
ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಎಷ್ಟೊಂದು ವಿಷಪೂರಿತ ಜೀವಿಗಳಿವೆ ಅದರಲ್ಲಿ ಪ್ರಮುಖವಾಗಿ ಕಂಡುಬರುವವು ಹಾವುಗಳು, ಈ ಪ್ರಪಂಚದಲ್ಲಿ ನೂರಕ್ಕೆ 80% ರಷ್ಟು ವಿಷಯವಿಲ್ಲದ ಹಾವುಗಳೆ ಜೀವಿಸುತ್ತಿವೆ ಆದರೆ ಉಳಿದ 20 ಪರ್ಸೆಂಟ್ ಅಷ್ಟು ಹಾವುಗಳು ಅತ್ಯಂತ ವಿಷಪೂರಿತ ಹಾವುಗಳಾಗಿವೆ, ಇವುಗಳು ಮನುಷ್ಯನಿಗೆ ಭಯವನ್ನ ಉಂಟು ಮಾಡುತ್ತಿವೆ , ಏಕೆಂದರೆ ಅಷ್ಟೊಂದು ವಿಷಪೂರಿತವಾಗಿರುತ್ತವೆ ,ಒಂದು ವೇಳೆ ಈ ವಿಷಪೂರಿತ ಹಾವುಗಳಿಂದ ಕಡಿತಕ್ಕೆ ಒಳಗಾದವರಿಗೆ ತಕ್ಷಣ ಟ್ರೀಟ್ಮೆಂಟ್ ಸಿಗದೇ ಇದ್ದರೆ ಸತ್ತುಹೋಗುವ ಸಾಧ್ಯತೆಗಳಿವೆ. ಆದರೆ ಮಲೇಷಿಯಾ ದೇಶದ ಒಬ್ಬ ವ್ಯಕ್ತಿ ಬರೋಬ್ಬರಿ 40 ದಿನಗಳ ಕಾಲ ಒಂದೇ ಪೆಟ್ಟಿಗೆಯಲ್ಲಿ ಕಾರ್ಕೋಟಕ ವಿಷಪೂರಿತ ಹಾವುಗಳ ಜೊತೆ ತನ್ನ ಸಾಹಸವನ್ನ ಪ್ರದರ್ಶಿಸಿ ಪ್ರತಿಯೊಬ್ಬರನ್ನು ಅಚ್ಚರಿ ಪಡುವಂತೆ ಮಾಡಿದ. ಹಾಗಾದರೆ ಇಂದು ನಾವು ಆ ಸಾಹಸಮಯ ವ್ಯಕ್ತಿಯ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.

ಮಲೇಷಿಯಾದ ಸ್ನೇಕ್ ಕಿಂಗ್ ಎಂದೇ ಹೆಸರುವಾಸಿಯಾದ ಅಲಿ ಖಾನ್ ಸಂಸುದಿನ ಅವರು ಹಾವು,ಚೇಳುಗಳ ಜೊತೆ ಸಾಹಸ ಪ್ರದರ್ಶನವನ್ನು ನೀಡುವ ಇವರು ಜನವರಿ 3, 1958ರಂದು ಜನಿಸಿದರು.ಇವರು ಚಿಕ್ಕ ವಯಸ್ಸಿನಿಂದಲೇ ಹಾವುಗಳನ್ನ ಕಂಡರೆ ಅಪಾರವಾದ ಪ್ರೀತಿ ಹಾಗೂ ಕುತೂಹಲವನ್ನು ಹೊಂದಿದರು. ಹಾವುಗಳು, ಚೇಳುಗಳನ್ನ ಹಿಡಿಯುವುದನ್ನೆ ವೃತ್ತಿಯಾಗಿ ತೆಗೆದುಕೊಂಡ ಇವರು. 1990ರಲ್ಲಿ ಸರಿ ಸುಮಾರು 5000ಕ್ಕೂ ಹೆಚ್ಚು ಚೇಳುಗಳಿದ್ದ ಗಾಜಿನ ಪೆಟ್ಟಿಗೆಯಲ್ಲಿ 21 ದಿನಗಳ ಕಾಲ ಇದು ತಮ್ಮ ಸಾಹಸ ಪ್ರದರ್ಶನವನ್ನು ಪ್ರಪಂಚಕ್ಕೆ ತೋರಿಸಿದರು. ಹಾಗೆ ಬರೋಬ್ಬರಿ 400ಕ್ಕೂ ಹೆಚ್ಚು ಕಾರ್ಕೋಟಕ ವಿಷಯಿರುವ ಹಾವುಗಳ ಜೊತೆ 40 ದಿನಗಳ ಕಾಲ ಒಂದೇ ಪೆಟ್ಟಿಗೆಯಲ್ಲಿದ್ದು ರೋಮಾಂಚಕ ಸಾಹಸವನ್ನು ಮಾಡಿದರು. ಇವರ ಸಹವಾಸವನ್ನು ಮೆಚ್ಚಿ ಇವರಿಗೆ “ಸ್ನೇಕ್ ಕಿಂಗ್” ಹಾಗೂ “ಸ್ಕಾರ್ಪಿಯನ್ ಕಿಂಗ್” ಎಂಬ ಬಿರುದು ನೀಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ.
