ತಾಯಿಯ ಎದೆ  ಹಾಲಿನ ಮಹತ್ವ ಎಂತಹದು ಎಂದರೆ ನಾವುಗಳು ನಮ್ಮ ದೇಹವು ಸದೃಡವಾಗಿ ಬೆಳೆಯಬೇಕೆಂದು ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತೇವೆ. ಇದಕ್ಕೆಂದು ಸಾಕಷ್ಟು ಹಣವನ್ನು ಕೂಡ ನಾವು ಖರ್ಚು ಮಾಡಲು ಸಿದ್ದವಿರುತ್ತೇವೆ. ಆದರೆ ಒಬ್ಬ ವ್ಯಕ್ತಿಯ ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕ ಅಂಶಗಳು ಒಂದೇ ಆಹಾರದಲ್ಲಿ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಬಗೆ ಬಗೆಯ ಆಹಾರಗಳನ್ನು ನಾವು ಸೇವಿಸುತ್ತೇವೆ. ಆದರೆ ಜಗತ್ತಿನಲ್ಲಿ ಒಂದು ಆಹಾರವಿದ್ದು ಅದರಲ್ಲಿ ಒಬ್ಬ ವ್ಯಕ್ತಿಗೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕ ಅಂಶಗಳು ಸಿಗುತ್ತವೆ. ಆ ಆಹಾರವೆ ತಾಯಿಯ ಎದೆಹಾಲು. ಹೌದು ಎಷ್ಟೇ ದುಡ್ಡು ಖರ್ಚು ಮಾಡಿ ಅದೆಂತಹ ಆಹಾರವನ್ನು ಸೇವಿಸಿದರು ಕೂಡ ಮನುಷ್ಯನ ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಆ ಆಹಾರವು ಒದಗಿಸುವುದಿಲ್ಲ. ಆದರೆ ತಾಯಿಯ ಎದೆ ಹಾಲಿನಲ್ಲಿ ಮಾತ್ರ ಎಲ್ಲಾ ಬಗೆಯ ಪೌಷ್ಟಿಕಾಂಶಗಳಿರುತ್ತವೆ. ಅದಕ್ಕೆ ಅಲ್ಲವೆ ತಾಯಿಯನ್ನು ದೇವರು ಎಂದು ಪೂಜಿಸುವುದು.