"ಅಧ್ಯಾತ್ಮಿಕ ಕಥೆಗಳು"

spiritual story

ದಶರಥ ಮಹಾರಾಜನು ತನ್ನ ಪ್ರಯಾಣವನ್ನು ಮುಂದುವರಿಸುತ್ತಿದ್ದಂತೆ ದಾರಿಯಲ್ಲಿ ಹಲವಾರು ಅಪಶಕುನಗಳೂ ಕಂಡವು. ಇದರಿಂದ ದಶರಥನಿಗೆ ಗಾಬರಿಯಾಯಿತು. ಯಾವ ವಿಪತ್ತುಕಾದಿದೆಯೋ ಎಂದು ಅವನು ಚಿಂತೆಗೊಳಗಾದ. ವಸಿಷ್ಠರನ್ನು ಕುರಿತು, “ಗುರುಗಳೇ! ಈ ಅಪಶಕುನಗಳಿಂದ ನನಗೆ ಭೀತಿಯಾಗುತ್ತಿದೆ” ಎಂದ. ವಸಿಷ್ಠರು “ಮಹಾರಾಜ ! ಹೆದರಬೇಡ. ನಮಗೆ ಯಾವುದೋ ಭಯಂಕರ ಸನ್ನಿವೇಶ ಎದುರಾಗುತ್ತದೆಂಬುದು ನಿಜ. ಆದರೆ ಆ ಭೀಕರ ಸನ್ನಿವೇಶವು ಶುಭ ರೀತಿಯಲ್ಲಿ ಕೊನೆಗೊಳ್ಳುವುದು. ಆದ್ದರಿಂದ ಚಿಂತಿಸಬೇಡ” ಎಂದರು.

ಅಷ್ಟರಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಅದರಿಂದ ನೆಲವೇ ನಡುಗಿದಂತಾಯಿತು. ಭಾರಿ ಭಾರಿ ಮರಗಳೂ ಬಿದ್ದುಹೋದುವು. ಇದ್ದಕ್ಕಿದ್ದಂತೆ ಸೂರ್ಯನನ್ನು ಕಪ್ಪಾದ ಮೋಡಗಳು ಆವರಿಸಿ ಮರೆ ಮಾಡಿದುವು. ಸುತ್ತಲೂ, ಧೂಳನ್ನು ಯಾರಿಗೂ ಏನೂ ಕಾಣಿಸದಂತಾಯಿತು. ಆ ಕಾರ್ಗತ್ತಲ ಮಧ್ಯದಿಂದ ಒಬ್ಬ ವ್ಯಕ್ತಿಯು ವೇಗವಾಗಿ ಬರುತ್ತಿದ್ದ ಅವನು ಭೀಕರಾಕಾರನಾಗಿದ್ದ ಜಟಾಧಾರಿಯಾಗಿದ್ದ. ಅವನು ತನ್ನ ಬಲಗೈಯಲ್ಲಿ ಒಂದು ಕೊಡಲಿಯನ್ನು ಹಿಡಿದಿದ್ದನು.ಎಡಭುಜದಲ್ಲಿ ಬಿಲ್ಲನ್ನು ಧರಿಸಿದ್ದನು.ನೋಡಿದರೆ ಅವನು ಕೋಪದಿಂದ ಇತ್ತ ಕಡೆ ಬರುತ್ತಿರುವಂತೆ ಕಾಣುತ್ತಿತ್ತು.

