ನಮ್ಮ ಬ್ರಹ್ಮಾಂಡವೆ ಒಂದು ವಿಸ್ಮಯಕಾರಿ ರಚನೆಯಾಗಿದೆ. ಇದರ ಒಳಗೆ ಈ ಕ್ಷಣಕ್ಕೆ ಕಾಣಸಿಗುವ ಆಕಾರಗಳು ಮರುಕ್ಷಣಕ್ಕೆ ಒಮ್ಮೆಲೆ ಮಾಯವಾಗುತ್ತವೆ. ಇಂತಹ ರಚನೆಗಳನ್ನು ಕಂಡು ವಿಜ್ಞಾನಿಗಳು ಸಾಕಷ್ಟು ಆಶ್ಚರ್ಯ ಪಟ್ಟಿದ್ದಾರೆ. ಹೀಗೆ ಒಮ್ಮೆಲೆ ಮೂಡಿ ನಂತರ ಮಾಯವಾಗುವ ಕೆಲ ರಚನೆಗಳನ್ನು ವಿಜ್ಞಾನಿಗಳು ಸೆರೆಹಿಡಿದಿದ್ದು ಅವುಗಳನ್ನು ಇಂದು ನಿಮಗೆ ತೋರಿಸಿಕೊಡುತ್ತೇನೆ. ಆ ರಚನೆಗಳನ್ನು ಕಂಡು ನೀವು ಕೂಡ ಖಂಡಿತವಾಗಿ ಆಶ್ಚರ್ಯ ಪಡುವಿರಿ.

1. 1991 ವಿಜಿ


ಅದು ನವೆಂಬರ್ 6,1991. ಅಮೇರಿಕದ ಗಗನಯಾತ್ರಿ James Scotti ಅವರು ಬಾಹ್ಯಾಕಾಶದಲ್ಲಿ ಒಂದು ವಿಚಿತ್ರವಾದ ವಸ್ತುವನ್ನು ಟೆಲಿಸ್ಕೋಪ್ ಮೂಲಕ ಕಂಡರು. ಮೊದ ಮೊದಲು ಇದೊಂದು ಕ್ಷುದ್ರ ಗ್ರಹದ ತುಂಡು ಎಂದು ಭಾವಿಸಲಾಗಿತ್ತು. ಆದರೆ ಯಾವುದೇ ಒಂದು ಕ್ಷುದ್ರ ಗ್ರಹದ ತುಂಡು ಸಹಜವಾಗಿ ಸೂರ್ಯನ ಸುತ್ತ ಸುತ್ತುವಾಗ elliptical ಆಕಾರದಲ್ಲಿ ಸುತ್ತುತ್ತವೆ. ಆದರೆ ಇದು ಭೂಮಿಯು ಸೂರ್ಯನ ಸುತ್ತ ಸುತ್ತುವ ಹಾದಿಯಲ್ಲೇ ಚಲಿಸುತ್ತ ಸೂರ್ಯನ ಸುತ್ತ ಸುತ್ತುತ್ತಿರುವುದನ್ನು ಕಂಡು ಸಾಕಷ್ಟು ಆಶ್ಚರ್ಯ ಪಟ್ಟಿದ್ದರು. ಸಹಜವಾಗಿ ಯಾವ ಕ್ಷುದ್ರ ಗ್ರಹದ ತುಂಡು ಕೂಡ ಈ ರೀತಿಯಾಗಿ ಭೂಮಿಯ ಜೊತೆ ಜೊತೆಗೆ ಈ ರೀತಿ ಸೂರ್ಯನ ಸುತ್ತ ಸುತ್ತುವುದಿಲ್ಲ. ಆದರೆ ಈ ಕ್ಷುದ್ರ ಗ್ರಹದ ತುಂಡು ಸುತ್ತುತ್ತಿರುವುದನ್ನು ಕಂಡು ಬಹುಶಃ ಇದು ಯಾವುದೋ ಉಪಗ್ರಹವಾಗಿದ್ದು ಭೂಮಿಯ ಸುತ್ತ ಸುತ್ತುವಾಗ ಭೂಮಿಯ ಕಕ್ಷೆಯನ್ನು ದಾಟಿ ಅಂತರಿಕ್ಷಕ್ಕೆ ಹೋಗಿದೆ ಎಂದು ತಿಳಿಯಲಾಗಿತ್ತು. ಆದರೆ ಯಾವೊಂದು ಉಪಗ್ರಹವು ಕೂಡ ಭೂಮಿಯ ಕಕ್ಷೆಯನ್ನು ದಾಟಿ ಆ ರೀತಿ ಹೋಗಿಲ್ಲವೆಂದು ತಿಳಿದ ಮೇಲೆ ಬಹುಶಃ ಇದು ಅನ್ಯ ಗ್ರಹದ ಜೀವಿಗಳ ವಾಹನವಾಗಿದ್ದು ಭೂಮಿಯ ಮೇಲೆ ಕಣ್ಣಿಡುವ ಸಲುವಾಗಿ ಈ ರೀತಿ ಭೂಮಿಯನ್ನು ಸುತ್ತುತ್ತಿರಬಹುದು ಎಂದು ತಿಳಿಯಲಾಯಿತು. ಆದರೆ ಇದಕ್ಕೆ ಖಚಿತವಾದ ಉತ್ತರ ಮಾತ್ರ ಇದುವರೆಗೂ ಸಿಕ್ಕಿಲ್ಲ. ಇದಕ್ಕೆ 1991 VG ಎಂದು ಹೆಸರಿಡಲಾಗಿದ್ದು ಇದುವರೆಗು ಇದು ಏನೂ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

