ನಿಮಗೆಲ್ಲ 1912 ರಲ್ಲಿ ಮುಳುಗಿದ ಟೈಟಾನಿಕ್ ಹಡುಗಿನ ಬಗ್ಗೆ ಗೊತ್ತೇ ಇರುತ್ತದೆ. ತನ್ನ ಮೊದಲ ಯಾನದಲ್ಲಿಯೇ ಈ ಹಡಗು ಐಸ್ ಬರ್ಗ್ ಗೆ ತಾಗಿ ಮುಳುಗಿತ್ತು. ಟೈಟಾನಿಕ್ ಹಡಗು ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗುತ್ತಿರುವಾಗ ಅದರ ಸಮೀಪದಲ್ಲಿಯೇ ಇನ್ನು ಮೂರು ಹಡಗುಗಳು ಇದ್ದವು ಎಂಬ ವಿಷಯ ನಿಮಗೆ ತಿಳಿದಿದೆಯಾ?

ಮೊದಲನೆಯ ಹಡಗು ಸ್ಯಾಂಪ್ಸನ್ 1, ಅದು ಕೇವಲ 7 ಮೈಲೀ ದೂರದಲ್ಲಿತ್ತು. ಟೈಟಾನಿಕ್ ಮುಳುಗಿತ್ತಿದ್ದರೂ ಕೂಡ ಅದನ್ನು ನೋಡಿ ಅವರು ಸಹಾಯಕ್ಕೆ ಬರಲಿಲ್ಲ. ಏಕೆಂದರೆ ತಮ್ಮ ಸಿಬ್ಬಂದಿಗಳು ಅಕ್ರಮವಾಗಿ ಸೀಲ್ ಗಳನ್ನು ಬೇಟೆಯಾಡುತ್ತಿದ್ದರು, ಇದರ ವಿಷಯ ಯಾರಿಗೂ ತಿಳಿಯ ಕೂಡದೆಂದು ಅವರು ಹೀಗೆ ಮಾಡಿದರು.

ಎರಡೆನೆಯ ಹಡಗು ಕ್ಯಾಲಿಫೋರ್ನಿಯನ್, ಅದು ಕೂಡ ಕೇವಲ 14 ಮೈಲೀ ದೂರದಲ್ಲಿತ್ತು. ಮುಳುಗುತ್ತಿರುವ ಟೈಟಾನಿಕ್ ಸುತ್ತಲೂ ಐಸ್ ಫೀಲ್ಡ್ ಗಳು ತುಂಬಿಕೊಂಡಿವೆ ಎಂದು ಗಮನಿಸಿದ ಆ ಹಡಗಿನ ಕ್ಯಾಪ್ಟನ್ ತಮಗೆ ಅಪಾಯವಾಗುತ್ತದೆ ಎಂದು ಸಹಾಯಕ್ಕೆ ಬರಲಿಲ್ಲ.

ಇವೆರಡರ ನಂತರ ಟೈಟಾನಿಕ್ ಹತ್ತಿರವಿದ್ದ 3 ನೇ ಹಡಗು ಕಾರ್ಪಾಥಿಯ , 58 ಮೈಲೀ ದೂರವಿದ್ದರೂ ಕೂಡ ರೇಡಿಯೋ ದಲ್ಲಿ ತುಂಬಾ ಅಳುವ ಶಬ್ದ ಕೇಳಿದ ಆ ಹಡಗಿನ ಕ್ಯಾಪ್ಟನ್, ವಿರುದ್ಧ ದಿಕ್ಕಿನಲ್ಲಿದ ತನ್ನ ಹಡಗನ್ನು ತಿರುಗಿಸಿ ದೇವರಲ್ಲಿ ಟೈಟಾನಿಕ್ ಹಡುಗಿನ ದಿಕ್ಕನ್ನು ತೋರೆಂದು ಬೇಡುತ್ತಾ ತುಂಬಾ ವೇಗವಾಗಿ ಐಸ್ ಫೀಲ್ಡ್ ನೊಳಗೆ ನುಗ್ಗಿಸಿದನು.

ವಿಶೇಷವೆಂದರೆ ಅಷ್ಟು ಕತ್ತಲೆ ಮತ್ತು ಧುರ್ಗಮ ಸಮುದ್ರ ಮಾರ್ಗದಲ್ಲಿಯೂ ದೃತಿಗೆಡದೆ ಈ ಹಡಗು ಮುನ್ನುಗಿತ್ತು. ಕೊನೆಗೆ ಇದೇ ಕಾರ್ಪಾಥಿಯ ಹಡಗು ಟೈಟಾನಿಕ್ ನಲ್ಲಿದ್ದ 705 ಜನ ಸಂತ್ರಸ್ತರನ್ನು ಕಾಪಾಡಿತ್ತು.

ಮೊದಲನೆಯ ಹಡಗು ಸ್ಯಾಂಪ್ಸನ್, “ಸ್ವಂತ ಪಾಪಗಳಲ್ಲಿ ನಿರತರಾಗಿ ಇತರರ ಕಷ್ಟಕ್ಕೆ ನೆರವಾಗದಿರುವ ಮನಸ್ಸಿನ ಸಂಕೇತ ಸೂಚಿಸುತ್ತದೆ”.

ಎರಡನೆಯ ಹಡಗು ಕ್ಯಾಲಿಫೋರ್ನಿಯನ್, “ಅವರಿಗೆ ಸಹಾಯ ಮಾಡಲು ಹೋದರೆ ನಾನು ಅಪಾಯಕ್ಕೆ ಸಿಕ್ಕಿಕೊಳ್ಳುತ್ತೇನೆ ಎಂದು ಯೋಚಿಸುವ ಮನಸ್ಸಿನ ಸಂಕೇತ ಸೂಚಿಸುತ್ತದೆ”.

ಮೂರನೆಯ ಹಡಗು ಕಾರ್ಪಾಥಿಯ, “ನಮಗೆ ಎಷ್ಟೇ ಕಷ್ಟಗಳಿದ್ದರೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸಿನ ಸಂಕೇತ ಸೂಚಿಸುತ್ತದೆ”.

ಇದರಲ್ಲಿ ನಿಮ್ಮ ಮನಸ್ಸು ಯಾವುದು ಎಂದು ನೀವೇ ತೀರ್ಮಾನಿಸಿಕೊಳ್ಳಿ.

For more Stories follow Karunadu Today

Click here to Join Our Whatsapp Group