1) ಉದ್ಯಾನವನಗಳೆಂದರೆ ಸಾಕು ಸುಂದರವಾದ ಹೂವಿನ ಗಿಡಗಳು ಮತ್ತು ಮಕ್ಕಳಿಗೆ ಆಟವಾಡಲು ಸ್ಥಳಗಳಿರುತ್ತದೆ. ಕುಟುಂಬದ ಜೊತೆಗೆ ಅಲ್ಲಿ ಹೋಗಿ ಕೆಲ ಸಮಯ ಕಳೆಯಲು ಅನೇಕ ಜನರು ಇಷ್ಟ ಪಡುತ್ತಾರೆ. ಆದರೆ ಇಂಗ್ಲೆಂಡ್ ದೇಶದಲ್ಲಿ “poison garden” ಎನ್ನುವ ಉದ್ಯಾನವನವಿದ್ದು ಅಕಸ್ಮಾತ್ ನೀವು ಅಲ್ಲಿಗೆ ಹೋದರೆ ಭಯದಿಂದಲೇ ಹೋಗಬೇಕಾಗುತ್ತದೆ. ಏಕೆಂದರೆ ಇದರ ಒಳಗೆ ವಿಷಪೂರಿತ ಗಿಡಗಳಿದ್ದು ಅಕಸ್ಮಾತ್ ಅಪ್ಪಿತಪ್ಪಿ ಆ ಗಿಡಗಳನ್ನು ಮುಟ್ಟಲು ಅಥವ ಅವುಗಳು ಬಳಿ ಹೋಗಿ ವಾಸನೆಗ್ರಹಿಸಲು ಪ್ರಯತ್ನಿಸಿದರೆ ಸತ್ತು ಹೋಗುತ್ತೀರಿ. ಆದ್ದರಿಂದ ಈ ವಿಷಪೂರಿತ ಗಿಡಗಳನ್ನು ಯಾರೂ ಮುಟ್ಟಬಾರದೆಂದು ಅವುಗಳ ಸುತ್ತ ಬೇಲಿಗಳನ್ನು ಹಾಕಿದ್ದಾರೆ.

2) ಮಹಾರಾಷ್ಟರದ buldhana ಜಿಲ್ಲೆಯಲ್ಲಿರುವ lonar ಎನ್ನುವ ಸ್ಥಳದ ಹತ್ತಿರ 50 ಸಾವಿರ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಬೃಹತ್ ಕ್ಷುದ್ರ ಗ್ರಹದಿಂದ ಒಂದು ಸರೋವರ ಸೃಷ್ಟಿಯಾಗಿದೆ. ಇದನ್ನು Lonar crater lake ಎಂದು ಕರೆಯುತ್ತಾರೆ. ಈ ಸರೋವರದ ಒಳಗೆ ಉಪ್ಪು ನೀರು ಹಾಗು ಸಿಹಿ ನೀರು ಎರಡೂ ಇದೆ ಹಾಗು ಹೆಚ್ಚು alkaline ಅಂಶವಿದೆ. ಈ ಸರೋವರವು ಅಂಡಾಕಾರದಲ್ಲಿದ್ದು ಇದನ್ನು ನೋಡಿ ಆ ಕ್ಷುದ್ರ ಗ್ರಹದ ತುಂಡು 35 ರಿಂದ 40 ಡಿಗ್ರೀ ಕೋನದಲ್ಲಿ ಭೂಮಿಗೆ ಬಂದು ಅಪ್ಪಳಿಸಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಇನ್ನು ಈ ಸರೋವರದ ದಂಡೆಯ ಮೇಲೆ ಸಿಗುವ ಮರಳಿನಲ್ಲಿ magnetic dust ಅಂಶವಿದೆ.
3) ಇದೇ ನೋಡಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡುವ ಸೂಪರ್ ಕಂಪ್ಯೂಟರ್. ಇದರ ಹೆಸರು “SUMMIT”. ಪ್ರಸಿದ್ದ ಐ.ಬಿ.ಎಂ ಕಂಪನಿಯ ಜೊತೆಗೂಡಿದ ಅನೇಕ ಕಂಪನಿಗಳು ಇದನ್ನು ನಿರ್ಮಿಸಿದ್ದು ಇದನ್ನು ಅಮೆರಿಕದ “Oak ridge national laboratory” ಒಳಗೆ ಇದನ್ನು ಇರಿಸಲಾಗಿದೆ. ಈ ಕಂಪ್ಯೂಟರ್ 1 ನಿಮಿಷದಲ್ಲಿ ಮಾಡುವ ಕೆಲಸವನ್ನು ಮನುಷ್ಯರು ಮಾಡಬೇಕೆಂದರೆ ಬರೋಬ್ಬರಿ 32 ವರ್ಷ ಶ್ರಮಿಸಬೇಕು.

