
ಪ್ರಪಂಚದೆಲ್ಲೆಡೆ ಮರಗಳನ್ನು ಕಡಿಯುತ್ತಿರುವ ಸುದ್ದಿಗಳನ್ನು ನೀವು ಪ್ರತಿ ದಿನ ಕೇಳಿಯೇತಿರುತ್ತೀರ.ಅಭಿವೃದ್ದಿ ಎನ್ನುವ ಹೆಸರಿನಲ್ಲಿ ಅನೇಕ ಮರಗಳನ್ನು ಕಡಿಯುತ್ತಿರುವ ಮನುಷ್ಯನು ಅದೆಷ್ಟೋ ವನ್ಯ ಜೀವಿಗಳಿಗೆ ಆಶ್ರಯವಿಲ್ಲದ ಹಾಗೆ ಮಾಡಿದ್ದಾನೆ. ಆದರೆ ಜಗತ್ತಿನಲ್ಲಿ ಕೆಲವು ಅರಣ್ಯಗಳು ಇದ್ದು ಮನುಷ್ಯನು ಅದೆಷ್ಟೇ ಮರಗಳನ್ನು ಕಡಿದರು ಕೂಡ ಆ ಅರಣ್ಯ ಪ್ರದೇಶಗಳು ತಮ್ಮ ಶ್ರೀಮಂತಿಕೆಯನ್ನು ಹಾಗೆಯೇ ಉಳಿಸಿಕೊಳ್ಳುವುದಲ್ಲದೆ ಸಾವಿರಾರು ಜೀವಿಗಳಿಗೆ ಆಶ್ರಯ ನೀಡಿವೆ. ಇಂದು ನಿಮಗೆ ಅಂತಹ 10 ದಟ್ಟ ಅರಣ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.
1. ಟೈಗ ಅರಣ್ಯ
ಏಷ್ಯಾ ಖಂಡ, ಯುರೋಪ್ ಮತ್ತು ಉತ್ತರ ಅಮೇರಿಕ ಖಂಡದಲ್ಲಿ ಹಬ್ಬಿರುವ ಈ ಕಾಡು ಭಾರತ, ಚೀನಾ ಮತ್ತು ಬಾಂಗ್ಲಾದೇಶ ದೇಶಗಳನ್ನು ಸೇರಿಸಿದರೆ ಎಷ್ಟು ಜಾಗವಾಗುತ್ತದೆ ಅಷ್ಟು ವಿಸ್ತಾರವಾಗಿದೆ. 12 ಲಕ್ಷ ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಅರಣ್ಯ ಪ್ರದೇಶವು ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಅರಣ್ಯವಾಗಿದೆ.
2. ಅಮೆಜಾನ್ ಅರಣ್ಯ
ಪೆರು, ಬ್ರೆಜಿಲ್, ಅರ್ಜೆಂಟೈನ, ಕೊಲಂಬಿಯಾ, ಬೊಲಿವಿಯ, ಯುಕೆಡಾರ್, ಸುರಿನಮ್,ಘಯಾನ ಮತ್ತು ವೆನಿಜುವೆಲ ದೇಶಗಳಲ್ಲಿ ಹಬ್ಬಿರುವ ಈ ದಟ್ಟ ಅರಣ್ಯವು ಬರೋಬ್ಬರಿ 70 ಲಕ್ಷ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿದೆ. ಭೂಮಿಯ ಶ್ವಾಸಕೋಶ ಎಂದೇ ಬಿಂಬಿಸುವ ಈ ಅರಣ್ಯ ಪ್ರದೇಶದಲ್ಲಿ ಭೂಮಿಯ ಶೇಕಡ 60 ರಷ್ಟು ವನ್ಯ ಜೀವಿಗಳು ವಾಸಿಸುತ್ತಿವೆ. ಲೆಕ್ಕಕ್ಕೆ ಸಿಗದಷ್ಟು ಜೀವರಾಶಿಗಳು ಇದರಲ್ಲಿದ್ದು ಭೂಮಿಯ ಮೇಲಿನ ವಾತಾವರಣವನ್ನು ಹತೋಟಿಗೆ ತರುವಲ್ಲಿ ಈ ಅರಣ್ಯದ ಪಾತ್ರ ಬಹು ಮುಖ್ಯವಾಗಿದೆ.
