ಹಾವುಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅವುಗಳ ಒಂದೇ ಒಂದು ಕಡಿತವು ನಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ನೋಡ ನೋಡುತ್ತಿದ್ದಂತೆ ವೇಗವಾಗಿ ಸರಸರನೆ ಓಡಿ ಹೋಗುವ ಹಾವುಗಳನ್ನು ನೋಡುತ್ತಿದ್ದರೆ ಎದೆಯಲ್ಲಿ ಭಯ ಮೂಡುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ನಾಗರಹಾವು ಹಾಗು ಕಾಳಿಂಗ ಸರ್ಪಗಳು ತುಂಬಾ ವಿಷಕಾರಿ ಹಾವುಗಳು. ಇದೇ ತರಹ ಅನೇಕ ಹಾವುಗಳು ಈ ಪ್ರಪಂಚದಲ್ಲಿದ್ದು ಅವುಗಳು ಕೇವಲ ವಿಷಕಾರಿ ಅಲ್ಲದೆ ಗಾತ್ರದಲ್ಲೂ ಕೂಡ ತುಂಬಾ ದೊಡ್ಡದಾಗಿವೆ. ಇಂದು ನಿಮಗೆ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ 10 ಹಾವುಗಳ ಬಗ್ಗೆ ತಿಳಿಸುತ್ತೇವೆ. ಅವುಗಳ ಗಾತ್ರ ನೋಡಿದರೆ ನಿಮಗೆ ಅಚ್ಚರಿಯಾಗುವುದರ ಜೊತೆ ಭಯವೂ ಆಗುತ್ತದೆ.

1) ಬೋವಾ ಕನ್ಸ್ತ್ರಿಕ್ತರ್ – Boa Constrictor


ಅಮೇರಿಕದ ಉತ್ತರ, ದಕ್ಷಿಣ ಹಾಗು ಮಧ್ಯಭಾಗದಲ್ಲಿ ಕಾಣಸಿಗುವ ಈ ಹಾವು ವಿಷ ತುಂಬಿದ ಹಲ್ಲನ್ನು ಹೊಂದಿಲ್ಲ. ಬರೋಬ್ಬರಿ 3.9 ಮೀಟರ್ ಉದ್ದ ಹಾಗು 45 ಕೆಜಿ ತೂಕದವರೆಗೂ ಬೆಳೆಯುವ ಈ ಹಾವು ಬಿಲ್ಲಿನ ಬಾಣದ ತರಹ ಮುಖವನ್ನು ಹೊಂದಿದೆ. ಆದರೆ ಇತ್ತೀಚೆಗೆ ಇದರ ಸಂತತಿ ನಾಶವಾಗುತ್ತಿದೆ. ಇದಕ್ಕೆ ಕಾರಣ ಇದರ ಚರ್ಮದಿಂದ ಚಪ್ಪಲಿ, ಬಟ್ಟೆ ಹಾಗು ಬ್ಯಾಗ್ ತಯಾರಿಸಲು ಉಪಯೋಗಿಸುತ್ತಿದ್ದಾರೆ.

2) ಲುಸೆಸಿಸ್ ವೆರುಗೋಸ – LUCESIS VERRUGOSA


ಬರೋಬ್ಬರಿ 3 ಮೀಟರ್ ಉದ್ದದವರೆಗೂ ಬೆಳೆಯುವ ಈ ಹಾವು ಕೂಡ ದಕ್ಷಿಣ ಅಮೇರಿಕಾದ ಪರ್ವತಗಳಲ್ಲಿ ಕಾಣಸಿಗುತ್ತದೆ. ಅತ್ಯಂತ ವಿಷಪೂರಕವಾದ ಈ ಹಾವು ಇಲಿಗಳನ್ನು ಬೇಟೆಯಾಡುತ್ತದೆ. ಇಷ್ಟೇ ಅಲ್ಲದೆ ಇದರ ಕಡಿತದಿಂದ ಇದುವರೆಗೂ ಅನೇಕ ಜನರು ಸತ್ತಿದ್ದಾರೆ.
3) Black Mamba – ಬ್ಲ್ಯಾಕ್ ಮಾಂಬಾ


