ನಮಗೆಲ್ಲ ತಿಳಿದ ಹಾಗೆ ನಮ್ಮ ದೇಶವು ಅನೇಕ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದಂತಹ ಪುಣ್ಯ ಭೂಮಿ. ಪ್ರಪಂಚದಲ್ಲಿರುವ ಅನೇಕ ದೇಶಗಳು ಬದುಕುವುದು ಹೇಗೆ ಎಂದು ಕಲಿಯುತ್ತಿರುವಾಗ ನಮ್ಮ ದೇಶದ ಮಹಾನ್ ಋಷಿ ಮುನಿಗಳು ಮತ್ತು ವಿಜ್ಞಾನಿಗಳು ಬಾಹ್ಯಾಕಾಶದ ರಹಸ್ಯಗಳನ್ನು ಪತ್ತೆ ಮಾಡುತ್ತಿದ್ದರು. ಅಷ್ಟೊಂದು ಆಧುನಿಕ ಮತ್ತು ಜ್ಞಾನದಿಂದ ತುಂಬಿ ತುಳುಕುತ್ತಿದ್ದಂತಹ ದೇಶ ನಮ್ಮದು. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅದೆಷ್ಟು ರಹಸ್ಯಗಳು ಅಡಗಿವೆಯೆಂದರೆ ಅದನ್ನು ನಾವುಗಳು ಹುಡುಕುತ್ತ ಹೋದರೆ ಮುಗಿಯುವುದಿಲ್ಲ. ಆಧುನಿಕ ವಿಜ್ಞಾನವು ಯಾವಾಗ ಭೂಮಿಯ ಮೇಲೆ ಜನ್ಮ ತಾಳಿತ್ತು ಆಗ ನಮ್ಮ ದೇಶದಲ್ಲಿ ಬ್ರಿಟೀಷರ ಆಳ್ವಿಕೆ ನಡೆಯುತ್ತಿತ್ತು. ಇದರ ಪರಿಣಾಮದಿಂದ ನಮ್ಮ ದೇಶದ ಜ್ಞಾನಕ್ಕೆ ಪ್ರಪಂಚದಲ್ಲಿ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಆದರೆ ವರ್ಷಗಳು ಕಳೆದಂತೆ ನಮ್ಮ ದೇಶವು ನಿಧಾನವಾಗಿ ಮತ್ತೆ ಪುಟಿದೇಳುತ್ತಿದ್ದು ಮರಳಿ ನಮ್ಮ ಬಳಿಯಿರುವ ಜ್ಞಾನದ ತಾಕತ್ತನ್ನು ಜಗತ್ತಿಗೆ ತೋರಿಸುವ ಸಮಯ ಹತ್ತಿರ ಬರುತ್ತಿದೆ. ಇಂದು ನಿಮಗೆ ಅಂತಹ ಜ್ಞಾನದ ತಾಕತ್ತನ್ನು ತೋರಿಸುವ ಬ್ರಹ್ಮಾಂಡದ ಕುರಿತಾದ ವಿಷಯವನ್ನು ನಿಮಗೆ ಇಲ್ಲಿ ನಾನು ಹೇಳಲು ಹೊರಟಿದ್ದು ಅದನ್ನು ಕೇಳಿದ ಮೇಲೆ ನಮ್ಮ ದೇಶವು ಈಗಿರುವ ಆಧುನಿಕ ವಿಜ್ಞಾನಕ್ಕಿಂತ ಆಗಿನ ಕಾಲದಲ್ಲಿಯೇ ಅದೆಷ್ಟು ಮುಂದುವರೆದಿತ್ತು ಎಂದು ತಿಳಿಯುತ್ತದೆ. ಬನ್ನಿ ಇಂದು ನಿಮಗೆ ಪುರಾವೆ ಸಮೇತ ಹೇಗೆ ಆಧುನಿಕ ಭಾರತದ ವಿಜ್ಞಾನಿಗಳು ಬ್ರಹ್ಮಾಂಡದ ಕುರಿತು ಅನೇಕ ವಿಷಯಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಪತ್ತೆ ಮಾಡಿದ್ದಾರೆ ಎಂದು ತೋರಿಸುತ್ತೇವೆ.

