
ನಾವು ಇಂದು ಮಾಡುವ ಕೆಲಸದಿಂದ ನಮಗೆ ನಾಳೆ ಖಂಡಿತ ಉಪಯೋಗವಾಗುತ್ತದೆ ಎನ್ನುವುದು ಎಷ್ಟು ಸತ್ಯ ಎಂದು ನಮಗೆ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಬರೀ ನಮಗೆ ಏಕೆ ಹೀಗಾಗುತ್ತದೆ ಎಂದು ಬೇರೆಯವರನ್ನು ಶಪಿಸುತ್ತೇವೆ. ಆದರೆ ಇಂದು ನಾವು ಪಡುವ ಕಷ್ಟದಿಂದ ಹೇಗೆಲ್ಲಾ ಸಹಾಯವಾಗುತ್ತದೆಂದು ತಿಳಿಸುತ್ತೇವೆ ಕೇಳಿ.
ಒಮ್ಮೆ ಹರೀಶ್ ಎನ್ನುವ ಹುಡುಗ ಶಾಲೆಗೆ ಹೋಗುತ್ತಿದ್ದ. ಪ್ರತಿದಿನ ಅವನು ತನ್ನ ಸುತ್ತ-ಮುತ್ತಲು ಆಗುತ್ತಿದ್ದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಖುಷಿಪಡುತ್ತಿದ್ದ. ದಿನಾಲೂ ಶಾಲೆಗೆ ಹೋಗಿ ಬರುವಾಗ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದರೆ ಹಿಂದೆ ಮುಂದೆ ನೋಡದೇ ಮೊದಲು ಸಹಾಯ ಮಾಡುತ್ತಿದ್ದ.
ಹೀಗೆ ಹರೀಶ್ ಒಮ್ಮೆ ಶಾಲೆಗೆ ಹೋಗುವಾಗ ಒಂದು ಚಿಟ್ಟೆಯ ಗೂಡನ್ನು ನೋಡಿದ ಅದರಲ್ಲಿ ಒಂದು ಚಿಟ್ಟೆ ಹುಟ್ಟಿತು ಅದು ಹೊರಗೆ ಬರಲು ಬಹಳ ಪ್ರಯತ್ನ ಪಡುತ್ತಿತ್ತು, ಇದು ಚಿಟ್ಟೆಯ ಜೀವನದ ಒಂದು ಬಹು ಮುಖ್ಯ ಭಾಗ. ಅದರಿಂದ ಅದು ಕಷ್ಟ ಪಟ್ಟು ಹೊರಗೆ ಬಂದರೆ ಮಾತ್ರ ಅದಕ್ಕೆ ಹಾರಲು ಸಾಧ್ಯವಾಗುತ್ತದೆ, ಅದನ್ನು ಅರಿಯದ ಹರೀಶ್ ಅದಕ್ಕೆ ಹೇಗಾದರೂ ಹೊರಗೆ ಬರಲು ಸಹಾಯ ಮಾಡಬೇಕು ಎಂದು ನಿರ್ಧರಿಸಿದ, ನಂತರ ಆ ಚಿಟ್ಟೆಯನ್ನು ಆ ಗೂಡಿನಿಂದ ಹೊರಗೆ ತೆರೆಯಬೇಕು ಎಂದು ಅದರ ಹತ್ತಿರ ಹೋಗಿ ಆ ಗೂಡಿನಿಂದ ಆ ಚಿಟ್ಟೆಯನ್ನು ಬಿಡಿಸಿದನು.

