕ್ತವಾದ ಸಮಯ, ಆದರೆ ಮಧ್ಯಾಹ್ನದ ಸಮಯದಲ್ಲಿ ಅಗೋಚರ ಶಕ್ತಿಗಳು, ಪೂರ್ವಜರು, ಹಾಗೂ ದೆವ್ವಗಳು ಬಂದು ಪೂಜಿಸುವಂತಹ ಸಮಯವಾಗಿದೆ. ಇಂತಹ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಭೇಟಿ ನೀಡುವುದು ಸರಿಯಲ್ಲ. ಇವುಗಳು ದೇವರ ಕೃಪೆಗೆ ಪಾತ್ರವಾಗಿ ಈ ಲೋಕದಿಂದ ಮುಕ್ತಿ ಪಡೆಯುತ್ತವೆ ಎಂದು ನಂಬಿಕೆ ಇದೆ. ಇಂತಹ ಸಮಯದಲ್ಲಿ ದೇವಾಲಯಗಳಿಗೆ ಹೋಗುವುದು ಸೂಕ್ತವಲ್ಲ.
Follow Karunadu Today for Spiritual Information’s
Click here to Join Our Whatsapp Group