ಜೀವನದಲ್ಲಿ ಯಶಸ್ಸು ಕಾಣಬೇಕು ಎನ್ನುವುದು ಎಲ್ಲರ ಆಸೆ. ಆದರೆ ಆ ಯಶಸ್ಸು ಕಾಣುವುದಕ್ಕೆ ಕೆಲವು ಅಂಶಗಳನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಆ ಅಂಶಗಳು ನಿಮ್ಮನ್ನು ಜೀವನದಲ್ಲಿ ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ. ಆ ಅಂಶಗಳ ಪಟ್ಟಿ ಕೆಳಗಡೆ ಇದೆ.

1. ಗಾಳಿಸುದ್ದಿ:
ಬೇರೆಯವರ ಬಗ್ಗೆ ಗಾಳಿಸುದ್ದಿ ಹರಡಿಸುವವರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ ಅದಕ್ಕೆ ಅಂತ್ಯವೇ ಇಲ್ಲ. ನೀವು ಅವುಗಳಿಗೆ ಕಿವಿ ಕೊಟ್ಟರೆ ನಿಮ್ಮ ನೆಮ್ಮದಿಯನ್ನು ಕಿತ್ತುಕೊಂಡು ಗುರಿಯ ಕಡೆಗೆ ಲಕ್ಷ್ಯವಿಲ್ಲದ ಹಾಗೆ ಮಾಡುತ್ತವೆ.

2. ನಿರ್ಧಾರ:

ಇದು ಅತಿಮುಖ್ಯವಾದ ಅಂಶ. ಏನಾದರು ಸಾಧಿಸಬೇಕೆಂದು ಬೇರೆಯವರ ಸಲಹೆ ಕೇಳಿದರೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ನೀಡುತ್ತಾರೆ. ಎಲ್ಲರ ಸಲಹೆ ಕೇಳಿ, ಆದರೆ ಅಂತಿಮವಾಗಿ ನಿರ್ಧಾರ ನಿಮ್ಮದೇ ಆಗಿರಲಿ.

3. ಎಲ್ಲರನ್ನು ಗೌರವಿಸಿ:
ನೀವು ಏನಾದರೊಂದು ಹೊಸತನ್ನು ಸಾಧಿಸಬೇಕಾದರೆ ಯಾವ ವ್ಯಕ್ತಿ ಯಾವ ಸಮಯಕ್ಕೆ ಕೆಲಸಕ್ಕೆ ಬರುತ್ತಾನೆ ಎಂದು ಹೇಳುವುದು ಅಸಾಧ್ಯ, ಅದಕ್ಕೆ ಎಲ್ಲರನ್ನು ಗೌರವಿಸಿ, ನೆನಪಿರಲಿ ಈ ಭೂಮಿಯಲ್ಲಿ ಕೆಲಸಕ್ಕೆ ಬಾರದಿರುವ ಯಾವುದೇ ವಸ್ತು ಅಥವ ವ್ಯಕ್ತಿ ಇಲ್ಲ.

4. ಸಮಯದ ಸರಿಯಾದ ನಿರ್ವಹಣೆ:
ಪ್ರತಿದಿನ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನೆಲ್ಲಾ ಮಾಡಬೇಕೆಂದು ಒಂದು ಪಟ್ಟಿ ಮಾಡಿಕೊಳ್ಳಿ ಮತ್ತು ಅದನ್ನು ನಿಮ್ಮ ಮೊಬೈಲಿನಲ್ಲಿ ಅಥವ ನಿಮಗೆ ಕಾಣುವ ಯಾವುದೇ ಜಾಗದಲ್ಲಿ ಅಂಟಿಸಿಡಿ. ಇದರಿಂದ ನೀವು ಸ್ವಲ್ಪ ಸಮಯವೂ ವೇಸ್ಟ್ ಮಾಡುವುದಿಲ್ಲ.

5. ವಾದ-ವಿವಾದ:
ಇದು ಸಹ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತದೆ. ಯಾರಾದರೂ ವಿನಾಕಾರಣ ವಾದಮಾಡುತ್ತಿದ್ದರೆ ಅಂಥವರಿಂದ ಆದಷ್ಟು ದೂರವಿರಿ. ಹೆಚ್ಚು ವಾದ ಮಾಡುವುದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

6. ನಗು:
ನಗುವಿಗೆ ಎಂತಹ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವ ಅದ್ಭುತ ಶಕ್ತಿ ಹೊಂದಿದೆ. ಅಲ್ಲದೆ ನಗುವುದರಿಂದ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಎಲ್ಲರನ್ನು ನಗುತ್ತಾ ಸ್ವಾಗತಿಸಿ ನಿಮ್ಮ ಕೆಲಸ ಸುಲಭವಾಗುತ್ತದೆ.

7. ವಾರದ ರಜೆ ನಿರ್ವಹಣೆ:
ಪ್ರತೀವಾರ ರಜೆ ಸಿಕ್ಕಾಗಲೆಲ್ಲ ಟಿವಿ ನೋಡುವ ಬದಲು ಮನೆಯ ಸುತ್ತಲಿರುವ ಮಕ್ಕಳ ಜೊತೆ ಅಥವಾ ಗ್ರಂಥಾಲಯ, ಪಿಕ್ನಿಕ್ ಗೆ ಹೋಗಿ ಕಾಲ ಕಳೆಯಿರಿ ಇದರಿಂದ ಒತ್ತಡ ಮುಕ್ತರಾಗುತ್ತೀರಿ.

8. ವ್ಯಾಯಾಮ:
ಮಾನಸಿಕ ಜೊತೆ ದೈಹಿಕ ಶಕ್ತಿಯು ಅಷ್ಟೇ ಮುಖ್ಯ ಅದಕ್ಕೆ ಪ್ರತಿದಿನ ಬೆಳಗ್ಗೆ ವ್ಯಾಯಾಮ, ಧ್ಯಾನ ಮತ್ತು ರನ್ನಿಂಗ್ ಮಾಡುವ ಅಭ್ಯಾಸ ರೂಡಿಸಿಕೊಳ್ಳಿ.

9. ನಿದ್ರೆ:
ಎಲ್ಲಾ ಕೆಲಸ ಮಾಡಿದ ನಂತರ ದೇಹಕ್ಕೆ ನಿದ್ರೆ ಬಹಳ ಮುಖ್ಯ. ಪ್ರತಿದಿನ ಕನಿಷ್ಠ 7 ಗಂಟೆ ನಿದ್ರೆ ಮಾಡಿ. ಇದರಿಂದ ಬೆಳಗ್ಗೆ ಎದ್ದ ಮೇಲೆ ಹೊಸ ಐಡಿಯಾಗಳು ಬರುತ್ತವೆ, ದಿನ ಚೆನ್ನಾಗಿ ಕಳೆಯುತ್ತದೆ.

For more Stories follow Karunadu Today

Click here to Join Our Whatsapp Group