
ಸುನಾಮಿ, ಈ ಪದವನ್ನು ಕೇಳಿದರೆ ನಮಗೆ ಮೊದಲು ನೆನಪಿಗೆ ಬರುವುದು 2004ರ ಸುನಾಮಿ. ಅದು 2004 ಡಿಸೆಂಬರ್ 26, ಲಕ್ಷ ಲಕ್ಷ ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. ಇದು ಮೊದಲನೆಯ ಬಾರಿಗೆ ಆದಂತ ಸುನಾಮಿ ಅಲ್ಲ, ಇದಕ್ಕಿಂತ ಮೊದಲು ಅದೆಷ್ಟೋ ಬಾರಿ ಪ್ರಪಂಚದಲ್ಲಿ ಆಗಿದೆ. ಆಗಾಗ್ಗೆ ಬರುವ ಈ ಸುನಾಮಿಯ ರಕ್ಕಸ ಅಲೆಗಳು ಹಿಂದೂ ಮುಂದು ನೋಡದೆ ಎಲ್ಲವನ್ನೂ ತನ್ನೊಳಗೆ ಎಳೆದುಕೊಂಡು ಹೋಗುತ್ತದೆ. ಪ್ರಕೃತಿಯ ಈ ರುದ್ರ ನರ್ತನದ ಎದುರು ನಿಲ್ಲಲು ಯಾರಿಂದಲೂ ಸಾದ್ಯವಿಲ್ಲ. ಇಂದು ಈ ಸುನಾಮಿಯ ಬಗ್ಗೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಸಿಕೊಡುತ್ತೇವೆ. ಅದನ್ನು ಕೇಳಿದ ಮೇಲೆ ನಿಮಗೆ ಖಂಡಿತ ಅಚ್ಚರಿಯಾಗುತ್ತದೆ.
ಸಾಗರದ ತಳದಲ್ಲಿ ಹುಟ್ಟುವ ಅಲೆಗಳಿಗೆ ಜಪಾನಿ ಭಾಷೆಯಲ್ಲಿ ಸುನಾಮಿ ಎನ್ನುವರು. ಸಾಗರದ ತಳದಲ್ಲಿ ಸಂಭವಿಸುವ ಭೂಕಂಪವು ಸುನಾಮಿಗೆ ಕಾರಣ. ಸಾಗರದ ತಳದ ಭೂಕಂಪನದ ಅಲೆಗಳು ಶಿಲಾಗೋಳದ ಮೂಲಕ ಹಾದು ನೀರನ್ನು ಪ್ರವೇಶಿಸಿ ಸೆಕೆಂಡಿಗೆ 1.5 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅವು ನೀರಿನ ಮೇಲ್ಮೈ ತಲುಪಿದಾಗ ಸಮುದ್ರ ಕಂಪನ ಉಂಟಾಗುತ್ತದೆ. ನೀರಿನ ಆಳ ಹೆಚ್ಚಿದಂತೆ ಸುನಾಮಿಗಳ ವೇಗ ಹೆಚ್ಚುತ್ತದೆ. ಅವು ನೀರಿನ ಮೇಲ್ಮೈ ಮೇಲೆ ಗಂಟೆಗೆ 400 ರಿಂದ 800 ಕಿಲೋಮೀಟರ್ ವೇಗದಲ್ಲಿ ಅತಿ ದೂರ ಸಂಚರಿಸುತ್ತದೆ. ಸುನಾಮಿ ಅಲೆಗಳು ದಡವನ್ನು ಮುಟ್ಟಿದಾಗ 50 ಅಡಿ ಎತ್ತರ ಅಥವ ಅದಕ್ಕಿಂತ ಇನ್ನೂ ಹೆಚ್ಚು ಇರಬಹುದು. ಕೆಲವೊಮ್ಮೆ ಸುಮಾರು 100 ಅಡಿಗಳಷ್ಟು ಎತ್ತರದ ಬೃಹದಾಕಾರ ತಾಳಿ ಅಪಾರ ನಷ್ಟ ಉಂಟಾಗುತ್ತದೆ.
