ನೀರು ಮತ್ತು ನೆಲ ಎರಡರ ಮೇಲೂ ವಾಸಿಸುವ ಪ್ರಾಣಿಗಳಲ್ಲಿ ಒಂದಾಗಿರುವ ಮೊಸಳೆಯನ್ನು ಕಂಡರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಬೇಟೆಗೆ ಹೊಂಚು ಹಾಕುತ್ತ ಸತ್ತ ಹಾಗೆ ನಟಿಸಿ ಹತ್ತಿರ ಹೋಗುತ್ತಿದ್ದಂತೆ ಮೈ ಮೇಲೆ ಎಗರುವ ಮೊಸಳೆಗಳು ಆಗಾಗ್ಗೆ ನೀರು ಬಿಟ್ಟು ನೆಲದ ಮೇಲೆ ಬರಲು ಕಾರಣವೆಂದರೆ ಆಮ್ಲಜನಕ. ಸದಾ ನೀರಿನಲ್ಲಿಯೇ ಇರದೆ ಭೂಮಿಯ ಮೇಲೆ ಏಕೆ ಈ ಮೊಸಳೆಗಳು ಬರುತ್ತವೆ ಎನ್ನುವ ಪ್ರಶ್ನೆ ನಮ್ಮೆಲ್ಲರಿಗೂ ಅದೆಷ್ಟೋ ಬಾರಿ ಕಾಡಿರುತ್ತದೆ. ಇದಕ್ಕೆ ಉತ್ತರ ಆಮ್ಲಜನಕ, ಅದರ ಸೇವನೆಗಾಗಿ ದಂಡೆಯ ಮೇಲೆ ಈ ಮೊಸಳೆಗಳು ಬರುತ್ತವೆ. ಈ ಮೊಸಳೆಗಳ ಬಗ್ಗೆ ಇರುವ ಇನ್ನೊಂದು ಅಚ್ಚರಿ ಸಂಗತಿಯೆಂದರೆ ಇವುಗಳಿಗೆ ಸರಿಯಾದ ಆಹಾರ ಸಿಗುತ್ತಾ ಹೋದಂತೆ ಅವುಗಳ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಪ್ರಪಂಚದಲ್ಲಿ ಇದುವರೆಗೂ ಸತ್ತಿರುವ ಅರ್ದದಷ್ಟು ಮೊಸಳೆಗಳು ಸರಿಯಾದ ಆಹಾರ ಸಿಗದೇ ಸತ್ತಿವೆ ಹೊರತು ಬೇರೆ ಯಾವುದೇ ಕಾರಣಗಳಿಂದ ಅಲ್ಲ. ಆಹಾರ ಸಿಗುತ್ತಾ ಹೋದಂತೆ ಮೊಸಳೆಗಳ ಗಾತ್ರ ದೊಡ್ದದಾಗುತ್ತಾ ಹೋಗುತ್ತದೆ. ಇಂದು ನಿಮಗೆ ಸರಿಯಾದ ಆಹಾರ ಸೇವನೆಯಿಂದ ಬೃಹತ್ ಗಾತ್ರದವರೆಗೂ ಬೆಳೆದ ಕೆಲವು ಮೊಸಳೆಗಳ ಕುರಿತು ತಿಳಿಸುತ್ತೇವೆ. ಅವುಗಳ ಗಾತ್ರವನ್ನು ನೋಡುತ್ತಿದ್ದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ.