ನಮ್ಮ ಪ್ರಾಚೀನ ವೇದಗಳು ಮತ್ತು ಪುರಾಣಗಳು ಸಾಕಷ್ಟು ಜ್ಞಾನದಿಂದ ತುಂಬಿಕೊಂಡಿದೆ. “ಋಗ್ವೇಧ”(rigveda) ಮತ್ತು “Aitareya brahmanam” ಗಳಲ್ಲಿ ನಮ್ಮ ಸೂರ್ಯನು ಉದಯಿಸುವುದಿಲ್ಲ ಮತ್ತು ಮುಳುಗುವುದು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದರ ಅರ್ಥ ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿದೆ ಹೊರತು ಸೂರ್ಯನು ಭೂಮಿಯ ಸುತ್ತ ಅಲ್ಲ. ಇದೇ ತರಹ ವಿಷ್ಣು ಪುರಾಣದಲ್ಲಿ ಸೂರ್ಯನು ತಟಸ್ಥನಾಗಿದ್ದು ಆತನ ಸುತ್ತ ಗ್ರಹಗಳು ಸುತ್ತುತ್ತಿವೆ ಎಂದು ಹೇಳಲಾಗಿದೆ. ಇನ್ನು ಋಗ್ವೇದ ಮತ್ತು ಯಜುರ್ವೇದದಲ್ಲಿ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿರುವುದನ್ನು ಸ್ಪಷ್ಟವಾಗಿ ಹೇಳಲಾಗಿದ್ದು ಅದನ್ನೇ ಈಗಿನ ಕಾಲದ ವಿಜ್ಞಾನಿಗಳು “heliocentric model” ಎಂದು ಕರೆದಿರುವುದು. ಇದಲ್ಲದೆ ಭೂಮಿಯು ಗೋಳಾಕಾರದಲ್ಲಿದ್ದು ನಮ್ಮ ಬ್ರಹ್ಮಾಂಡದಲ್ಲಿ ನಮ್ಮ ಸೂರ್ಯನ ಹಾಗೆ ಅನೇಕ ನಕ್ಷತ್ರಗಳಿವೆ ಮತ್ತು ಸೂರ್ಯನ ಕಿರಣಗಳು ಚಂದ್ರನ ಮೇಲೆ ಬೀಳುತ್ತಿರುವುದರಿಂದಲೆ ರಾತ್ರಿಯ ವೇಳೆ ಚಂದ್ರನು ಹೊಳೆಯುತ್ತಾನೆ ಹಾಗು ಸೂರ್ಯನ ಕಿರಣಗಳು 7 ಬಣ್ಣಗಳಿಂದ ಕೂಡಿವೆ ಎಂದು ಕೂಡ ಉಲ್ಲೇಖಿಸಲಾಗಿದೆ.

