
ಅದು 1920 ಹಾಗು 1930 ರ ಮಧ್ಯದ ವರ್ಷಗಳು, ಪ್ರಸಿದ್ದ ವಿಜ್ಞಾನಿ ಎಡ್ವಿನ್ ಹಬಲ್ ಅವರು ಬ್ರಹ್ಮಾಂಡದ ವಿಸ್ತಾರದ ಕುರಿತು ಪತ್ತೆ ಮಾಡಿದ ದಿನಗಳು. ಬ್ರಹ್ಮಾಂಡವು ನಿಧಾನವಾಗಿ ವಿಸ್ತಾರವಾಗುತ್ತಿದೆ ಎಂದು ಕಂಡುಹಿಡಿದ ಅವರು ಜಗತ್ತಿನ ಎಲ್ಲಾ ವಿಜ್ಞಾನಿಗಳ ಹುಬ್ಬೇರುವ ಹಾಗೆ ಮಾಡಿದ್ದರು. ಇದಕ್ಕೆ “Hubbles Law of expansion” ಎಂದು ಕರೆಯಲಾಗಿದೆ. ಆದರೆ ಇವರಿಗಿಂತ ಮೊದಲು “Friedmann” ಎನ್ನುವ ವಿಜ್ಞಾನಿಯು ಕೂಡ ಇದರ ಕುರಿತು “Friedmann equation” ಮೂಲಕ ಕಂಡುಹಿಡಿದಿದ್ದರು. ಬ್ರಹ್ಮಾಂಡದ ಎಲ್ಲಾ ಆಕಾಶಗಂಗೆಗಳು, clusters ಗಳ ಮಧ್ಯೆ ಇರುವ ಅಂತರ ಹೆಚ್ಚಾಗುತ್ತ ಹೋಗುತ್ತಿದ್ದು ಪ್ರತಿ ಒಂದು ಕ್ಷಣಕ್ಕೆ ಈ ಅಂತರವು ಹೆಚ್ಚಾಗುತ್ತ ಹೋಗುತ್ತಿದೆ. ಆದರೆ ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ. ಏಕೆಂದರೆ ಯಾವುದೇ ಒಂದು ವಸ್ತುವು ತಾನಿರುವ ಸ್ಥಳದಿಂದ ಮುಂದೆ ಹೋಗಬೇಕೆಂದರೆ ಅದರ ಮೇಲೆ ಬಲಪ್ರಯೋಗ ಮಾಡಲೇಬೇಕು. ಬಲ ಪ್ರಯೋಗ ಮಾಡದೆ ಯಾವುದು ಕೂಡ ಕಿಂಚಿತ್ತು ಸರಿಯುವುದಿಲ್ಲ. ಹೀಗಿದ್ದ ಮೇಲೆ ಬ್ರಹ್ಮಾಂಡದ ಎಲ್ಲಾ ಆಕಾಶಗಂಗೆಗಳು ಅದು ಹೇಗೆ ವಿಸ್ತಾರವಾಗುತ್ತ ಹೋಗುತ್ತಿವೆ. ಇದರ ಅರ್ಥ ಯಾವುದೋ ಒಂದು ಕಣ್ಣಿಗೆ ಕಾಣದ ಶಕ್ತಿಯು ಇಲ್ಲಿ ಕಾರ್ಯವಹಿಸುತ್ತಿದೆ ಎಂದು ವಿಜ್ಞಾನಿಗಳಿಗೆ ತಿಳಿಯಿತು.