2. ರಹಸ್ಯಮ ವಾಯ್ಡ್ಸ್ 


ಬಾಹ್ಯಾಕಾಶವೆಂದರೆ ಸಾಕು ಸಹಜವಾಗಿ ನಮ್ಮೆಲ್ಲರ ಕಣ್ಣ ಮುಂದೆ ಅನೇಕ ನಕ್ಷತ್ರಗಳು, ಗ್ರಹಗಳು, ಆಕಾಶಗಂಗೆಗಳು ಸೇರಿದಂತೆ ಅನೇಕ ರಚನೆ+ಗಳು ಕಾಣಸಿಗುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಒಂದು ಸ್ಥಳವಿದ್ದು ಅಲ್ಲಿ ಏನೂ ಇಲ್ಲ.ಬರೋಬ್ಬರಿ 1.8 ಬಿಲಿಯನ್ ಜ್ಯೋತಿವರ್ಷಗಳಷ್ಟು ಜಾಗದಲ್ಲಿ ವಿಸ್ತಾರವಾಗಿರುವ ಈ ಸ್ಥಳವನ್ನು VOIDS ಎಂದು ಕರೆಯುತ್ತಾರೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಸ್ಥಳದಲ್ಲಿ 10 ಸಾವಿರಕ್ಕಿಂತ ಹೆಚ್ಚು ಆಕಾಶಗಂಗೆಗಳು ಇರಬೇಕಿತ್ತು. ಆದರೆ ಏನೂ ಇರದೆ ಸಂಪೂರ್ಣವಾಗಿ ಖಾಲಿಯಾಗಿದೆ ಈ ಸ್ಥಳ.ಸಂಪೂರ್ಣವಾಗಿ ಕತ್ತಲಿನಿಂದ ಕೂಡಿರುವ ಇಂತಹ ಅನೇಕ VOIDS ಬ್ರಹ್ಮಾಂಡದಲ್ಲಿದ್ದು ವಿಜ್ಞಾನಿಗಳು ಹೇಳುವ ಪ್ರಕಾರ ಇವುಗಳು ಬೇರೆ ಬ್ರಹ್ಮಾಂಡಕ್ಕೆ ಹೋಗುವ ದಾರಿ ಇದ್ದರೂ ಇರಬಹುದಂತೆ.