ಈಗ ನಿಮಗೆ ಋಗ್ವೇದದಲ್ಲಿ ಇರುವ ಒಂದು ಅದ್ಬುತ ಸಾಲನ್ನು ತಿಳಿಸಿಕೊಡುತ್ತೇನೆ ಕೇಳಿ.ಅದನ್ನು ಕೇಳಿದ ಮೇಲೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಏಕೆಂದರೆ ಆ ಸಾಲು ನಮ್ಮ ಸೌರಮಂಡಲದಲ್ಲಿ ಆಗುತ್ತಿರುವ ಕ್ರಿಯೆಯ ಕುರಿತು ತಿಳಿಸಿಕೊಡುತ್ತದೆ. ಆ ಸಾಲು ಈ ರೀತಿ ಇದೆ “ಹೇ ಸೂರ್ಯ ದೇವನೆ, ಯಾವ ವಸ್ತುವಿಗೆ ನೀನು ಬೆಳಕನ್ನು ನೀಡುತ್ತಿರುವೆ ಆ ವಸ್ತು ನಿನ್ನ ಎದುರಿಗೆ ಬಂದು ನಿಂತು ನಿನ್ನ ಕಿರಣಗಳನ್ನು ತಡೆಯೊಡ್ಡುತ್ತದೆ ಆಗ ಭೂಮಿಯು ಕತ್ತಲಿನಿಂದ ಆವರಿಸಿ ಆಶ್ಚರ್ಯಚಕಿತವಾಗುತ್ತದೆ”. ಈ ಸಾಲು ಸೂರ್ಯಗ್ರಹಣದ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದೆ. ಇಲ್ಲಿ ವಸ್ತು ಎಂದರೆ ಚಂದ್ರ. ಚಂದ್ರನು ಸೂರ್ಯನ ಮತ್ತು ಭೂಮಿಯ ಮಧ್ಯೆ ಬಂದು ನಿಂತಾಗ ಸೂರ್ಯ ಗ್ರಹಣವಾಗುತ್ತದೆ ಎಂದು ಹೇಳಲಾಗಿದೆ. ಇದರ ಅರ್ಥ ಆಧುನಿಕ ಭಾರತದಲ್ಲಿ ಸೂರ್ಯಗ್ರಹಣದ ಬಗ್ಗೆ ಮೊದಲೇ ತಿಳಿದಿತ್ತು.

ಋಗ್ವೇದದ ಹಾಗೆಯೇ ಇರುವ ಮತ್ತೊಂದು ಗ್ರಂಥ “ಸೂರ್ಯ ಸಿದ್ಧಾಂತ”. ಇದು 4 ನೆಯ ಶತಮಾನದ ಗ್ರಂಥ. ಇದರಲ್ಲಿ ನಮ್ಮ ಸೌರ ಮಂಡಲದಲ್ಲಿರುವ ಗ್ರಹಗಳ ಚಲನವಲನ ಮತ್ತು ಆ ಗ್ರಹಗಳು ಅದೆಷ್ಟು ವೃತ್ತಾಕಾರವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ. “ಸೂರ್ಯ ಸಿದ್ಧಾಂತದ” ಪ್ರಕಾರ ನಮ್ಮ ಭೂಮಿಯ ವೃತ್ತಾಕಾರವು 12874 ಕಿಲೋಮೀಟರ್ ಇದೆ ಎಂದು ಹೇಳಿದ್ದು ಆಧುನಿಕ ಜಗತ್ತಿನ ವಿಜ್ಞಾನಿಗಳು ಭೂಮಿಯ ವೃತ್ತಾಕಾರವು 12742 ಕಿಲೋಮೀಟರ್ ಇದೆ ಎಂದು ಕಂಡುಹಿಡಿದ್ದಾರೆ. ಅಂದರೆ ಈಗಿನ ವಿಜ್ಞಾನಿಗಳು ಕಂಡುಹಿಡಿಯುವುದಕ್ಕಿಂತ ಮೊದಲೇ 4 ನೆಯ ಶತಮಾನದಲ್ಲಿಯೇ ಭೂಮಿಯ ವೃತ್ತಾಕಾರವು ಎಷ್ಟಿದೆ ಎಂದು ನಮ್ಮ ದೇಶದ ವಿಜ್ಞಾನಿಗಳಿಗೆ ತಿಳಿದಿತ್ತು.

