ಪಕ್ಷಿಗಳೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ. ಚಿಲಿ ಪಿಲಿ ಎಂದು ಸದ್ದು ಮಾಡುತ್ತಾ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರುವ ಬಣ್ಣ ಬಣ್ಣದ ಪಕ್ಷಿಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ಪಕ್ಷಿಗಳಿದ್ದು ಅವುಗಳನ್ನು ನೋಡುತ್ತಿದ್ದಾರೆ ಭಯವಾಗುತ್ತದೆ. ಏಕೆಂದರೆ ಅವುಗಳ ಆಕಾರ ಮತ್ತು ಗಾತ್ರ ಆ ರೀತಿ ಇದೆ. ಬನ್ನಿ ಇಂದು ನಿಮಗೆ ಆ ಬೃಹತ್ ಪಕ್ಷಿಗಳ ಬಗ್ಗೆ ತಿಳಿಸಿಕೊಡುತ್ತೇವೆ.

1) ಡಾಲ್ಮೀಷಿಯನ್ ಪೆಲಿಕನ್ – Dalmatian Pelican


ರಷ್ಯಾ, ಭಾರತ ಮತ್ತು ಚೀನಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಪಕ್ಷಿಯು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರೆಕ್ಕೆಯನ್ನು ಹೊಂದಿರುವ ಪಕ್ಷಿ. ಇದರ ತೂಕವು 15ಕೆಜಿ ಇದ್ದು ಇದರ ರೆಕ್ಕೆಯು 3.35 ಮೀಟರ್ ಉದ್ದವಿದೆ. ಇಷ್ಟೊಂದು ತೂಕವನ್ನು ಇಟ್ಟುಕೊಂಡು ಹಾರಾಡುವ ಏಕೈಕ ಪಕ್ಷಿ ಇದಾಗಿದೆ.

2) ಫಿಲಿಪೈನ್ ಹದ್ದು – Philippine eagle


ಇದು ಪ್ರಪಂಚದ ಅತ್ಯಂತ ದೊಡ್ಡ ಹದ್ದು. ಬರೋಬ್ಬರಿ 60 ವರ್ಷಗಳವರೆಗು ಬದುಕುವ ಈ ಹದ್ದು ಫಿಲಿಪೈನ್ಸ್ ದೇಶದ ಕಾಡುಗಳಲ್ಲಿ ಕಾಣಸಿಗುತ್ತದೆ. 102 ಸೆಂಟಿಮೀಟರ್ ಉದ್ದದವರೆಗು ಬೆಳೆಯುವ ಈ ಹದ್ದುಗಳ ತೂಕವು 8 ಕೆಜಿ ತೂಕದವರೆಗು ಇರುತ್ತದೆ. ಕಾಡಿನಲ್ಲಿ ಇರುವ ಮಂಗಗಳ ಮೇಲೆ ದಾಳಿ ಮಾಡಿ ತಿಂದು ಬದುಕುವ ಈ ಹದ್ದು ಇತ್ತೀಚಿನ ದಿನಗಳಲ್ಲಿ ಅವನತಿಯ ಅಂಚಿನಲ್ಲಿದೆ.

3) ಟ್ರಂಪಟೀರ್ ಬಾತುಕೋಳಿ – Trumpeter swan


ಉತ್ತರ ಅಮೆರಿಕ ಭಾಗದಲ್ಲಿ ಕಾಣಸಿಗುವ ಈ ಬಾತುಕೋಳಿಯ ಕುತ್ತಿಗೆಯು ತುಂಬಾ ಉದ್ದವಿದ್ದು ಇದರ ರೆಕ್ಕೆಯು 3 ಮೀಟರ್ ವರೆಗು ಬೆಳೆಯುತ್ತದೆ. 14 ಕೆಜಿ ತೂಕದವರೆಗು ಬೆಳೆಯುವ ಈ ಪಕ್ಷಿಯ ಸಂಖ್ಯೆಯು 1933 ರಲ್ಲಿ ಕೇವಲ 70 ಇದ್ದವು. ಆದರೆ 2010 ರಲ್ಲಿ 46 ಸಾವಿರ ಆಗಿದೆ.

4) ರಿಯ ಪಕ್ಷಿ – Greater Rhea


ದಕ್ಷಿಣ ಅಮೆರಿಕದ “ಅರ್ಜೆಂಟೈನಾ, ಬ್ರೆಜಿಲ್, ಪೇರುಗ್ವೆ ಮತ್ತು ಉರುಗ್ವೆ ದೇಶದಲ್ಲಿ ಕಾಣಸಿಗುವ ಈ ಪಕ್ಷಿಗೆ ಹಾರಲು ಬರುವುದಿಲ್ಲ. 27 ಕೆಜಿ ತೂಕದವರೆಗು ಬೆಳೆಯುವ ಈ ಪಕ್ಷಿಯು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ.

