
ಸಾವು ಯಾರನ್ನೂ ಬಿಡುವುದಿಲ್ಲ.ಈ ಪ್ರಕೃತಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಸಾವು ಎನ್ನುವುದು ಇದ್ದೇ ಇದೆ.ಕೆಲವು ಜೀವಿಗಳಿಗೆ ಹೆಚ್ಚು ಆಯಸ್ಸು ಇರಬಹುದು ಆದರೆ ಹಾಗಂತ ಅವುಗಳು ಅಜರಾಮರವಾಗಿ ಇರುವುದಿಲ್ಲ.ಒಂದಲ್ಲ ಒಂದು ದಿನ ಅವುಗಳು ಸಾಯಲೇಬೇಕು.ಆದರೆ ಕೆಲವು ಪ್ರಾಣಿಗಳಿವೆ ಅವುಗಳಿಗೆ ಸಾವಿನ ಭಯವೇ ಇಲ್ಲ.ವಾತಾವರಣದಲ್ಲಿ ಅದೆಷ್ಟೇ ಏರುಪೇರು ಆದರೂ ಅವುಗಳು ಮಾತ್ರ ಸಾಯದೆ ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತವೆ. ಸಾಮಾನ್ಯವಾಗಿ ಮನುಷ್ಯನಿಗೆ ಹೆಚ್ಚು ಚಳಿ ತಡೆದುಕೊಳ್ಳಲು ಸಾದ್ಯವಿಲ್ಲ.ಚಳಿ ಹೆಚ್ಚಾಗುತ್ತಾ ಹೋದಂತೆ ಅವನ ದೇಹವು ಅದಕ್ಕೆ ಹೊಂದಿಕೊಳ್ಳದೆ ಕೊನೆಗೆ ಹೆಪ್ಪುಗಟ್ಟಿ ಸತ್ತುಹೋಗುತ್ತಾನೆ.ಆದರೆ ಕೆಲವು ಪ್ರಾಣಿಗಳಿವೆ.ಅದೆಷ್ಟೇ ಚಳಿ ಇರಲಿ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವುಗಳಿಗೆ ನೀಡಿದ್ದಾನೆ.ಬನ್ನಿ ಇಂದು ನಿಮಗೆ ಸಾವಿಗೇ ಚಾಲೆಂಜ್ ಹಾಕಿ ಬದುಕುವ ಶಕ್ತಿಯನ್ನು ಹೊಂದಿರುವ ಆ ಪ್ರಾಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.
1.ಆರ್ಕ್ಟಿಕ್ಗ್ರೌಂಡ್ ಅಳಿಲು
ಕೆನಡಾ,ಅಲಾಸ್ಕಾ ಹಾಗು ಸೈಬೀರಿಯ ಬಾಗದಲ್ಲಿ ಕಾಣಸಿಗುವ ಈ ಅಳಿಲು ಪರ್ವತ ಹಾಗು ಹಿಮಪ್ರದೇಶದಲ್ಲಿ ವಾಸಿಸುತ್ತದೆ.ಈ ಅಳಿಲು ತನ್ನ ಸುತ್ತಮುತ್ತಲಿನ ವಾತಾವರಣಕ್ಕೆ ತಕ್ಕ ಹಾಗೆ ಹೊಂದಿಕೊಳ್ಳುತ್ತದೆ.ಜೀರೋ ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿದ್ದರೂ ಸಾಯದೆ ಬದುಕಿ ಉಳಿಯುವ ಸಾಮರ್ಥ್ಯ ಇದಕ್ಕಿದೆ. ಚಳಿಗಾಲ ಬಂದರೆ ಸಾಕು ಭೂಮಿಯನ್ನು ಅಗೆದು ಗೂಡು ಕಟ್ಟಿಕೊಂಡು ಬರೋಬ್ಬರಿ 8 ತಿಂಗಳುಗಳ ಕಾಲ ಹೊರಗಡೆ ಬರದೆ ಚಳಿಗಾಲ ಮುಗಿಯುವವರೆಗೂ ಆ ಗೂಡಿನಲ್ಲಿಯೇ ಇರುತ್ತದೆ. ಈ 8 ತಿಂಗಳಲ್ಲಿ ನಿದ್ದೆಗೆ ಜಾರುವ ಈ ಅಳಿಲು 3 ವಾರಕ್ಕೊಮ್ಮೆ ಮಾತ್ರಏಳುತ್ತದೆ.