
ಮನುಷ್ಯನ ಕೈಯಲ್ಲಿ ಸಿಕ್ಕು ಇದುವರೆಗು ಅದೆಷ್ಟೋ ಜೀವರಾಶಿಗಳು ಅವನತಿ ಹೊಂದಿರುವುದು ನಮಗೆಲ್ಲ ತಿಳಿದ ವಿಚಾರವೆ. ತನ್ನ ದುರಾಸೆಗೆ ಭೂಮಿಯ ಮೇಲಿರುವ ಪ್ರಾಣಿ ಪಕ್ಷಿ ಸಂಕುಲಗಳನ್ನು ಹಿಂದೂ ಮುಂದು ನೋಡದೆ ಮನುಷ್ಯನು ಕೊಲ್ಲುತ್ತಿದ್ದಾನೆ. ಆದರೆ ಒಂದು ಜೀವ ರಾಶಿ ಇದ್ದು ಅಕಸ್ಮಾತ್ ಅದರ ಸಂತತಿಯನ್ನೇನಾದರು ಮನುಷ್ಯನು ನಾಶ ಮಾಡಿದರೆ ಅಂದಿನಿಂದಲೇ ಮನುಷ್ಯಕುಲವು ಕೂಡ ಸರ್ವನಾಶವಾಗುವುದು ಖಚಿತ. ಇಂದು ನಿಮಗೆ ಆ ಜೀವಿಯ ಬಗ್ಗೆ ಮತ್ತು ಅದನ್ನು ನಾಶ ಮಾಡಿದರೆ ಹೇಗೆ ಮನುಷ್ಯ ಕುಲಕ್ಕೆ ಕಂಟಕವಾಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಮುಂದೆ ಓದಿ.
ಆ ಜೀವಿಯ ಹೆಸರು “ಜೇನು ಹುಳ”, ಹೌದು ತಿನ್ನಲು ಬೇಕಾದ ಸಿಹಿಯಾದ ಜೇನನ್ನು ಕೊಡುವ ಸುಂದರವಾದ ಮತ್ತು ಕೆಲವೊಮ್ಮೆ ಅಪಾಯಕಾರಿಯಾದ ಹುಳು. ಮರಗಳ ಮೇಲೆ, ಕೆಲವು ಗೋಡೆಗಳ ಮೇಲೆ ಗೂಡು ಕಟ್ಟಿ ವಾಸಿಸುವ ಈ ಕೀಟಗಳು ಮೊದಲೆಲ್ಲ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದವು, ಆದರೆ ಕೆಲವು ಸಮೀಕ್ಷೆಯ ಪ್ರಕಾರ 2011 ರಿಂದ ಜೇನು ಹುಳುಗಳ ಸಂತತಿಯು ನಿಧಾನವಾಗಿ ಆವನತಿಯಾಗುತ್ತಿದೆ. ಗೂಡುಗಳನ್ನು ಕಟ್ಟುತ್ತ ಸಿಹಿಯಾದ ಜೇನನ್ನು ಉತ್ಪತ್ತಿ ಮಾಡುವ ಈ ಹುಳುಗಳಿಂದ ಅನೇಕ ಲಾಭಗಳು ಮನುಷ್ಯನಿಗೆ ಇದ್ದು ಅವುಗಳನ್ನು ಉಳಿಸಿಕೊಳ್ಳಲು ಕೂಡ ಕೆಲ ಪ್ರಯತ್ನ ನಡೆಯುತ್ತಿದೆ.
ಪ್ರಪಂಚದಲ್ಲಿರುವ ಶೇಕಡ 70 ರಷ್ಟು ಜನರು ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವೊಬ್ಬರಿಗಂತು ಅದನ್ನು ಕುಡಿಯದಿದ್ದರೆ ಏನೇ ಕೆಲಸ ಮಾಡಲು ಆಸಕ್ತಿ ಬರುವುದಿಲ್ಲ. ಆದರೆ ಈ ಕಾಫಿ ಬೀಜಗಳು ಒಳ್ಳೆಯ ಗುಣಮಟ್ಟದಲ್ಲಿ ಬೆಳೆಯಬೇಕೆಂದರೆ ಜೇನು ಹುಳುಗಳು ಆ ಬೀಜಗಳನ್ನು ಪರಾಗಸ್ಪರ್ಶ ಮಾಡಲೇಬೇಕು. ಇಲ್ಲವಾದಲ್ಲಿ ಆ ಬೀಜದ ಗುಣಮಟ್ಟ ಸರಿಯಿರುವುದಿಲ್ಲ. ಅಕಸ್ಮಾತ್ ಜೇನು ಹುಳುಗಳ ಸಂತತಿ ನಾಶವಾದರೆ ಕಾಫಿ ಬೀಜಗಳ ಗುಣಮಟ್ಟ ಹಾಳಾಗುತ್ತದೆ. ಇದರಿಂದ ಕಾಫಿ ಬೆಳೆಯು ಸಂಪೂರ್ಣವಾಗಿ ಸ್ಥಗಿತವಾಗಿ ಪ್ರಪಂಚದೆಲ್ಲೆಡೆ ಕಾಫಿ ಮಾರಾಟ ಮಾಡುತ್ತಿರುವ ಕಂಪನಿಗಳು ಮುಚ್ಚಲ್ಪಡುತ್ತವೆ, ನಂತರ ಮನುಷ್ಯನಿಗೆ ಕುಡಿಯಲು ಕಾಫಿ ಇಲ್ಲದ ಹಾಗೆ ಆಗುತ್ತದೆ.