ಆ ಶಕ್ತಿಯನ್ನೆ ವಿಜ್ಞಾನಿಗಳು “DARK ENERGY” ಎಂದು ಕರೆದರು. ಅಂದಹಾಗೆ DARK ENERGY ಅಂದರೆ ಕತ್ತಲಿನಿಂದ ಕೂಡಿರುವ ಶಕ್ತಿ ಎಂದರ್ಥವಲ್ಲ, ಕಣ್ಣಿಗೆ ಕಾಣದ ಶಕ್ತಿ ಎಂದರ್ಥ. ಈ ಶಕ್ತಿಯು ಬ್ರಹ್ಮಾಂಡದಲ್ಲಿ ಇದೆ ಎಂದು ಸೈದ್ಧಾಂತಿಕವಾಗಿ ಮಾತ್ರ ಹೇಳಲಾಗಿದೆ ಹೊರತು ಇದನ್ನು ಇದುವರೆಗು ನಿರೂಪಿಸಿಲ್ಲ. ಆದರೆ ಈ ಶಕ್ತಿಯು ಬ್ರಹ್ಮಾಂಡದ ವಿಸ್ತಾರದ ಹಿಂದಿರುವ ಮಹತ್ವವಾದ ಶಕ್ತಿಯಾಗಿದೆ. ವರ್ಷಗಳು ಕಳೆದಂತೆ ಬ್ರಹ್ಮಾಂಡದ ಕುರಿತು ಮತ್ತಷ್ಟು ಅಧ್ಯಯನ ಮಾಡಲು ಶುರು ಮಾಡಿದ ವಿಜ್ಞಾನಿಗಳು ನಮ್ಮ ಮಿಲ್ಕಿ ವೇ ಆಕಾಶಗಂಗೆ ಸೇರಿದಂತೆ ಉಳಿದ ಎಲ್ಲಾ ಆಕಾಶಗಂಗೆಗಳು ಒಂದು ನಿರ್ಧಿಷ್ಟವಾದ ದಿಕ್ಕಿನೆಡೆಗೆ ಚಲಿಸುತ್ತಿರುವುದನ್ನು ಗಮನಿಸಿದರು. ಯಾವ ದಿಕ್ಕಿನೆಡೆಗೆ ಎಲ್ಲಾ ಆಕಾಶಗಂಗೆಗಳು ಚಲಿಸುತ್ತಿವೆ ಆ ದಿಕ್ಕಿನಲ್ಲಿ ಬ್ರಹ್ಮಾಂಡದ ವಿಸ್ತಾರದ ಪ್ರಮಾಣ ಸಾಕಷ್ಟಿದೆ. ಏಕೆಂದರೆ “Hubble’s Law of Expansion” ಹೇಳುವ ಪ್ರಕಾರ ಆಕಾಶಗಂಗೆಗಳ ಮಧ್ಯೆ ಇರುವ ಅಂತರವು ಹೆಚ್ಚಾಗುತ್ತ ಹೋಗುತ್ತದೆ ಹೊರತು ಕಡಿಮೆಯಲ್ಲ. ಆದರೆ ಈ ಒಂದು ದಿಕ್ಕಿನಲ್ಲಿ ಮಾತ್ರ ಆಕಾಶಗಂಗೆಗಳ ಮಧ್ಯೆ ಇರುವ ಅಂತರ ಕಡಿಮೆಯಾಗುತ್ತ ಹೋಗುತ್ತಿದೆ. ಇದರ ಅರ್ಥ ಯಾವುದೋ ಒಂದು ಶಕ್ತಿ ಬ್ರಹ್ಮಾಂಡದ ಈ ಒಂದು ಜಾಗದಲ್ಲಿದ್ದು ಅದು ತನ್ನೆಡೆಗೆ ಎಲ್ಲಾ ಆಕಾಶಗಂಗೆಗಳನ್ನು ಎಳೆದುಕೊಳ್ಳುತ್ತಿದೆ. ಇದಕ್ಕೆ ವಿಜ್ಞಾನಿಗಳು “THE GREAT ATTRACTOR” ಎನ್ನುವ ಹೆಸರನ್ನು ನೀಡಿದರು. ಆದರೆ ಅಷ್ಟಕ್ಕೂ ಇದು ಏನು ಹಾಗು ಬ್ರಹ್ಮಾಂಡದ ಯಾವ ಮೂಲೆಯಲ್ಲಿ ಇದು ಇದೆ ಎನ್ನುವುದನ್ನು ಇಂದು ನಿಮಗೆ ವಿವರಿಸುತ್ತೇವೆ.