3. ಕಾಂಗೋ ಅರಣ್ಯ
ಆಫ್ರಿಕಾ ಖಂಡದ ಕಾಂಗೋ ದೇಶದಲ್ಲಿರುವ ಈ ಅರಣ್ಯ ಪ್ರದೇಶವು 2,023,428 ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿದೆ, ಅಂದರೆ ಸೌದಿ ಅರೇಬಿಯಾ ದೇಶದಷ್ಟು ದೊಡ್ಡದಿದೆ ಈ ಕಾಡು. ಈ ಅರಣ್ಯವು ಪ್ರಪಂಚದ ಹವಾಮಾನವನ್ನು ಸಮತೋಲನ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಸಾವಿರಕ್ಕಿಂತ ಹೆಚ್ಚು ವಿಧವಿಧವಾದ ಪಕ್ಷಿಗಳ ಜಾತಿ, 500 ಕ್ಕಿಂತ ಹೆಚ್ಚು ಮೀನಿನ ಜಾತಿಗಳು ಮತ್ತು 500 ಕ್ಕಿಂತ ಹೆಚ್ಚು ಸಸ್ತನಿಗಳು ಇಲ್ಲಿ ವಾಸಿಸುತ್ತಿವೆ.
4. ವಾಲ್ಡಿವಿಯನ್ ಅರಣ್ಯ
2,48,100 ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಅರಣ್ಯ ಪ್ರದೇಶವು ಅದೆಷ್ಟು ದೊಡ್ಡದಿದೆಯೆಂದರೆ “ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್” ಎರಡು ದೇಶಗಳನ್ನು ಒಟ್ಟುಗೂಡಿಸಿದಾಗ ಅದೆಷ್ಟು ಜಾಗವಾಗುತ್ತದೆ ಅಷ್ಟು ದೊಡ್ಡದಿದೆ ಈ ಅರಣ್ಯ. ಅರ್ಜೆಂಟೈನ ಮತ್ತು ಚಿಲಿ ದೇಶಗಳವರೆಗು ಹಬ್ಬಿರುವ ಈ ದಟ್ಟ ಅರಣ್ಯದಲ್ಲಿ ಬಿದುರಿನ ಮರ ಮತ್ತು ಬೇಲಿಗಳು ಹೆಚ್ಚಾಗಿ ಕಾಣಸಿಗುತ್ತವೆ.
5. ಟೊಂಗಾಸ್ ಅರಣ್ಯ
ಇದು ಉತ್ತರ ಅಮೆರಿಕದ ಅತ್ಯಂತ ದೊಡ್ಡ ಅರಣ್ಯ, ಅಮೇರಿಕದ ಆಲಾಸ್ಕ ಬಳಿಯಿರುವ ಈ ಅರಣ್ಯ ಪ್ರದೇಶವು ಶ್ರೀಲಂಕಾ ದೇಶದಷ್ಟು ದೊಡ್ಡದಿದೆ. 68,062 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಈ ಅರಣ್ಯ ಪ್ರದೇಶದಲ್ಲಿ ಅಪರೂಪದ ವನ್ಯ ಜೀವಿಗಳು ವಾಸಿಸುತ್ತಿವೆ. ಇದನ್ನು ಅಮೇರಿಕದ ಹೆಮ್ಮೆಯ ಕಾಡು ಎಂದು ಕರೆಯಲಾಗುತ್ತದೆ.
6. ಸುಂದರ್ಭನ್ ಅರಣ್ಯ
ಬರೋಬ್ಬರಿ 10 ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಈ ಅರಣ್ಯವು ಬಾಂಗ್ಲಾದೇಶದ ಶೇಕಡ 60 ರಷ್ಟು ಭಾಗದಲ್ಲಿ ಹಬ್ಬಿದ್ದು ಭಾರತದಲ್ಲಿ ಕೂಡ ಶೇಕಡ 40 ರಷ್ಟು ಇದು ಹಬ್ಬಿದೆ. ಭಾರತದಲ್ಲಿ ಈ ಕಾಡನ್ನು “ರಾಷ್ಟ್ರೀಯ ಉದ್ಯಾನವನ” ಎಂದು ಸಂರಕ್ಷಿಸಲಾಗಿದ್ದು ಇದರ ಒಳಗೆ ಅಪರೂಪದ “ಬಂಗಾಳದ ಹುಲಿಗಳನ್ನು” ಹೆಚ್ಚು ಕಾಣಬಹುದು.