3. ಮಂಗಳ ಗ್ರಹದ ಮೇಲೆ ಮುಖ :


ಅದು ಜುಲೈ 25,1976. ಮಂಗಳ ಗ್ರಹದ ಮೇಲೆ ಯಾವ ಸ್ಥಳದಲ್ಲಿ ಲ್ಯಾಂಡ್ ಆಗಬೇಕು ಎಂದು Viking 1 ಎನ್ನುವ orbiter ಆ ಗ್ರಹದ ಫೋಟೋಗಳನ್ನು ಸೆರೆಹಿಡಿದು ಭೂಮಿಯ ಮೇಲಿರುವ ವಿಜ್ಞಾನಿಗಳಿಗೆ ಕಳುಹಿಸುತ್ತಿತ್ತು. Viking 1 orbiter ಕಳುಹಿಸಿದ ಫೋಟೋಗಳನ್ನು ಗಮನಿಸಿದ ವಿಜ್ಞಾನಿಗಳು ಒಂದು ಫೋಟೋದಲ್ಲಿ ಮನುಷ್ಯನ ಮುಖವನ್ನು ಹೋಲುವ ಪರ್ವತವಿರುವುದನ್ನು ಕಂಡರು.ಆ ಫೋಟೋವನ್ನು ಬಿಡುಗಡೆ ಮಾಡಿದ ಮೇಲೆ ಅನೇಕ ಜನಗಳು ಮಂಗಳ ಗ್ರಹದ ಮೇಲೆ ಜೀವಿಗಳು ಇರಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ವಿಜ್ಞಾನಿಗಳು ಇದೊಂದು ನೈಸರ್ಗಿಕವಾಗಿ ಮೂಡಿದ ಬೆಟ್ಟವಿರಬಹುದು ಎಂದು ಅದನ್ನು ಖಚಿತ ಪಡಿಸಿಕೊಳ್ಳಲು 1998 ರಲ್ಲಿ mars global surveyor ಎನ್ನುವ ಉಪಗ್ರಹದ ಮೂಲಕ ಮರಳಿ ಆ ಬೆಟ್ಟವಿರುವ ಸ್ಥಳದ ಫೋಟೋ ತೆಗೆಯಲಾಯಿತು. ಆಗ ಮುಖದ ಚಿತ್ರವಿರುವ ಆ ಸ್ಥಳದ ಆಕಾರ ಬದಲಾಗಿದ್ದನ್ನು ಗಮನಿಸಿದ ವಿಜ್ಞಾನಿಗಳು ಆ ಗ್ರಹದ ಮೇಲೆ ಬೀಳುವ ಸೂರ್ಯನ ಬೆಳಕು ಹಾಗು ನೆರಳಿನ ಪರಿಣಾಮದಿಂದ ಆ ರೀತಿಯ ಮುಖದ ಆಕಾರ ಮೂಡಿದೆ ಎಂದು ತಿಳಿದುಬಂದಿತು.