ದುರಂತದ ಸಂಗತಿ ಏನಪ್ಪಾ ಅಂದರೆ ಸುಮಾರು 25 ವರ್ಷಗಳ ಕಾಲ ಇದೇ ಕೆಲಸದಲ್ಲಿ ತೊಡಗಿರುವ ಇವರಿಗೆ ಬರೋಬ್ಬರಿ 99 ಸಲ ಹಾವುಗಳ ಕಡಿತಕ್ಕೆ ಒಳಗಾದರೂ ಕೂಡ ಪ್ರಾಣಾಪಯದಿಂದ ಗೆದ್ದು ಬಂದಿದ್ದಾರೆ. ಆದರೆ ಅಷ್ಟು ಸಲ ಹಾವುಗಳ ಕಡಿತಕ್ಕೆ ಒಳಗಾದರೂ ಕೂಡ ಒಮ್ಮೆಯೂ ತೊಂದರೆಯನ್ನು ಅನುಭವಿಸಿದ ಇವರು ಒಮ್ಮೆ ಕೌಲಲಾಂಪುರನಲ್ಲಿ ನಡೆಸಿದ ಸಾಹಸ ಪ್ರದರ್ಶನದಲ್ಲಿ ನಾಗರಹಾವು ಅವರ ಕೈಗೆ ಕಚ್ಚಿದ್ದು ಅವರ ಪಾಲಿಗೆ ಕೊನೆಯ ಪ್ರದರ್ಶನವಾಯಿತು.ಹಾವು ಕಡಿತದಿಂದ ಒಳಗಾದ ಅವರು ಆಸ್ಪತ್ರೆಗೆ ದಾಖಲಾದರು ಕೂಡ ಚಿಕಿತ್ಸೆ ಫಲಕಾರಿ ಆಗದೆ ಸಾವನಪ್ಪಿದ್ದರು.

ಅವರ ಸಾವಿನ ನಂತರ ಅವರ ಮಗನಾದ ಅಮ್ಜದ್ ಖಾನ್ ತಮ್ಮ ತಂದೆಯ ವೃತ್ತಿಯನ್ನೇ ತಾವು ಕೂಡ ಮುಂದುವರಿಸುತ್ತಿದ್ದಾರೆ, ಅವರ ತಂದೆಗೆ ಸ್ನೇಕ್ ಕಿಂಗ್ ಎಂದು ಬಿರುದು ಕೊಟ್ಟವರು ಇಂದು ಅವರ ಮಗನು “ಸ್ನೇಕ್ ಪ್ರಿನ್ಸ್” ಎಂದೇ ಖ್ಯಾತಿ ಪಡೆದರು.