7. ಟ್ರಾಪಿಕಲ್ ಅರಣ್ಯ
ಚೀನಾದ “ಯುನ್ನಾನ್ ಪ್ರಾವಿನೆನ್ಸ್” ನಲ್ಲಿರುವ ಈ ಅರಣ್ಯವು 2402 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ. ಇದು ಪ್ರಪಂಚದಲ್ಲಿ ಸುರಕ್ಷಿತವಾಗಿ ಕಾಪಾಡಲಾಗಿರುವ “ಉಷ್ಣವಲಯದ ಮಳೆಕಾಡುಗಳ” ಪಟ್ಟಿಯಲ್ಲಿ ಒಂದಾಗಿದೆ. ಈ ಕಾಡು ಪ್ರಪಂಚಕ್ಕೆ ಬೇಕಾಗಿರುವ ಅತ್ಯಮೂಲ್ಯ ಕಾಡುಗಳಲ್ಲಿ ಒಂದಾಗಿದೆ. ಏಕೆಂದರೆ ಇಲ್ಲಿ ಭೂಮಿಯ ಮೇಲೆ ಎಲ್ಲೂ ಸಿಗದ 3500ಕ್ಕಿಂತ ಹೆಚ್ಚು ಜೀವರಾಶಿಗಳು ವಾಸಿಸುತ್ತಿವೆ.
8. ಡೈನ್ ಟ್ರೀ ಅರಣ್ಯ
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡಿನ ಡೈನ್ ಟ್ರೀ ನದಿಯುದ್ದಕ್ಕೂ ಹಬ್ಬಿರುವ ಈ ಅರಣ್ಯ ಪ್ರದೇಶವು ಬರೋಬ್ಬರಿ 1200 ಚದುರ ಕಿಲೋಮೀಟರ್ ವ್ಯಾಪ್ತಿಯವರೆಗು ಹಬ್ಬಿದೆ. ಅನೇಕ ಭಾವಲಿಗಳು, ಚಿಟ್ಟೆಗಳು, ಹಾವುಗಳಿಗೆ ವಾಸಸ್ಥಾನವಾಗಿರುವ ಈ ಅರಣ್ಯ ಪ್ರದೇಶದಲ್ಲಿ ಪ್ರಪಂಚದಲ್ಲಿ ಬೇರೆ ಯಾವ ಅರಣ್ಯದಲ್ಲೂ ಕಾಣಸಿಗದ ಕೀಟಗಳನ್ನು ಕಾಣಬಹುದಾಗಿದೆ.
9. ಕಿನಬಲು ಅರಣ್ಯ
ಮಲೇಷ್ಯ ದೇಶದಲ್ಲಿರುವ ಈ ಅರಣ್ಯವು 754 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಹಬ್ಬಿದೆ, ಅಂದರೆ ಸಿಂಗಾಪೂರ್ ದೇಶಕ್ಕಿಂತ ಹೆಚ್ಚು ಜಾಗದಲ್ಲಿ ಈ ಅರಣ್ಯ ಪ್ರದೇಶ ಹಬ್ಬಿದೆ. “ಮೌಂಟ್ ಕಿನಬಲು” ಜ್ವಾಲಾಮುಖಿ ಪರ್ವತವನ್ನು ಸುತ್ತುವರೆದಿರುವ ಈ ಅರಣ್ಯ ಪ್ರದೇಶದಲ್ಲಿ 4500 ಕ್ಕಿಂತ ಹೆಚ್ಚು ಜೀವರಾಶಿಗಳು ನೆಲೆಸಿವೆ. ಪ್ರಪಂಚದಲ್ಲಿರುವ ಅತ್ಯಂತ ಪ್ರಮುಖ “ಜೈವಿಕ ತಾಣಗಳಲ್ಲಿ” ಒಂದಾಗಿರುವ ಈ ಅರಣ್ಯವು ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ತಾಣವಾಗಿದೆ.
10. ಮಿಂಡೋ ನಂಬಿಲ್ಲೋ ಅರಣ್ಯ
ದಕ್ಷಿಣ ಅಮೇರಿಕ ಭಾಗದ ಯುಕೆಡಾರ್ ದೇಶದ ಬಳಿಯಿರುವ ಈ ದಟ್ಟ ಅರಣ್ಯವು 268 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದು ಅಮೆಜಾನ್ ಕಾಡಿನಿಂದ ಕೊಂಚ ದೊರದಲ್ಲಿದೆ. ಈ ಅರಣ್ಯದಲ್ಲಿ ಸದಾ ಕಾಲ ಮಳೆಯಾಗುತ್ತಿರುತ್ತದೆ, ಆದ್ದರಿಂದ ಇಲ್ಲಿಯ ತಾಪಮಾನವು ಕಡಿಮೆಯಿರುತ್ತದೆ. 1600 ಬಗೆಯ ವಿವಿಧ ಪಕ್ಷಿಗಳು, ಕಪ್ಪೆಗಳು ಮತ್ತು ಅನೇಕ ಪ್ರಾಣಿಗಳು ಇಲ್ಲಿ ವಾಸವಾಗಿವೆ.
Follow Karunadu Today for more Interesting Facts & Stories.
Click here to Join Our Whatsapp Group