ಈ “THE GREAT ATTRACTOR” ಕುರಿತು ವಿಜ್ಞಾನಿಗಳಿಗೆ ಮೊದಲು ತಿಳಿದದ್ದು 1970ರ ಆಸುಪಾಸಿನಲ್ಲಿ. “Cosmic Microwave Background” ಕುರಿತು ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಬ್ರಹ್ಮಾಂಡದ ನಕ್ಷೆಯನ್ನು ತಯಾರಿಸುವಲ್ಲಿ ನಿರತರಾಗಿದ್ದರು. ಅಂದಹಾಗೆ ಈ “Cosmic Microwave Background” ಅಂದರೆ ಏನು ಎನ್ನುವುದನ್ನು ನಿಮಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಬ್ರಹ್ಮಾಂಡದ ಜನನದ ನಂತರ ಹೊರಬಂದ ವಿಕಿರಣಗಳು ಹೇಗೆ ಬ್ರಹ್ಮಾಂಡದ ಮೂಲೆ ಮೂಲೆಯನ್ನು ಹಬ್ಬಿತು ಎನ್ನುವುದನ್ನು ತೋರಿಸುವ ನಕ್ಷೆಯಿದು. ಈ ನಕ್ಷೆಯನ್ನು ಸರಿಯಾಗಿ ಗಮನಿಸಿದರೆ ನಮ್ಮ ಬ್ರಹ್ಮಾಂಡದ ಬೇರೆ ಜಾಗಗಳಿಗೆ ಹೋಲಿಸಿದರೆ ನಮ್ಮ ಮಿಲ್ಕಿ ವೇ ಆಕಾಶಗಂಗೆ ಹಾಗು ಅದರ ಆಸುಪಾಸಿನಲ್ಲಿ ಇರುವ ಸ್ಥಳದಲ್ಲಿ ವಿಕಿರಣದ ತಾಪಾಮನವು ಸಾಕಷ್ಟು ಹೆಚ್ಚಿದೆ. ಸಾಕಷ್ಟು ಹೆಚ್ಚಿದೆಯೆಂದರೆ ಅದರ ಅರ್ಥ ಅಲ್ಲಿ ಆಕಾಶಗಂಗೆಗಳ ಇರುವಿಕೆ ಹೆಚ್ಚಿದೆ ಎಂದರ್ಥ. ಆದರೆ ಒಂದೇ ಸ್ಥಳದಲ್ಲಿ ಅಷ್ಟೊಂದು ಆಕಾಶಗಂಗೆಗಳು ಇರಲು ಹೇಗೆ ಸಾಧ್ಯ ಎಂದು ಪತ್ತೆ ಮಾಡುತ್ತಾ ಹೋದಾಗ ಅಲ್ಲೊಂದು ಅದ್ಬುತ ಶಕ್ತಿಯಿದ್ದು ಅದು ತನ್ನೆದೆಗೆ ಎಲ್ಲಾ ಆಕಾಶಗಂಗೆಗಳನ್ನು ಸೆಳೆದುಕೊಳ್ಳುತ್ತಿದೆ. ಇದರಿಂದಾಗಿ ಆ ಸ್ಥಳದಲ್ಲಿ ತಾಪಮಾನ ಸಾಕಷ್ಟಿದೆ ಎಂದು ತಿಳಿದುಬಂದಿತು.

