
ಲಕ್ಷಾಂತರ ವ್ಯಕ್ತಿಗಳು ಪ್ರತಿದಿನ ಸಾರ್ವಜನಿಕ ಸಾರಿಗೆ ಆದಂತಹ ಬಸ್ಸುಗಳನ್ನು ನಂಬಿಕೊಂಡು ಬದುಕುತ್ತಿರುತ್ತಾರೆ. ಶಾಲೆ ಕಾಲೇಜು ಕೆಲಸ ಅಥವಾ ಬೇರೆ ಯಾವುದಾದರೂ ಊರಿಗೆ ಹೋಗಬೇಕೆಂದರೆ ಬಸ್ಸುಗಳು ಬಹು ಮುಖ್ಯವಾಗಿರುತ್ತದೆ. ಆದರೆ ನೀವೆಂದಾದರೂ ಯೋಚಿಸಿದ್ದೀರಾ, “ಬಸ್ ಎಂಬ ಪದದ ಮೂಲ ಏನು?” ಈ ಬಸ್ ಪದದ ಪೂರ್ಣ ರೂಪ ಮತ್ತು ಅದು ಹೇಗೆ ಹುಟ್ಟಿಕೊಂಡಿತ್ತು ಎಂದು ಅನ್ನುವುದು ನಿಮಗೆ ಗೊತ್ತಾ? ಒಂದು ವೇಳೆ ನಿಮಗೆ ಗೊತ್ತಿಲ್ಲವೆಂದರೆ ಈ ಸಂಗತಿಯನ್ನು ತಿಳಿಸಿಕೊಡುತ್ತೇನೆ ಬನ್ನಿ.
ಬಸ್ಸುಗಳು ಸಾರಿಗೆ ವಾಹನಗಳಲ್ಲಿ ಅತಿ ದೊಡ್ಡ ವಾಹನವಾಗಿದೆ. ಇವುಗಳು ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸುತ್ತವೆ. “ಬಸ್ ಎಂಬ ಪದದ ಮೂಲ ಏನು?” ಈ ಬಸ್ ಪದವು ಒಂದು “ಓಮ್ನಿ ಬಸ್” ನ ಸಂಕ್ಷಿಪ್ತನ ರೂಪವಾಗಿದೆ. ಲ್ಯಾಟಿನ್ ಭಾಷೆಯಲ್ಲಿ “ಓಮ್ನಿ ಬಸ್” ಎಂದರೆ ಎಲ್ಲರಿಗೂ ಅರ್ಥ ನೀಡುತ್ತದೆ.
ಸರಿ ಸುಮಾರು 19 ನೇ ಶತಮಾನದಲ್ಲಿ ಕುದುರೆ ಎಳೆಯುವ ಗಾಡಿ ಗಳಿದ್ದವು ಅವುಗಳನ್ನ ಸಾರ್ವಜನಿಕ ಸಾರಿಗೆ ಬಳಸಲಾಗುತ್ತಿತ್ತು. ಆಗ ಅವುಗಳನ್ನ “ಓಮ್ನಿ ಬಸ್ ಗಳು” ಎಂದು ಕರೆಯಲಾಗುತ್ತಿತ್ತು. ಕಾಲ ಕಳೆದಂತೆ ಇದನ್ನು ಬಸ್ ಎಂದು ಹೆಸರಿಸಲಾಯಿತು. ಫ್ರೆಂಚ್ ಗಣಿತಜ್ಞ ಬ್ಲೇಸ್ ಪ್ಯಾಸ್ಕಲ್ 1662ರಲ್ಲಿ ಪ್ಯಾರಿಸ್ ನಲ್ಲಿ ಕುದುರೆ ಎಳೆಯುವ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಿದರು. ಆದರೆ ಅದು ಅಷ್ಟೊಂದು ಜನಪ್ರಿಯವಾಗಲಿಲ್ಲ. 1820ರ ದಶಕದಲ್ಲಿ, ಸ್ಟಾನಿಸ್ಲಾಸ್ ಬೌಡ್ರಿ ಫ್ರಾನ್ಸ್‌ನ ನಾನ್ಟೆಸ್‌ನಲ್ಲಿ ಪ್ರಥಮ ಯಶಸ್ವಿ “ಓಮ್ನಿಬಸ್” ಸೇವೆಯನ್ನು ಆರಂಭಿಸಿದರು. 1900ರ ಪ್ರಾರಂಭದಲ್ಲಿ, ಲಂಡನ್‌ನಲ್ಲಿ ವಿದ್ಯುತ್ ಚಾಲಿತ ಬಸ್ಸುಗಳು ಕಾರ್ಯಾರಂಭ ಮಾಡಿದ್ದವು. 1910 ಮತ್ತು 1920ರ ದಶಕಗಳಲ್ಲಿ, ಡೀಸೆಲ್ ಮತ್ತು ಪೆಟ್ರೋಲ್ ಇಂಧನದ ಮೇಲೆ ಕಾರ್ಯನಿರ್ವಹಿಸುವ ಬಸ್ಸುಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಳಸಲು ಪ್ರಾರಂಭಿಸಿದವು.
Follow Karunadu Today for more News like this
Click here to Join Our Whatsapp Group