5) ಇಮು – Emu


ಪ್ರಪಂಚದಲ್ಲಿ ಅತ್ಯಂತ ಎತ್ತರದ ಪಕ್ಷಿಗಳ ಸಾಲಲ್ಲಿ ಈ ಪಕ್ಷಿಯು ಎರಡನೆಯ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದಲ್ಲಿ ಕಾಣಸಿಗುವ ಈ ಪಕ್ಷಿಯು 1.9 ಮೀಟರ್ ಎತ್ತರದವರೆಗು ಬೆಳೆಯುತ್ತದೆ. ರಿಯಾ ಪಕ್ಷಿಯ ತರಹ ಈ ಪಕ್ಷಿಯು ಕೂಡ ಗಂಟೆಗೆ 50 ಕಿಲೋಮೀಟರ್ ವೇಗದವರೆಗು ಓಡುತ್ತದೆ.

6) ಕ್ಯಾಸ್ವಾರಿ – southern cassowary


ಪ್ರಪಂಚದಲ್ಲಿ ಅತ್ಯಂತ ತೂಕವನ್ನು ಹೊಂದಿರುವ ಪಕ್ಷಿಗಳ ಸಾಲಲ್ಲಿ ಈ ಪಕ್ಷಿಯು ಎರಡನೆಯ ಸ್ಥಾನದಲ್ಲಿದೆ. ಇಂಡೋನೇಷ್ಯಾ ದೇಶದ ಕಾಡುಗಳಲ್ಲಿ ಕಾಣಸಿಗುವ ಈ ಪಕ್ಷಿಯ ಎತ್ತರ 170 ರಿಂದ 190 ಸೆಂಟಿಮೀಟರ್ ಹಾಗು ತೂಕವು 83 ಕೆಜಿಯವರೆಗು ಇರುತ್ತದೆ.

7) ಉಷ್ಟ್ರ ಪಕ್ಷಿ’ – ostrich


ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ. ಆಫ್ರಿಕಾದ ಕಾಡುಗಳಲ್ಲಿ ಕಾಣಸಿಗುವ ಈ ಪಕ್ಷಿಯು ಬರೋಬ್ಬರಿ 2.8 ಮೀಟರ್ ಎತ್ತರ ಹಾಗು 120 ಕೆಜಿ ತೂಕವಿರುತ್ತದೆ. ಗಂಟೆಗೆ 70 ಕಿಲೋಮೀಟರ್ ವೇಗದವರೆಗು ಓಡುವ ಸಾಮರ್ಥ್ಯ ಈ ಪಕ್ಷಿಗಿದ್ದು ಇದರ ಕಾಲುಗಳು ಅದೆಷ್ಟು ಬಲಿಷ್ಠವಾಗಿರುತ್ತವೆ ಎಂದರೆ ಒಂದೇ ಒಂದು ಬಾರಿ ಇದು ಒದ್ದರೆ ಸಾಕು ಸಿಂಹದಂತಹ ಪ್ರಾಣಿ ಕೂಡ ಸಾಯುತ್ತದೆ.


ಸಾವಿರಾರು ವರ್ಷಗಳ ಹಿಂದೆ ಇವುಗಳಷ್ಟೇ ಅಲ್ಲದೆ ಅನೇಕ ಬೃಹತ್ ಪಕ್ಷಿಗಳು ಈ ಭೂಮಿಯ ಮೇಲೆ ವಾಸವಿದ್ದವು.ದೊಡ್ಡ ದೊಡ್ಡ ಪ್ರಾಣಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಆ ಪಕ್ಷಿಗಳಿಗಿದ್ದವು. ಈಗಿರುವ ಪಕ್ಷಿಗಳನ್ನೇ ಕಂಡು ಹೆದರುವ ನಾವು ಇನ್ನು ಆ ಬೃಹತ್ ಪಕ್ಷಿಗಳು ಇದ್ದಿದ್ದರೆ ಅದೆಷ್ಟು ಹೆದರುತ್ತಿದೆವು ಎಂದು ನೀವೇ ಯೋಚಿಸಿ.

Follow Karunadu Today for more Interesting Facts & Stories. 

Click here to Join Our Whatsapp Group