ಈ ಸಮಯದಲ್ಲಿ ಅವುಗಳ ದೇಹದ ಉಷ್ಣಾಂಶವು 27 ಡಿಗ್ರಿ ಫ್ಯಾರನ್ಹೀಟ್ ಆಗುತ್ತದೆ. ಸಸ್ತನಿಗಳಲ್ಲಿ(mammals) ಇಷ್ಟೊಂದು ಕಡಿಮೆ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಕೇವಲ ಈ ಅಳಿಲಿಗೆ ಮಾತ್ರ ಇದೆ. ಆದರೆ ಇಷ್ಟೊಂದು ಕಡಿಮೆ ಉಷ್ಣಾಂಶವನ್ನು ಹೊಂದಿದ ಎಲ್ಲಾ ಅಳಿಲುಗಳು ಬದುಕುವುದಿಲ್ಲ.ಕೆಲವು ಚಳಿ ತಾಳಲಾರದೆ ಸತ್ತರೆ ಇನ್ನೂ ಕೆಲವು ಅಳಿಲುಗಳು ಚಳಿಯಿಂದ ಗೆದ್ದು ಮತ್ತೆ ಮೊದಲಿನ ಹಾಗೆ ಜೀವನ ನಡೆಸುತ್ತವೆ.
2.ಚಿತ್ತಾರದ ಆಮೆಗಳು
ಈ ಆಮೆಗಳು ಉತ್ತರ ಅಮೇರಿಕ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನದಿಗಳಲ್ಲಿ ವಾಸಿಸುವ ಈ ಆಮೆಗಳು ಸಮುದ್ರದಲ್ಲಿ ವಾಸಿಸುವ ಆಮೆಗಳಿಗಿಂತ ಬಲಿಷ್ಠವಾದದ್ದು. ವಾತಾವರಣದಲ್ಲಿ ಏನೇ ಬದಲಾವಣೆ ಆದರೂ ಅದನ್ನು ತಡೆದುಕೊಳ್ಳುವ ಶಕ್ತಿಇವುಗಳಿಗೆ ಇದೆ. ದೇಹದ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ಆದರೂ ಸಾಯದೇ ತಡೆದುಕೊಂಡು ಬದುಕುವ ಶಕ್ತಿ ಈ ಆಮೆಗಳಿಗೆ ಇದೆ. ಸಂಪೂರ್ಣ ಚಳಿಗಾಲ ಮುಗಿಯುವವರೆಗೂ ಆಹಾರ ಸೇವಿಸದೆ ಬದುಕುವಂತಹ ಸಾಮರ್ಥ್ಯ ಇವುಗಳ ದೇಹಕ್ಕಿದೆ.
3.ಉಡಗಳು– Iguana
ಹಲ್ಲಿಯ ಜಾತಿಗೆ ಸೇರಿರುವ ಈ ಪ್ರಾಣಿಯು ಚಳಿಗಾಲ ಬಂದರೆ ಸಾಕು ಅದರ ದೇಹವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಅದನ್ನು ಕಂಡರೆ ಅದು ಸತ್ತು ಹೋಗಿದೆ ಅಂದುಕೊಳ್ಳಬೇಕು ಆ ತರಹ ಅದರ ದೇಹವಾಗಿರುತ್ತದೆ. ಆದರೆ ಚಳಿಗಾಲ ಮುಗಿದ ನಂತರ ಸೂರ್ಯನ ಬಿಸಿಲಿಗೆ ಅದರ ದೇಹದ ಉಷ್ಣಾಂಶವು ನಿಧಾನವಾಗಿ ಹೆಚ್ಚಾಗಿ ಹೆಪ್ಪುಗಟ್ಟಿರುವ ದೇಹವು ಮತ್ತೆ ಮೊದಲಿನ ತರಹ ಆಗುತ್ತದೆ.