ಈಗ ನಿಮಗೆ ಒಂದು ಪ್ರಶ್ನೆ ಮೂಡಿರುತ್ತದೆ. ಯಾವುದೇ “ಸಾಧಕಗಳು(instruments)” ಇಲ್ಲದೆ ಆಗಿನ ಕಾಲದಲ್ಲಿ ಇದನ್ನೆಲ್ಲ ಹೇಗೆ ಕಂಡುಹಿಡಿದರು? ನಿಮ್ಮ ತಲೆಯಲ್ಲಿ ಇರುವ ಪ್ರಶ್ನೆಯು ನನಗೂ ಮೂಡಿತ್ತು. ಆದರೆ ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ಹೊರಟಾಗ ನನಗೆ ತಿಳಿದದ್ದು ಆಗಿನ ಕಾಲದಲ್ಲೂ ಕೂಡ ಹಲವಾರು “ಸಾಧಕಗಳನ್ನು (instruments)” ನಮ್ಮ ದೇಶದ ಋಷಿ ಮುನಿಗಳು ಮತ್ತು ವಿಜ್ಞಾನಿಗಳು ಬಳಸುತ್ತಿದ್ದರು ಎಂದು. ಆ “ಸಾಧಕಗಳ(instruments)” ಕುರಿತು “ಸೂರ್ಯ ಸಿದ್ಧಾಂತ” ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದ್ದು ಅವುಗಳ ಕೆಲ ಹೆಸರುಗಳನ್ನು ಮಾತ್ರ ಇಲ್ಲಿ ಹೇಳುವೆ. “ಯಾಸ್ತಿ ಯಂತ್ರ(yasti yantra), ಗಟಿ ಯಂತ್ರ(ghatika yantra), ಗೋಲ ಯಂತ್ರ(Gola yantra), gnomon ಮತ್ತು clepsydra”. ಕಾಲಗಳು ಕಳೆದಂತೆ ಗ್ರೀಸ್ ನಿಂದ ಭಾರತಕ್ಕೆ ಬಂದ ವಿಜ್ಞಾನಿಗಳು ಇಲ್ಲಿಯ ಅನೇಕ ವಿಜ್ಞಾನಿಗಳ ಸಹಾಯ ತೆಗೆದುಕೊಂಡು ತಮ್ಮ ದೇಶಕ್ಕೆ ಅವುಗಳನ್ನು ತೆಗೆದುಕೊಂಡು ಹೋದರು.

ಈ “ಸಾಧಕಗಳಿಂದ (instruments)” ಕೇವಲ ಗ್ರಹಗಳ ಕುರಿತ ಮಾಹಿತಿಯನ್ನು ಕಲೆಹಾಕುವುದಲ್ಲದೆ ಕೋಟ್ಯಾನು ಕೋಟಿ ಕಿಲೋಮೀಟರ್ ದೂರದಲ್ಲಿರುವ ಆಕಾಶಗಂಗೆಗಳನ್ನು ಮತ್ತು ಸೂಪರ್ ಕ್ಲಸ್ಟರ್ ಗಳ ಬಗ್ಗೆ ಕೂಡ ಪ್ರಾಚೀನ ಭಾರತದ ವಿಜ್ಞಾನಿಗಳು ಕಂಡುಹಿಡಿದ್ದರು ಎಂದು “ಸೂರ್ಯ ಸಿದ್ಧಾಂತ”ದಲ್ಲಿ ಉಲ್ಲೇಖಿಸಲಾಗಿದೆ.