"ಅಧ್ಯಾತ್ಮಿಕ ಕಥೆಗಳು"

ಪ್ರಪಂಚದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಕೋಟ್ಯಾನುಕೋಟಿ ಭಕ್ತಾದಿಗಳು ಸೇರಿ ನಡೆಸುವ ಏಕೈಕ ಹಬ್ಬವೆಂದರೆ ಅದೇ ಭಾರತದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳ. ಕುಂಭಮೇಳದಲ್ಲಿ ಮೂರು ರೀತಿ ಕುಂಭಮೇಳವನ್ನ ಆಚರಿಸುತ್ತಾರೆ.ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ ಮತ್ತು ಮಹಾ ಕುಂಭಮೇಳ. ಅರ್ಧ ಕುಂಭಮೇಳವನ್ನ ಆರು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಹಾಗೂ ಪೂರ್ಣ ಕುಂಭಮೇಳವನ್ನ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಮತ್ತು ಮಹಾ ಕುಂಭಮೇಳವನ್ನು 144 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ಎಲ್ಲಾ ಕುಂಭ ಮೇಳಗಳಿಗೆ ಆದರೆಯಾದ ವಿಶೇಷತೆಗಳಿವೆ, ಈ ಕುಂಭಮೇಳಗಳನ್ನು ಭಾರತದಲ್ಲಿ ನಾಲ್ಕು ಸ್ಥಳಗಳಲ್ಲಿ ಆಚರಿಸಲಾಗುತ್ತದೆ ಹರಿದ್ವಾರ, ಪ್ರಯಾಗ್ರಾಜ್, ಉಜ್ಜಯಿನಿ ಮತ್ತು ನಾಸಿಕ್ ಎಂಬ ಪುಣ್ಯ ಸ್ಥಳಗಳಲ್ಲಿ ಕುಂಭಮೇಳಗಳನ್ನು ಆಚರಿಸಲಾಗುತ್ತದೆ. ಉತ್ತರಖಂಡ ರಾಜ್ಯದ ಹರಿದ್ವಾರದ ಗಂಗಾ ನದಿಯ ತಡದಲ್ಲಿ ಕುಂಭಮೇಳವನ್ನು ಆಚರಿಸಲಾಗುತ್ತದೆ, ಮದ್ಯ ಪ್ರದೇಶ ರಾಜ್ಯದ ಉಜ್ಜಯಿನಿಯ ಶಿಪ್ರ ನದಿಯ ದಡದಲ್ಲಿ, ಮಹಾರಾಷ್ಟ್ರ ರಾಜ್ಯದ ಗೋದಾವರಿ ನದಿಯ ದಡದಲ್ಲಿ ಮತ್ತು ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ರಜ್ ನ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಒಂದೇ ಜಾಗದಲ್ಲಿ ಸೇರುವಂತಹ ದಡದಲ್ಲಿ ಈ ಮಹಾಕುಂಭಮೇಳವನ್ನು ಆಚರಿಸಲಾಗುತ್ತದೆ.

ಸರಿಸುಮಾರು  40 ರಿಂದ 45 ಕೋಟಿ ಭಕ್ತಾದಿಗಳು ಸೇರುವಂತಹ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರವು ಅಂದಾಜಿಸಲಾಗಿದೆ. ಜನವರಿ 13, 2025 ರಂದು ನಡೆದ ಮಹಾಕುಂಭಮೇಳ ಪೌಷ ಪೂರ್ಣಿಮಾದಲ್ಲಿ ಒಂದೇ ದಿನ ಸರಿಸುಮಾರು 1.60 ಕೋಟಿ ಅಷ್ಟು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕುಂಭಮೇಳವು ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹೋತ್ಸವವಾಗಿದೆ. “ಕುಂಭ” ಎಂದರೆ ಕಲ್ಲಸ ಮತ್ತು “ಮೇಳ” ಎಂದರೆ ಮಹಾಸಭೆ ಅಥವಾ ಸಭಾಗಮ. ಇದು ಹಿಂದು ಧರ್ಮೀಯರ ಪವಿತ್ರ ನದಿಗಳಲ್ಲಿ ನಡೆಯುವ ಸ್ನಾನ ಮಹೋತ್ಸವವಾಗಿದ್ದು, ಕುಂಭಮೇಳವು ಭಾರತೀಯ ಸಂಸ್ಕೃತಿಯಲ್ಲಿನ ಒಂದು ಪ್ರಮುಖ ಧಾರ್ಮಿಕ ಉತ್ಸವವಾಗಿದೆ. ಇದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಮೂರು ಪ್ರಮುಖ ನದಿಗಳ ಸಂಗಮದಲ್ಲಿ, ಅಂದರೆ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳಲ್ಲಿ ನಡೆಯುತ್ತದೆ. ಈ ಉತ್ಸವವು 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವಾಗಿ ಆಚರಿಸಲಾಗುತ್ತದೆ.