4.ಮೊಸಳೆಗಳು
ನೀರು ಮತ್ತು ಭೂಮಿ ಎರಡರ ಮೇಲೂ ವಾಸಿಸುವ ಪ್ರಾಣಿ ಮೊಸಳೆ. ನಾವೆಲ್ಲಾ ಸಾಮಾನ್ಯವಾಗಿ ಮೊಸಳೆಗಳು ನೀರು ಬಿಟ್ಟು ಭೂಮಿಯ ಮೇಲೆ ಬರುವುದನ್ನು ನೋಡಿದ್ದೇವೆ. ಆದರೆ ಸದಾ ನೀರಿನಲ್ಲೇ ಇರದೇ ಭೂಮಿಯ ಮೇಲೆ ಏಕೆ ಅವುಗಳು ಬರುತ್ತವೆ ಎನ್ನುವ ಪ್ರಶ್ನೆ ಅದೆಷ್ಟೋ ಜನರಿಗೆ ಕಾಡಿರುತ್ತದೆ. ಇದಕ್ಕೆ ಕಾರಣ ತಾನು ಉಸಿರಾಡುವ ಸಲುವಾಗಿ ಬೇಕಾಗಿರುವ ಆಮ್ಲಜನಕವನ್ನು ಹುಡುಕಿಕೊಂಡು ನೀರಿನಿಂದ ಭೂಮಿಗೆ ಅವುಗಳು ಬರುತ್ತವೆ. ಆದರೆ ಚಳಿಗಾಲದಲ್ಲಿ ಕೆಲವೊಮ್ಮೆ ವಿಪರೀತ ಚಳಿಯಿಂದ ನದಿಗಳ ಮೇಲ್ಬಾಗ ಹೆಪ್ಪುಗಟ್ಟಿರುತ್ತವೆ. ಇದು ಸಾಮಾನ್ಯವಾಗಿ ಯುರೋಪ್ ದೇಶಗಳಲ್ಲಿ ಹೆಚ್ಚು. ಆಗ ತಾನು ಉಸಿರಾಡುವ ಸಲುವಾಗಿಮೊಸಳೆಗಳು ತಮ್ಮ ತಲೆಯನ್ನು ಮಾತ್ರ ಮೇಲೆ ಇಟ್ಟು ದೇಹದ ಉಳಿದ ಭಾಗವನ್ನು ನೀರಿನ ಒಳಗೆ ಇಟ್ಟಿರುತ್ತದೆ. ಇದೇ ರೀತಿ ಸಂಪೂರ್ಣ ಚಳಿಗಾಲ ಮುಗಿಯುವವರೆಗೂ ಇದ್ದು ಸಾಯದೆ ಬದುಕುವ ಶಕ್ತಿ ಮೊಸಳೆಗಳಿಗೆ ಇದೆ.
5.ಟಾರ್ಡೀಗ್ರೇಡ್ – Tardigrades
ಈ ಜೀವಿಯು ಸಮುದ್ರದಲ್ಲಿ ವಾಸಿಸುತ್ತದೆ. 1 ಮಿಲಿಮೀಟರ್ಗಿಂತ ಕಡಿಮೆ ಉದ್ದವಿರುವ ಈ ಜೀವಿಗೆ ಸಾವೇ ಇಲ್ಲದ ಜೀವಿ ಎಂದು ಕರೆಯುತ್ತಾರೆ. ಈ ಭೂಮಿ ಸೃಷ್ಟಿ ಆದಾಗಿನಿಂದಲೂ ಈ ಜೀವಿಗಳು ಬದುಕುತ್ತಿದೆ ಎಂದು ವಿಜ್ಞ್ಯಾನಿಗಳು ಸಂಶೋದನೆಯ ಮೂಲಕ ಪತ್ತೆ ಹಚ್ಚಿದ್ದಾರೆ. ವಾತಾವರಣದಲ್ಲಿ ಅದೇನೇ ಬದಲಾವಣೆ ಆದರೂ ಈ ಜೀವಿ ಮಾತ್ರ ಸಾಯುವುದಿಲ್ಲ. ಈ ಜೀವಿಯ ಇನ್ನೊಂದು ವೈಶಿಷ್ಟ್ಯ ಏನೆಂದರೆ ಬಾಹ್ಯಾಕಾಶದಲ್ಲೂ ಬದುಕುವ ಸಾಮರ್ಥ್ಯ ಇದಕ್ಕಿದೆ. ಇದನ್ನು ಕಂಡ ವಿಜ್ಞ್ಯಾನಿಗಳು ಆಶ್ಚರ್ಯಪಟ್ಟಿದ್ದಾರೆ.
Follow Karunadu Today for more Interesting Facts & Stories.
Click here to Join Our Whatsapp Group