ಗೂಡಿನಿಂದ ಚಿಟ್ಟೆಯನ್ನು ಹೊರಗೆ ತೆಗೆದನು ಅವನಿಗೆ ತುಂಬಾ ಸಂತೋಷವಾಯಿತು, ಕೊನೆಗೂ ಚಿಟ್ಟೆಗೆ ಸಹಾಯ ಮಾಡಿದೆನು ಎಂದು ತೃಪ್ತಿಯಲ್ಲಿದ್ದ, ಆದರೆ ಹಾಗೆ ಮಾಡಿದ್ದರಿಂದ ಆ ಚಿಟ್ಟೆಗೆ ಆದ ನಷ್ಟವನ್ನು ಅವನು ಇನ್ನು ಅರಿತಿರಲಿಲ್ಲ ಹೊರಗೆ ಬಂದ ಚಿಟ್ಟೆ ಹಾರಲಿಲ್ಲ, ಹರೀಶ್ ಗಂಟೆಗಳ ಕಾಲ ಅಲ್ಲಿಯೇ ಉಳಿದನು ಚಿಟ್ಟೆ ಹಾರುವುದನ್ನು ಅವನು ನೋಡಲು ಕಾತುರದಿಂದ ಕಾಯುತ್ತಿದ್ದನು ಆದರೆ ಇವನು ಗೂಡಿನಿಂದ ಹೊರಗೆ ತೆರೆದ ಕಾರಣ ಆ ಚಿಟ್ಟೆ ಇನ್ನೂ ಸರಿಯಾಗಿ ಬೆಳೆದಿರಲಿಲ್ಲ, ಅದರ ರೆಕ್ಕೆಗಳು ಇನ್ನು ಹಾರಲು ಯೋಗ್ಯವಾಗಿರಲಿಲ್ಲ.

ಒಂದು ಚಿಟ್ಟೆ ಹಾರಲು ಯೋಗ್ಯವಾಗಬೇಕು ಎಂದರೆ ಅದು ಗೂಡಿನಿಂದ ತುಂಬಾ ಕಷ್ಟ ಪಟ್ಟು ತನ್ನ ರೆಕ್ಕೆಗಳನ್ನು ಬಳಸಿಕೊಂಡು ಆ ಗೂಡನ್ನು ತುಂಡರಿಸಿ ಹೊರಗೆ ಬರಬೇಕು ಆದರೆ ಹರೀಶ್ ಅದನ್ನು ಆಕಸ್ಮಿಕವಾಗಿ ಹೊರಗೆ ತೆಗೆದ ಕಾರಣ ಅದು ಯಾವ ಕಷ್ಟವು ಪಡದೇ ಹೊರಗೆ ಬಂದಿತ್ತು, ಅದೇ ಕಾರಣಕ್ಕೆ ಅದು ಇನ್ನು ಜೀವನ ಪೂರ್ತಿ ಹಾರುವ ಶಕ್ತಿಯನ್ನು ಕಳೆದುಕೊಂಡಿತ್ತು.
ಈ ಚಿಟ್ಟೆಗೂ ಮನುಷ್ಯನಿಗೂ ದೊಡ್ಡ ವ್ಯತ್ಯಾಸವೇನಿಲ್ಲ ಮನುಷ್ಯ ಕಷ್ಟಪಟ್ಟು, ಕಷ್ಟಗಳನ್ನು ಆನಂದಿಸಿ ಅದರಿಂದ ಹೊರಗೆ ಬಂದು ಯಶಸ್ವಿಯಾದರೆ ಅದು ಚಿರಕಾಲ ಉಳಿಯುತ್ತದೆ. ಬೇರೆಯವರ ಸಹಾಯದಿಂದ ಮೇಲೆ ಬಂದು ಹೆಸರು ಮಾಡಿದರೆ ಅದು ಬಹಳ ದಿನ ಉಳಿಯುವುದಿಲ್ಲ, ಅವರು ನಿಮ್ಮನ್ನು ಬಿಟ್ಟಾಗ ನಿಮಗೆ ಯಾವುದಾದರು ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿ ಇರುವುದಿಲ್ಲ, ಅದಕ್ಕೆ ಹೇಳುವುದು ಕಷ್ಟ ಪಟ್ಟು ಮೇಲೆ ಬಂದಾಗ ಆಗುವ ಆನಂದವೇ ಬೇರೆ ಅಂತ.
For more Stories follow Karunadu Today
Click here to Join Our Whatsapp Group