
ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯ ಮೇಲೆ ಅವರ ಬೆಂಗಾವಲು ಕಾರು ಹರಿದ ಘಟನೆ ನಡೆದಿದೆ. ನಟನ ಕಾರಿನ ಹಿಂದೆ ಅಭಿಮಾನಿಗಳು ಓಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಟನನ್ನು ನೋಡಲು ಜನರು ಸೇರಿದ್ದರು. ಈ ವೇಲೆ ದುರ್ಘಟನೆ ಸಂಭವಿಸಿದೆ.
ಯಶ್ ಅವರ ಜೊತೆ ಫೋಟೋಗಳನ್ನು ಕ್ಲಿಕ್ ಮಾಡಲು ಹಲವಾರು ಅಭಿಮಾನಿಗಳು ಅವರನ್ನು ಸುತ್ತುವರೆದಿದ್ದಾರೆ.
ನಿರ್ದೇಶಕ ರಾಜಮೌಳಿ, ರಮಾ ಮತ್ತು ಯಶ್ ಸಮಾರಂಭದಲ್ಲಿ ಪಾಲ್ಗೊಂಡರು. ಆವರಣದಿಂದ ಹೊರಡುವ ಮೊದಲು ಫ್ಯಾಂಟಮ್ ಸ್ಫಟಿಕ ಶಿಲೆಯಿಂದ ಮಾಡಿದ ವಿಗ್ರಹಕ್ಕೆ ಪ್ರಾರ್ಥಿಸಿದರು. ಈ ದೇವಾಲಯವನ್ನು ವಾರಾಹಿ ಚಲನ ಚಿತ್ರದ ಚಲನಚಿತ್ರ ನಿರ್ಮಾಪಕ ಸಾಯಿ ಕೊರ್ರಪಾಟಿ ನಿರ್ಮಿಸಿದ್ದಾರೆ.
ಯಶ್ ಅವರ ಕಾರಿನ ಹಿಂಭಾಗದಿಂದ ಅಭಿಮಾನಿಗಳು ಓಡಿದ್ದಾರೆ. ಅವರ ಬೆಂಗಾವಲು ವಾಹನದ ಚಕ್ರದಡಿ ಅಭಿಮಾನಿ ಸಿಲುಕಿ ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಯಶ್ ನೋಡಲು ಬಂದ ಅಭಿಮಾನಿಯ ಕಾಲ ಮೇಲೆ ಬೆಂಗಾವಲು ಕಾರು ಹರಿದಿದೆ. ಬಳ್ಳಾರಿಯ ನಗರದ ವಲಯದಲ್ಲಿ ಘಟನೆ ನಡೆದಿದ್ದು ದೇವಸ್ಥಾನದ ಉದ್ಘಾಟನೆಗೆ ಬಂದಿದ್ದ ಯಶ್ ಆಗಮಿಸಿದ್ದ ಸಂದರ್ಭ ಅಪಾರ ಅಭಿಮಾನಿಗಳು ಸೇರಿದ್ದರು.
ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಬಂದಿದ್ದರು. ಯಶ್ ತೆರಳುವ ಸಮಯದಲ್ಲಿ ಕಾರ್ ಅಭಿಮಾನಿಗಳು ಹಿಂಬಾಲಿಸಿದ್ದಾರೆ.
ಯಶ್ ನೋಡಲು ಬಂದಿದ್ದ ಸಾವಿರಾರು ಅಭಿಮಾನಿಗಳು ನಟನನ್ನು ನೋಡಲು ಮುಗಿಬಿದ್ದರು. ಈ ವೇಳೆ ಯಶ್ ಬೆಂಗಾವಲು ವಾಹನ ಅಭಿಮಾನಿ ಕಾಲಿನ ಮೇಲೆ ಹರಿದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಕಾರು ಹರಿದಿದೆ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಕಾರು ಹಿಂಬಾಲಿಸಿಕೊಂಡು ಅಭಿಮಾನಿಗಳು ಓಡಿ ಬಂದಿದ್ದರು. ಇದೇ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ಯಶ್ ಬರ್ತ್ಡೇ ದಿನ ಫ್ಲೆಕ್ಸ್ ಕಟ್ಟಲು ಹೋಗಿ ಅವಘಡ ಸಂಭವಿಸಿತ್ತು.
ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲಿದ್ದು ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಯಶ್ ಅವರು ತಮ್ಮ ಅಪ್ಕಮಿಂಗ್ ಸಿನಿಮಾದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ವರದಿ: ಬಸವರಾಜ್ ಹರನಹಳ್ಳಿ.