spiritual story

ಹೀಗೆ ಇಡೀ ವಾತಾವರಣವನ್ನು ತಲ್ಲಣಗೊಳಿಸಿದ ಆ ವ್ಯಕ್ತಿಯ ಹೆಸರು ರಾಮ ಅವನು ಭಗು ವಂಶದವನ್ನು ಮಹರ್ಷಿ ಜಮದಗ್ನಿಯ ಮಗ ಜಮದಗ್ನಿಯ ಬೇರಾರೂ ಅಲ್ಲ; ವಿಶ್ವಾಮಿತ್ರರ ಅಕ್ಕ ಸತ್ಯವತಿಯ ಮಗ. ಜಮದಗ್ನಿಯ ಮಗನಾದ ಈ ರಾಮನು ಯಾವಾಗಲೂ ಪರಶುವನ್ನು, ಅಂದರೆ ಕೊಡಲಿಯನ್ನು ಹಿಡಿದುಕೊಂಡು ಓಡಾಡುತ್ತಿದ್ದುದರಿಂದ ಅವನನ್ನು ಪರಶುರಾಮ ಎಂದು ಕರೆಯುತ್ತಿದ್ದರು.

ಪರಶುರಾಮನು ಮಹಾಪರಾಕ್ರಮಿ, ಉಗ್ರತಪಸ್ವಿ. ಅವನಿಗೆ ಇಚ್ಛೆ ಬಂದ ಕಡೆಗೆ ಕ್ಷಣಮಾತ್ರದಲ್ಲಿ ಹೋಗಿಬಿಡಬಲ್ಲಂತಹ ಅಪೂರ್ವವಾದ ಪಾದಶಕ್ತಿ ಇತ್ತು ಪರಶುರಾಮನು ಎಂದಿಗೂ ಹಿರಿಯರ ಮಾತು ಮೀರುತ್ತಿರಲಿಲ್ಲ. ಒಮ್ಮೆ ಜಮದಗ್ನಿಗೆ ತನ್ನ ಪತ್ನಿ ರೇಣುಕೆಯು ಮಾಡಿದ ಅಕಾರ್ಯವೊಂದರಿಂದ ಅವಳ ಮೇಲೆ ಅಸಾಧ್ಯ ಕೋಪ ಬಂತು ಪರಶುರಾಮನನ್ನು ಕರೆದು ‘ನಿನ್ನ ತಾಯಿಯ ತಲೆಯನ್ನು ಕಡಿದುಹಾಕು ಎಂದ’. ಪರಶುರಾಮ, ಹಿಂದೆ-ಮುಂದೆ ನೋಡದೆ ತನ್ನ ಕೊಡಲಿಯಿಂದ ರೇಣುಕೆಯ ತಲೆ ಕಡಿದುಬಿಟ್ಟ. ತನ್ನ ಆಜ್ಞೆಯನ್ನು ಪಾಲಿಸಿದ ಪರಶುರಾಮನನ್ನು ಕುರಿತು ಜಮದಗ್ನಿ ”ಪರಶುರಾಮ ! ನಿನ್ನ ಪಿತೃವಾಕ್ಯ ಪಾಲನೆಯಿಂದ ನಾನು ಪ್ರೀತನಾಗಿದ್ದೇನೆ. ನಿನಗೇನು ವರ ಬೇಕು, ಕೇಳು” ಎಂದನು ಪರಶುರಾಮನು, “ತಂದೆಯೇ ! ನನ್ನಿಂದ ಹತಳಾದ ನನ್ನ ತಾಯಿ ರೇಣುಕೆಯ ಮತ್ತೆ ಬದುಕಲಿ. ಈ ಹಿಂದೆ ನಡೆದ ಕಹಿ ಘಟನೆಯ ನೆನಪು ಅವಳ ಮನಸ್ಸಿನಲ್ಲಿ ಉಳಿಯದಿರಲಿ” ಎಂದ. ಜಮದಗ್ನಿ “ಹಾಗೆಯೇ ಆಗಲಿ” ಎಂದ. ರೇಣುಕೆ ಮರಳಿ ಜೀವ ಪಡೆದಳು.

