ಕನ್ನಡ ಚಲನಚಿತ್ರ ಹಾಸ್ಯ ನಟ ಸರಿಗಮ ವಿಜಿ ಅವರು ವಿಧಿವಶರಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜನವರಿ 12 ರಂದು ಆರೋಗ್ಯದಲ್ಲಿ ಏರುಪೇರು ಆದಕಾರಣ ಯಶವಂತಪುರ ಬಳಿ ಇರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜನವರಿ 12, 1948 ರಂದು ಜನಿಸಿದ ಸರಿಗಮ ವಿಜಿ ಅವರು ಚಿಕ್ಕವಯಸ್ಸಿನಿಂದಲೇ ನಾಟಕ ಮತ್ತು ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದವರು. ನಾಟಕ ರಂಗಭೂಮಿ ಎಂದರೆ ಅವರಿಗೆ ಅಪಾರವಾದ ಪ್ರೀತಿ, ಅವರೇ ಸ್ವಂತವಾಗಿ ನಾಟಕಗಳನ್ನ ಬರೆಯುತ್ತಿದ್ದರು ಮತ್ತು ಬೀದಿ ನಾಟಕಗಳನ್ನ ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದರು, ನಾಟಕ ಮುಗಿದ ನಂತರ ಸೈಕಲ್ ಓಡಿಸುವುದು ಅವರ ಹವ್ಯಾಸವಾಗಿತ್ತು. ಹೈ ಸ್ಕೂಲ್ ಅಲ್ಲಿ ನಟ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿಪ್ರಸಾದ್ ಅವರು ಇವರಿಗೆ ಪೀಟಿ ಮಾಸ್ಟರ್ ಆಗಿದ್ದರು. ಅವರ ಸಹಕಾರದಿಂದ ಮತ್ತಷ್ಟು ನಾಟಕಗಳಲ್ಲಿ ನಟಿಸುವಂತಹ ಅವಕಾಶಗಳು ಬರತೊಡಗಿದವು.

ಕಿರಣ್ ಬೇಡಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವಾಗ ನಟ ಸರಿಗಮ ವಿಜಿಯವರಿಗೆ ಕಾಲುಗಳು ಕಳೆದುಕೊಳ್ಳುವ ಪರಿಸ್ಥಿತಿ ಬಂದಿತು. ಅದು ಹೇಗೆ ಅಂದರೆ ವಿಜಿಯವರು ಕ್ಯಾಮರಾದ ಹತ್ತಿರ ನಿಂತಿರುವ ಸಮಯದಲ್ಲಿ ಕಾರು ಬಂದು ಅವರ ಮುಂದೆ ಬಿದ್ದು ಕಾಲುಗಳು ಮೂರು ಪೀಸ್ ಆಗಿತ್ತು ಹಾಗೂ ಮುಖ ಎಲ್ಲ ರಕ್ತದಿಂದ ಹರಡಿಕೊಂಡಿತ್ತು. ಆ ವೇಳೆ ನಟ ಸರಿಗಮ ವಿಜಿ ಅವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಯಾಯುತ್ತು. ಈ ದುರ್ಘಟನೆಯಿಂದ ಹಲವಾರು ವರ್ಷಗಳವರೆಗೆ ಕೆಲಸ ಇಲ್ಲದೆ ಸುಮ್ಮನೆ ಇರಬೇಕಾಯಿತು. ಅತಿ ಹೆಚ್ಚಾಗಿ ದರ್ಶನ, ಸುದೀಪ್ ಹಾಗೂ ಓಂ ಪ್ರಕಾಶ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರು ಸರಿ ಸುಮಾರು 269 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಕನ್ನಡ ಚಲನಚಿತ್ರ ಹಾಸ್ಯ ನಟ ಎಂಬ ಬಿರುದು ಕೂಡ ನೀಡಲಾಗಿದೆ.

ಇವರ ಸಾವು ಕನ್ನಡ ಚಲನಚಿತ್ರ ಪ್ರೇಮಿಗಳಿಗೆ ದುಃಖ ತರಿಸಿದೆ ಮತ್ತು ಕನ್ನಡ ಸಿನಿಮಾಗಳ ಹಾಸ್ಯ ಲೋಕಕ್ಕೆ ಬಹುದೊಡ್ಡ ನಷ್ಟ ತಂದಿದೆ. ಅಂತಿಮವಾಗಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲೆಂದು ಕೇಳಿಕೊಳ್ಳುತ್ತೇವೆ. 

ಮಧ್ಯಾಹ್ನ 1:00 ಗಂಟೆಯಿಂದ ನಾಳೆ 10 ಗಂಟೆವರೆಗೆ ಅಂತಿಮ ದರ್ಶನ ಪಡೆಯಲು ಅನುಮತಿ ನೀಡಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಯ ನಂತರ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರವು ನಡೆಯಲಿದೆ.

Follow Karunadu Today for more News like this

Click here to Join Our Whatsapp Group