ಒಳ್ಳೆಯ ಮೈ ಕಟ್ಟು ಹೊಂದುವುದೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ.ಅದರಲ್ಲೂ ಸಿಕ್ಸ್ ಪ್ಯಾಕ್ ಹೊಂದುವ ಹುಚ್ಚು ಈಗಿನ ಕಾಲದ ಯುವಕರಿಗಂತು ತುಂಬಾ ಜಾಸ್ತಿ ಇದೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದು ಕೂಡ ಎಲ್ಲರಿಗು ಗೊತ್ತಿರುವ ವಿಷಯವೆ. ವ್ಯಾಯಾಮಕ್ಕೆ ತಕ್ಕಂತೆ ಆಹಾರ ಸೇವಿಸುತ್ತ ವರ್ಷ ಪೂರ್ತಿ ಮೈ ಕಟ್ಟನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಇದೇ ಕಾರಣದಿಂದ ಅದೆಷ್ಟೋ ಯುವಕರು ಕೆಲವು ತಿಂಗಳುಗಳ ಕಾಲ ಮಾತ್ರ ವ್ಯಾಯಾಮ ಮಾಡಿ ನಂತರ ಅದರ ಸಹವಾಸವೇ ಬೇಡ ಎಂದು ಬಿಟ್ಟುಬಿಡುತ್ತಾರೆ. ಆದರೆ ಕೆಲವರು ಅದೆಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ವ್ಯಾಯಾಮ ಮಾಡಿ ಮೈ ಕಟ್ಟು ಬೆಳೆಸಿಕೊಳ್ಳುವ ತಮ್ಮ ಗುರಿಯನ್ನು ಮುಟ್ಟದೆ ಬಿಡುವುದಿಲ್ಲ. ವಯಸ್ಸಿನಲ್ಲಿದ್ದಾಗ ದಷ್ಟ ಪುಷ್ಟವಾದ ಮೈ ಕಟ್ಟು ಕಾಪಾಡಿಕೊಳ್ಳಲು ಬಯಸುವ ಯುವಕರು ವಯಸ್ಸು ಆಗುತ್ತಾ ಹೋದಂತೆ ಅದರ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಇನ್ನೇನು ನಮಗೆ ವಯಸ್ಸಾಯಿತು ವ್ಯಾಯಾಮ ಮಾಡುವ ಶಕ್ತಿ ನಮ್ಮಲ್ಲಿ ಇಲ್ಲ ಎಂದುಕೊಂಡು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಆದರೆ ಪ್ರಪಂಚದಲ್ಲಿ ಕೆಲವು ಜನರಿದ್ದಾರೆ. ಅವರುಗಳಿಗೆ ವ್ಯಾಯಾಮ ಮಾಡುವುದೆಂದರೆ ಬಲು ಹುಚ್ಚು. ಅದೆಷ್ಟರ ಮಟ್ಟಿಗೆ ಹುಚ್ಚು ಎಂದರೆ ಮುದುಕರಾದರೂ ಕೂಡ ತಮ್ಮ ದೇಹದ ಮೈ ಕಟ್ಟನ್ನು ಕಾಪಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ಇಂದು ನಿಮಗೆ ಸಾಯುವ ವಯಸ್ಸಲ್ಲೂ ದಷ್ಟ ಪುಷ್ಟ ಮೈಕಟ್ಟು ಹೊಂದುವ ಆಸೆಯನ್ನು ಹೊಂದಿರುವ ಆ ವಯಸ್ಸಾದ ಜೀವಿಗಳ ಬಗ್ಗೆ ತಿಳಿಸಿಕೊಡುತ್ತೇವೆ.

