ಚಿಕ್ಕ ಚಿಕ್ಕ ಸಂಗತಿಗಳಲ್ಲಿ ಹೇಗೆ ನಾವು ಜೀವನದಲ್ಲಿ ಕಳೆದುಕೊಂಡ ಖುಷಿಯನ್ನು ಮರಳಿ ಪಡೆಯಬಹುದು ಎಂಬುದಕ್ಕೆ ಈ ಘಟನೆ ಸರಿಯಾದ ಉದಾಹರಣೆ. ಬೆಳೆಯುತ್ತಿರುವ ನಗರಗಳ ಜೊತೆ ಬದಲಾದ ಜೀವನಶೈಲಿಯಿಂದ ನಾವು ಸಣ್ಣ ಸಂಗತಿಗಳಲ್ಲಿ ಖುಷಿಯನ್ನು ಹುಡುಕುವುದನ್ನೇ ಮರೆತ್ತಿದ್ದೇವೆ.

ಒಂದೊಮ್ಮೆ ಒಬ್ಬ ಶ್ರೀಮಂತ ಸುಂದರ ಮಹಿಳೆ ತನ್ನ ಐಷಾರಾಮಿ ಕಾರಿನಲ್ಲಿ ಡಿಸೈನರ್ ಬಟ್ಟೆಗಳು, ಅತಿಹೆಚ್ಚು ಬೆಲೆ ಬಾಳುವಂತಹ ಆಭರಣಗಳನ್ನು ಧರಿಸಿಕೊಂಡು ಮಾನಸಿಕ ವೈದ್ಯರ ಬಳಿ ಬಂದಳು. ನನಗೆ ಜೀವನದಲ್ಲಿ ಜಿಗುಪ್ಸೆಯಾಗಿದೆ, ಖಿನ್ನತೆಯಾಗಿದೆ, ಬದುಕಲು ಯಾವ ಕಾರಣವಿಲ್ಲದಂತಾಗಿದೆ ಎಂದಳು. ಇದನ್ನು ಕೇಳಿದ ವೈದ್ಯರು ಒಂದು ಕ್ಷಣ ಮುಗುಳ್ನಕ್ಕರು, ನಂತರ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ಕಸಗುಡಿಸುವವಳನ್ನು ಕರೆಸಿ ಆ ಶ್ರೀಮಂತ ಮಹಿಳೆಗೆ ಆ ಕೆಲಸ ಮಾಡುವ ಮಹಿಳೆಯ ಮಾತುಗಳನ್ನು ಸುಮ್ಮನೆ ಆಲಿಸಲು ಸೂಚಿಸಿದರು. ವೈದ್ಯರು ಹೇಳಿದ ಮಾತು ಕೇಳಿದ ಆ ಶ್ರೀಮಂತ ಮಹಿಳೆಗೆ ಅಚ್ಚರಿಯಾಯಿತು, ಬಹುಷಃ ಯಾವುದಾದರು ಔಷಧಿ ಸೂಚಿಸುತ್ತಾರೆಂದು ತಿಳಿದಿರಬೇಕು ಅಂದುಕೊಂಡಳು.

ಆ ಕೆಲಸ ಮಾಡುವ ಮಹಿಳೆ ವೈದ್ಯರ ಸೂಚನೆ ಮೇರೆಗೆ ಹತ್ತಿರ ಬಂದು ತನ್ನ ಜೀವನದಲ್ಲಿ ನಡೆದ ಘಟನೆ ಗಳನ್ನು ವಿವರಿಸತೊಡಗಿದಳು. ನಾಲ್ಕು ವರ್ಷಗಳ ಹಿಂದೆ ನನ್ನ ಪತಿ ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿದರು, ಅವರ ಮರಣದ ನಂತರ ನನ್ನ ಹಾಗು ಶಾಲೆಯಲ್ಲಿ ಓದುತ್ತಿದ್ದ ನನ್ನ ಮಗನ ಜೀವನೋಪಾಯ ದುಸ್ಥಿರವಾಯಿತು, ಹೇಗೋ ಮಗನಿಗಾಗಿ ಕೆಲಸಕ್ಕೆ ಸೇರಿ ಜೀವನವನ್ನು ಸುಧಾರಿಸಿಕೊಂಡೆ.