4.  ಆಕಾಶದ ಕಣ್ಣು


ನಮ್ಮ ಸೂರ್ಯನಿಂದ ಸರಿಯಾಗಿ 25 ಜ್ಯೋತಿವರ್ಷಗಳಷ್ಟು ದೂರದಲ್ಲಿ ಒಂದು ನಕ್ಷತ್ರವಿದೆ. ಅದಕ್ಕೆ ವಿಜ್ಞಾನಿಗಳು FOMALHAUT ಎನ್ನುವ ಹೆಸರಿಟ್ಟಿದ್ದಾರೆ. Piscis Austrinus ನಕ್ಷತ್ರಪುಂಜದಲ್ಲಿರುವ ಈ ನಕ್ಷತ್ರವು ಆಕಾಶದಲ್ಲಿ ಅತಿ ಹೆಚ್ಚು ಹೊಳಪನ್ನು ಹೊರಚಿಮ್ಮುತ್ತಿರುವ ನಕ್ಷತ್ರಗಳ ಪೈಕಿ ಒಂದಾಗಿದೆ. ಇದರ ಗಾತ್ರವು ನಮ್ಮ ಸೂರ್ಯನಿಗಿಂತ ಎರಡು ಪಟ್ಟು ದೊಡ್ಡದಿದೆ. ಈ ನಕ್ಷತ್ರದ ವಿಶೇಷತೆ ಏನೆಂದರೆ ಇದರ ಸುತ್ತಲು ಗ್ರಹಗಳ ಸಮೂಹವಿದ್ದು ಈ ನಕ್ಷತ್ರ ಹಾಗು ಆ ಗ್ರಹಗಳ ಸಮೂಹವನ್ನು ನೋಡುತ್ತಿದ್ದರೆ ಕಣ್ಣಿನ ರೀತಿ ಕಾಣುತ್ತದೆ. ಇದೇ ಕಾರಣಕ್ಕೆ ಇದನ್ನು ಆಕಾಶದ ಕಣ್ಣು ಎಂದು ಕೂಡ ಕರೆಯುತ್ತಾರೆ.

5. ದೇವರ ಕೈ 


ಭೂಮಿಯಿಂದ 17 ಸಾವಿರ ಜ್ಯೋತಿವರ್ಷಗಳಷ್ಟು ದೂರದಲ್ಲಿ ಇರುವ Circinus ನಕ್ಷತ್ರಪುಂಜದಲ್ಲಿ ಒಂದು ನಕ್ಷತ್ರವಿದೆ. ಅದಕ್ಕೆ PSR B1509-58 ಎಂದು ಹೆಸರಿಡಲಾಗಿದೆ. ಈ ನಕ್ಷತ್ರದ ಸುತ್ತಲು ದೂಳಿನ ಕಣಗಳು ತುಂಬಿಕೊಂಡಿದ್ದು ನೋಡಲು ಕೈ ಆಕಾರದಲ್ಲಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ 1982ರಲ್ಲಿ Einstein X-Ray Observatory ಮೂಲಕ ಗಮನಿಸಲಾಗಿತ್ತು. ಆದರೆ 2014 ರಲ್ಲಿ ಅತ್ಯಾದುನಿಕ Chandra X-RAY ಟೆಲಿಸ್ಕೋಪ್ ಮೂಲಕ ಇದರ ಫೋಟೋ ತೆಗೆಯಲಾಗಿದ್ದು ಇದಕ್ಕೆ HAND OF GOD ಎನ್ನುವ Nickname ಇಡಲಾಗಿದೆ. ಈ ನಕ್ಷತ್ರವು ಒಂದು neutron star ಆಗಿದ್ದು ಪ್ರತಿ ಒಂದು ಕ್ಷಣಕ್ಕೆ 7 ಬಾರಿ ತಿರುಗುತ್ತದೆ. ಇಷ್ಟೊಂದು ವೇಗವಾಗಿ ಸುತ್ತುತ್ತಿರುವುದರಿಂದ ಇದರ ಒಳಗಿರುವ ಅನಿಲಗಳನ್ನು ವೇಗವಾಗಿ ಬಾಹ್ಯಾಕಾಶಕ್ಕೆ ಹೊರಬಿಡುತ್ತಿದೆ. ಇದೇ ಕಾರಣದಿಂದ ಇದರ ಸುತ್ತಲು ದೂಳಿನ ಕಣಗಳು ಹಾಗು ಅನಿಲಗಳು ತುಂಬಿಕೊಂಡಿದೆ. ಆದರೆ ಅವುಗಳು ಕೈ ರೀತಿಯ ಆಕಾರ ರಚನೆ ಆಗಿರುವುದರಿಂದ ಬಾಹ್ಯಾಕಾಶದಲ್ಲಿ ಇದೊಂದು ಆಕರ್ಷಣೀಯ ರಚನೆಯಾಗಿದೆ.

Follow Karunadu Today for more Interesting Facts & Stories. 

Click here to Join Our Whatsapp Group