ಇದಕ್ಕೆ ಉತ್ತಮ ಉದಾಹರಣೆಯೊಂದಿಗೆ ನಿಮಗೆ ಹೇಳಬೇಕೆಂದರೆ 4 ಬಿಲಿಯನ್ ಜ್ಯೋತಿವರ್ಷಗಳಷ್ಟು ದೂರದಲ್ಲಿ ಒಂದು ಬೃಹತ್ ಸೂಪರ್ ಕ್ಲಸ್ಟರ್ ಇದ್ದು ಬರೋಬ್ಬರಿ 650 ಮಿಲಿಯನ್ ಜ್ಯೋತಿವರ್ಷಗಳಷ್ಟು ವ್ಯಾಸವನ್ನು ಅದು ಹೊಂದಿದೆ ಎಂದು ಹೇಳಲಾಗಿದೆ. ಅಂದ ಹಾಗೆ ಈ ಸೂಪರ್ ಕ್ಲಸ್ಟರ್ ಅಂದರೆ ಏನು ಎಂದು ಹೇಳುತ್ತೇನೆ ಕೇಳಿ. ಸೂಪರ್‌ಕ್ಲಸ್ಟರ್ ಎನ್ನುವುದು ಸಣ್ಣ ಸಣ್ಣ ಆಕಾಶಗಂಗೆಗಳನ್ನು ಹೊಂದಿರುವ ದೊಡ್ಡ ಗುಂಪು. ಇಂತಹ ಒಂದು ಬೃಹತ್ ಗುಂಪೊಂದು ಬಾಹ್ಯಾಕಾಶದಲ್ಲಿದೆ ಎಂದು ಪ್ರಾಚೀನ ಭಾರತದ ವಿಜ್ಞಾನಿಗಳು ಕಂಡು ಹಿಡಿದು ಅದಕ್ಕೆ “ಸರಸ್ವತಿ” ಎಂದು ಹೆಸರಿಟ್ಟಿದ್ದರು. ಇದನ್ನೇ 2003 ರಲ್ಲಿ ಅಮೇರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಜೆ. ರಿಚರ್ಡ್ ಗಾಟ್ III, ಮಾರಿಯೋ ಜುರಿಕ್ ಮತ್ತು ಅವರ ಸಹೋದ್ಯೋಗಿಗಳು ಕಂಡುಹಿಡಿದ್ದಾರೆ ಎಂದು ಅಮೆರಿಕವು ಜಗತ್ತಿಗೆ ಹೇಳಿತು. ಇದರಿಂದ ಹೇಗೆ ನಮ್ಮ ಪ್ರಾಚೀನ ಭಾರತದ ವಿಜ್ಞಾನಿಗಳ ಸಾಧನೆಯನ್ನು ಪ್ರಪಂಚವು ತುಳಿಯುತ್ತಿದೆ ಎಂದು ತಿಳಿದುಬರುತ್ತದೆ.


ಇದಷ್ಟೇ ಅಲ್ಲದೆ ಈ “ಸೂರ್ಯ ಸಿದ್ಧಾಂತದಲ್ಲಿ” ಬ್ರಹ್ಮಾಂಡದಲ್ಲಿರುವ ಅನೇಕ ನಕ್ಷತ್ರಪುಂಜಗಳ ಕುರಿತು ಮಾಹಿತಿ ಇದ್ದು ಗ್ರಹಗಳ ಮಧ್ಯೆ ಇರುವ ಅಂತರವನ್ನು ಕೂಡ ಉಲ್ಲೇಖಿಸಲಾಗಿದೆ. ಈ ಪುಸ್ತಕದಲ್ಲಿ ಭೂಮಿಯು ಸೂರ್ಯನನ್ನು ಸುತ್ತಲು 365.26 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಇದನ್ನೇ ಆಧುನಿಕ ವಿಜ್ಞಾನಿಗಳು 365.2564 ದಿನಗಳು ಎಂದು ಹೇಳಿರುವುದು. ಇದೇ ತರಹ ಚಂದ್ರನು ಭೂಮಿಯ ಸುತ್ತ ಒಂದು ಸುತ್ತು ಸಂಪೂರ್ಣಗೊಳಿಸಲು 27.32166 ದಿನಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ. ಇನ್ನು ಇದೇ ತರಹ ಬಾಹ್ಯಾಕಾಶದ ಅನೇಕ ರಹಸ್ಯಗಳನ್ನು ನಮ್ಮ ದೇಶದ ಆಧುನಿಕ ವಿಜ್ಞಾನಿಗಳು ಮತ್ತು ಋಷಿ ಮುನಿಗಳು ಕಂಡುಹಿಡಿದಿದ್ದು ಎಲ್ಲವನ್ನೂ ಈ ಪುಸ್ತಕದಲ್ಲಿ ನೀವು ಕಾಣಬಹುದಾಗಿದೆ.

