ಸಾದಿಸಬೇಕೆಂದರೆ ಛಲವಿರಬೇಕು ಎಂಬ ಮಾತು ಅಕ್ಷರ ಸಹ ನಿಜ. ಇನ್ನು ಏನಾದರು ಸಾಧಿಸಬೇಕಾದರೆ ಕೇವಲ ಗುರಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಅದರೆಡೆಗೆ ಸಾಗಲು ಶ್ರಮವಹಿಸಿ ದುಡಿಯಬೇಕು. ಇವೆಲ್ಲದರ ಜೊತೆಗೆ ಆತ್ಮವಿಶ್ವಾಸ ಅತಿಮುಖ್ಯ, ಅದು ಯಾವ ರೀತಿ ಇರಬೇಕು ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಒಂದೊಮ್ಮೆ ಮಳೆಯಿಲ್ಲದೆ ಕಂಗಾಲಾಗಿದ್ದ ಹಳ್ಳಿಯ ಜನರು ಮಳೆಬರಿಸಲು ಏನಾದರು ಮಾಡಬೇಕೆಂದು ಯೋಚಿಸಿ ಕೊನೆಗೆ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದುಕೊಂಡು ಊರಿನಲ್ಲಿರುವ ದೇವಸ್ಥಾನದ ಮುಂದೆ ಪ್ರಾರ್ಥನೆ ಮಾಡತೊಡಗಿದರು. ಆದರೆ ಮಗುವೊಂದು ಛತ್ರಿ ತಂದಿತ್ತು. ಇದನ್ನೇ ನಂಬಿಕೆ ಅನ್ನುವುದು.

ನೀವು ಸಾಮಾನ್ಯವಾಗಿ ಯಾವುದಾದರು ಚಿಕ್ಕ ಮಗು ಕೈಗೆ ಸಿಕ್ಕರೆ ಅದನ್ನು ಮುದ್ದಾಡುತ್ತೀರ ಮತ್ತು ಮೇಲಕ್ಕೆ ಎಸೆಯುತ್ತೀರ, ಮೇಲಕ್ಕೆ ಎಸೆದಾಗ ಆ ಮಗು ಹೆದರುವ ಬದಲಾಗಿ ನಗುತ್ತದೆ ಏಕೆಂದರೆ ನೀವು ಅದನ್ನು ಹಿಡಿಯುತ್ತೀರಾ ಅಂತ. ಇದನ್ನೇ ವಿಶ್ವಾಸ ಎನ್ನುವುದು.

ನಾವು ನಾಳೆ ಬದುಕಿರುತ್ತೇವೋ ಇಲ್ವೋ ನಮಗೆ ಗೊತ್ತಿರುವುದಿಲ್ಲ, ಇನ್ನು ಈಗ ಒಂದು ಕ್ಷಣದಲ್ಲಿ ಏನಾಗುತ್ತದೆ ಎಂಬ ಅರಿವಿರುವುದಿಲ್ಲ ಆದರೂ ಭವಿಷ್ಯದಲ್ಲಿ ಏನೆಲ್ಲಾ ಮಾಡಬೇಕು ಹೇಗೆಲ್ಲ ಬೆಳೆಯಬೇಕು ಎಂಬ ಸುದೀರ್ಘ ಯೋಜನೆ ರೂಪಿಸಿರುತ್ತೇವೆ. ಇದನ್ನೇ ಆತ್ಮವಿಶ್ವಾಸ ಎನ್ನುವುದು.

ಇನ್ನು ಇದಂತೂ ಸಾಮಾನ್ಯವಾಗಿ ಮನೆ-ಮನೆಯ ಕಥೆ. ನಿತ್ಯ ಗಂಡ-ಹೆಂಡತಿ ಜಗಳವಾಡುತ್ತಿರುತ್ತಾರೆ. ನಾವು ಇಂತವರ ಕಷ್ಟಗಳನ್ನು ನಿತ್ಯ ಸಾವಿರಾರು ಸಾರಿ ನೋಡಿಯೂ ಸಹ ಧೈರ್ಯ ಮಾಡಿ ಮದುವೆ ಮಾಡಿಕೊಳ್ಳುತ್ತೇವೆ. ಇದನ್ನೇ ಪ್ರೀತಿ ಎನ್ನುವುದು.

ಈ ಸತ್ಯ ಸಂಗತಿಗಳನ್ನು ಅರಿಯುವುದು ಜೀವನದಲ್ಲಿ ಬಹುಮುಖ್ಯ ಇದು ನಿಮಗೆ ಹುರಿದುಂಭಿಸುತ್ತದೆ.

For more Stories follow Karunadu Today

Click here to Join Our Whatsapp Group