
ನಮಗೆಲ್ಲ ತಿಳಿದ ಹಾಗೆ ಸೂರ್ಯನಿಂದ ವಿಷಪೂರಿತ ಕಿರಣಗಳು ನಮ್ಮ ಭೂಮಿಯ ಕಡೆಗೆ ಬರುತ್ತಿರುತ್ತವೆ. ಆದರೆ ಅದನ್ನು ತಡೆಯುತ್ತಿರುವ ಪದರವೆ ಓಜೋನ್ ಪದರ. ಆದರೆ ಎಂದಾದರು ಈ ಓಜೋನ್ ಪದರವು ಹೇಗೆ ನಿರ್ಮಾಣವಾಯಿತು ಎಂದು ಯೋಚಿಸಿದ್ದೀರ? ಬನ್ನಿ ಇಂದು ನಿಮಗೆ ಅದರ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.
ನಮ್ಮ ಭೂಮಿಯ ವಾತಾವರಣವು ಪ್ರಮುಖವಾಗಿ 5 ಪದರಗಳಿಂದ ಮಾಡಲ್ಪಟ್ಟಿದೆ. Exosphere, Thermosphere, Mesosphere, stratosphere ಮತ್ತು Troposphere.
ನಮ್ಮ ಭೂಮಿಯ ಮೇಲ್ಮೈಗೆ ಹತ್ತಿರವಿರುವ ಪದರವೆ Troposphere. ಇದು ನಮ್ಮ ಭೂಮಿಯಿಂದ 20 ಕಿಲೋಮೀಟರ್ ವರೆಗು ಇದೆ. ಭೂಮಿಯ ಅರ್ಧದಷ್ಟು ವಾತಾವರಣವಿರುವುದು ಇಲ್ಲೆ. ಎರಡನೆಯ ಪದರದ ಹೆಸರು stratosphere. ಇದು ಭೂಮಿಯಿಂದ 50 ಕಿಲೋಮೀಟರ್ ವರೆಗು ಇದೆ. ಓಜೋನ್ ಪದರವು ಇರುವುದು ಇಲ್ಲೆ. ನಮಗೆಲ್ಲ ತಿಳಿದ ಹಾಗೆ ಸೂರ್ಯನಿಂದ ವಿಷಪೂರಿತ ultraviolent ಕಿರಣಗಳು ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುತ್ತವೆ. ಯಾವಾಗ ಈ UV ಕಿರಣಗಳು ಆಮ್ಲಜನಕದ ಅಣುಗಳಿಗೆ ಬಡಿಯುತ್ತವೆ ಆಗ ಅದನ್ನು ಪ್ರತ್ಯೇಕ ಆಮ್ಲಜನಕ ಪರಮಾಣುಗಳಾಗಿ ವಿಭಜಿಸುತ್ತದೆ. ಈ ವಿಭಜನೆಯಾದ ಅಣುಗಳು ಮರಳಿ ಆಮ್ಲಜನಕದ ಅಣುವಿನೊಂದಿಗೆ collide ಆಗಲು ಪ್ರಯತ್ನಿಸಿದಾಗ ಓಜೋನ್ ಅನಿಲ ಸೃಷ್ಟಿಯಾಗುತ್ತದೆ. ಓಜೋನ್ ಅಂದರೆ 3 ಆಮ್ಲಜನಕದ ಅಣುಗಳು. ಹೀಗೆ ಪ್ರತಿ ಬಾರಿ UV ಕಿರಣಗಳು ಆಮ್ಲಜನಕದ ಅಣುವಿನ ಮೇಲೆ ಬಿದ್ದಾಗ O3 ಅಣುಗಳು ಸೃಷ್ಟಿಯಾಗುತ್ತ ಹೋಗುತ್ತವೆ. ಹೀಗೆ ಸೃಷ್ಟಿಯಾದ O3 ಅಣುಗಳು ಕೂಡಿಕೊಂಡೆ ಭೂಮಿಯ ಸುತ್ತಲು ಓಜೋನ್ ಪದರವು ನಿರ್ಮಾಣವಾಗಿರುವುದು. ಭೂಮಿಯ ವಾತಾವರಣದಲ್ಲಿ ಆಮ್ಲಜನಕವು ಇರುವುದರಿಂದಲೆ ಈ ರೀತಿಯ ಪದರವು ನಿರ್ಮಾಣವಾಗಿರುವುದು. ಇನ್ನು ಇದೇ ರೀತಿ ಮಂಗಳ ಗ್ರಹದ ಸುತ್ತಲೂ ಕೂಡ ಓಜೋನ್ ಪದರವಿರುವುದನ್ನು ನಾಸಾ ಪತ್ತೆ ಮಾಡಿದೆ. ಆದರೆ ಅದು ಭೂಮಿಯ ಸುತ್ತಲೂ ಇರುವಷ್ಟು ಹೆಚ್ಚು ಸಕ್ರಿಯವಾಗಿಲ್ಲ. ಆದ್ದರಿಂದ ಆ ಗ್ರಹದ ಒಳಗೆ ನೇರವಾಗಿ ಸೂರ್ಯನ UV ಕಿರಣಗಳು ಬೀಳುತ್ತವೆ.
