ಈ ನಮ್ಮ ಭೂಮಿಯ ಇತಿಹಾಸದಲ್ಲಿ ಇದುವರೆಗು ಅದೆಷ್ಟೋ ಮಹಾನ್ ರಾಜರುಗಳ ಆಳ್ವಿಕೆಯನ್ನು ನಾವು ನೋಡಿದ್ದೇವೆ. ಕೆಲವು ರಾಜರುಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವ ಸಲುವಾಗಿ ಬೇರೆ ರಾಜರುಗಳ ಮೇಲೆ ಯುದ್ಧ ಗೆದ್ದು ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳನ್ನು ದೋಚಿ ತಮ್ಮ ಸಾಮ್ರಾಜ್ಯವನ್ನು ಪ್ರಬಲಗೊಳ್ಳಿಸುತ್ತಿದ್ದರೆ ಮತ್ತೆ ಕೆಲವು ರಾಜರುಗಳು ತಾವು ಆಳುತ್ತಿರುವ ಸಾಮ್ರಾಜ್ಯದ ಒಳಗೆ ಸಿಗುತ್ತಿದ್ದ ಅಪಾರ ಸಂಪತ್ತುಗಳನ್ನು ಬಳಸಿಕೊಂಡು ಮತ್ತು ತಮ್ಮ ಸಾಮ್ರಾಜ್ಯದ ಪ್ರಜೆಗಳು ಬೆಳೆಯುತ್ತಿದ್ದ ದವಸ ದಾನ್ಯಗಳನ್ನು ಬೇರೆ ರಾಜ್ಯಗಳಿಗೆ ಆಮದು ಮಾಡಿ ಅದರಿಂದ ಬಂದ ಹಣದಿಂದ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸುತ್ತಿದ್ದರು. ಹೀಗೆ ಕಟ್ಟಿದ ಅದೆಷ್ಟೋ ಸಾಮ್ರಾಜ್ಯಗಳು ಕೊನೆಗೆ ಶತ್ರುಗಳ ದಾಳಿಯಿಂದ ನಾಶವಾಗಿದ್ದರೆ ಮತ್ತೆ ಕೆಲವು ಶಾಪಗಳಿಂದ ಪತನವಾಗಿವೆ. ಆದರೆ ಕೆಲವು ಪ್ರಾಚೀನ ಸಾಮ್ರಾಜ್ಯದ ಪ್ರಸಿದ್ದ ನಗರಗಳು ಸಮುದ್ರದ ಒಳಗೆ ಮುಳುಗಿ ಪತನಗೊಂಡಿದ್ದು ಸಾವಿರಾರು ವರ್ಷಗಳ ನಂತರವು ಸಮುದ್ರದ ತಳಭಾಗದಲ್ಲಿ ಅವುಗಳು ಇರುವ ಕುರುಹನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇಂದು ನಿಮಗೆ ಸಮುದ್ರದ ಆಳದಲ್ಲಿ ಸಿಕ್ಕ 5 ಪ್ರಸಿದ್ದ ಪ್ರಾಚೀನ ನಗರಗಳ ಕುರಿತ ಮಾಹಿತಿಯನ್ನು ತಿಳಿಸುತ್ತೇವೆ.

1) Port Royal, Jamaica

ಒಂದಾನೊಂದು ಕಾಲದಲ್ಲಿ ಯುರೋಪಿನ ಅತ್ಯಂತ ಪ್ರಸಿದ್ದ ನಗರಗಳಲ್ಲಿ ಒಂದು ಎಂದು ಪ್ರಸಿದ್ದಿಯಾಗಿದ್ದ ಪೋರ್ಟ್ ರಾಯಲ್ ವರ್ಷಗಳು ಕಳೆದಂತೆ ಹಡಗು ಕಳ್ಳರಿಂದ ಹಾಗು ವೇಶ್ಯೆಯರಿಗಾಗಿಯೆ ಪ್ರಸಿದ್ದಿಯಾಯಿತು. ಎಲ್ಲಿ ನೋಡಿದರು ಅನ್ಯಾಯಗಳು ನಡೆಯಲು ಶುರುವಾಗಿದ್ದವು. ಜೂನ್ 7, 1692ರ ಮುಂಜಾನೆಯ ಸಮಯ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉಂಟಾದ ಸುನಾಮಿಯು ನಗರದಲ್ಲಿದ್ದ 4 ಪ್ರಸಿದ್ದ ಕೋಟೆಗಳು ಹಾಗು 33 ಎಕರೆ ಭೂಮಿಯನ್ನು ನೀರಿನಲ್ಲಿ ಮುಳುಗುವ ಹಾಗೆ ಮಾಡಿತು. ಇಷ್ಟೇ ಅಲ್ಲದೆ ಈ ಸುನಾಮಿಯ ಹೊಡೆತಕ್ಕೆ 2000 ಜನಗಳು ಅಂದು ಪ್ರಾಣ ಕಳೆದುಕೊಂಡಿದ್ದರು. ಇದರೊಂದಿಗೆ ಯುರೋಪಿನ ಪ್ರಸಿದ್ದ ನಗರವೊಂದು ಅಂದು ದುರಂತದ ಅಂತ್ಯ ಕಂಡಿತು.

