1) ನಮಗೆಲ್ಲ ತಿಳಿದ ಹಾಗೆ ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಸೇತುವೆಯಾದ “Millau Viaduct” ಫ್ರಾನ್ಸ್ ದೇಶದಲ್ಲಿದೆ. ಬರೋಬ್ಬರಿ 343 ಮೀಟರ್ ಎತ್ತರವಿರುವ ಈ ಸೇತುವೆಯು ಅದೇ ದೇಶದಲ್ಲಿರುವ ಐಫಲ್ ಟವರ್ ಗಿಂತ ಹೆಚ್ಚು ಎತ್ತರದಲ್ಲಿದೆ. ಆದರೆ ಇದನ್ನು ಮೀರಿಸುವಂತಹ ಎತ್ತರದ ಸೇತುವೆಯೊಂದನ್ನು ನಮ್ಮ ದೇಶದಲ್ಲಿ ನಿರ್ಮಿಸಲಾಗುತ್ತಿದೆ. ಹೌದು, ಜಮ್ಮು ಕಾಶ್ಮೀರದ “Chenab” ನದಿಯ ಮೇಲೆ ನಿರ್ಮಾಣವಾಗುತ್ತಿರುವ ಈ ಸೇತುವೆಯು ಒಂದು ರೈಲ್ವೇ ಸೇತುವೆಯಾಗಿದ್ದು “ಉದಂಪುರ್-ಶ್ರೀನಗರ ಮತ್ತು ಬಾರಾಮುಲ್ಲಾ” ಗಳನ್ನು ಈ ಸೇತುವೆಯ ಮೂಲಕ ಸಂಪರ್ಕಿಸಬಹುದಾಗಿದೆ. ಭೂಮಿಯಿಂದ 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯು ಪ್ಯಾರಿಸ್ ನಗರದಲ್ಲಿರುವ ಐಫಲ್ ಟವರ್ ಗಿಂತ 60 ಮೀಟರ್ ಎತ್ತರದಲ್ಲಿ ಇರಲಿದೆ. ಗಂಟೆಗೆ 260 ಕಿಲೋಮೀಟರ್ ವೇಗದಲ್ಲಿ ಚಲಿಸುವ ಗಾಳಿ ಬಂದು ಈ ಸೇತುವೆಗೆ ಬಡಿದರು ಕೂಡ ಏನೂ ಆಗದ ರೀತಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. 2022 ರ ಹೊತ್ತಿಗೆ ಇದರ ನಿರ್ಮಾಣವು ಪೂರ್ಣಗೊಳ್ಳಲಿದ್ದು ಒಮ್ಮೆ ಇದು ಪೂರ್ಣಗೊಂಡರೆ ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