1) ಗೊಮೆಕ್ – Gomek


“Papua new guinea” ಎನ್ನುವ ದೇಶದಲ್ಲಿದ್ದ ಈ ಮೊಸಳೆಯನ್ನು “ಜಾರ್ಜ್ ಕ್ರೇಜ್” ಎನ್ನುವ ವ್ಯಕ್ತಿಯು ಹಿಡಿದಿದ್ದನು. ನಂತರ ಇದನ್ನು ಟೆರ್ರಿ ಎನ್ನುವ ವ್ಯಕ್ತಿಯು ಖರೀದಿಸಿ ಅಮೇರಿಕಾದ ಒಕಾಲ ನಗರದಲ್ಲಿ ಕೆಲವು ವರ್ಷಗಳ ಕಾಲ ಇರಿಸಿದ್ದನು. ಆದರೆ ನಂತರ ಫ್ಲೋರಿಡಾದ “ಸೆಂಟ್ ಅಗಸ್ಟೀನ್ ಜೂಲಾಜಿಕಲ್ ಪಾರ್ಕ್”ಗೆ ಮಾರಿದನು. ಈ ಮೊಸಳೆಯು ಬೇರೆ ಮೊಸಳೆಗಳ ಹಾಗೆ ಮನುಷ್ಯರ ಮೇಲೆ ಎಗರುತ್ತಿರಲಿಲ್ಲ. ತನಗೆ ಆಹಾರ ನೀಡಲು ಯಾರೇ ಬಂದರೂ ತಾಳ್ಮೆಯಿಂದ ಅವರು ನೀಡುವ ಆಹಾರವನ್ನು ತಿನ್ನುತ್ತಿತ್ತು. 1997 ರವರೆಗೂ ಬದುಕಿದ್ದ ಈ ಮೊಸಳೆಯು ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆಯಿತು. ಬರೋಬ್ಬರಿ 5.42 ಮೀಟರ್ ಉದ್ದ ಹಾಗು 860 ಕೆಜಿ ತೂಕವಿದ್ದ ಈ ಮೊಸಳೆಯು ಎಲ್ಲರ ಜೊತೆ ಸ್ನೇಹದಿಂದ ಇತ್ತು. ಸತ್ತ ಮೇಲೆ ಇದರ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ.

2) ಕ್ಯಾಸಿಯಸ್- Cassius


ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ನಲ್ಲಿರುವ ಜುವಾಲಾಜಿಕಲ್ ಪಾರ್ಕ್ ನಲ್ಲಿ ಈ ಮೊಸಳೆ ಇದ್ದು ಬರೋಬ್ಬರಿ 5.48 ಮೀಟರ್ ಉದ್ದ ಹಾಗು 998 ಕೆಜಿ ತೂಕವಿದೆ. 2011 ರಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಮೊಸಳೆ ಎಂದು ಇದನ್ನು ಗಿನ್ನಿಸ್ ದಾಖಲೆಗೆ ಸೇರಿಸಲಾಗಿದೆ. ಈ ಮೊಸಳೆಯು “ಫಿನ್ನಿಸ್” ನದಿಯ ತೀರದಲ್ಲಿ ವಾಸವಾಗಿತ್ತು. ಅದೆಷ್ಟೋ ಬಾರಿ ಈ ನದಿಯಲ್ಲಿ ಹೋಗುತ್ತಿದ್ದ ಹಡಗುಗಳ ಮೇಲೆ ದಾಳಿ ಮಾಡಿದ್ದರಿಂದ ಈ ಮೊಸಳೆಯನ್ನು “ಜಾರ್ಜ್ ಕ್ರೇಜ್” ಅವರು ಹಿಡಿದು ಜುವಾಲಾಜಿಕಲ್ ಪಾರ್ಕ್ ಗೆ ಹಾಕಿದರು. ಇದಕ್ಕೆ Cassius ಎಂದು ಹೆಸರು ಇಡಲು ಕಾರಣವಿದೆ. ಪ್ರಸಿದ್ದ ಬಾಕ್ಸರ್ “ಮೊಹಮ್ಮದ್ ಅಲಿ” ಅವರ ಜನ್ಮ ನಾಮ Cassius ಆಗಿತ್ತು. ಅವರ ತರಹ ಈ ಮೊಸಳೆಯು ಕೂಡ ತನ್ನ ಬಾಲದ ಮೂಲಕ ಜನರ ಮೇಲೆ ಆಕ್ರಮಣ ಮಾಡುತ್ತಿದ್ದರಿಂದ ಇದಕ್ಕೆ Cassius ಎಂದು ಹೆಸರಿಟ್ಟರು.

3) ಯುಟಾನ್- UTAN


5.3 ಮೀಟರ್ ಉದ್ದ ಹಾಗು 904 ಕೆಜಿ ತೂಕವಿರುವ ಈ ಮೊಸಳೆಯು ಥೈಲ್ಯಾಂಡ್ ದೇಶದಲ್ಲಿರುವ “Samutprakan crocodile farm” ನಲ್ಲಿ ಬೆಳೆದಿತ್ತು. ಈಗ ಅಮೇರಿಕಾದ ಉತ್ತರ ಕರೋಲಿನಾದಲ್ಲಿರುವ ಈ ಮೊಸಳೆಯನ್ನು ಅಮೇರಿಕಾದಲ್ಲಿಯೇ ಅತ್ಯಂತ ದೊಡ್ಡ ಮೊಸಳೆ ಎಂದು ಪರಿಗಣಿಸಲಾಗಿದೆ.