ಈಗ ಪ್ರಾಚೀನ ಭಾರತ ಕಂಡ ಮಹಾನ್ ವಿಜ್ಞಾನಿ ಆರ್ಯಭಟ ಅವರ ಕುರಿತು ತಿಳಿಸುತ್ತೇನೆ. ಇವರು ಖಗೋಳವಿಜ್ಞಾನದ ಕುರಿತು ಅನೇಕ ರಹಸ್ಯಗಳನ್ನು ಕಂಡುಹಿಡಿದಿದ್ದು ಅದರ ಕುರಿತು “ಆರ್ಯಭಾಟಿಯ ಮತ್ತು ಸೂರ್ಯ ಸಿದ್ಧಾಂತ” ಪುಸ್ತಕದಲ್ಲಿ ವಿವರಿಸಿದ್ದಾರೆ. ನಾವೆಲ್ಲ ಸೂರ್ಯನ ಸುತ್ತ ಎಲ್ಲಾ ಗ್ರಹಗಳು ಸುತ್ತುತ್ತಿವೆ ಎಂದು ಮೊದಲು ಪ್ರಪಂಚಕ್ಕೆ ಹೇಳಿದ್ದು “ನಿಕೋಲೊಸ್ ಕೋಪರ್ನಿಕಸ್” ಎಂದು ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ “ನಿಕೋಲೊಸ್ ಕೋಪರ್ನಿಕಸ್” ಗಿಂತಲೂ ಮೊದಲೇ “ಆರ್ಯಭಟ” ಅವರು ಇದನ್ನು ಹೇಳಿದ್ದಾರೆ. ಇದನ್ನು ಆ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದ್ದು ಭೂಮಿಯು ತನ್ನ ಕಕ್ಷೆಯ ಸುತ್ತ ಸುತ್ತುತ್ತ ಸೂರ್ಯನ ಸುತ್ತ ಸುತ್ತುತ್ತದೆ ಮತ್ತು ಸೂರ್ಯ ಗ್ರಹಣ ಹಾಗು ಚಂದ್ರ ಗ್ರಹಣವು ಯಾವ ಸಮಯದಲ್ಲಿ ಆಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ನಿಖರವಾಗಿ ಹೇಳಿದ್ದಾರೆ.

ಇನ್ನು ನಮಗೆಲ್ಲ ನವಗ್ರಹಗಳ ಕುರಿತು ತಿಳಿದೇ ಇದೆ. ನವ ಅಂದರೆ 9, ಇದರಲ್ಲಿ “ಸೂರ್ಯ,ಬುದ,ಶುಕ್ರ,ಶನಿ, ಗುರು, ಮಂಗಳ, ಚಂದ್ರ, ರಾಹು ಮತ್ತು ಕೇತು” ಬರುತ್ತದೆ. ಇದು ನಮ್ಮ ಪ್ರಾಚೀನ ಭಾರತದ ವಿಜ್ಞಾನಿಗಳು ಕಂಡು ಹಿಡಿದದ್ದು. ಆದರೆ ಇಲ್ಲಿ 4 ಪ್ರಶ್ನೆಗಳು ಮೂಡುತ್ತದೆ. ಅದೇನೆಂದರೆ ಭೂಮಿಯನ್ನು ಏಕೆ ಈ ನವಗ್ರಹಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ? ಪ್ರಾಚೀನ ಭಾರತದ ವಿಜ್ಞಾನಿಗಳಿಗೆ “ಯುರೇನಸ್,ನೆಪ್ಚೂನ್ ಮತ್ತು ಪ್ಲೂಟೊ” ಬಗ್ಗೆ ತಿಳಿದಿರಲಿಲ್ಲವೆ? ಅವುಗಳನ್ನು ಏಕೆ ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ? ರಾಹು ಹಾಗು ಕೇತು ಅಂದರೆ ಯಾವ ಗ್ರಹಗಳು? ಮತ್ತು ಕೊನೆಯ ಪ್ರಶ್ನೆ ಸೂರ್ಯ ಮತ್ತು ಚಂದ್ರನನ್ನು ಕೂಡ ಗ್ರಹಗಳು ಎಂದು ಪರಿಗಣಿಸಿ ಈ ಪಟ್ಟಿಯಲ್ಲಿ ಏಕೆ ಸೇರಿಸಿದ್ದಾರೆ ಎನ್ನುವುದು. ಇದಕ್ಕೆ ಉತ್ತರ ಹೇಳುತ್ತೇನೆ ಕೇಳಿ. ನವಗ್ರಹಗಳು ಅಂದರೆ ಸೌರ ಮಂಡಲದಲ್ಲಿ ಇರುವ 9 ಗ್ರಹಗಳು ಎಂದರ್ಥವಲ್ಲ, ಭೂಮಿಯ ಮೇಲೆ ಮತ್ತು ಇಲ್ಲಿ ವಾಸಿಸುತ್ತಿರುವ ಜೀವಿಗಳ ಮೇಲೆ ಪರಿಣಾಮ ಬೀರುವ ಸೌರ ಮಂಡಲದ 9 objects ಗಳು ಎಂದರ್ಥ, ಇದೇ ಕಾರಣಕ್ಕೆ ಈ ಪಟ್ಟಿಯಲ್ಲಿ ಭೂಮಿಯನ್ನು ಸೇರಿಸಿಲ್ಲ. ಇನ್ನು ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುವಾಗ ಎರಡು ಪ್ರಮುಖ ಸ್ಥಾನವನ್ನು ತಲುಪುತ್ತಾನೆ. ಆಗ ಭೂಮಿಯ ಮೇಲೆ ಅದರಿಂದ ಸಾಕಷ್ಟು ಪರಿಣಾಮ ಬೀರುತ್ತದೆ. ಈ ರೀತಿ ಚಂದ್ರನು ತಲುಪುವ ಎರಡು ವಿವಿಧ ಸ್ಥಾನವನ್ನು ರಾಹು ಮತ್ತು ಕೇತು ಎಂದು ಪರಿಗಣಿಸಲಾಗಿದೆ. ಇನ್ನು “ಯುರೇನಸ್,ನೆಪ್ಚೂನ್ ಹಾಗು ಪ್ಲೂಟೊ” ಗಳಿಂದ ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಆದ್ದರಿಂದ ಇವುಗಳನ್ನು ನವಗ್ರಹಗಳ ಪಟ್ಟಿಯಲ್ಲಿ ಸೇರಿಸಿಲ್ಲ.ಆದರೆ ಇವುಗಳ ಕುರಿತು “ವೇದ ವ್ಯಾಸರು” ಮಹಾಭಾರತದಲ್ಲಿ ಉಲ್ಲೇಖಿಸಿದ್ದು “ಯುರೇನಸ್,ನೆಪ್ಚೂನ್ ಹಾಗು ಪ್ಲೂಟೊ”ವನ್ನು “ಶ್ವೇತ, ಶ್ಯಾಮ ಮತ್ತು ತೀಕ್ಷ್ಣ” ಎನ್ನುವ ಹೆಸರಿನಿಂದ ಕರೆದಿದ್ದಾರೆ. ಇನ್ನು ಸೂರ್ಯ ಮತ್ತು ಚಂದ್ರನ ಪ್ರಭಾವವು ಭೂಮಿಯ ಮೇಲೆ ಬೀರುವುದರಿಂದ ಈ ನವಗ್ರಹಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. 

