ನೋಡಲು ಚಿಕ್ಕದಾಗಿದ್ದರು ಕೂಡ ನಮ್ಮ ದೇಹಕ್ಕೆ ಸಾಕಷ್ಟು ನೋವು ಉಂಟು ಮಾಡುವ ಕೀಟಗಳನ್ನು ಕಂಡರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅನೇಕ ರೋಗಗಳನ್ನು ಕೂಡ ಹರಡುವ ಸಾಮರ್ಥ್ಯ ಈ ಕೀಟಗಳು ಹೊಂದಿದ್ದು ನಮ್ಮ ಆರೋಗ್ಯಕ್ಕೆ ಕೂಡ ಮಾರಕವಾಗಿವೆ. ಇಂದು ನಿಮಗೆ ಪ್ರಪಂಚದಲ್ಲಿ ಇರುವ ಕೆಲ ಅಪಾಯಕಾರಿ ಕೀಟಗಳ ಬಗ್ಗೆ ತಿಳಿಸಿಕೊಡುತ್ತೇವೆ. ಆ ಕೀಟಗಳ ತಂಟೆಗೆ ಹೋದವರು ಮಾತ್ರ ಸಾಕಷ್ಟು ನೋವನ್ನು ಎದುರಿಸಿದ್ದಾರೆ.

1) ಬುಲೆಟ್ ಇರುವೆ


ಈ ಇರುವೆಯು ಪ್ರಪಂಚದಲ್ಲಿಯೇ ಅತಿ ಹೆಚ್ಚು ನೋವು ಕೊಡುವ ಸಾಮರ್ಥ್ಯ ಹೊಂದಿದೆ. ನಮ್ಮ ದೇಹಕ್ಕೆ ಒಂದು ಗುಂಡು ತಗುಲಿದಾಗ ಎಷ್ಟು ನೋವಾಗುತ್ತದೆ ಅಷ್ಟೇ ನೋವು ಈ ಇರುವೆಯು ಕಡಿದರೆ ಆಗುತ್ತದೆ. ಅಮೇರಿಕಾದ ದಟ್ಟ ಅರಣ್ಯದಲ್ಲಿ ಕಾಣಸಿಗುವ ಈ ಇರುವೆಯು ಸಾಕಷ್ಟು ಅಪಾಯಕಾರಿಯಾಗಿದ್ದು ಹೆಣ್ಣು ಇರುವೆಯು ಕಡಿದರೆ ಕೇವಲ 5 ನಿಮಿಷ ಇರುತ್ತದೆ ಆದರೆ ಗಂಡು ಇರುವೆ ಕಡಿದರೆ 24 ತಾಸಿನವರೆಗು ನೋವು ಇರುತ್ತದೆ. ಅಕಸ್ಮಾತ್ ಈ ಇರುವೆಯು 200 ಕ್ಕಿಂತ ಹೆಚ್ಚು ಬಾರಿ ಕಡಿದರೆ ಮನುಷ್ಯನು ಸತ್ತೇ ಹೋಗುತ್ತಾನೆ.

2) ಬಾಟ್ ನೊಣಗಳು


ಅಮೇರಿಕ, ಕೆನಡ, ಆಸ್ಟ್ರೇಲಿಯಾ ದೇಶದಲ್ಲಿ ಕಾಣಸಿಗುವ ಈ ನೊಣಗಳು ಮನುಷ್ಯನ ಚರ್ಮದ ಮೇಲೆ ಮರಿಗಳನ್ನು ಹಾಕುತ್ತವೆ. ಆ ಮರಿಗಳು ನಮಗೆ ತಿಳಿಯದೆ ಚರ್ಮವನ್ನು ಕೊರೆದು ನಮ್ಮ ದೇಹದ ಒಳಗೆ ಹೊಕ್ಕು ಮಾಂಸವನ್ನು ತಿಂದು ಬೆಳೆದು ದೊಡ್ಡದಾಗುತ್ತ’ ಹೋಗುತ್ತವೆ. ಕೇವಲ ಮನುಷ್ಯರ ಚರ್ಮದ ಮೇಲೆ ಅಷ್ಟೇ ಅಲ್ಲದೆ ಕೆಲ ಪ್ರಾಣಿಗಳ ಮೇಲೆ ಕೂಡ ಇವುಗಳು ಮರಿಗಳನ್ನು ಹಾಕುತ್ತವೆ.

3) ಫ್ಲೀಸ್ – Fleas


ಸಹಜವಾಗಿ ಬೀದಿ ನಾಯಿಗಳ ಮೈ ಮೇಲೆ ಕಾಣಸಿಗುವ ಈ ಹುಳುಗಳು ಸಾಕಷ್ಟು ಅಪಾಯಕಾರಿಯಾದದ್ದು. ಪ್ರಾಣಿಗಳ ದೇಹದ ರಕ್ತವನ್ನು ಹೀರಿಕೊಂಡು ದಿನಕ್ಕೆ 50 ಮೊಟ್ಟೆಗಳನ್ನು ಹಾಕುತ್ತಾ ಹೋಗುವ ಈ ಕೀಟವು ತನ್ನ ಜೀವಿತಾವದಿಯಲ್ಲಿ 2000 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಪ್ಲೇಗ್ ಮತ್ತು ಅನೇಕ ಮಾರಕ ರೋಗವನ್ನು ಹರಡುವ ಸಾಮರ್ಥ್ಯ ಕೂಡ ಈ ಕೀಟಕ್ಕಿದ್ದು ಮನುಷ್ಯರಿಗೂ ಕೂಡ ಈ ಕೀಟವು ತುಂಬಾ ಅಪಾಯಕಾರಿಯಾಗಿದೆ.

4) ಕಿಸ್ಸಿಂಗ್ ತಿಗಣೆಗಳು – Kissing bugs


ಮನುಷ್ಯರ ರಕ್ತವನ್ನು ಹೀರಿ ಬದುಕುವ ಈ ಕೀಟಗಳು ರಕ್ತ ಹೀರುವ ವೇಳೆ ತಮ್ಮ ಜೊಲ್ಲನ್ನು ದೇಹದ ಒಳಗೆ ಬಿಡುತ್ತವೆ. ಇದರಿಂದ “ಚಗಸ್” ಎನ್ನುವ ರೋಗವು ಬರುತ್ತದೆ. ಈ ರೋಗ ಬಂದರೆ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ ನಂತರ ತಲೆ ನೋವು ಆಮೇಲೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚು ತಾಪಮಾನವಿದ್ದಷ್ಟು ಈ ಕೀಟಗಳು ಬೆಳೆಯುತ್ತಾ ಹೋಗುತ್ತವೆ.

5) ಸೊಳ್ಳೆಗಳು


ಪ್ರಪಂಚದಲ್ಲಿಯೇ ಅತಿ ಹೆಚ್ಚು ಅಪಾಯಕಾರಿ ಕೀಟವೆಂದರೆ ಅದು ಸೊಳ್ಳೆ. ನಮಗೆಲ್ಲ ಗೊತ್ತಿರುವ ಹಾಗೆ ಮಲೇರಿಯಾ, ಡೆಂಗೂ, ಚಿಕನ್ ಗುನ್ಯಾ ತರಹದ ರೋಗಗಳನ್ನು ಹರಡುವ ಸಾಮರ್ಥ್ಯ ಹೊಂದಿರುವ ಈ ಕೀಟವು ವರ್ಷಕ್ಕೆ 1 ಮಿಲಿಯನ್ ಜನರನ್ನು ಕೊಲ್ಲುತ್ತದೆ. ಮನುಷ್ಯನಿಗೆ ಅತ್ಯಂತ ಮಾರಕವಾಗಿರುವ ಈ ಕೀಟವು ಮುಂದೊಂದು ದಿನ ಮನುಷ್ಯ ಕುಲವನ್ನೇ ನಾಶ ಮಾಡಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಸೊಳ್ಳೆಗಳನ್ನು ಸಂಪೂರ್ಣವಾಗಿ ಭೂಮಿಯಿಂದ ಇಲ್ಲದ ಹಾಗೆ ಮಾಡಿದರೆ ಕೆಲ ಪಕ್ಷಿಗಳಿಗೆ ಆಹಾರವಿಲ್ಲದೆ ಸತ್ತು ಹೋಗುತ್ತವೆ. ಆದ್ದರಿಂದ ಸೊಲ್ಲೆಗಳನ್ನು ಸಂಪೂರ್ಣವಾಗಿ ಭೂಮಿಯಿಂದ ಇಲ್ಲದ ಹಾಗೆ ಮಾಡಲು ವಿಜ್ಞಾನಿಗಳು ವಿರೋಧ ಮಾಡುತ್ತಿದ್ದಾರೆ.


ಇವುಗಳಷ್ಟೇ ಅಲ್ಲದೆ ಪತ್ತೆ ಹಚ್ಚಲು ಸಾದ್ಯವಾಗದ ಇನ್ನೂ ಅನೇಕ ಕೀಟಗಳು ದೊಡ್ಡ ದೊಡ್ಡ ಕಾಡಿನಲ್ಲಿ ಇದ್ದು ಅವುಗಳೆನಾದರು ನಾಡಿನ ಕಡೆಗೆ ಬರತೊಡಗಿದರೆ ಮನುಷ್ಯರಿಗೆ ಉಳಿಗಾಲವಿಲ್ಲ. ಈಗಿರುವ ಕೀಟಗಳಿಂದಲೇ ಅನೇಕ ರೋಗಗಳನ್ನು ಎದುರಿಸುತ್ತಿರುವ ಮನುಷ್ಯನು ಆ ಹೊಸ ಕೀಟಗಳಿಂದ ಅನೇಕ ಮಾರಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group