1) ಎಡಿತ್ ವಿಲ್ಮಾ ಕೊನೆರ್ – Edith wilma conner

ಅಮೇರಿಕಾದ ಈ ಮುದುಕಿಗೆ 75 ವರ್ಷ ವಯಸ್ಸಾಗಿದ್ದು ಈ ವಯಸ್ಸಿನಲ್ಲೂ ಪ್ರತಿದಿನ ವ್ಯಾಯಾಮ ಮಾಡಿ ತನ್ನ ದೇಹದ ಮೈ ಕಟ್ಟು ಬೆಳೆಸಿಕೊಳ್ಳುವುದರ ಜೊತೆಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಷ್ಟೇ ಅಲ್ಲದೆ 2012 ರಲ್ಲಿ ಪ್ರಪಂಚದ ಅತ್ಯಂತ ಹಳೆಯ ಬಾಡಿ ಬಿಲ್ಡರ್ ಎನ್ನುವ ಕೀರ್ತಿಯ ಮೂಲಕ ಗಿನ್ನಿಸ್ ದಾಖಲೆಗೂ ಸೇರ್ಪಡೆಯಾಗಿದ್ದಾರೆ. ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಇವರು ಅದೆಷ್ಟೋ “ಬಾಡಿ ಬಿಲ್ಡರ್” ಗಳಿಗೆ ಉತ್ತಮ ನಿದರ್ಶನವಾಗಿದ್ದಾರೆ.

2) ಪೌಲ್ ಸ್ಟೋನ್ – Paul Stone

ಸಾಮಾನ್ಯವಾಗಿ ನಮಗೆಲ್ಲ ಯುವಕರಾಗಿದ್ದಾಗ ದೇಹ ಬೆಳೆಸಿಕೊಳ್ಳುವ ಹುಚ್ಚು ಇರುತ್ತದೆ. ಆದರೆ ಪೌಲ್ ಅವರಿಗೆ ತಾವು 66ನೆಯ ವಯಸ್ಸು ಮುಟ್ಟಿದ ಮೇಲೆ ದಷ್ಟ ಪುಷ್ಟ ಮೈಕಟ್ಟು ಬೆಳೆಸಿಕೊಳ್ಳುವ ಹುಚ್ಚು ಶುರುವಾಗಿತ್ತು. ಇದನ್ನು ಕಂಡು ಅನೇಕ ಜನರು ನಕ್ಕಿದ್ದರು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವ್ಯಾಯಾಮದ ಕಡೆ ಲಕ್ಷ್ಯ ಕೊಟ್ಟು ಕೇವಲ 6 ತಿಂಗಳಲ್ಲಿ ಯುವಕರ ಹಾಗೆ ದಷ್ಟ ಪುಷ್ಟ ಮೈ ಕಟ್ಟು ಹೊಂದುವುದರ ಜೊತೆಗೆ ಅನೇಕ “ಬಾಡಿ ಬಿಲ್ಡಿಂಗ್” ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಇವರನ್ನು ಕಂಡು ನಕ್ಕಿದ್ದ ಜನರು ಕೂಡ ಇವರ ದೇಹವನ್ನು ಕಂಡು ಅಚ್ಚರಿ ಪಟ್ಟಿದ್ದರು. ಮನಸ್ಸು ಮಾಡಿದರೆ ಯಾವ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ಇವರು 80ನೆಯ ವಯಸ್ಸಿನವರೆಗೂ ಇದೇ ತರಹ ತಮ್ಮ ಮೈ ಕಟ್ಟು ಕಾಪಾಡಿಕೊಂಡಿದ್ದರು. ಆದರೆ ಈಗ ಪೌಲ್ ನಮಗೆ ಕೇವಲ ನೆನಪು ಮಾತ್ರ.

3) ಜಿಮ್ ಶೇಫರ್ – Jim Shaffer

54 ವರ್ಷದವರೆಗೂ ಧೂಮಪಾನಕ್ಕೆ ಅಂಟಿಕೊಂಡಿದ್ದ ಇವರು ಹೇಗಾದರೂ ಮಾಡಿ ಅದರಿಂದ ಹೊರ ಬರಬೇಕೆಂದು ವ್ಯಾಯಾಮ ಮಾಡಲು ನಿರ್ಧರಿಸಿದರು. ಮೊದ ಮೊದಲು ತುಂಬಾ ತೊಂದರೆಗಳನ್ನು ಎದುರಿಸಿದ ಇವರು ನಂತರ ಕಷ್ಟ ಪಟ್ಟು ಮೈಕಟ್ಟು ಬೆಳೆಸಿಕೊಳ್ಳುವುದರ ಜೊತೆಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಳ್ಳುವುದರ ಮೂಲಕ ದುಷ್ಟ ಚಟಗಳಿಂದ ಹೊರ ಬಂದು ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟರು.

