
1) ಭಾರತ, ಟಿಬೆಟ್ ಮತ್ತು ನೇಪಾಳದ ಗಡಿ ಭಾಗಗಳಲ್ಲಿ ಇರುವ ಹಿಮಾಲಯ ಪರ್ವತಗಳ ಕುರಿತು ನಮಗೆಲ್ಲ ತಿಳಿದೇ ಇದೆ. ಹುಡುಕಿದಷ್ಟು ಅನೇಕ ರಹಸ್ಯಗಳು ಇದರ ಒಳಗೆ ಸಿಗುತ್ತಲೇ ಇದ್ದು ಆಧುನಿಕ ವಿಜ್ಞಾನಕ್ಕೆ ಪತ್ತೆ ಮಾಡಲು ಸಾಧ್ಯವಾಗದಷ್ಟು ವಿಸ್ಮಯಕಾರಿ ಸಂಗತಿಗಳು ಇದರ ಒಳಗಿವೆ. ಅಂತರ ವಿಸ್ಮಯಗಳಲ್ಲಿ Gyanganj ಎನ್ನುವ ಸ್ಥಳ ಕೂಡ ಒಂದು. ಹಿಮಾಲಯದ ತೊಪ್ಪಲಿನ ಒಳಗೆ ರಹಸ್ಯ ಸ್ಥಳದಲ್ಲಿರುವ ಈ ಸ್ಥಳವನ್ನು ಕೇವಲ ಯೋಗಿಗಳು ಮಾತ್ರ ತಲುಪಬಹುದಾಗಿದ್ದು ಆಧುನಿಕ ತಂತ್ರಜ್ಞಾನಕ್ಕೆ ಈ ಸ್ಥಳ ಎಲ್ಲಿದೆ ಎಂದು ಪತ್ತೆ ಮಾಡುವುದು ಅಸಾಧ್ಯವಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ರಹಸ್ಯಮಯ ಸ್ಥಳವು ನಾಲ್ಕನೆಯ ಆಯಾಮದಲ್ಲಿದೆ ಆದ್ದರಿಂದಲೆ ಇದನ್ನು ತಲುಪುವುದು ಇರಲಿ ಎಲ್ಲಿದೆ ಎಂದು ಹುಡುಕುವುದು ಕೂಡ ಅಸಾಧ್ಯವಾಗಿದೆ. ಅಂದಹಾಗೆ ನಾಲ್ಕನೆಯ ಆಯಾಮದ ಕುರಿತು ನಿಮಗೆ ಹೇಳುವುದಾದರೆ ಸಮಯವು ನಾಲ್ಕನೆಯ ಆಯಾಮಕ್ಕೆ ಉತ್ತಮ ಉದಾಹರಣೆ. ಸಮಯವನ್ನು ನಾವು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಆದರೆ ಅದು ಇರುವುದನ್ನು ನಾವು feel ಮಾಡಬಹುದು. ಅದೇ ರೀತಿ ಈ ಸ್ಥಳವನ್ನು ನಾವು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಆದರೆ ಈ ಹಿಮಾಲಯದ ತೊಪ್ಪಲಿನ ಒಳಗೆ ರಹಸ್ಯ ಸ್ಥಳದಲ್ಲಿರುವ ಸ್ಥಳವನ್ನು ಯೋಗಿಗಳು ಸುಲಭವಾಗಿ ತಲುಪಿ ಬಂದಿರುವ ಉದಾಹರಣೆಗಳು ಕೂಡ ಇವೆ. ಅಂತಹವರಲ್ಲಿ “ಸ್ವಾಮಿ ವಿಶುದ್ಧಾನಂದ ಪರಮಹಂಸ” ಅವರು ಕೂಡ ಒಬ್ಬರು. ಇವರ ರೀತಿ ಅನೇಕ Buddhist Monk ಗಳು ಮತ್ತು ಯೋಗಿಗಳು ನಾಲ್ಕನೆಯ ಆಯಾಮದಲ್ಲಿರುವ ಈ ರಹಸ್ಯಮಯ ಸ್ಥಳವನ್ನು ತಲುಪಿ ಬಂದಿದ್ದಾರೆ.