ಇದೇ ತರಹ ನಾವು ತಿನ್ನುವ ಗೋಡಂಬಿ ಮತ್ತು ಬಾದಾಮಿ ಕೂಡ ಈ ಜೇನು ಹುಳುಗಳ ಮೇಲೆ ಅವಲಂಬಿತವಾಗಿದೆ. ಅಕಸ್ಮಾತ್ ಜೇನು ಹುಳುಗಳು ಗೋಡಂಬಿ ಮತ್ತು ದ್ರಾಕ್ಷಿಯ ಮೇಲೆ ಪರಾಗಸ್ಪರ್ಶ ಮಾಡಲಿಲ್ಲವೆಂದರೆ ಉತ್ತಮ ಗುಣಮಟ್ಟದ ಗೋಡಂಬಿ ಮತ್ತು ಬಾದಾಮಿ ಬೆಳೆಯುವುದಿಲ್ಲ. ಇದೇ ಕಾರಣಕ್ಕೆ ಪ್ರಪಂಚದ ಅನೇಕ ದೇಶಗಳಲ್ಲಿ ಉತ್ತಮ ಗುಣಮಟ್ಟದ ಗೋಡಂಬಿ ಬಾದಾಮಿಯನ್ನು ಬೆಳೆಯಲು ಜೇನು ಹುಳುಗಳನ್ನು ಸಾಕಿದ್ದಾರೆ.
ಇನ್ನು ರೈತರು ಬೆಳೆಗಳನ್ನು ಬೆಳೆಯುವ ವೇಳೆ ಕೀಟಗಳು ತಮ್ಮ ಬೆಳೆಯನ್ನು ತಿನ್ನಬಾರದೆಂದು ಔಷದಿಗಳನ್ನು ಸಿಂಪಡಿಸುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಈ ರೀತಿ ಔಷದಿಗಳನ್ನು ಸಿಂಪಡಿಸಿದ ಮೇಲೆ ಆ ಔಷದಿಯ ವಾಸನೆಯು ಜೀನು ಹುಳುಗಳ ಮೆದುಳಿನ ಮೇಲೆ ಅದೆಷ್ಟು ಕೆಟ್ಟ ಪರಿಣಾಮ ಬೀರುತ್ತದೆಯೆಂದರೆ ಆ ವಾಸನೆಯನ್ನು ಸೇವಿಸಿದ ಮೇಲೆ ಅವುಗಳಿಗೆ ತಾವು ಇರುವ ಗೂಡಿನ ಜಾಗವೇ ಮರೆತು ಹೋಗುತ್ತದೆ. ಇದರಿಂದ ದಾರಿ ತಪ್ಪಿಸಿಕೊಂಡು ಪಕ್ಷಿಗಳ ಕೈಗೆ ಸಿಕ್ಕು ಸಾಯುತ್ತವೆ. ಪ್ರಪಂಚದೆಲ್ಲೆಡೆ ಈ ರೀತಿ ಆಗುತ್ತಿರುವುದರಿಂದ ಈ ಕೀಟಗಳ ಸಂತತಿ ನಾಶವಾಗುತ್ತಿದೆ.
ಇನ್ನು ಈ ಜೇನು ಹುಳುಗಳು ಉತ್ಪಾದಿಸುವ ತುಪ್ಪದಲ್ಲಿ ಮನುಷ್ಯನ ದೇಹದಲ್ಲಿ ಇರುವ ಅನೇಕ ರೋಗಗಳಿಗೆ ಔಷದಿಯಿದೆ. ಇವುಗಳ ಸಂತತಿ ನಾಶವಾದರೆ ಮನುಷ್ಯನ ರೋಗಗಳು ಹೆಚ್ಚಾಗಿ ಆ ರೋಗಗಳಿಗೆ ಬೇಕಾದ ಮದ್ದು ಸಿಗದೆ ನಿಧಾನವಾಗಿ ಮನುಷ್ಯ ಕುಲವು ಸರ್ವನಾಶವಾಗುತ್ತ ಹೋಗುತ್ತದೆ. ಇದಷ್ಟೇ ಅಲ್ಲದೆ ಅನೇಕ ಪ್ರಾಣಿಗಳು ಕೂಡ ಈ ಕೀಟದಿಂದಲೇ ಇಂದು ಬದುಕಿವೆ. ಒಟ್ಟಿನಲ್ಲಿ ಈ ಒಂದು ಪುಟ್ಟ ಹುಳುವಿನಿಂದ ಅನೇಕ ಲಾಭಗಳಿದ್ದು ಅವುಗಳ ಸಂತತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
Follow Karunadu Today for more Interesting Facts & Stories.
Click here to Join Our Whatsapp Group