“ಪ್ರೀತಿಯ ಕಥೆಗಳು” ಆಗ ತಾನೆ ಪಿಯು ವಿದ್ಯಾಭ್ಯಾಸವನ್ನು ಮುಗಿಸಿ ಡಿಗ್ರಿ ಗೆ ಕಾಲಿಟ್ಟಿರುವ ಸಮಯ, ಆ ಕ್ಷಣದಿಂದ ನಮ್ಮ ಮನಸ್ಸಿನಲ್ಲಿ ಹೊಸ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿತ್ತು. ಮೊದಲನೆಯ ದಿನ ಕಾಲೇಜಿಗೆ ಹೋಗುವ ಸಂತೋಷ ಅದಕ್ಕಾಗಿ ಬೇಗನೆ ಎದ್ದು ದೈನಂದಿನದ ಕಾರ್ಯಕ್ರಮವನ್ನು…
ಬೆಂಗಳೂರು ಎನ್ನುವ ದೊಡ್ಡ ಪಟ್ಟಣವೇ ಹಾಗೆ. ಇಲ್ಲಿ ಮನುಷ್ಯರು ಮತ್ತು ಮನುಷ್ಯತ್ವ ಎನ್ನುವುದಕ್ಕೆ ಬೆಲೆಯೇ ಇಲ್ಲ. ಎಲ್ಲಿ ನೋಡಿದರೂ ದ್ವೇಷ, ಅಸೂಹೆ ತುಂಬಿದ ಜನರೇ ಜಾಸ್ತಿ. ಪ್ರೀತಿಯಿಂದ ಯಾರಾದರು ಮಾತನಾಡಿದರೆ ಅದರ ಹಿಂದೆ ಏನಾದರು ಒಂದು ಲಾಭವನ್ನು ಇಟ್ಟುಕೊಂಡೆ ಮಾತನಾಡುತ್ತಾರೆ. ಇಂತಹ…
ಇಂದು ನಾವು ನಮ್ಮ ದೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆಂದರೆ ಅದಕ್ಕೆ ಕಾರಣ ಯಾರು ಗೊತ್ತೇ? ನಮ್ಮ ದೇಶವನ್ನು ಕಾಯುತ್ತಿರುವ ಯೋದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಶತ್ರುಗಳ ವಿರುದ್ದ ಹಗಲು ರಾತ್ರಿ ಎನ್ನದೆ ಸೆಣೆಸಾಡುತ್ತಿದ್ದಾರೆ. ಸಾವಿರಾರು ಯೋದರು ತಮ್ಮ ಕುಟುಂಬವನ್ನು ಬಿಟ್ಟು ನಮ್ಮ…
ಎಷ್ಟು ಕಣಪ್ಪ ಈ ಪೀಪಿ ಎಂದು ಕೇಳುತ್ತಾ ಬಗಲಲ್ಲಿ ಎತ್ತಿಕೊಂಡಿದ್ದ ನಮ್ ಅಣ್ಣನ ಮಗಳು ಶ್ವೇತಾಳ ಮೂಗಿನಿಂದ ಬರುತ್ತಿದ್ದ ಗೊಣ್ಣೆಯನ್ನು ವರೆಸುತ್ತ ಜೋತು ಮೋರೆ ಹಾಕಿಕೊಂಡಿದ್ದಳು ನಮ್ ಅಮ್ಮ. ಅವಳ ಜೊತೆಯಲ್ಲಿ ಹೋಗಿದ್ದ ತಪ್ಪಿಗಾಗಿ ಕೈಯಲ್ಲಿ ಅಕ್ಕನಿಗಾಗಿ ತೆಗೆದುಕೊಂಡಿದ್ದ ಬಳೆಗಳು ಹಾಗೂ…
ಪ್ರತಿದಿನದಂತೆ ಅಂದೂ ಕೂಡ ನನ್ನ ನಾಯಿಯ ಜೊತೆಗೆ ಬೆಳಗ್ಗೆ ಎದ್ದು ಮನೆಯ ಹತ್ತಿರವಿರುವ ಪಾರ್ಕಿಗೆ ವಾಯು ಸೇವನೆಗೆಂದು ತೆರಳಿದ್ದೆ. ಅದೇನೋ ಗೊತ್ತಿಲ್ಲ ಅಂದಿನ ದಿನವು ತುಂಬಾ ಸುಂದರವಾಗಿತ್ತು. ನನ್ನ ಹಾಗೆಯೇ ತುಂಬಾ ಜನರು ಬಂದಿದ್ದರು. ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ…
