
ಆವಿಷ್ಕಾರ..!! ಇದು ಇರುವುದರಿಂದಲೆ ಜಗತ್ತು ನಡೆಯುತ್ತಿರುವುದು. ಮನುಷ್ಯನು ನಡೆಸುತ್ತಿರುವ ನೂತನ ಆವಿಷ್ಕಾರದಿಂದಲೆ ಜಗತ್ತು ಹೊಸ ದಿಕ್ಕಿನೆಡೆಗೆ ಸಾಗುತ್ತಿರುವುದು. ಕೇವಲ ಕನಸ್ಸನ್ನು ಕಾಣುತ್ತಿದ್ದ ಮನುಷ್ಯನು ಇಂದು ಆವಿಷ್ಕಾರಗಳ ಮೂಲಕ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾನೆ. ಆದರೆ ಭೂತಕಾಲದಲ್ಲಿ ಜಗತ್ತಿನಲ್ಲಿ ಕೆಲ ಆವಿಷ್ಕಾರಗಳು ಆಗಿದ್ದು ಅವುಗಳನ್ನು ಅನೇಕ ಜನರು ತುಳಿದಿದ್ದಾರೆ. ಅಕಸ್ಮಾತ್ ಆ ಆವಿಷ್ಕಾರಗಳೇನಾದರು ಜಾರಿಗೆ ಬಂದಿದ್ದರೆ ಇಂದು ಜಗತ್ತು ಈಗ ನೋಡಿರುವುದಕ್ಕಿಂತ ಆಧುನಿಕವಾಗಿರುತ್ತಿತ್ತು. ಇಂದು ಮರೆಯಾದ ಇಂತಹ 5 ಮಹತ್ವದ ಆವಿಷ್ಕಾರಗಳ ಕುರಿತು ತಿಳಿದುಕೊಳ್ಳೋಣ.
1. ವೈರ್ಲೆಸ್ ಪವರ್ ಟ್ರ್ಯಾನ್ಸ್ಮಿಷನ್ – Wireless Power Transmission

ಇದು ನಿಕೋಲ ಟೆಸ್ಲಾ ಅವರ ಆವಿಷ್ಕಾರ. ಈಗ ನಾವು ಪ್ರಪಂಚದೆಲ್ಲೆಡೆ ಬಳಸುತ್ತಿರುವ ವಿದ್ಯುತ್ ಸರಬರಾಜು ಆಗುತ್ತಿರುವುದು ವಿದ್ಯುತ್ ವೈರ್ ಗಳ ಮೂಲಕ. ಒಂದು ವೈರ್ ತುಂಡಾಗಿ ಬಿದ್ದರೂ ಕೂಡ ವಿದ್ಯುತ್ ಸರಬರಾಜು ಆಗುವುದಿಲ್ಲ. ಆದರೆ ನಿಕೋಲ ಟೆಸ್ಲ ಅವರು ಕಂಡು ಹಿಡಿದಿದ್ದ ಬೃಹತ್ ಯಂತ್ರದಿಂದ ವಿದ್ಯುತ್ ಅನ್ನು ಯಾವುದೇ ತಂತಿಗಳಿಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಭರಾಜು ಮಾಡಬಹುದಾಗಿತ್ತು. ಇದರಿಂದ ಪ್ರಪಂಚದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದ ಹಾಗೆ ಆಗುತಿತ್ತು. ಆದರೆ ಇದರಿಂದ ಹಣಗಳಿಸಲು ಸಾಧ್ಯವಿಲ್ಲ ಎಂದು ಅನೇಕ ಹೂಡಿಕೆದಾರರು ಈ ಆವಿಷ್ಕಾರವನ್ನು ಅಭಿವೃದ್ದಿ ಹೊಂದಲು ಬಿಡಲಿಲ್ಲ. ