2018 ರ ಆಗಸ್ಟ್ 16 ರಂದು ಬಿಡುಗಡೆಯಾದ “Alpha” ಸಿನಿಮಾವು ನಿಮ್ಮನ್ನು 20 ಸಾವಿರ ವರ್ಷಗಳ ಹಿಂದೆ ಮನುಷ್ಯರು ವಾಸಿಸುತ್ತಿದ್ದ ರೀತಿಯನ್ನು ತೋರಿಸುವುದರ ಜೊತೆಗೆ ಮನುಷ್ಯ ಮತ್ತು ತೋಳದ ನಡುವೆ ಇರುವ ಸ್ನೇಹವನ್ನು ಬಿಂಬಿಸುವ ಕಥೆಯನ್ನು ಹೊಂದಿದೆ. “Albert Hughes” ನಿರ್ದೇಶನದ ಈ ಸಿನಿಮಾವು ಪ್ರಪಂಚದೆಲ್ಲೆಡೆ ಗಳಿಸಿದ್ದು 10 ಕೋಟಿ ಅಮೆರಿಕನ್ ಡಾಲರ್.

ಈ ಸಿನಿಮಾದ ಕಥೆಯು ಆರಂಭವಾಗುವುದು 20 ಸಾವಿರ ವರ್ಷಗಳ ಹಿಂದೆ ಯುರೋಪಿನ ಒಂದು ಪ್ರಾಂತ್ಯದಲ್ಲಿ. ಆಗಿನ ಕಾಲದಲ್ಲಿ ಮನುಷ್ಯರು ಬದುಕಲು ಪ್ರಾಣಿಗಳ ಹಾಗೆ ಭೇಟೆ ಆಡಬೇಕಿತ್ತು. ಒಂದು ಗುಂಪಿನ ಜನರು ಕಾಡೆಮ್ಮೆಗಳನ್ನು ಭೇಟೆ ಆಡಲು ಪ್ರಯತ್ನ ಪಡುತ್ತಿರುವ ಸನ್ನಿವೇಶವನ್ನು ಸಿನಿಮಾದ ಆರಂಭದಲ್ಲಿ ನೀವು ಕಾಣಬಹುದು. ಹೀಗೆ ಭೇಟೆ ಆಡುತ್ತಿರುವ ವೇಳೆ ಆ ಗುಂಪಿನ ಜನರ ನಾಯಕ tau ತನ್ನ ಜನರಿಗೆ ಹೇಗೆ ಆ ಕಾಡೆಮ್ಮೆಗಳನ್ನು ಬೆಟ್ಟದ ಮೇಲಿಂದ ಬೀಳುವ ಹಾಗೆ ತಂತ್ರ ರಚಿಸಬೇಕು ಎಂದು ಹೇಳಿಕೊಡುತ್ತಾನೆ. ಆ ಗುಂಪಿನ ಜನರನ್ನು ಕಂಡ ಕಾಡೆಮ್ಮೆಗಳು ದಿಕ್ಕಾಪಾಲಾಗಿ ಎಲ್ಲೆಂದರಲ್ಲಿ ಒಡಲು ಶುರು ಮಾಡುತ್ತವೆ. ಅದರಲ್ಲಿ ಒಂದು ಎಮ್ಮೆಯು ಆ ಗುಂಪಿನ ನಾಯಕನ ಮಗನಾದ ಮತ್ತು ಈ ಸಿನಿಮಾದ ನಾಯಕನಾದ keda ಮೇಲೆ ದಾಳಿ ಮಾಡಿ ಆ ಬೆಟ್ಟದ ಮೇಲಿಂದ ಕೆಳಗೆ ಎಸೆದುಬಿಡುತ್ತದೆ. ಹೀಗೆ ಆರಂಭವಾಗುವ ಸಿನಿಮಾವು ಒಂದು ವಾರದ ಹಿಂದೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ.

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group