ಜಾತಿ, ಈ ಜಗತ್ತಿನಲ್ಲಿ ಇಂದಿಗೂ ಕಾಡುತ್ತಿರುವ ಒಂದು ದೊಡ್ಡ ಪೀಡೆ. ಯಾವ ಜಾತಿ ಆದರೇನು ನಮ್ಮೆಲ್ಲರ ಮೈಯಲ್ಲಿ ಹರಿಯುತ್ತಿರುವ ರಕ್ತವು ಒಂದೇ ತಾನೇ? ಆದರೂ ಜನರು ಮಾಡಿಕೊಂಡಿರುವ ಈ ಜಾತಿ ಅನ್ನುವ ಪೀಡೆಯು ಎಷ್ಟೋ ಜೀವನವನ್ನೇ ಹಾಳು ಮಾಡಿದೆ. ಅದರಲ್ಲಿ ನನ್ನ…
ತುಂಬಾ ಜನ ಹೇಳುವುದನ್ನು ಕೇಳಿದ್ದೇನೆ ಪ್ರೀತಿಸಿ ಮದುವೆ ಆದವರೇ ಪುಣ್ಯವಂತರು. ಅವರಷ್ಟು ಖುಷಿಯಾಗಿ ಇರೋರು ಯಾರು ಇಲ್ಲ, ಒಬ್ಬರಿಗೊಬ್ಬರು ತುಂಬಾ ಅರ್ಥ ಮಾಡಿಕೊಂಡು ಬದುಕುತ್ತಾರೆ ಅಂತ. ಪ್ರತಿ ಸಲ ನನ್ನ ಸ್ನೇಹಿತರು ಇದನ್ನು ಹೇಳುತ್ತಿದ್ದಾಗ ನನಗೂ ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮದುವೆ…
ಜಾಸ್ತಿ ಹೊತ್ತು ಓಡಾಡಲು ಆಗುತ್ತಿರಲಿಲ್ಲ, ಕೆಲವೊಮ್ಮೆ ತಲೆ ತಿರುಗುತ್ತಾ ಇತ್ತು. ಕೈ ಕಾಲುಗಳೆಲ್ಲಾ ತುಂಬಾ ನಡುಗುತ್ತಿದ್ದವು. ಎಷ್ಟೋ ಡಾಕ್ಟರ್ ಗಳಿಗೆ ತೋರಿಸಿದೆವು ಆದರೆ ಏನೂ ಪ್ರಯೋಜನ ಬರಲಿಲ್ಲ. ಇದಕ್ಕೆ ಪರಿಹಾರವೇ ಇಲ್ಲವೆಂದು ಕೊಂಡು ಎಷ್ಟೋ ಬಾರಿ ಅಳುತ್ತಾ ಕೂರುತ್ತಿದ್ದೆ. ಇದು ಯಾವ…
ಇಂದಿಗೂ ಅವಳು ಯಾಕೆ ನನ್ನ ಬಿಟ್ಟು ಹೋದಳು ಎಂದು ನನಗೆ ತಿಳಿಯುತ್ತಿಲ್ಲ, ನನಗೆ ಅನ್ನಿಸಿದ ಹಾಗೆ ನನ್ನ ಕಡೆಯಿಂದ ಯಾವ ತರಹದ ತಪ್ಪು ಆಗಿಲ್ಲ. ಕಾರಣ ಕೇಳಿದರೆ ಸರಿಯಾಗಿ ಹೇಳುತ್ತಿಲ್ಲ. ನಿಜವಾಗಿಯೂ ತಪ್ಪು ಮಾಡಿದ್ದರೆ ತಿದ್ದಿಕೊಳ್ಳುವೆ ಆದರೆ ಈ ತರಹ ಹೇಳದೆ…
ಪ್ರತಿದಿನದಂತೆ ಅಂದೂ ಕೂಡ ಬಸ್ಸಿಗೆ ಕಾಯುತ್ತಾ ಕೂತಿದ್ದೆ, ಆದರೆ ಬಸ್ಸು ಬರದ ಕಾರಣ ಅಣ್ಣ ಕೊಡಿಸಿದ್ದ ಹೊಸ ಮೊಬೈಲ್ನಿಂದ ತೆಗೆದಿದ್ದ ಫೋಟೋಗಳನ್ನು ನೋಡುತ್ತಾ ಕೂತೆ. ಅದೆಲ್ಲಿಂದಲೋ ಬಂದ ಅವಳು ನನ್ನ ಪಕ್ಕದಲ್ಲಿ ಕುಳಿತಳು. ಅಬ್ಬಾ ಎಷ್ಟೊಂದು ಬಿಸಿಲು ಎಂದು ಬಾಟಲಿಯನ್ನು ತೆಗೆದು…