4) ಬ್ರೂಟಸ್- Brutus


ಆಸ್ಟ್ರೇಲಿಯಾದ ಅಡಿಲೇಡ್ ನದಿಯಲ್ಲಿರುವ ಈ ಮೊಸಳೆ “ಬುಲ್ ಶಾರ್ಕ್” ಮೀನುಗಳನ್ನು ಬೇಟೆ ಆಡುತ್ತದೆ. ಬರೋಬ್ಬರಿ 5.59 ಮೀಟರ್ ಉದ್ದ ಹಾಗು 1000 ಕೆಜಿ ತೂಕವಿರುವ ಈ ಮೊಸಳೆಯು ಶಾರ್ಕ್ ಮೀನನ್ನು ಬೇಟೆಯಾಡುವ ವೇಳೆ ತನ್ನ ಒಂದು ಕೈಯನ್ನು ಕಳೆದುಕೊಂಡಿದೆ. ಇದನ್ನು ನೋಡಲು ಪ್ರಪಂಚದ ನಾನಾ ಕಡೆಯಿಂದ ಪ್ರವಾಸಿಗರು ಬರುತ್ತಾರೆ.

5) ಬೂಜಂಗ್ ಸೇನಂಗ್- Bujang Senang


ಮಲೇಷಿಯಾದ ಸರವಾಕ್ ನದಿಯಲ್ಲಿ ವಾಸವಿದ್ದ ಈ ಮೊಸಳೆಯ ಕುರಿತು ಅನೇಕ ಕಥೆಗಳು ಇವೆ. “Simalungun” ಎನ್ನುವ ವ್ಯಕ್ತಿಯು ಸತ್ತು ಈ ಮೊಸಳೆಯಾಗಿ ಬಂದಿದ್ದ ಎನ್ನವ ಕಥೆಯನ್ನು ಅಲ್ಲಿನ ಜನರು ಹೇಳುತ್ತಾರೆ. ಬರೋಬ್ಬರಿ 5.87 ಮೀಟರ್ ಉದ್ದ ಹಾಗು ಸಾವಿರ ಕೆಜಿ ತೂಕವಿದ್ದ ಈ ಮೊಸಳೆಯ ಬೆನ್ನಿನ ಮೇಲೆ ಬಿಳಿ ಬಣ್ಣ ಪಟ್ಟಿಗಳಿದ್ದವು. 1992ರವರೆಗೂ ಬದುಕಿದ್ದ ಈ ಮೊಸಳೆಯನ್ನು ಅಲ್ಲಿನ ಜನರು ಕೊಂದು ಹಾಕಿದರು. ಇದರ ಚರ್ಮ ಹಾಗು ಮೂಳೆಯನ್ನು “Sarawak” ಮ್ಯೂಸಿಯಂನಲ್ಲಿ ಇಡಲಾಗಿದೆ.

6) ಗುಸ್ತಾವ್- Gustave


ಆಫ್ರಿಕಾದ ಬುರುಂಡಿ ದೇಶದ “ರುಜಿಜಿ” ನದಿಯ ಮೇಲೆ ವಾಸವಿರುವ ಈ ಮೊಸಳೆಯು ಬರೋಬ್ಬರಿ 5.99 ಮೀಟರ್ ಉದ್ದವಿದ್ದು ಇದುವರೆಗೂ 300 ಜನರನ್ನು ತಿಂದಿದೆ ಎಂದು ಆ ನದಿಯ ದಂಡೆಯ ಮೇಲೆ ವಾಸವಿರುವ ಜನರು ಹೇಳಿದ್ದಾರೆ. 2015 ರಲ್ಲಿ ಕಾಡು ಕೋಣವನ್ನು ಬೇಟೆ ಆಡಿ ನದಿಯ ಕಡೆ ಎಳೆದುಕೊಂಡು ಹೋಗುವುದನ್ನು ನೋಡಿರುವ ಜನರು ಅದಾದ ಮೇಲೆ ಮತ್ತೆ ಈ ಮೊಸಳೆಯನ್ನು ನೋಡಿಲ್ಲವೆಂದು ಹೇಳಿದ್ದಾರೆ.

7) ಡಾಮಿನೇಟರ್- Dominator


ಈ ಮೊಸಳೆಯು ಕೂಡ “ಬ್ರೂಟಸ್ ಮೊಸಳೆ” ವಾಸವಾಗಿರುವ ಆಸ್ಟ್ರೇಲಿಯಾದ ಅಡಿಲೇಡ್ ನದಿಯಲ್ಲಿಯೇ ಇದೆ. 6 ಮೀಟರ್ ಉದ್ದ ಹಾಗು 1000 ಕೆಜಿಗಿಂತ ಹೆಚ್ಚು ತೂಕವಿರುವ ಈ ಮೊಸಳೆ ಅನೇಕ ಬಾರಿ “ಬ್ರೂಟಸ್ ಮೊಸಳೆ” ಮೇಲೆ ದಾಳಿ ಮಾಡಿದೆ. ಕೆಲವರು ಪ್ರಕಾರ ಬ್ರೂಟಸ್ ಮೊಸಳೆಯ ಒಂದು ಕೈಯನ್ನು ಶಾರ್ಕ್ ಬದಲು ಈ ಡಾಮಿನೇಟರ್ ಮೊಸಳೆ ತಿಂದಿದೆ ಎಂದು ಹೇಳುತ್ತಾರೆ.

8) ಲೋಲಾಂಗ್- Lolong


ಬರೋಬ್ಬರಿ 6.17 ಮೀಟರ್ ಉದ್ದ ಹಾಗು 1075 ಕೆಜಿ ತೂಕವಿರುವ ಈ ಮೊಸಳೆಯು “ಕ್ಯಾಸಿಯಸ್” ಮೊಸಳೆಯ ದಾಖಲೆಯನ್ನು ಸರಿಗಟ್ಟಿ ಅತ್ಯಂತ ದೊಡ್ಡ ಮೊಸಳೆ ಎಂದು 2012 ರಲ್ಲಿ ಗಿನ್ನಿಸ್ ದಾಖಲೆಗೆ ಸೇರಿತ್ತು. ಫಿಲಿಪೈನ್ಸ್ ದೇಶದಲ್ಲಿದ್ದ ಈ ಮೊಸಳೆಯನ್ನು ಹಿಡಿಯಲು ಬರೋಬ್ಬರಿ 100 ಜನರು ಸತತ ಮೂರು ವಾರಗಳ ಕಾಲ ಶ್ರಮ ಪಟ್ಟಿದ್ದರು ಆದರೆ 2013 ರಲ್ಲಿ ಉಸಿರಾಟದ ತೊಂದರೆಯಿಂದ ಈ ಮೊಸಳೆಯು ಸತ್ತು ಹೋಯಿತು.

9) ಕಲಿಯ- Kalia


ಈ ಮೊಸಳೆಯು ಭಾರತದ ಓಡಿಸ್ಸಾ ರಾಜ್ಯದ “Bhitarkanika Park” ನಲ್ಲಿದ್ದು ಬರೋಬ್ಬರಿ 7 ಮೀಟರ್ ಉದ್ದ ಹಾಗು ಎರಡು ಸಾವಿರ ಕೆಜಿ ತೂಕವಿದೆ. ಪ್ರಪಂಚದ ಅತ್ಯಂತ ದೊಡ್ಡ ಮೊಸಳೆಯು ಇದಾಗಿದೆ. ಆದರೆ ಅಲ್ಲಿನ ಜನರು ಇದಕ್ಕಿಂತ ದೊಡ್ಡ ಮೊಸಳೆಯು 1926 ರಲ್ಲಿ ಇತ್ತು ಆದರೆ ಅದನ್ನು ಬೇಟೆ ಆಡಿದ್ದಾರೆ ಎಂದು ಹೇಳುತ್ತಾರೆ.

10) ಕ್ರಿಸ್- Krys


ಬರೋಬ್ಬರಿ 8.6 ಮೀಟರ್ ಉದ್ದವಿದ್ದ ಈ ಮೊಸಳೆ ಆಸ್ಟ್ರೇಲಿಯಾದ “ಕ್ವೀನ್ಸ್ಲ್ಯಾಂಡ್” ನಲ್ಲಿ ವಾಸವಾಗಿತ್ತು. “Krystina pawlowsky” ಎನ್ನುವ ಬೇಟೆಗಾರತಿ ಈ ಮೊಸಳೆಯನ್ನು ಬೇಟೆ ಆಡಿದ್ದಳು. ಇದರ ಒಂದೇ ಒಂದು ಫೋಟೋ ಇದ್ದು ಇದನ್ನು ಬೇಟೆ ಆಡಿದ್ದ ನಂತರ ಆಕೆ ತುಂಬಾ ಬೇಸರ ಪಟ್ಟಿದ್ದಳು.

Follow Karunadu Today for more Interesting Facts & Stories. 

Click here to Join Our Whatsapp Group