
1) ನಾವೆಲ್ಲರು ನಮ್ಮ ಪ್ರೀತಿ ಪಾತ್ರರ ಜೊತೆ ಸಂಭಾಷಣೆ ನಡೆಸಲು ವಾಟ್ಸಾಪ್ ಮಾದರಿಯಲ್ಲಿ ಸೇನೆಯ ಅಪ್ಲಿಕೇಷನ್ ಮತ್ತು ಟೆಲಿಗ್ರಾಂ ರೀತಿಯ ಅಪ್ಲಿಕೇಷನ್ಸ್ ಗಳನ್ನು ಬಳಸುತ್ತೇವೆ. ಆದರೆ ನಾವು ಕಳಿಸುವ ಮೆಸೇಜ್‌ಗಳು, ಫೋಟೋಗಳು ಹಾಗೂ ವಿಡಿಯೋಗಳು ಈ ಪ್ರಸಿದ್ದ ಕಂಪನಿಗಳ ಸರ್ವರ್‌ನಲ್ಲಿ ಶೇಖರಣೆ ಆಗಿರುತ್ತವೆ. ಅಕಸ್ಮಾತ್ ಈ ಅಪ್ಲಿಕೇಷನ್ಸ್ ಹ್ಯಾಕ್ ಮಾಡಿದರೆ ಮಾಹಿತಿಗಳು ಸೋರಿಕೆಯಾಗುತ್ತವೆ. ಇದನ್ನೇ ಗಮನಿಸಿ, ಭಾರತೀಯ ಸೇನೆಯು ತಮ್ಮ ಸೈನಿಕರಿಗೆಂದೆ ವಾಟ್ಸಾಪ್ ಮಾದರಿಯಲ್ಲಿ ಸೇನೆಯ ಅಪ್ಲಿಕೇಷನ್ ಎಂಬಂತೆ “SAI” ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸೇನೆಯಲ್ಲಿರುವ ಸೈನಿಕರು ಮಾತ್ರ ಬಳಸಬಹುದಾದ ಸುರಕ್ಷಿತ ಸಂದೇಶ ವಿನಿಮಯ ಸೇವೆಯಾಗಿದೆ. ವಾಟ್ಸಾಪ್ ಮಾದರಿಯಲ್ಲಿ ಸೇನೆಯ ಅಪ್ಲಿಕೇಷನ್ ಬಳಸುವ ಮೂಲಕ ಸೈನಿಕರ ಮಾಹಿತಿಯನ್ನು ಕದಿಯುವುದು ಹ್ಯಾಕರ್ಸ್‌ಗಳಿಗೆ ಕಷ್ಟವಾಗಲಿದೆ. ಪ್ರಧಾನಿ ಮೋದಿಯವರ “ಆತ್ಮನಿರ್ಭರ್ ಭಾರತ” ಯೋಜನೆಯಡಿ, ವಾಟ್ಸಾಪ್ ಮಾದರಿಯಲ್ಲಿ ಸೇನೆಯ ಅಪ್ಲಿಕೇಷನ್ ಅನ್ನು Colonial ಸಾಯಿ ಶಂಕರ್ ಅವರು ಅಭಿವೃದ್ಧಿಪಡಿಸಿದ್ದು, ಸದ್ಯಕ್ಕೆ Android ಮೊಬೈಲ್‌ಗಳಿಗೆ ಮಾತ್ರ ಲಭ್ಯವಿದೆ. ಮುಂಬರುವ ದಿನಗಳಲ್ಲಿ iPhone ಬಳಕೆದಾರರು ಕೂಡ ಇದನ್ನು ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.
2) ಸಹಜವಾಗಿ ಎಟಿಎಂ ಮಷಿನ್ ಗಳನ್ನು ಇಟ್ಟಿರುವ ಕೊಠಡಿಯಲ್ಲಿ ಹವಾ ನಿಯಂತ್ರಣ ಯಂತ್ರವನ್ನು ಇಟ್ಟಿರುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಈ ರೀತಿ ಏಕೆ ಈ ಹವಾ ನಿಯಂತ್ರಣ ಯಂತ್ರವನ್ನು ಇಡಲಾಗಿರುತ್ತದೆ ಗೊತ್ತೆ? ಸಹಜವಾಗಿ ಎಲೆಕ್ಟ್ರಾನಿಕ್ ವಸ್ತುಗಳ ತಾಪಮಾನವು ಬೇಗನೆ ಏರುತ್ತದೆ. ಉದಾಹರಣೆಗೆ ನಾವುಗಳು ಬಳಸುವ ಮೊಬೈಲ್, ಕಂಪ್ಯೂಟರ್ , ಟಿವಿ ಅಥವ ಫ್ರಿಡ್ಜ್ ಗಳನ್ನೇ ತೆಗೆದುಕೊಳ್ಳಿ. ಇವುಗಳ ತಾಪಮಾನವು ಬೇಗನೆ ಏರಿಕೆಯಾಗುತ್ತದೆ. ಆದ್ದರಿಂದಲೆ ಇವುಗಳನ್ನು ತಂಪಾಗಿ ಇಡಲು ಇವುಗಳ ಒಳಗೆ ಪುಟ್ಟ ಫ್ಯಾನ್ ಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಎಟಿಎಂ ಮಷಿನ್ ಗಾತ್ರವು ದೊಡ್ಡದಾಗಿರುವುದರಿಂದ ಫ್ಯಾನ್ ಅಳವಡಿಕೆ ಕಷ್ಟವಾಗಿದೆ. ಆದ್ದರಿಂದಲೆ ಸಂಪೂರ್ಣ ಕೊಠಡಿಯನ್ನು ತಂಪಾಗಿ ಇಡಲು ಹವಾ ನಿಯಂತ್ರಣ ಯಂತ್ರವನ್ನು ಇಡಲಾಗಿರುತ್ತದೆ.
3) ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದೆಲ್ಲೆಡೆ ಮತದಾನಕ್ಕೆಂದು ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ ಗಳನ್ನು ಬಳಸುತ್ತಿರುವ ವಿಷಯ ನಮಗೆಲ್ಲ ತಿಳಿದೇ ಇದೆ. ಆದರೆ ಈ ಇವಿಎಂ ಕುರಿತ ಕೆಲವು ಅದ್ಬುತ ಸಂಗತಿಗಳನ್ನು ಈಗ ತಿಳಿದುಕೊಳ್ಳೋಣ. ಈ ಇವಿಎಂ ಅನ್ನು Election Commission’s Technical Expert ಸದಸ್ಯರು ಬೆಂಗಳೂರಿನ Bharat Electronics Limited ಮತ್ತು ಹೈದರಾಬಾದಿನ Electronic Corporation of India Limited ಜೊತೆಗೂಡಿ ನಿರ್ಮಿಸಿದ್ದಾರೆ. ಈ ಮಷಿನ್ ಗೆ ಯಾವುದೆ ಕರೆಂಟ್ ಅವಶ್ಯತೆ ಬೇಡ, Rechargeable Battery ಯಿಂದ ಇದು ಕಾರ್ಯನಿರ್ವಹಿಸುತ್ತದೆ. ಇದರ ಮೊತ್ತವು 5000 ರಿಂದ 6000 ರೂಪಾಯಿಯವರೆಗು ಇದೆ. ಈ ಮಷಿನ್ ಬಳಸಿ ನಮ್ಮ ದೇಶದಲ್ಲಿ ಮೊದಲ ಬಾರಿಗೆ ಮತದಾನ ನಡೆದದ್ದು 1982ರ ಕೇರಳದ ಪರೂರು ವಿಧಾನಸಭೆ ಚುನಾವಣೆಯಲ್ಲಿ. ಇದರ ನಂತರ 1999ರ ಲೋಕಸಭೆ ಚುನಾವಣೆಯಲ್ಲಿಯು ಕೂಡ ಇದನ್ನು ಬಳಸಲಾಗಿತ್ತು. ಅಂದಹಾಗೆ ಈ ಇವಿಎಂ ಅನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೆಲ್ಜಿಯಂ, Estonia, Venezuela, United Arab Emirates, Jordan, Maldives, Namibia, Egypt, Bhutan ಹಾಗು ನೇಪಾಳದಲ್ಲಿ ಬಳಸಲಾಗುತ್ತಿದೆ. ಈ ಮಷಿನ್ ಅನ್ನು ಅನೇಕ ದೇಶಗಳಲ್ಲಿ ಬಳಸಿ ಕೆಲ ದೇಶಗಳು ಚುನಾವಣೆಗಳಲ್ಲಿ ಇವುಗಳನ್ನು ಬಳಸುವುದು ಬೇಡವೆಂದು ನಿರ್ಧರಿಸಿ ಬ್ಯಾನ್ ಮಾಡಿವೆ.
4) ಅಂಟಾರ್ಟಿಕಾದ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಮಂಜುಗಡ್ಡೆಗಳಿಂದ ತುಂಬಿಕೊಂಡಿರುವ ಈ ಸುಂದರವಾದ ಸ್ಥಳವು ನೋಡಲು ಎಷ್ಟು ಸುಂದರವೊ ಅದಕ್ಕಿಂತ ಹೆಚ್ಚು ಅಪಾಯಕಾರಿಯಾದದ್ದು. ಈ ಸ್ಥಳದಲ್ಲಿ 14 ತಿಂಗಳುಗಳ ಕಾಲ ಸಂಶೋದನೆಗೆಂದು ತೆರಳಿದ್ದ ಎಂಟು ವಿಜ್ಞಾನಿಗಳು 14 ತಿಂಗಳುಗಳ ಬಳಿಕ ಮರಳಿ ಬಂದಾಗ ಅವರ ಮೆದುಳಿನ ಗಾತ್ರವನ್ನು ಪರೀಕ್ಷಿಸಿ ನೋಡಿದ ವಿಜ್ಞಾನಿಗಳಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಅವರುಗಳ ಮೆದುಳಿನ ಗಾತ್ರವು 14 ತಿಂಗಳ ಹಿಂದೆ ಇದ್ದಿದ್ದಕ್ಕಿಂತ 10% ನಷ್ಟು ಕಡಿಮೆಯಾಗಿತ್ತು. ಇಷ್ಟೇ ಅಲ್ಲದೆ ಅವರುಗಳ ನೆನಪಿನ ಶಕ್ತಿ ಕೂಡ ಕಡಿಮೆಯಾಗಿತ್ತು. ಇದಕ್ಕೆಲ್ಲ ಪ್ರಮುಖ ಕಾರಣ ಅಲ್ಲಿನ ತಾಪಮಾನ. -50 ಡಿಗ್ರೀ ಸೆಲ್ಸಿಯಸ್ ತಾಪಮಾನದಲ್ಲಿ ಮನುಷ್ಯರು ಇದ್ದರೆ ಅವರುಗಳ ದೇಹದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.