4) ಎರ್ನಸ್ಟೀನ್ ಶೆಫರ್ಡ್ – Ernestine Shepherd

ನೀನು ಕೇವಲ ಒಂದು ಹೆಣ್ಣು ನಿನ್ನಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತನ್ನ ಗಂಡನು ಸದಾ ಕಾಲ ಅಪಮಾನ ಮಾಡುತ್ತಿದ್ದನ್ನು ಸಹಿಸಲಾಗದೆ ವ್ಯಾಯಾಮ ಮಾಡಲು ಶುರು ಮಾಡಿದ ಇವರು ದಷ್ಟ ಪುಷ್ಟ ದೇಹ ಬೆಳೆಸಿಕೊಳ್ಳುವ ಮೂಲಕ 54ನೆಯ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿದ್ದರು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುತ್ತಾರೆ ಎಂದು ತೋರಿಸಿಕೊಟ್ಟ ಇವರಿಗೆ ಒಂದು ದೊಡ್ಡ ಸಲಾಂ.

5) ಮನೋಹರ್ ಐಚ್ – Manohar aich

ಇವರನ್ನು “ಪಾಕೆಟ್ ಹೆರ್ಕುಲೆಸ್(Pocket Hercules)” ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇವರ ದೇಹ ಹಾಗು ಎತ್ತರ. ಕೇವಲ 4 ಫೂಟ್ 11 ಇಂಚು ಎತ್ತರವಿರುವ ಇವರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ “ಯೂನಿವರ್ಸಲ್ ಚಾಂಪಿಯನ್” ಆಗುವುದರ ಮೂಲಕ ನಮ್ಮ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದರು. 90 ನೆಯ ವಯಸ್ಸಿನಲ್ಲೂ ಕೂಡ ದಷ್ಟ ಪುಷ್ಟ ಮೈ ಕಟ್ಟು ಹೊಂದಿದ್ದ ಇವರು ಅನೇಕ ಯುವಕರಿಗೆ ತರಬೇತಿ ನೀಡುತ್ತಿದ್ದರು. ಆದರೆ 104ನೆಯ ವಯಸ್ಸಿನಲ್ಲಿ ಸಾವನ್ನಪ್ಪಿ ಇಂದು ಕೇವಲ ನೆನಪಿನಲ್ಲಿ ಮಾತ್ರ ಇರುವರು.

6) ರೇಮಂಡ್ ಮೂನ್ – Raymond Moon

ಅತಿಯಾದ ಧೂಮಪಾನ ಹಾಗು ಮಧ್ಯ ಸೇವನೆಯಿಂದ ಹೃದಯ ರೋಗಕ್ಕೆ ಹಾಗು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಇವರು ಅದರಿಂದ ವಾಸಿಯಾದ ಮೇಲೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಮಾಡಲು ಶುರು ಮಾಡಿದರು. ವರ್ಷಗಳು ಕಳೆದಂತೆ ಇದರಿಂದ ದಷ್ಟ ಪುಷ್ಟ ಮೈ ಕಟ್ಟು ಹೊಂದುವ ಮೂಲಕ ಅನೇಕ ಸ್ಪರ್ದೆಗಳಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ 2010 ರಲ್ಲಿ ಗಿನ್ನಿಸ್ ದಾಖಲೆಗೂ ಸೇರಿದ್ದರು. ಕೆಟ್ಟ ಚಟಗಳಿಂದ ಹೊರ ಬಂದು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ.

ಇವರ ಹಾಗೆ ಇನ್ನೂ ಅನೇಕರು ಈ ಪ್ರಪಂಚದಲ್ಲಿದ್ದು ಅವರ ಸಾಧನೆ ಯುವಕರನ್ನು ಕೂಡ ನಾಚಿಸುವಂತಿದೆ. ಜೀವನದಲ್ಲಿ ಸಾಧನೆ ಮಾಡಲೇಬೇಕು ಎನ್ನುವ ಹಠವಿದ್ದರೆ ಅದೆಷ್ಟೇ ಕಷ್ಟವಿದ್ದರೂ ಕೂಡ ಅವುಗಳನ್ನು ಎದುರಿಸಿ ಗೆಲ್ಲುತ್ತಾರೆ. ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ ಮನಸ್ಸಿದ್ದಲ್ಲಿ ಯಾವ ವಯಸ್ಸಿನಲ್ಲಿ ಬೇಕಾದರು ಸಾಧನೆ ಮಾಡಬಹುದು ಎನ್ನುವುದಕ್ಕೆ ಇವರೆಲ್ಲರ ಕಥೆ ಉತ್ತಮ ಉದಾಹರಣೆಯಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group