2) The Pyramids of Yonaguni-Jima, Japan

ಪಿರಾಮಿಡ್ ಗಳ ಹೆಸರನ್ನು ಕೇಳಿದರೆ ಸಾಕು ನಮಗೆ ನೆನಪಾಗುವುದು ಈಜಿಪ್ಟ್ ದೇಶದಲ್ಲಿರುವ ಪಿರಾಮಿಡ್ ಗಳು. ಆದರೆ ಜಪಾನ್ ದೇಶದ Yonaguni-Jima ದ್ವೀಪದ ಮೇಲೆ 5000 ವರ್ಷಗಳ ಹಿಂದೆ ಇದ್ದ ಪಿರಾಮಿಡ್ ಗಳು ಭೂಕಂಪದಿಂದಾಗಿ ಪೆಸಿಫಿಕ್ ಮಹಾಸಾಗರದ ಒಳಗೆ ಮುಳುಗಿದೆ. ಈ ಪಿರಾಮಿಡ್ ಗಳನ್ನು ಮೊದಲ ಬಾರಿಗೆ 1986 ರಲ್ಲಿ ಸ್ಥಳೀಯ ಸ್ಕೂಬಾ ಡೈವರ್ ಆಗಿರುವ Kihachiro Aratake ಅವರು ಕಂಡುಹಿಡಿದರು. 50 ಮೀಟರ್ ಉದ್ದ ಹಾಗು 20 ಮೀಟರ್ ಅಗಲವಿರುವ ಈ ಪಿರಾಮಿಡ್ ಅನ್ನು ಇದುವರೆಗು ಯಾರು ನಿರ್ಮಿಸಿದ್ದು ಎಂದು ತಿಳಿದುಬಂದಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಇದು ಪ್ರಾಚೀನ ಯುಗದ ಮನುಷ್ಯರು ನಿರ್ಮಿಸಿದ್ದಾರೆ. ಆದರೆ ಕೆಲವರು ಹೇಳುವ ಪ್ರಕಾರ ಇದು ಪ್ರಾಕೃತಿಕವಾಗಿ ನಿರ್ಮಾಣವಾಗಿದೆ. ಇದರ ಕುರಿತು ಅನೇಕ ಸಂಶೋದನೆಗಳು ನಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

3) Dwarka, Gulf of Cambay, India

ಈ ನಗರದ ಕುರಿತು ಭಾರತೀಯರಿಗೆ ತಿಳಿದೇ ಇದೆ. ಏಕೆಂದರೆ ಇದು ಕೃಷ್ಣ ಪರಮಾತ್ಮನು ಆಳಿದ್ದ ನಗರ. ಇತಿಹಾಸ ತೆಗೆದು ನೋಡಿದಾಗ ಈ ನಗರದಲ್ಲಿ 70 ಸಾವಿರ ಅರಮನೆಗಳಿದ್ದವು. ಅವುಗಳೆಲ್ಲವನ್ನು ಬಂಗಾರ, ಬೆಳ್ಳಿ, ತಾಮ್ರದಿಂದ ಮಾಡಲಾಗಿತ್ತು. ಗಾಂದಾರಿಯ ಶಾಪದ ಕಾರಣ ಈ ನಗರವು ಮುಳುಗಿ ಹೋಯಿತು. 2000 ದಲ್ಲಿ ಈ ನಗರವಿದ್ದ ಸ್ಥಳದ ಸುತ್ತಲಿನ ಸಮುದ್ರದ ಆಳದಲ್ಲಿ ಹುಡುಕಿದಾಗ 131 feet ಕೆಳಗೆ ಈ ನಗರದ ಅವಶೇಷಗಳು ಸಿಕ್ಕವು. ಇದರೊಂದಿಗೆ 5000 ವರ್ಷಗಳ ಹಿಂದೆ ದ್ವಾರಕದಲ್ಲಿ ನಿಜವಾಗಿಯು ಕೃಷ್ಣನ ಅರಮನೆಗಳು ಇದ್ದವು ಎನ್ನುವುದಕ್ಕೆ ಪುರಾವೆಗಳು ಸಿಕ್ಕವು.