2015ರಲ್ಲಿ ನಡೆದ ಟಿವಿ ಶೋ ವರ್ಲ್ಡ್ ಮೋಸ್ಟ ಟ್ಯಾಲೆಂಟೆಡ್ ನಲ್ಲಿ ಅವರ ತಂದೆ ಸಾವಿಗೆ ಕಾರಣವಾದ ನಾಗರಹವನ್ನೇ ಕೈಯಲ್ಲಿ ಹಿಡಿದು ಮುತ್ತಿಟ್ಟು ಸಾಹಸವನ್ನ ಪ್ರದರ್ಶಿಸಿದರು. ಅವರ ತಂದೆಯ ತರನೇ ಹಾವುಗಳನ್ನ ಪಳಗಿಸುವಲ್ಲಿ ಅಪಾರವಾದ ಜ್ಞಾನವನ್ನು ಹೊಂದಿರುವಂತಹ ಅಮ್ಜದ್ ಖಾನ್ ಅವರು ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ತಮ್ಮ ತಂದೆಯ ಜೊತೆಗೆ ಹಾವುಗಳ ಜೊತೆ ಆಟವಾಡುತ್ತಿದ್ದ ಅಮ್ಜಾದ್ ಖಾನ್ ಅವರು ತುಂಬಾ ಧೈರ್ಯವಂತ ಬುದ್ಧಿಶಾಲಿ ಹಾಗೂ ಅವುಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಟಿವಿ ಶೋನಲ್ಲಿ ನಿರೂಪಕಿ ಲಾರಾ ಜಾಕ್ಸನ್ ಜೊತೆ ಮಾತನಾಡುವಾಗ ಅಮ್ಜದ್ ಖಾನ್ ಅವರು ತಮ್ಮ ತಂದೆಯ ಸಾವಿನ ಮುಂಚೆ ಹಾವುಗಳಿಗೆ ಮುತ್ತಿಡಲು ತುಂಬಾನೇ ಭಯಪಡುತ್ತಿದ್ದೆ ಎಂದು ಹೇಳಿದ್ದರು. ಇಂದು ಅವರ ತಂದೆಯ ತರಾನೇ ಹಾವುಗಳನ್ನ ಪಳಗಿಸುವಲ್ಲಿ ನಿಪುಣರಾಗಿದ್ದಾರೆ.
ಅಲಿ ಖಾನ್ ಸಂಸುದಿನ ತರಾನೇ ಎಷ್ಟೋ ಜನರು ಹಾವುಗಳ ಜೊತೆ ಸಾಹಸ ಕ್ರೀಡೆಯನ್ನ ಮಾಡುತ್ತಿದ್ದಾರೆ. ಅವುಗಳನ್ನೇ ವೃತ್ತಿಯಾಗಿ ತೆಗೆದುಕೊಂಡ ಇವರು ಹಾವುಗಳ ಜೊತೆ ಪ್ರೀತಿಯಿಂದ ಸೌಮ್ಯತೆಯಿಂದ ನಡೆದುಕೊಳ್ಳುತ್ತಾರೆ. ಹಾಗೆ ಅಕ್ಕ ಪಕ್ಕದಲ್ಲಿ ಎಲ್ಲಾದರೂ ಹಾವುಗಳು ಕಾಣಿಸಿಕೊಂಡರೆ ಅವುಗಳನ್ನ ಹಿಡಿದು ಮತ್ತೆ ಮರಳಿ ಕಾಡಿನಲ್ಲಿ ಅವುಗಳನ್ನು ಬಿಡುತ್ತಾರೆ. ಹಾವುಗಳ ಜೊತೆ ನಾವು ಹೇಗೆ ವರ್ತನೆ ಮಾಡುತ್ತೇವೆ ಅದೇ ರೀತಿ ಹಾವುಗಳು ಕೂಡ ನಮ್ಮ ಜೊತೆ ವರ್ತಿಸುತ್ತವೆ, ಪ್ರೀತಿಯಿಂದ ಅವುಗಳನ್ನು ನೋಡಿಕೊಂಡರೆ ಅವುಕೂಡ ನಮ್ಮ ಜೊತೆ ಪ್ರೀತಿಯಿಂದ ಬೆರೆಯುತ್ತವೆ. ಅವು ನಮ್ಮ ಜೊತೆ ಎಷ್ಟು ಪ್ರೀತಿಯಿಂದ ಇರುತ್ತವೋ ಅಷ್ಟೇ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಅದರಿಂದಾಗಿ ನಾವುಗಳು ಹಾವುಗಳಿಂದ, ಚೇಳುಗಳಿಂದ ಇನ್ನಿತರ ಜೀವಿಗಳಿಂದ ಆದಷ್ಟು ದೂರ ಇರುವುದೇ ಒಳ್ಳೆಯದು.
Follow Karunadu Today for more Interesting Facts & Stories.
Click here to Join Our Whatsapp Group