ಈ ಘಟನೆಯ ನಂತರ ತುಂಬಾ ನೊಂದಿದ್ದ ನನಗೆ ಇನ್ನೊಂದು ಆಘಾತ ಕಾದಿತ್ತು ಒಂದು ವರ್ಷದ, ನನ್ನ ಮಗ ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ. ಆ ಸುದ್ದಿ ಕೇಳಿ ಸಂಪೂರ್ಣವಾಗಿ ಕುಸಿದು ಹೋದೆ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸಿತು, ಅಲ್ಲಿಂದ ನಾನು ನಕ್ಕಿದ್ದೆ ಇಲ್ಲ, ಸಂತೋಷ ಪಟ್ಟಿದ್ದೆ ಇಲ್ಲ.

ಒಂದು ದಿನ ನಾನು ಆಸ್ಪತ್ರೆಯ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ನಾಯಿ ಮರಿಯೊಂದು ನನ್ನ ಮನೆಯ ಬಾಗಿಲ ಬಳಿ ಬಂದು ನಿಂತಿತ್ತು, ಮಳೆಯಲ್ಲಿ ನೆನೆದಿದ್ದ ಅದನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಹಾಲು ಹಾಕಿದೆ, ಹಾಲು ಕುಡಿದ ನಂತರ ಅದು ನನ್ನ ಕಾಲು ನೆಕ್ಕ ತೊಡಗಿತು, ಎಷ್ಟೋ ತಿಂಗಳುಗಳ ನಂತರ ನನಗೆ ಆ ನಾಯಿಮರಿಯ ನಡೆಯಿಂದ ನಗು ಬಂದಿತು.

ನಾನು ಕೆಲ ಕ್ಷಣಗಳ ನಂತರ ಯೋಚಿಸಿದೆ ಒಂದು ನಾಯಿ ಮರಿಗೆ ಸಹಾಯ ಮಾಡಿದರೆ ನನಗೆ ಇಷ್ಟು ಖುಷಿ ಸಿಗುತ್ತದೆಯೆಂದರೆ ಕಷ್ಟದಲ್ಲಿರುವ ಇತರರಿಗೆ ಸಹಾಯ ಮಾಡಿದರೆ ಇನ್ನೆಷ್ಟು ಖುಷಿ ಸಿಗಬಹುದೆಂದು. ಅಂದಿನಿಂದ ನಿತ್ಯ ಸಾದ್ಯವಾದಷ್ಟು ಆಹಾರವನ್ನು ಅಗತ್ಯವಿರುವವರಿಗೆ ಮತ್ತು ಪ್ರಾಣಿಗಳಿಗೆ ನೀಡುತ್ತಾ ಅವರ ಮುಖದಲ್ಲಿ ಮೂಡುವ ನಗುವಿನಿಂದ ನಾನು ಖುಷಿಪಡುತ್ತೇನೆ ಎಂದಳು.

ಆ ಕೆಲಸ ಮಾಡುವ ಮಹಿಳೆ ಇತರರಿಗೆ ಸಹಾಯ ಮಾಡುತ್ತಾ ಸಣ್ಣ ಸಂಗತಿಗಳಲ್ಲಿ ಇಷ್ಟು ಖುಷಿಯಾಗಿದ್ದಳೆಂದರೆ ನನ್ನ ಬಳಿ ಇಷ್ಟು ಹಣವಿದ್ದರೂ ಇತರರಿಗೆ ಸಹಾಯ ಮಾಡದೆ ಸ್ವಾರ್ಥಿಯಾಗಿ ದುಃಖದಲ್ಲಿದ್ದೇನೆಂದು ಆ ಶ್ರೀಮಂತ ಮಹಿಳೆಗೆ ಮನವರಿಕೆಯಾಯಿತು. ಇದರಿಂದ ನಮಗೆ ತಿಳಿಯುವುದೇನೆಂದರೆ ಹಣದ ಹಿಂದೆ ಓಡುವ ಬದಲು ನಮಗಿಷ್ಟವಿರುವ, ಅಲ್ಪ ಹಣ ನೀಡುವ ಕೆಲಸವಾದರೂ ಚಿಂತೆಯಿಲ್ಲದೆ ಖುಷಿಯಿಂದ ಮಾಡಬೇಕು, ಏಕೆಂದರೆ ನಗು ಮತ್ತು ಖುಷಿ ಎಷ್ಟು ಹಣ ನೀಡಿದರು ಖರೀದಿಸಲಾಗುವುದಿಲ್ಲ.

For more Stories follow Karunadu Today

Click here to Join Our Whatsapp Group