1896ರಲ್ಲಿ ಜಪಾನಿನ ಸಾನ್ರಿಕುನಿನಲ್ಲಿ ಸುನಾಮಿಯ ಹೊಡೆತಕ್ಕೆ 20,000 ಜನ ಸತ್ತು ಹೋಗಿದ್ದರು. ಅಂದು ಸುನಾಮಿಯ ಅಲೆಗಳು 135 ಅಡಿ ಎತ್ತರ ಇದ್ದವು. ಇಲ್ಲಿಯವರೆಗೂ ಶಾಂತ ಸಾಗರದಲ್ಲಿ 300 ಬಾರಿ, ಅಟ್ಲಾಂಟಿಕ್ ನಲ್ಲಿ 30 ಬಾರಿ, ಹಾಗೂ ಹಿಂದೂ ಮಹಾಸಾಗರದಲ್ಲಿ ಒಂದು ಬಾರಿ ಸುನಾಮಿ ಸಂಭವಿಸಿದೆ. ನಮ್ಮ ಹಿಂದೂ ಮಹಾಸಾಗರದಲ್ಲಿ 2004ರಲ್ಲಿ ಸಂಭವಿಸಿದ ಸುನಾಮಿಯು ತಮಿಳುನಾಡು, ಆಂಧ್ರಪ್ರದೇಶ, ಅಂಡಮಾನ್ ನಿಕೋಬಾರ್ ರಾಜ್ಯಗಳಲ್ಲಿ ಸಾವಿರಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. 1775 ರ ನವೆಂಬರ್ ಒಂದರಂದು ಸಂಭವಿಸಿದ ಲಿಸ್ಟನ್ ಭೂಕಂಪದಿಂದ ಸುನಾಮಿಯು ಉಂಟಾಗಿತ್ತು. ಇದು ಒಂದು ವಾರದವರೆಗೂ ಕಾಡಿಸಿತ್ತು. ಇದರ ಪರಿಣಾಮ ದೂರದ ಬ್ರಿಟಿಷ್ ಕರಾವಳಿಯಲ್ಲೂ ಕಂಡುಬಂದಿತ್ತು.
1883 ರಲ್ಲಿ ಕ್ರಕತೋವ ಅಗ್ನಿಪರ್ವತ ಸ್ಫೋಟಗೊಂಡು ದೊಡ್ಡ ದೊಡ್ಡ ಸುನಾಮಿ ಅಲೆಗಳು ಹಿಂದೂಮಹಾಸಾಗರ,ಕಾಮ ಶಾಂತ ಸಾಗರ ಹಾಗೂ ಅಟ್ಲಾಂಟಿಕ್ ಸಾಗರ ಗಳ ಮೂಲಕ ಪ್ರಪಂಚದ ತುಂಬೆಲ್ಲ ಹರಡಿದ್ದವು. ಇದರ ಪರಿಣಾಮವಾಗಿ ಸ್ಯಾನ್ ಫ್ರಾನ್ಸಿಸ್ಕೋ ತೀರದಲ್ಲಿ 40,000 ಜನರು ಹಾಗೂ ಈಸ್ಟ್ ಇಂಡೀಸ್ ನಲ್ಲಿ 36,000 ಜನರು ಸತ್ತು ಹೋಗಿದ್ದರು.
1896 ರಲ್ಲಿ ಜಪಾನಿನಲ್ಲಿ ಸುಮಾರು 28 ಮೀಟರ್ ನಷ್ಟು ಎತ್ತರದ ಸುನಾಮಿ 27,000 ಜನರನ್ನು ಬಲಿ ತೆಗೆದುಕೊಂಡು 10,000 ಮನೆಗಳನ್ನು ನಾಶ ಮಾಡಿದೆ. ಇದೇ ತರಹ 1946 ರಿಂದ 1975 ರವರೆಗಿನ ಅವದಿಯಲ್ಲಿ ಶಾಂತಸಾಗರದಲ್ಲಿ ಸುಮಾರು 15 ಸುನಾಮಿಗಳು ಉಂಟಾಗಿವೆ. ಭೂಕಂಪನಗಳು ಸಂಭವಿಸಿದ ನಂತರ ಅದರ ಪರಿಣಾಮದಿಂದ ಸುನಾಮಿಗಳು ಉಂಟಾಗುವುದಕ್ಕೆ ಅಂತರವಿರುತ್ತದೆ. ಆದ್ದರಿಂದ ಸುನಾಮಿ ಉಂಟಾಗುವ ಮುನ್ಸೂಚನೆಯನ್ನು ತಿಳಿಯುವ ತಂತ್ರಜ್ಞಾನ ಈಗ ಲಭ್ಯವಾಗಿದೆ. ಇದರಿಂದ ಜನರನ್ನು ಸುರಕ್ಷಿತ ಸ್ತಳಗಳಿಗೆ ಸ್ಥಳಾಂತರಗೊಳಿಸಬಹುದು. ಆದರೆ ದಿನೇ ದಿನೇ ಆಗುತ್ತಿರುವ ಹವಾಮಾನ ಬದಲಾವಣೆಯು ಮುಂದೊಂದು ದಿನ ಯಾರೂ ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಸುನಾಮಿಯನ್ನು ತರುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿವೆ. ಆ ದಿವಸವು ಬರದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
Follow Karunadu Today for more Interesting Facts & Stories.
Click here to Join Our Whatsapp Group