ಎರಡರಿಂದ 4 ಮೀಟರ್ ಉದ್ದದವರೆಗೂ ಬೆಳೆಯುವ ಈ ಹಾವುಗಳು ಪ್ರಪಂಚದಲ್ಲಿಯೇ ಅತ್ಯಂತ ವಿಷಕಾರಿ ಹಾವುಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಕಾಳಿಂಗ ಸರ್ಪ ಬಿಟ್ಟರೆ ಹೆಚ್ಚು ವಿಷಕಾರುವ ಹಾವೆಂದರೆ ಅದು “ಬ್ಲ್ಯಾಕ್ ಮಾಂಬಾ”. ನೆಲದ ಮೇಲೆ ಹಾಗು ಮರದ ಮೇಲೂ ವಾಸಿಸುವ ಈ ಹಾವು ಒಮ್ಮೆಲೇ ಘಂಟೆಗೆ 20 ಕಿಲೋಮೀಟರ್ ವೇಗದವರೆಗೂ ತೆವಳುತ್ತ ಹೋಗುವ ಸಾಮರ್ಥ್ಯ ಹೊಂದಿದೆ.

4) ಕಾಳಿಂಗ ಸರ್ಪ – Black Cobra


ದಕ್ಷಿಣ ಭಾರತ, ಶ್ರೀಲಂಕಾ ಹಾಗು ಮಯನ್ಮಾರ್ ದೇಶದಲ್ಲಿ ಕಾಣಸಿಗುವ ಈ ಹಾವು ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ವಿಷಕಾರುವ ಹಾವು. 6 ಮೀಟರ್ ಉದ್ದ ಹಾಗು 12 ಕೆಜಿ ತೂಕದವರೆಗೂ ಬೆಳೆಯುವ ಈ ಹಾವು 2 ಮೀಟರ್ ಎತ್ತರದವರೆಗೂ ಎಗರುತ್ತದೆ. ಆನೆಗಳಂತಹ ದೊಡ್ಡ ಪ್ರಾಣಿಯನ್ನೇ ಕಡಿದು ಸಾಯಿಸುವ ಸಾಮರ್ಥ್ಯವನ್ನು ಈ ಹಾವು ಹೊಂದಿದ್ದು ಇದರ ಕಡಿತದಿಂದ ಕೇವಲ 30 ನಿಮಿಷದಲ್ಲಿ ನಮ್ಮ ಪ್ರಾಣ ಹಾರಿಹೊಗುವುದು.

5) ಹೆಬ್ಬಾವು – Indian Python


ಈ ಹೆಬ್ಬಾವು ಭಾರತ, ಪಾಕಿಸ್ತಾನ್ ಹಾಗು ನೇಪಾಳದಲ್ಲಿ ಕಾಣಸಿಗುತ್ತದೆ. 5.7 ಮೀಟರ್ ಉದ್ದ 90 ಕೆಜಿ ತೂಕದವರೆಗೂ ಬೆಳೆಯುವ ಈ ಹಾವು ಪಕ್ಷಿಗಳನ್ನು, ಇಲಿಗಳನ್ನು ಹಾಗು ಕೆಲವೊಮ್ಮೆ ದೊಡ್ಡ ಪ್ರಾಣಿಗಳನ್ನು ಕೂಡ ನುಂಗುವಷ್ಟು ಸಾಮರ್ಥ್ಯ ಹೊಂದಿದೆ. ಹೆಣ್ಣು ಹೆಬ್ಬಾವುಗಳು ಒಮ್ಮೆಲೇ 107 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು ಹುಟ್ಟುತ್ತಲೇ ಮರಿ ಹೆಬ್ಬಾವುಗಳು 0.48 ಮೀಟರ್ ಉದ್ದದವರೆಗೂ ಬೆಳೆಯುತ್ತವೆ.

6) ಬರ್ಮೀಸ್ – Burmese Python


6 ಮೀಟರ್ ಉದ್ದ ಹಾಗು 82 ಕೆಜಿ ತೂಕದವರೆಗೂ ಬೆಳೆಯುವ ಸಾಮರ್ಥ್ಯ ಹೊಂದಿರುವ ಈ ಹಾವು ನಾನಾ ದೇಶಗಳಲ್ಲಿ ಕಾಣಸಿಗುತ್ತಿದ್ದವು. ಆದರೆ ಕಾಲಕಳೆದಂತೆ ಇದರ ಸಂತತಿ ನಾಶವಾಗುತ್ತ ಹೋಗುತ್ತಿದೆ. ಮೊಸಳೆಗಳನ್ನು ಬೇಟೆ ಆಡುವ ಸಾಮರ್ಥ್ಯ ಹೊಂದಿರುವ ಈ ಹಾವುಗಳು ಬಲಶಾಲಿ ಹಾವುಗಳು ಕೂಡ ಹೌದು. ಇದರ ರಕ್ತದಲ್ಲಿ ಮನುಷ್ಯನ ಹೃದಯ ಸಂಬಂಧಿ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿರುವುದರಿಂದ ಇವುಗಳ ಬೇಟೆ ಹೆಚ್ಚಾಗಿದೆ.