4) ಪ್ರಪಂಚದಲ್ಲಿ ಅನೇಕ ವಿಚಿತ್ರವಾದ ಖಾಯಿಲೆಗಳಿವೆ. ಕೆಲವು ಖಾಯಿಲೆಗಳಿಗೆ ಔಷದಿ ಇದ್ದರೆ ಮತ್ತೆ ಕೆಲವು ಖಾಯಿಲೆಗಳಿಗೆ ಔಷದಿಯೇ ಇಲ್ಲ. ಮತ್ತೆ ಕೆಲವು ಖಾಯಿಲೆಗಳಿಗೆ ಔಷದಿ ಇದ್ದರೂ ಕೂಡ ಉಪಯೋಗವಿಲ್ಲ. ಏಕೆಂದರೆ ಆ ಔಷದಿಗಳನ್ನು ಕೊಂಡುಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಶ್ರೀಮಂತರಾದವರು ಹೇಗೋ ಆ ಔಷದಿಗಳನ್ನು ಕೊಂಡುಕೊಳ್ಳುತ್ತಾರೆ. ಆದರೆ ಬಡವರು ಕೊಂಡುಕೊಳ್ಳಲಾಗದೆ ಕಷ್ಟ ಪಡುತ್ತಾರೆ. ಅಂದಹಾಗೆ ಜಗತ್ತಿನಲ್ಲಿ ಒಂದು ಔಷದಿಯಿದೆ. ಅದನ್ನು ಕೊಂಡುಕೊಳ್ಳಬೇಕೆಂದರೆ ಬರೋಬ್ಬರಿ 14 ಕೋಟಿ ಖರ್ಚು ಮಾಡಬೇಕು. ಆ ಔಷದಿಯ ಹೆಸರು “zolgensma”. ಅಂದಹಾಗೆ ಇದನ್ನು ಮನುಷ್ಯನ ನರಗಳಲ್ಲಿ ಕಾಣಿಸಿಕೊಳ್ಳುವ ವಿಚಿತ್ರವಾದ ಖಾಯಿಲೆಗೆ ಬಳಸುತ್ತಾರೆ.

5) ಮನುಷ್ಯನಿಗೆ ಹೇಗೆ ಕೈಕಾಲುಗಳಿವೆ ಅದೇ ರೀತಿ ಪಕ್ಷಿಗಳಿಗೆ ರೆಕ್ಕೆಗಳಿವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಪಕ್ಷಿಗಳು ರೆಕ್ಕೆಗಳನ್ನು ಬಳಸಿಕೊಳ್ಳುತ್ತವೆ. ಇದು ನಮಗೆಲ್ಲ ತಿಳಿದ ವಿಚಾರವೆ. ಆದರೆ ರೆಕ್ಕೆಗಳೆ ಇಲ್ಲದ ಪಕ್ಷಿಯಾದ ಪೆಂಗ್ವಿನ್ ನೀರಿನಲ್ಲಿ ಈಜುತ್ತದೆ. ಹೀಗೆ ಈಜುವ ಪೆಂಗ್ವಿನ್ ನೀರಿನಿಂದ ಒಮ್ಮೆಲೇ ಭೂಮಿಗೆ ಅದು ಹೇಗೆ ಜಿಗಿಯುತ್ತದೆ ಗೊತ್ತೆ? ಇದನ್ನು ನೋಡಿ ನಿಮಗೆ ತಿಳಿಯುತ್ತದೆ.

6) ಸಮುದ್ರವೆಂದರೆ ಸಾಕು ಕೆಲವರಿಗೆ ಬಹಳ ಇಷ್ಟ. ಕೆಲವರು ಸಮುದ್ರದ ನೀರಿನ ಒಳಗೆ ಇಳಿಯದೆ ದಂಡೆಯ ಮೇಲೆಯೇ ಆಟವಾಡಲು ಇಷ್ಟಪಟ್ಟರೆ ಮತ್ತೆ ಕೆಲವರು ಸಮುದ್ರದ ಒಳಗೆ scuba diving ಹೋಗಲು ಇಷ್ಟಪಡುತ್ತಾರೆ. ಇದು ಎಲ್ಲಾ beach ಗಳಲ್ಲೂ ಸಾಮಾನ್ಯ. ಆದರೆ ಪ್ರಪಂಚದಲ್ಲಿರುವ ಕೆಲವು beach ಗಳು ಜನರನ್ನು ಆಕರ್ಷಿಸುವ ಸಲುವಾಗಿ ಬಗೆ ಬಗೆಯ ಆಟವನ್ನು ಪರಿಚಯಿಸುತ್ತಾರೆ. ಅಂತಹ beach ಗಳಲ್ಲಿ Bahamas ದೇಶದಲ್ಲಿ ಇರುವ pig beach ಕೂಡ ಒಂದು. ಈ beach ನಲ್ಲಿ ಪ್ರವಾಸಿಗರು ಹಂದಿಗಳ ಜೊತೆಗೆ ಆಟವಾಡಬಹುದು. ಈ ಹಂದಿಗಳು ಯಾರಿಗೂ ತೊಂದರೆ ನೀಡದೆ ಪ್ರವಾಸಿಗರ ಜೊತೆಗೆ ಆಟವಾಡುತ್ತವೆ. ಈ ವಿಚಿತ್ರವಾದ beach ನಲ್ಲಿ ಕಾಲಕಳೆಯಲು ಪ್ರಪಂಚದ ಮೂಲೆಮೂಲೆಯಿಂದ ಜನರು ಬರುತ್ತಾರೆ.
ಈ ವೀಡಿಯೋ ಮೂಲಕ ನಿಮಗೆ ತಿಳಿಯದ ಸಂಗತಿಗಳನ್ನು ತಿಳಿಸಿಕೊಟ್ಟಿದ್ದೇನೆ ಎಂದು ನಾನು ಭಾವಿಸುವೆ. ನಿಮಗೆ ಈ ವೀಡಿಯೋ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ ಹಾಗು ಇವುಗಳಲ್ಲಿ ನಿಮಗೆ ಯಾವ ಸಂಗತಿಯು interesting ಅನ್ನಿಸಿತು ಎಂದು ಕಾಮೆಂಟ್ ಮಾಡಿ ತಿಳಿಸಿ.