ಆ ಸಮಯದಲ್ಲಿ ಲೋಕದಲ್ಲಿ ಕ್ಷತ್ರಿಯರ ಸಂಖ್ಯೆ ಅಗಾಧವಾಗಿತ್ತು. ಅವರು ಸಣ್ಣ ಪುಟ್ಟ ಪಾಳೆಯಗಳನ್ನು ಕಟ್ಟಿಕೊಂಡು ಸದಾ ಕಾದಾಡುತ್ತಿದ್ದರು. ಅಹಂಕಾರದಿಂದ ಮೆರೆಯುತ್ತಿದ್ದರು. ಜನರೊಡನೆ ಬಹಳ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದರು. ಅವರ ಉಪಟಳ ತಾಳಲಾರದೆ ಜನರು ಕಂಗೆಟ್ಟಿದ್ದರು. ಒಮ್ಮೆ ಜಮದಗ್ನಿಯು ತಪಸ್ಸಿನಲ್ಲಿದ್ದಾಗ ಅಲ್ಲಿಗೆ ಬೇಟೆಗೆಂದು ಬಂದ ಕಾರ್ತವೀರ್ಯಾರ್ಜುನನೆಂಬ ರಾಜನು ಜಮದಗ್ನಿಯನ್ನು ಕೊಂಡುಬಿಟ್ಟನು. ಪರಶುರಾಮನಿಗೆ ವಿಷಯ ತಿಳಿದು ಭಯಂಕರವಾದ ಸಿಟ್ಟು ಬಂತು. ತನ್ನ ತಂದೆಯನ್ನು ಕೊಂದವನು ಕ್ಷತ್ರಿಯರಾಜ ಎಂದು ತಿಳಿದ ನಂತರವಂತೂ ಇಡೀ ಕ್ಷತ್ರಿಯ ಕುಲದ ಮೇಲೇ ಅವನು ಕೋಪಗೊಂಡ. ‘ಈ ಕ್ಷತ್ರಿಯರ ದುಷ್ಟತನ ಎಲ್ಲೆ ಮೀರಿದೆ. ಅವರ ಅಹಂಕಾರವನ್ನು ಮುರಿಯದಿದ್ದರೆ, ನಾನು ಪರಶುರಾಮನೇ ಅಲ್ಲ’ ಎಂದು ಪ್ರತಿಜ್ಞೆ ಮಾಡಿದ. ತನ್ನ ಆಯುಧವಾದ ಕೊಡಲಿಯನ್ನು ಕೈಯಲ್ಲಿ ಹಿಡಿದು ಕ್ಷತ್ರಿಯರನ್ನು ಸಂಹಾರ ಮಾಡಲು ಹೊರಟ. ಇಪ್ಪತ್ತೊಂದು ಸಲ ಭೂಮಿಯ ಪ್ರದಕ್ಷಿಣೆ ಮಾಡಿದ.ತನಗೆ ಎದುರಾದ ಕ್ಷತ್ರಿಯರನ್ನೆಲ್ಲಾ ಕತ್ತರಿಸಿ ಹಾಕಿಬಿಟ್ಟ. ಅನೇಕ ರಾಜರು ರಾಜ್ಯ ಬಿಟ್ಟು ಓಡಿಹೋದರು. ಹೀಗಾಗಿ ಇಡೀ ಭೂಮಂಡಲವೇ ಅವನ ವಶವಾಯಿತು. ಆಗ ಪರಶುರಾಮನು ಒಂದು ಯಾಗವನ್ನು ಮಾಡಿದ. ತಾನು ಸಂಪಾದಿಸಿದ್ದ ಭೂಮಿಯನ್ನೆಲ್ಲಾ ಆ ಯಾಗದ ಅಧ್ಯಕ್ಷತೆ ವಹಿಸಿದ್ದ ಕಶ್ಯಪನಿಗೆ ದಾನ ಮಾಡಿಬಿಟ್ಟ. ನಂತರ ತಾನು ಮಹೇಂದ್ರ ಪರ್ವತಕ್ಕೆ ಹೋಗಿ ತಪಸ್ಸು ಮಾಡುತ್ತಾ ಕುಳಿತ.

ಕಥೆ ಮುಂದುವರೆಯುವುದು...

Follow Karunadu Today for more Spiritual stories like this

Click here to Join Our Whatsapp Group