ಮಹಾ ಕುಂಭಮೇಳದ ವಿಶೇಷತೆ:

ಮಹಾ ಕುಂಭಮೇಳವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಆಚರಣೆಗಳಲ್ಲಿ ಒಂದಾಗಿದೆ. ಇಲ್ಲಿ, ಶ್ರದ್ಧಾಳುಗಳು ತಮ್ಮ ಪಾಪಗಳನ್ನು ತೊಳೆಯಲು ಮತ್ತು ಮೋಕ್ಷವನ್ನು ಪಡೆಯಲು ಶಾಹಿ ಸ್ನಾನದಲ್ಲಿ ಭಾಗವಹಿಸುತ್ತಾರೆ.

ಪವಿತ್ರ ಸ್ನಾನ: ಗಂಗಾ, ಯಮುನಾ ಮತ್ತು ಪವಿತ್ರ ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.

ಸಾಧು-ಸಂತರ ಸಮ್ಮೇಳನ: ದೇಶದ ವಿವಿಧ ಭಾಗಗಳಿಂದ ಬಂದ ನಾಗಾ ಸಾಧು, ಅಖಾಡ ಸದಸ್ಯರು ಮತ್ತು ಧಾರ್ಮಿಕ ಗುರುಗಳು ಜಮಾವಣೆಗೊಳ್ಳುತ್ತಾರೆ.

ಆಧ್ಯಾತ್ಮಿಕ ಚಿಂತನೆ: ಹಜಾರಾರು ಉಪನ್ಯಾಸಗಳು, ಧರ್ಮ ಚರ್ಚೆಗಳು ಮತ್ತು ಯಜ್ಞಗಳು ಆಯೋಜಿಸಲಾಗುತ್ತವೆ.

ಸಾಂಸ್ಕೃತಿಕ ವೈವಿಧ್ಯ: ಜಾನಪದ ಕಲಾ ಪ್ರದರ್ಶನಗಳು, ನೃತ್ಯ, ಸಂಗೀತ ಮತ್ತು ಸ್ಥಳೀಯ ಪರಂಪರೆಗಳ ಪ್ರದರ್ಶನ ಮೇಳದ ಹೈಲೈಟ್ ಆಗಿರುತ್ತದೆ.

ಅತಿದೊಡ್ಡ ಮಾನವ ಸಭಾಗಮ: ಲಕ್ಷಾಂತರ ಯಾತ್ರಿಕರು, ದೇಶೀಯರು ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಭಾಗವಹಿಸುತ್ತಾರೆ, ಇದು ಮಾನವತೆಯ ಐಕ್ಯತೆ ಮತ್ತು ವೈವಿಧ್ಯತೆಯನ್ನು ತೋರಿಸುತ್ತದೆ.

ಪ್ರತಿಯೊಂದು ಅಖಾಡದ ಶೋಭಾಯಾತ್ರೆ: ಪ್ರತಿ ದಿನದ ಶೋಭಾಯಾತ್ರೆಗಳು ಅದ್ಭುತ ವಾತಾವರಣವನ್ನು ಸೃಷ್ಟಿಸುತ್ತವೆ.

ಮಹಾ ಕುಂಭಮೇಳವು ಧರ್ಮ, ಸಂಸ್ಕೃತಿ ಮತ್ತು ಮಾನವತೆಯ ಅತ್ಯುತ್ತಮ ಪ್ರಾತಿನಿಧ್ಯವಾಗಿದೆ.

2025ರ ಮಹಾ ಕುಂಭಮೇಳದ ದಿನಾಂಕಗಳು

2025ರಲ್ಲಿ ನಡೆಯುವ ಮಹಾ ಕುಂಭಮೇಳವು ಹಲವು ಪ್ರಮುಖ ದಿನಾಂಕಗಳನ್ನು ಒಳಗೊಂಡಿದೆ:

ಜನವರಿ 13, 2025 – ಪೌಷ್ ಪೂರ್ಣಿಮಾ (ಸ್ನಾನ)
ಜನವರಿ 14, 2025 – ಮಕರ ಸಂಕ್ರಾಂತಿ (ಶಾಹಿ ಸ್ನಾನ)
ಜನವರಿ 29, 2025 – ಮೌನಿ ಅಮಾವಾಸ್ಯೆ (ಶಾಹಿ ಸ್ನಾನ)
ಫೆಬ್ರವರಿ 3, 2025 – ವಸಂತ ಪಂಚಮಿ (ಶಾಹಿ ಸ್ನಾನ)
ಫೆಬ್ರವರಿ 12, 2025 – ಮಾಘ ಪೂರ್ಣಿಮಾ (ಸ್ನಾನ)
ಫೆಬ್ರವರಿ 26, 2025 – ಮಹಾಶಿವರಾತ್ರಿ (ಸ್ನಾನ)

ಅಮೃತ ಮಥನ ಕಥೆ :

ಅಮೃತ ಮತ್ತು ಕುಂಭ ಹಿಂದು ಪುರಾಣಗಳ ಪವಿತ್ರ ಕತೆಯ ಪ್ರಮುಖ ಅಂಶಗಳಾಗಿವೆ. ಈ ಕತೆಯು ಕುಂಭಮೇಳದ ಹುಟ್ಟಿಗೆ ಕಾರಣವೆಂದು ಪರಿಗಣಿಸಲಾಗುತ್ತದೆ.