awe

2) ನಮಗೆಲ್ಲ ತಿಳಿದ ಹಾಗೆ ವಿಜ್ಞಾನಿಗಳು ಹೇಳುವ ಪ್ರಕಾರ 165 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೋಸಾರ್ ಯುಗವಿತ್ತು. ಆದರೆ ಭೂಮಿಗೆ ಬಂದು ಅಪ್ಪಳಿಸಿದ ಬೃಹತ್ ಕ್ಷುದ್ರ ಗ್ರಹದ ತುಂಡು ಅವುಗಳ ಸಂಪೂರ್ಣ ವಿನಾಶಕ್ಕೆ ಕಾರಣವಾಯಿತು. ಇದನ್ನು ಪ್ರತಿ ಬಾರಿ ಕೇಳಿದಾಗ ಸಂಪೂರ್ಣ ಭೂಮಿಯನ್ನೇ ನಾಶ ಮಾಡುವಂತಹ ಶಕ್ತಿಯನ್ನು ಹೊಂದಿರುವ ಆ ಕ್ಷುದ್ರ ಗ್ರಹದ ತುಂಡು ಅದೆಷ್ಟು ದೊಡ್ಡದಿರಬೇಕು ಎಂದು ನಾವು ಅನೇಕ ಬಾರಿ ಆಲೋಚಿಸಿರುತ್ತೇವೆ. ಆದರೆ ಈ ಪ್ರಶ್ನೆಯ ಜೊತೆಗೆ ಮತ್ತೊಂದು ಪ್ರಶ್ನೆಯು ನಮ್ಮ ತಲೆಯಲ್ಲಿ ಒಮ್ಮೆಯಾದರು ಮೂಡಿರುತ್ತದೆ. ಅದೇನೆಂದರೆ ಡೈನೋಸಾರ್ ಗಳ ಸರ್ವನಾಶಕ್ಕೆ ಕಾರಣವಾದ ಕ್ಷುದ್ರ ಗ್ರಹದ ತುಂಡು ಮರಳಿ ಮತ್ತೆ ಭೂಮಿಗೆ ಬಂದು ಅಪ್ಪಳಿಸುತ್ತವೆಯೇ ಎನ್ನುವುದು. ಈ ಪ್ರಶ್ನೆಗೆ ಉತ್ತರ ವಿಜ್ಞಾನಿಗಳ ಬಳಿ ಇಲ್ಲ ಆದರೆ 1908 ರಲ್ಲಿ ರಷ್ಯಾದಲ್ಲಿ ನಡೆದ ಒಂದು ಘಟನೆಯು ಕ್ಷುದ್ರ ಗ್ರಹಗಳು ಮರಳಿ ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಸಂಗತಿಯಲ್ಲಿ ನಿಮಗೆ ಆ ಘಟನೆಯ ಕುರಿತು ಹೇಳುತ್ತೇನೆ ಕೇಳಿ. 1908 ರಲ್ಲಿ ರಷ್ಯಾ ದೇಶದಲ್ಲಿರುವ “Tunguska” ನದಿಯ ಬಳಿ ಬಂದು ಅಪ್ಪಳಿಸಿದ ಬೃಹತ್ ಕ್ಷುದ್ರ ಗ್ರಹವು ಅದೆಷ್ಟು ಭಯಾನಕ ಅನಾಹುತವನ್ನು ಸೃಷ್ಟಿಸಿತ್ತೆಂದರೆ ಆ ನದಿಯ ಸುತ್ತಲಿರುವ ಕಾಡಿನಲ್ಲಿರುವ ಬರೋಬ್ಬರಿ 8 ಕೋಟಿ ಮರಗಳನ್ನು ಅದು ಸರ್ವನಾಶ ಮಾಡಿತ್ತು. ಅಕಸ್ಮಾತ್ ಈ ಕ್ಷುದ್ರ ಗ್ರಹವೇನಾದರು ಯಾವುದಾದರು ನಗರ ಪ್ರದೇಶದ ಮೇಲೆ ಅಪ್ಪಳಿಸಿದಿದ್ದರೆ ಸಂಪೂರ್ಣ ನಗರವು ನಾಶವಾಗಿ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಇನ್ನು ಇದರ ಕುರಿತ ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಅಂದಿನಿಂದ ಇಲ್ಲಿಯವರೆಗು ಆ ಕ್ಷುದ್ರ ಗ್ರಹದ ತುಂಡು ಬಿದ್ದ ಜಾಗದಲ್ಲಿ ಮರಗಳೆ ಬೆಳೆಯುತ್ತಿಲ್ಲ.

awe

3) ಎರಡನೆಯ ಪ್ರಪಂಚ ಯುದ್ದ ನಡೆಯುವ ವೇಳೆ ಅಮೇರಿಕವು ಮೊಟ್ಟ ಮೊದಲ ಬಾರಿಗೆ ಪರಮಾಣು ಬಾಂಬ್ ಅನ್ನು ಜಪಾನಿನ ಹೀರೋಶಿಮ ಮತ್ತು ನಾಗಸಾಕಿಯ ಮೇಲೆ ಹಾಕಿರುವುದು ನಮಗೆಲ್ಲ ತಿಳಿದೇ ಇದೆ. ಈ ಘಟನೆಯ ನಂತರ ಜಪಾನ್ ಅಮೆರಿಕಾಕ್ಕೆ ಶರಣಾಗುವ ಮೂಲಕ ಯುದ್ದವು ಅಂತ್ಯವಾಯಿತು. ಆದರೆ ಎರಡನೆಯ ಪ್ರಪಂಚ ಯುದ್ದ ಮುಗಿದ ಬಳಿಕವು ಈ ಪರಮಾಣು ಬಾಂಬ್ ಗಳನ್ನು ಪರೀಕ್ಷಿಸುವ ಕೆಲಸ ಮಾತ್ರ ನಡೆಯುತ್ತಲೆ ಇತ್ತು. 1945 ರಲ್ಲಿ ಪರಮಾಣು ಬಾಂಬಿನ ಪರೀಕ್ಷೆಯನ್ನು ಭೂಮಿಯ ಮೇಲ್ಭಾಗದಲ್ಲಿ ನಡೆಸಲಾಗುತ್ತಿತ್ತು ಆದರೆ 1957 ರಲ್ಲಿ ಮೊದಲ ಬಾರಿಗೆ ಭೂಮಿಯ ಒಳಗೆ ಪರೀಕ್ಷೆ ನಡೆಸಲು ವಿಜ್ಞಾನಿಗಳು ತೀರ್ಮಾನಿಸಿದರು. ಇದಕ್ಕೆಂದು ಭೂಮಿಯ ಒಳಗೆ drill ಕೊರೆದು ದೊಡ್ಡ ರಂದ್ರವನ್ನು ರಚಿಸಿ ಅದರ ಒಳಗೆ ಪರಮಾಣು ಬಾಂಬ್ ಅನ್ನು ಹಾಕಿ ಅದರ ಮೇಲೆ concrete ಹಾಕಿ ಆ ಗುಂಡಿಯನ್ನು Manhole ನಿಂದ ಮುಚ್ಚಲಾಯಿತು. ನಂತರ ಆ ಬಾಂಬ್ ಅನ್ನು ಸ್ಪೋಟಗೊಳಿಸಿದಾಗ ಗುಂಡಿಯನ್ನು ಮುಚ್ಚಿದ್ದ Manhole ಸ್ಫೋಟದ ತೀವ್ರತೆಗೆ ಒಂದು ಗಂಟೆಗೆ 2 ಲಕ್ಷ ಕಿಲೋಮೀಟರ್ ವೇಗದಲ್ಲಿ ಆಕಾಶದ ಕಡೆಗೆ ಚಲಿಸಿ ಬಾಹ್ಯಾಕಾಶವನ್ನು ತಲುಪಿತು. ಅಂದರೆ ಒಂದು ಕ್ಷಣಕ್ಕೆ 70 ಕಿಲೋಮೀಟರ್ ವೇಗದಲ್ಲಿ ಅದು ಚಲಿಸಿದೆ. ಇನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಯಾವುದೇ ವಸ್ತುವು ಹೋಗಿ ತಲುಪಬೇಕೆಂದರೆ ಪ್ರತಿ ಕ್ಷಣಕ್ಕೆ ಅದು 11.2 ಕಿಲೋಮೀಟರ್ ವೇಗದಲ್ಲಿ ಚಲಿಸಬೇಕು. ಆದರೆ ಈ ವಸ್ತುವು ಬರೋಬ್ಬರಿ 70 ಕಿಲೋಮೀಟರ್ ವೇಗದಲ್ಲಿ ಚಲಿಸಿದೆಯೆಂದರೆ ಅದೆಷ್ಟು ವೇಗದಲ್ಲಿ ಅದು ಬಾಹ್ಯಾಕಾಶವನ್ನು ತಲುಪಿರಬೇಕೆಂದು ನೀವೇ ಅರ್ಥ ಮಾಡಿಕೊಳ್ಳಿ. ಇದನ್ನು High speed ಕ್ಯಾಮೆರಾ ಬಳಸಿ ಪತ್ತೆ ಮಾಡಿದ ವಿಜ್ಞಾನಿಗಳು ಸಾಕಷ್ಟು ಅಚ್ಚರಿ ಪಟ್ಟಿದ್ದರು.