2) 2020, ಈ ವರ್ಷವನ್ನು ಮಾತ್ರ ಜಗತ್ತು ಮರೆಯುವುದಿಲ್ಲ. ಈ ವರ್ಷದಲ್ಲಿ ಬಂದ ಕೊರೋನ ಎನ್ನುವ ಮಹಾಮಾರಿಯಿಂದಾಗಿ ಜಗತ್ತಿನೆಲ್ಲೆಡೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿರುವ ವಿಷಯ ನಮಗೆಲ್ಲ ತಿಳಿದೇ ಇದೆ. ಇನ್ನು ಈ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮಾಸ್ಕ್ ದರಿಸಿಕೊಂಡು ಓಡಾಡುತ್ತಿದ್ದ ದೃಶ್ಯ ಜಗತ್ತಿನೆಲ್ಲೆಡೆ ಸಾಮಾನ್ಯವಾಗಿತ್ತು. ಪ್ರಕೃತಿಯ ಮೇಲೆ ಮನುಷ್ಯನು ಮಾಡುತ್ತಿದ್ದ ದಬ್ಬಾಳಿಕೆಯಿಂದ ಬೇಸತ್ತು ಸ್ವತಃ ಪ್ರಕೃತಿಯೇ ಮನುಷ್ಯನ ಮೇಲೆ ಸೇಡು ತೀರಿಸಿಕೊಂಡಿತು ಎಂದು ಅನೇಕ ಜನಗಳು ನಂಬಿದರು. ಆದರೆ ಈಗ ನಾನು ಹೇಳುವ ಸಂಗತಿ ಕೇಳಿದರೆ ಮನುಷ್ಯನಿಗೆ ಈ ರೋಗದಿಂದ ಸರಿಯಾದ ಪಾಠ ಕಲಿತಿಲ್ಲ ಎಂದು ತಿಳಿದುಬರುತ್ತದೆ. ಕೊರೋನ ರೋಗದಿಂದ ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸಲು ಅನೇಕ ದೇಶಗಳು ಮಾಸ್ಕ್ ಗಳನ್ನು ತಯಾರಿಸಿದ್ದವು. ಒಂದು ಸಮೀಕ್ಷೆಯ ಪ್ರಕಾರ ಬರೋಬ್ಬರಿ 52 ಬಿಲಿಯನ್ ಮಾಸ್ಕ್ ಗಳನ್ನು 2020 ರಲ್ಲಿ ಪ್ರಪಂಚದೆಲ್ಲೆಡೆ ತಯಾರಿಸಲಾಗಿತ್ತು. ಆದರೆ ಅವುಗಳಲ್ಲಿ ಸುಮಾರು 1.52 ಬಿಲಿಯನ್ ಮಾಸ್ಕ್ ಗಳನ್ನು ಕೆಲ ದೇಶದ ಪ್ರಜೆಗಳು ತಾವು ಬಳಸಿದ ಮೇಲೆ ಸಮುದ್ರಕ್ಕೆ ಎಸೆದಿದ್ದಾರೆ. ಕೇವಲ ಮಾಸ್ಕ್ ಗಳನ್ನು ಮಾತ್ರವಲ್ಲದೆ gloves ಹಾಗು ಸ್ಯಾನಿಟೈಜರ್ ಬಾಟಲಿಗಳನ್ನು ಕೂಡ ಎಸೆದಿದ್ದು ಇದರಿಂದಾಗಿ ಸಮುದ್ರಗಳು ಮತ್ತಷ್ಟು ಕಲುಷಿತವಾಗಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