4) Lion City of Quiandao Lake, China

ಒಂದಾನೊಂದು ಕಾಲದಲ್ಲಿ ಸಂಪೂರ್ಣ ಚೀನಾದಲ್ಲಿಯೇ ಅತ್ಯಂತ ಬಲಿಷ್ಠ ಸಾಮ್ರಾಜ್ಯ ಎಂದು ಹೆಸರು ಪಡೆದಿದ್ದ “Shī chéng” ಸಾಮ್ರಾಜ್ಯವು ಅತ್ಯಂತ ಸುಂದರವಾಗಿತ್ತು. 5 ಬೃಹತ್ ಬೆಟ್ಟಗಳ ಮಧ್ಯೆ ಇದ್ದ ಈ ಸಾಮ್ರಾಜ್ಯವನ್ನು lion city ಎಂದು ಕೂಡ ಕರೆಯಲಾಗುತ್ತಿತ್ತು. ನಮಗೆಲ್ಲ ತಿಳಿದ ಹಾಗೆ ಚೀನಾವು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಸರಿಯುವುದಿಲ್ಲ. Zhejiang ಪ್ರಾಂತ್ಯದಲ್ಲಿ ಇರುವ ಜನಗಳಿಗೆ ವಿದ್ಯುತ್ ಸರಭರಾಜಿನ ಶಾಶ್ವತ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ 3 ಲಕ್ಷ ಜನಗಳು ವಾಸಿಸುತ್ತಿದ್ದ lion city ಯನ್ನು Qiandao ಎನ್ನುವ ಮಾನವ ನಿರ್ಮಿತ ಸರೋವರದಲ್ಲಿ ಮುಳುಗಿಸುವ ಅಚ್ಚರಿಯ ನಿರ್ಧಾರವನ್ನು ಚೀನಾ ಸರ್ಕಾರ ತೆಗೆದುಕೊಂಡಿತು. ಈ ನಿರ್ಧಾರದಿಂದಾಗಿ 3 ಲಕ್ಷ ಜನಗಳು ತಮ್ಮ ನೆಲೆಯನ್ನು ಕಳೆದುಕೊಂಡು ಬೇರೆಡೆಗೆ ತೆರೆಳಬೇಕಾಯಿತು. ಬೇರೆ ಪ್ರಾಚೀನ ನಗರಗಳು ಪ್ರಾಕೃತಿಕ ವಿಕೋಪದಿಂದಾಗಿ ಮುಳುಗಡೆಯಾಗಿದ್ದರೆ ಈ ನಗರವು ತನ್ನದೆ ಜನಗಳ ಸ್ವಾರ್ಥಕ್ಕಾಗಿ ಮುಳುಗಡೆಯಾಗಿದೆ. Qiandao ಸರೋವರದ ಒಳಗಿರುವ ಈ ನಗರವು ಈಗ ಪ್ರವಾಸಿಗರ ಆಕರ್ಷಿತ ಕೇಂದ್ರವಾಗಿದ್ದು ಇದನ್ನು ನೋಡುವ ಸಲುವಾಗಿ ಸ್ಕೂಬಾ ಡೈವಿಂಗ್ ಗೊತ್ತಿರುವ ಅನೇಕ ಜನಗಳು ಹೋಗುತ್ತಾರೆ.