awe

4) ನಿಮ್ಮ ಬಳಿ smartphone ಇದ್ದು ಅದರಲ್ಲಿ ಇಂಟರ್ನೆಟ್ ಅನ್ನು ಬಳಸುತ್ತಿದ್ದರೆ network symbol ಇರುವ ಕಡೆ ನೋಡಿ. LTE ಅಥವ VOLTE ಎಂದು ಬರೆದಿರುತ್ತದೆ. ಆದರೆ ಎಂದಾದರು ಇವುಗಳ ಅರ್ಥ ಏನಿರಬಹುದು ಎಂದು ಯೋಚಿಸಿದ್ದೀರ? LTE ಅಂದರೆ “Long Term Evolution”. ನಮ್ಮ ದೇಶದಲ್ಲಿ ಇದನ್ನು ಮೊದಲು airtel ಕಂಪನಿಯು ಪರಿಚಯಿಸಿತ್ತು. ಇದರ ಅರ್ಥವನ್ನು ಸುಲಭವಾಗಿ ನಿಮಗೆ ವಿವರಿಸುವುದಾದರೆ ನೀವು ಮೊಬೈಲ್ ಬಳಸುವ ವೇಳೆ ಯಾವುದೇ ಕರೆ ಬಂದರೆ ಸಾಕು ಅಕಸ್ಮಾತ್ ನಿಮ್ಮ ಮೊಬೈಲ್ ನಲ್ಲಿರುವ ಇಂಟರ್ನೆಟ್ on ಇದ್ದರೆ ಅದು off ಆಗುತ್ತದೆ. ಇದು LTE network ಗಳಿಂದ ಆಗುವ ಸಮಸ್ಯೆ. ಆದರೆ ದೇಶದಲ್ಲಿ ಮೊದಲ ಬಾರಿಗೆ VOLTE ಸೌಲಭ್ಯವನ್ನು jio ಕಂಪನಿಯು ಜಾರಿಗೆ ತಂದಿತು. ಇದರ ಅರ್ಥ “Voice over Long terms evolution”. ಇದನ್ನು ಬಳಸುವುದರಿಂದ ನಿಮಗೆ ಯಾವುದೇ ಕರೆ ಬಂದರು ಕೂಡ ಇಂಟರ್ನೆಟ್ ಮಾತ್ರ off ಆಗುವುದಿಲ್ಲ. ಯಾವಾಗ jio ಕಂಪನಿಯು ಇದನ್ನು ಜಾರಿಗೆ ತಂದಿತೋ ಉಳಿದ ಕಂಪನಿಗಳು ಕೂಡ ಈ ಸೌಲಬ್ಯವನ್ನು ಜಾರಿಗೆ ತಂದವು.

awe

5) ನೀವು ಅನೇಕ ಹೂಗಳ ಕುರಿತು ನಿಮ್ಮ ಜೀವನದಲ್ಲಿ ಕೇಳಿರುತ್ತೀರಿ. ಆದರೆ ಎಂದಾದರು ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಹೂವು ಯಾವುದಿರಬಹುದು ಎಂದು ಯೋಚಿಸಿದ್ದೀರ? ಈ ಸಂಗತಿಯಲ್ಲಿ ನಿಮಗೆ ಅದರ ಕುರಿತು ಮಾಹಿತಿ ನೀಡುವೆ. ಇಂಡೋನೇಷ್ಯಾದ ಕಾಡುಗಳಲ್ಲಿ ಕಾಣಸಿಗುವ ಆ ಹೂವಿನ ಹೆಸರು “Rafflesia arnoldii”. 1 ಮೀಟರ್ ವೃತ್ತಾಕಾರದವರೆಗು ಬೆಳೆಯುವ ಸಾಮರ್ಥ್ಯ ಹೊಂದಿರುವ ಈ ಹೂವು 7 ಕೆಜಿ ತೂಕ ಹೊಂದಿದೆ.

Follow Karunadu Today for more AWE like this

Click here to Join Our Whatsapp Group