ದೇವರು ಮತ್ತು ದಾನವರು ಅಮೃತವನ್ನು (ಅಮರತೆಯನ್ನು ನೀಡುವ ಪಾನೀಯ) ಪಡೆಯಲು ಕ್ಷೀರಸಾಗರವನ್ನು ಮಥಿಸಿದರು. ಈ ಮಹಾಮಥನದ ಸಮಯದಲ್ಲಿ ಅನೇಕ ಅಮೂಲ್ಯ ವಸ್ತುಗಳು ಉದ್ಭವಿಸಿದವು. ಅಂತಿಮವಾಗಿ, ವಿಷ್ಣುನು ಮೋಹಿನೀ ರೂಪದಲ್ಲಿ ಕಾಣಿಸಿಕೊಂಡು ಅಮೃತವನ್ನು ದೇವತೆಗಳಿಗೆ ನೀಡಿದರು.

ಶಾಹಿ ಸ್ನಾನ ಮತ್ತು ಅದರ ಮಹತ್ವ:

ಶಾಹಿ ಸ್ನಾನವು ಈ ಮಹಾ ಕುಂಭಮೇಳದ ಪ್ರಮುಖ ಆಚರಣೆ. ಈ ಸಂದರ್ಭದಲ್ಲಿ ಶ್ರದ್ಧಾಳುಗಳು ಮತ್ತು ಸಾಧುಗಳು ವಿಶೇಷ ರೀತಿಯಲ್ಲಿ ಸ್ನಾನ ಮಾಡುತ್ತಾರೆ. ಈ ಸ್ನಾನವು ಶ್ರದ್ಧಾಳುಗಳನ್ನು ಶುದ್ಧಗೊಳಿಸುತ್ತೆ ಮತ್ತು ಪಾಪಗಳನ್ನು ತೊಲೆಯುತ್ತೆ ಎಂದು ನಂಬಲಾಗಿದೆ.

ಶಾಹಿ ಸ್ನಾನದ ವಿಧಾನ:

ಶಾಹಿ ಸ್ನಾನವು ಸಾಮಾನ್ಯವಾಗಿ ಮುಂಜಾನೆ ನಡೆಯುತ್ತದೆ. ಸಾಮಾನ್ಯವಾಗಿ, ಸಾಧುಗಳು ಮತ್ತು ಯೋಗಿಗಳು ಮೊದಲೇ ನದಿಗೆ ಇಳಿದು ಸ್ನಾನ ಮಾಡುತ್ತಾರೆ, ನಂತರ ಬಾಕಿ ಶ್ರದ್ಧಾಳುಗಳು ನದಿಗೆ ಇಳಿದು ಸ್ನಾನ ಮಾಡುತ್ತಾರೆ. ಈ ಸಂದರ್ಭದಲ್ಲಿ, ಸಂಗಮದ ನೀರು ಅಮೃತವಾಗಿರುತ್ತದೆ ಎಂದು ನಂಬಲಾಗುತ್ತದೆ.

ಮಹಾ ಕುಂಭಮೇಳದ ಮಹತ್ವ :

ಅಮೃತವನ್ನು ತುಂಬಿದ ಕುಂಭ (ಕಲ್ಲಸ) ಮೇಲೆ ದೇವತೆಗಳು ಮತ್ತು ದಾನವರು ಹೋರಾಡಿದರು. ಈ ಹೋರಾಟದ ವೇಳೆ ಅಮೃತದ ಕೆಲವು ಹನಿಗಳು ಭೂಮಿಯ ನಾಲ್ಕು ಸ್ಥಳಗಳಿಗೆ ಬೀಳಿದವು:
1. ಪ್ರಯಾಗರಾಜ (ಅಲಹಾಬಾದ್)
2. ಹರಿದ್ವಾರ
3. ಉಜ್ಜಯಿನಿ
4. ನಾಸಿಕ್

ಈ ಸ್ಥಳಗಳು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ, ಮತ್ತು ಇಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತದೆ.

ಆಧ್ಯಾತ್ಮಿಕ ಪ್ರತ್ಯಯ:

ಅಮೃತದ ಹನಿಗಳು ಈ ಸ್ಥಳಗಳನ್ನು ಪವಿತ್ರಗೊಳಿಸಿವೆ ಎಂಬ ನಂಬಿಕೆ ಇದೆಯೇನೇ ಹೊರತು, ಈ ಮಹಾ ಘಟನೆಯು ಮಾನವೀಯ ಜೀವನದ ಶ್ರೇಷ್ಠತೆಯನ್ನು ತೋರಿಸುತ್ತದೆ. ಕುಂಭವು ಈ ಅಮೃತದ ಸಂಕೇತವಾಗಿದ್ದು, ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಸಂಕೇತವಾಗಿದೆ.

Follow Karunadu Today for more Spiritual stories like this

Click here to Join Our Whatsapp Group