ಆ ಅದ್ಬುತ ಶಕ್ತಿಯೇ “THE GREAT ATTRACTOR”. ಪ್ರತಿ ಒಂದು ಕ್ಷಣಕ್ಕೆ ಬರೋಬ್ಬರಿ 6000 ಕಿಲೋಮೀಟರ್ ನಷ್ಟು ವೇಗದಲ್ಲಿ ಈ ಶಕ್ತಿಯು ಎಲ್ಲಾ ಆಕಾಶಗಂಗೆಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಇದರ ಅರ್ಥ ನಾವು, ನಮ್ಮ ಈ ಭೂಗ್ರಹ, ನಮ್ಮ ಸೌರ ಮಂಡಲ ಸೇರಿದಂತೆ ಸಂಪೂರ್ಣ ಮಿಲ್ಕಿ ವೇ ಆಕಾಶಗಂಗೆಯನ್ನು ಈ ಶಕ್ತಿಯು ನಮಗೆ ತಿಳಿಯದ ಹಾಗೆ ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಇನ್ನು ಈ ಅದ್ಬುತ ಶಕ್ತಿಯು ಬ್ರಹ್ಮಾಂಡದ ಒಂದು ಅಜ್ಞಾತ ಸ್ಥಳದಲ್ಲಿದ್ದು ಅದನ್ನು ನಾವು ಶಕ್ತಿಶಾಲಿ ಟೆಲಿಸ್ಕೋಪ್ ನಿಂದ ನೋಡಲು ಸಾಧ್ಯವಿಲ್ಲ. ಆ ಸ್ಥಳವನ್ನು “ZONE OF AVOIDANCE” ಎಂದು ಕರೆಯುತ್ತಾರೆ. ಈ ಸ್ಥಳವನ್ನು ನಾವುಗಳು ಏಕೆ ನೋಡಲು ಸಾಧ್ಯವಿಲ್ಲವೆಂದರೆ ಇದರಿಂದ ಹೊರಬರುತ್ತಿರುವ ಬೆಳಕಿನ ಕಿರಣಗಳು ನಮ್ಮ ಭೂಮಿಯವರೆಗು ತಲುಪುತ್ತಿಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಅಜ್ಞಾತ ಸ್ಥಳದ ಗುರುತ್ವಾಕರ್ಷಣೆಯು ಅದೆಷ್ಟಿದೆಯೆಂದರೆ ಅದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಎಲ್ಲಾ ಆಕಾಶಗಂಗೆಗಳನ್ನು ತನ್ನೆಡೆಗೆ ಇದು ಸೆಳೆದುಕೊಳ್ಳುತ್ತಿದೆಯೆಂದರೆ ಅದರ ಗುರುತ್ವಾಕರ್ಷಣೆಯು ಅದೆಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆ ಎಂದು ನೀವೇ ತಿಳಿದುಕೊಳ್ಳಿ.

ಇನ್ನು ಆಕಾಶದ southern ಭಾಗದ ಕಡೆಗೆ 50 ಸಾವಿರ ಜ್ಯೋತಿವರ್ಷಗಳಷ್ಟು ದೂರದಲ್ಲಿ ನೋಡಿದಾಗ ಕಾಣುವ centaurus ನಕ್ಷತ್ರಪುಂಜದಲ್ಲಿ ಈ “GREAT ATTRACTOR” ಅನ್ನು ನಾವು ಕಾಣಬಹುದಾಗಿದೆ. 1997ರ ಫೆಬ್ರವರಿಯಲ್ಲಿ ಆಕಾಶದ southern ಭಾಗವನ್ನು HIPASS ಎನ್ನುವ ದೈತ್ಯ ಟೆಲಿಸ್ಕೋಪ್ ಮೂಲಕ ಅಧ್ಯಯನ ನಡೆಸುವಾಗ ಸಿಕ್ಕಿದ್ದೆ Norma Cluster. ಅಂದಹಾಗೆ ಈ norma cluster ಅಂದರೇನು ಹಾಗು ಇದರಲ್ಲಿ ಅದೆಷ್ಟು ಆಕಾಶಗಂಗೆಗಳಿವೆ ಎನ್ನುವುದನ್ನು ಈಗಾಗಲೆ ವಿವರಿಸಿದ್ದೇನೆ. ಈ norma cluster ಸಮೀಪ ಇರುವುದೆ “THE GREAT ATTRACTOR”.
ಇನ್ನು ಈ “GREAT ATTRACTOR” ಕುರಿತು ಅನೇಕ ವರ್ಷಗಳಿಂದ ಸಂಶೋಧನೆ ನಡೆಯುತ್ತಿದ್ದು ಇದರ ಒಳಗೆ ಏನಿದೆ ಎಂದು ಪತ್ತೆ ಮಾಡುವಷ್ಟು ತಂತ್ರಜ್ಞಾನ ಸಧ್ಯಕ್ಕೆ ನಮ್ಮ ಬಳಿಯಿಲ್ಲ. ಮುಂಬರುವ ದಿನಗಳಲ್ಲಿ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ನಾವು ವಿಜ್ಞಾನಿಗಳಿಂದ ನಿರೀಕ್ಷಿಸಬಹುದಾಗಿದೆ.