ಇನ್ನು 598 ರಲ್ಲಿ ಪ್ರಾಚೀನ ಭಾರತದ ಪ್ರಸಿದ್ದ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ “ಬ್ರಹ್ಮಗುಪ್ತ” ಅವರು ಭೂಮಿಯ ಸುತ್ತಳತೆ(circumference) 5000 ಯೋಜನಾ ಇದೆ ಎಂದು ಕಂಡುಹಿಡಿದ್ದಾರೆ. 1 ಯೋಜನಾ ಅಂದರೆ 8 ಕಿಲೋಮೀಟರ್ ಎಂದರ್ಥ. 5000 ಯೋಜನಾ ಅಂದರೆ 40 ಸಾವಿರ ಕಿಲೋಮೀಟರ್. ಇದನ್ನೇ ಈಗಿನ ವಿಜ್ಞಾನಿಗಳು ಕಂಡು ಹಿಡಿದಿದ್ದು ಅವರುಗಳ ಪ್ರಕಾರ ಭೂಮಿಯ ಸುತ್ತಳತೆ 40,075 ಕಿಲೋಮೀಟರ್ ಇದೆ. ಇದೇ ತರಹ 1114 ರಲ್ಲಿ ಭಾಸ್ಕರಾಚಾರ್ಯ ಎನ್ನುವ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಬರೆದಿರುವ “ಸಿದ್ಧಾಂತ ಶಿರೋಮಣಿ” ಎನ್ನುವ ಪುಸ್ತಕದಲ್ಲಿ ಭೂಮಿಯ ಮೇಲೆ ಆಗುವ ಬದಲಾವಣೆಗಳ ಕುರಿತು ಮತ್ತು “ಗುರುತ್ವಾಕರ್ಷಣೆಯ” ಕುರಿತು ಸಂಪೂರ್ಣವಾಗಿ ವಿವರಿಸಿದ್ದಾರೆ. ಆದರೆ ಈಗ ಜಗತ್ತು ಗುರುತ್ವಾಕರ್ಷಣೆಯ ಕುರಿತು ಜಗತ್ತಿಗೆ ಮೊದಲು ಹೇಳಿದ್ದು ಯಾರು ಎಂದು ನಮ್ಮನ್ನು ಕೇಳಿದರೆ ನಾವುಗಳು ಭಾಸ್ಕರಾಚಾರ್ಯ ಅವರ ಹೆಸರನ್ನು ಹೇಳದೆ “ನ್ಯೂಟನ್” ಹೆಸರನ್ನು ಹೇಳುತ್ತೇವೆ. ಎಷ್ಟೇ ಆಗಲಿ ನಾವುಗಳು ಭಾರತೀಯರು ಅಲ್ಲವೇ,ಉದಾರ ಮನಸ್ಸಿನವರು. ನಮ್ಮವರನ್ನು ತುಳಿದು ಹೊರ ದೇಶದವರನ್ನು ಬೆಳೆಸುತ್ತಿದ್ದೇವೆ.

ಇನ್ನು ಪ್ರಾಚೀನ ಭಾರತದಲ್ಲಿ ಖಗೋಳಶಾಸ್ತ್ರಜ್ಞವು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ ಇದಕ್ಕೆಂದೆ ಅನೇಕ ವೀಕ್ಷಣಾಲಯಗಳನ್ನು ಕೂಡ ಆಗಿನ ಕಾಲದಲ್ಲಿ ನಿರ್ಮಿಸಲಾಗಿತ್ತು. ಇದಕ್ಕೆ ಉತ್ತಮ ಉದಾಹರಣೆ “ಜಂತರ್ ಮಂತರ್”. ರಾಜಸ್ಥಾನದ ಜೈಪುರ್ ನಲ್ಲಿ ಇರುವ ಈ ವೀಕ್ಷಣಾಲಯದಲ್ಲಿ ಸಮಯವನ್ನು ಕಂಡು ಹಿಡಿಯುವ ಬೃಹತ್ sun dial ಇದ್ದು ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಇದೇ ತರಹ ದೆಹಲಿ, ವಾರಣಾಸಿ, ಉಜ್ಜಯಿನಿ ಮಥುರ ಹಾಗು ದಕ್ಷಿಣ ಭಾರತದಲ್ಲಿ ಕೂಡ ನಾವುಗಳು ಕಾಣಬಹುದಾಗಿದೆ.

Follow Karunadu Today for more Interesting Facts & Stories. 

Click here to Join Our Whatsapp Group