3) ನಮಗೆಲ್ಲ ತಿಳಿದ ಹಾಗೆ ನೀರು ಎನ್ನುವುದು ಪ್ರತಿಯೊಂದು ಜೀವಿಗೂ ಬೇಕಾಗಿರುವಂತಹ ಅತ್ಯಮೂಲ್ಯ ಅಂಶ. ಆಹಾರ ಸೇವಿಸದೆ ಅನೇಕ ದಿನಗಳವರೆಗು ಬದುಕಬಹುದು ಆದರೆ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಭೂಮಿಯ ಮೇಲೆ ಒಂದು ಜೀವಿಯಿದ್ದು ಆ ಜೀವಿಯು ನೀರನ್ನು ಸೇವಿಸದೆ ಜೀವನ ಪೂರ್ತಿ ಬದುಕಬಲ್ಲದು. ಆ ಜೀವಿಯ ಹೆಸರು “ಕಾಂಗರೂ Rat”. ಈ ಪುಟ್ಟ ಜೀವಿಯು ಮರುಭೂಮಿಗಳಲ್ಲಿ ಕಾಣಸಿಗುತ್ತದೆ. ಮರುಭೂಮಿಯ ವಾತಾವರಣಕ್ಕೆ ಹೊಂದಿಕೊಂಡು ನೀರನ್ನು ಸೇವಿಸದೆ ಬದುಕುವುದನ್ನು ಇದು ಕಲಿತಿದೆ. ತನಗೆ ಬೇಕಾಗುವಂತಹ ನೀರನ್ನು ಇದು ತನ್ನ ದೇಹದ ಒಳಗೆ ಉಂಟಾಗುವ ತೇವಾಂಶದಿಂದ ಪಡೆದುಕೊಳ್ಳುತ್ತದೆ ಹೊರತು ಹೊರಗಿನಿಂದ ಮಾತ್ರ ಇದು ಕುಡಿಯುವುದಿಲ್ಲ. ಅದೇನೇ ಹೇಳಿ ನಮ್ಮ ಪ್ರಕೃತಿಯಲ್ಲಿ ಅದೆಂತಹ ವಿಚಿತ್ರವಾದ ಜೀವಿಗಳು ಇವೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.
4) ಭೂಮಿಯಿಂದ 670 ಜ್ಯೋತಿವರ್ಷಗಳಷ್ಟು ದೂರದಲ್ಲಿ ಗುರು ಗ್ರಹದ ರೀತಿಯ ಅನಿಲಗಳಿಂದ ತುಂಬಿಕೊಂಡಿರುವಂತಹ ಒಂದು ಗ್ರಹವಿದೆ. ಆ ಗ್ರಹಕ್ಕೆ KELT-9b ಎಂದು ಹೆಸರಿಡಲಾಗಿದೆ. ಇದರ ತಾಪಮಾನವು ಬರೋಬ್ಬರಿ 4326 ಡಿಗ್ರೀ ಸೆಲ್ಸಿಯಸ್ ಇದೆ. ಅಂದರೆ ಒಂದು ನಕ್ಷತ್ರಕ್ಕೆ ಇರಬೇಕಾದಂತಹ ತಾಪಮಾನವನ್ನು ಈ ಗ್ರಹ ಹೊಂದಿದೆ. ವಿಜ್ಞಾನಿಗಳು ಇದುವರೆಗು ಪತ್ತೆ ಮಾಡಿದಂತಹ ಅನೇಕ ಗ್ರಹಗಳಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವಂತಹ ಗ್ರಹ ಇದಾಗಿದೆ.
5) ಮನುಷ್ಯನ ದೇಹದ ಮೇಲಿರುವ ಚರ್ಮದಲ್ಲಿ Dermis ಎನ್ನುವ ಪದರವಿರುತ್ತದೆ. ಈ ಪದರದ ಮೇಲೆ ಮೂಡಿದಂತಹ ಕಲೆಗಳು ಶಾಶ್ವತವಾಗಿ ಇರುತ್ತವೆ. ಇದೇ ಪದರದ ಮೇಲೆ Tattoo ಗಳನ್ನು ಹಾಕಲಾಗುತ್ತದೆ. ಆದ್ದರಿಂದಲೆ Tattoo ಗಳು ಶಾಶ್ವತವಾಗಿ ಇರುತ್ತವೆ. ಇದೇ ರೀತಿ ಪೆನ್ಸಿಲ್ ಗಳಿಂದ ಜೋರಾಗಿ ಚುಚ್ಚಿದಾಗ ಮೂಡುವ ಕಲೆಗಳು ಕೂಡ ಚರ್ಮದ ಮೇಲೆ ಶಾಶ್ವತವಾಗಿ ಉಳಿಯುತ್ತವೆ. ಇದಕ್ಕೆ ಕಾರಣ ಪೆನ್ಸಿಲ್ ನಲ್ಲಿರುವ Graphite ಅಂಶವು Dermis ಪದರದ ಜೊತೆಗೆ ಸೇರಿಕೊಳ್ಳುವುದರಿಂದ.