5) Cleopatra’s Palace, Alexandria, Egypt

ಈಜಿಪ್ಟನ್ನು ಆಳಿದ ಕೊನೆಯ ರಾಣಿಯ ಹೆಸರು “Cleopatra”. ಹದಿನೆಂಟನೆಯ ವಯಸ್ಸಿನಲ್ಲಿ ರಾಣಿಯಾದ ಈಕೆಯು ಅತ್ಯಂತ ಸುಂದರಿ ಮತ್ತು ಧೈರ್ಯಶಾಲಿಯಾಗಿದ್ದಳು. 51 ಬಿ.ಸಿ.ಯಿಂದ – 30 ಬಿ.ಸಿ. ವರೆಗು ಆಳಿದ ಈ ರಾಣಿಯು ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕೊನೆಯುಸಿರೆಳೆದಳು. ತನ್ನ ಆಳ್ವಿಕೆಯ ಸಮಯದಲ್ಲಿ ಅಲೆಕ್ಸ್ಯಾಂಡರ್ ದಿ ಗ್ರೇಟ್ ನಿರ್ಮಿಸಿದ್ದ “Alexandria” ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಈ ಮಹಾರಾಣಿಯು ಈ ನಗರದಲ್ಲಿ ತನ್ನ ಬೃಹತ್ ಅರಮನೆಯನ್ನು ಹೊಂದಿದ್ದಳು. ಈ ಭವ್ಯ ಅರಮನೆಯ ಸೌಂದರ್ಯವನ್ನು ಪುರಾತನ ಪುಸ್ತಕಗಳಲ್ಲಿ ವಿವರಿಸಲಾಗಿದ್ದು Antirhodos ಎನ್ನುವ ದ್ವೀಪದ ಮೇಲೆ ಇದು ಇತ್ತು ಎಂದು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ಆಧಾರವಾಗಿ ಇಟ್ಟುಕೊಂಡು 1990 ರಲ್ಲಿ ಈ ಅರಮನೆಯನ್ನು ಆ ದ್ವೀಪದ ಸುತ್ತ ಇರುವ ಸಮುದ್ರದ ತಳದಲ್ಲಿ ಹುಡುಕುತ್ತ ಹೋದ ವಿಜ್ಞಾನಿಗಳು. ಸತತ 8 ವರ್ಷಗಳ ನಂತರ ಈ ಅರಮನೆ ಇರುವ ಸ್ಥಳವನ್ನು ಸಮುದ್ರದ ಆಳದಲ್ಲಿ ಪತ್ತೆ ಮಾಡಿದರು. ಸಮುದ್ರದಲ್ಲಿ ಮುಳುಗಿರುವ ಈ ಅರಮನೆಯ ಅವಶೇಷಗಳನ್ನು ನೋಡುತ್ತ ಹೋದ ವಿಜ್ಞಾನಿಗಳಿಗೆ ಸಾಕಷ್ಟು ಅಚ್ಚರಿ ಕಾದಿತ್ತು. ಏಕೆಂದರೆ ಅಲ್ಲಿ ಸುಮಾರು 2000 ವರ್ಷಗಳಷ್ಟು ಹಳೆಯ ನಾಣ್ಯಗಳು, ಅನೇಕ ಪ್ರತಿಮೆಗಳು, ಆಗಿನ ಕಾಲದಲ್ಲಿ ಬಳಸಲಾಗುತ್ತಿದ್ದ ವಸ್ತುಗಳು ಅವರಿಗೆ ಸಿಕ್ಕವು. ಇದುವರೆಗು 20 ಸಾವಿರಕ್ಕಿಂತ ಹೆಚ್ಚು ವಸ್ತುಗಳು ಅವರಿಗೆ ಅಲ್ಲಿ ಸಿಕ್ಕಿದ್ದು ಒಂದೊಂದನ್ನೇ ಸಮುದ್ರದ ತಳದಿಂದ ಮೇಲೆ ತರಲಾಗುತ್ತಿದೆ. ಅಂದಹಾಗೆ ಈ ಭವ್ಯ ಸಾಮ್ರಾಜ್ಯವು ಈ ರೀತಿ ಸಮುದ್ರದಲ್ಲಿ ಮುಳುಗಲು ಪ್ರಮುಖ ಕಾರಣ ಭೂಕಂಪ ಮತ್ತು ಸುನಾಮಿ ಎಂದು ತಿಳಿದುಬಂದಿದೆ.

Follow Karunadu Today for more Interesting Facts & Stories. 

Click here to Join Our Whatsapp Group