ಆದರೆ ಮನುಷ್ಯನು ಭೂಮಿಯ ವಾತಾವರಣಕ್ಕೆ ಅನೇಕ ವಿಷಪೂರಿತ ಅನಿಲಗಳನ್ನು ಬಿಡುತ್ತಿದ್ದಾನೆ. ಅದರಲ್ಲಿ ಪ್ರಮುಖವಾದ ಅನಿಲವೆ Chlorofluorocarbons(CFC).ಮನೆಯಲ್ಲಿ ಬಳಸುವ ಫ್ರಿಡ್ಜ್, ಏರ್ ಕೂಲರ್ ಗಳಿಂದ ಹೊರಬರುವ ಈ ವಿಷಪೂರಿತ ಅನಿಲಗಳು ಆಮ್ಲಜನಕದ ಅಣುಗಳ ಜೊತೆಗೆ ಸೇರಿಕೊಳ್ಳುತ್ತವೆ. ಇದರಿಂದ UV ಕಿರಣಗಳು ನೇರವಾಗಿ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತವೆ. ಈ ರೀತಿ ಪ್ರವೇಶಿಸುವುದರಿಂದ ನಮ್ಮ ದೇಹದ ಮೇಲೆ ಬಿದ್ದು ಅನೇಕ ಚರ್ಮದ ಖಾಯಿಲೆ ಹಾಗು ಕ್ಯಾನ್ಸರ್ ತರಹದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಕೃತಿಗೂ ಇದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಸೂರ್ಯನ ವಿಷಪೂರಿತ ಕಿರಣಗಳು ಅಂಟಾರ್ಟಿಕಾದಲ್ಲಿರುವ ಮಂಜುಗಡ್ಡೆಗಳನ್ನು ಕರಗಿಸುತ್ತಿವೆ. ಇದರಿಂದ ಅಲ್ಲಿ ವಾಸಿಸುತ್ತಿರುವ ಪೆಂಗ್ವಿನ್, ಸೀಲ್ ಮತ್ತು polar bear ತರಹದ ಜೀವಿಗಳಿಗೆ ವಾಸಿಸಲು ಸಾಧ್ಯವಾಗದೆ ಪರದಾಡುತ್ತಿವೆ. ಮಂಜುಗಡ್ಡೆಗಳು ಕರಗುವುದರಿಂದ ಸಮುದ್ರದ ನೀರಿನ ಮಟ್ಟ ಕೂಡ ಹೆಚ್ಚಾಗುತ್ತಿದೆ. ಇದರಿಂದ ಸಮುದ್ರದ ದಂಡೆಗಳ ಮೇಲಿರುವ ನಗರ ಪ್ರದೇಶಗಳು ನೀರಿನಲ್ಲಿ ಮುಳುಗುತ್ತಿವೆ. ಇದು ಹೀಗೆ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಅಂತ್ಯ ಖಚಿತ.
Follow Karunadu Today for more Interesting Facts & Stories.
Click here to Join Our Whatsapp Group