7) ಆಫ್ರಿಕನ್ ರಾಕ್ ಹೆಬ್ಬಾವು – African Rock Python


ಆಫ್ರಿಕಾದಲ್ಲಿ ಕಾಣಸಿಗುವ ಈ ಹಾವು 7 ಮೀಟರ್ ಉದ್ದದವರೆಗೂ ಬೆಳೆಯುತ್ತದೆ. ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ಹಾವುಗಳ ಪಟ್ಟಿಯಲ್ಲಿ ಈ ಹಾವು ಕೂಡ ಇದೆ. ಮೊಸಳೆ, ಹಂದಿ, ಆಡುಗಳನ್ನು ನುಂಗುವಂತಹ ಸಾಮರ್ಥ್ಯ ಈ ಹಾವುಗಳಿಗಿದ್ದು ಹೆಚ್ಚು ಹಸಿವಾಗಿದ್ದರೆ ಇನ್ನೂ ದೊಡ್ಡ ಪ್ರಾಣಿಗಳನ್ನು ಕೂಡ ನುಂಗುವ ಶಕ್ತಿ ಇವುಗಳಿಗಿದೆ.

8) ಅಮೆತಿಸ್ಟ್ ಹೆಬ್ಬಾವು – Amethyst Python


ಆಸ್ಟ್ರೇಲಿಯಾದಲ್ಲಿ ಕಾಣಸಿಗುವ ಈ ಹೆಬ್ಬಾವು 7 ಮೀಟರ್ ಉದ್ದದವರೆಗೂ ಬೆಳೆಯುತ್ತದೆ. ಭೂಮಿ ಮತ್ತು ನೀರು ಎರಡರ ಮೇಲೂ ವಾಸಿಸುವ ಈ ಹಾವು ನದಿಯ ಬಳಿ ನೀರು ಕುಡಿಯಲು ಬರುವ ಜಿಂಕೆಗಳನ್ನು ಬೇಟೆ ಆಡಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುತ್ತದೆ.

9) ಹಸಿರು ಆನಕೊಂಡ – Green Anaconda


ಅಮೆಜಾನ್ ನದಿಯಲ್ಲಿ ವಾಸಿಸುವ ಈ ಹಾವುಗಳು 7 ಮೀಟರ್ ಉದ್ದದವರೆಗೂ ಬೆಳೆಯುತ್ತದೆ. ಈ ಹಾವುಗಳು ಕೂಡ ಭೂಮಿ ಮತ್ತು ನೀರು ಎರಡರ ಮೇಲೂ ವಾಸಿಸುತ್ತವೆ. ಹೆಣ್ಣು ಆನಕೊಂಡ ಹಾವುಗಳು 7 ತಿಂಗಳುಗಳವರೆಗೂ ಗರ್ಭ ದರಿಸುತ್ತವೆ. ಈ ಸಮಯದಲ್ಲಿ ಅವುಗಳು ಆಹಾರ ಸೇವಿಸುವುದಿಲ್ಲ.

10) ನಿಯಮಿತ ಹೆಬ್ಬಾವು – RETICULATED PYTHON


ಈ ಹಾವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಹಾವು ಎಂದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಬರೋಬ್ಬರಿ 10 ಮೀಟರ್ ಉದ್ದ 160 ಕೆಜಿ ತೂಕದವರೆಗೂ ಈ ಹಾವುಗಳು ಬೆಳೆಯುತ್ತವೆ. ಹಸು, ಜಿಂಕೆ, ಹಂದಿ ಹೀಗೆ ಅನೇಕ ಪ್ರಾಣಿಗಳನ್ನು ಬೇಟೆ ಆಡುವ ಶಕ್ತಿ ಹೊಂದಿರುವ ಈ ಹಾವು ಮರಗಳನ್ನು ಕೂಡ ಏರಿ ಕೋತಿ ಹಾಗು ಪಕ್ಷಿಗಳನ್ನು ಬೇಟೆ ಆಡುತ್ತದೆ. ಇದಷ್ಟೇ ಅಲ್ಲದೆ ಮನುಷ್ಯರನ್ನು ಕೂಡ ನುಂಗುವ ಸಾಮರ್ಥ್ಯ ಇದಕ್ಕಿದೆ

Follow Karunadu Today for more Interesting Facts & Stories. 

Click here to Join Our Whatsapp Group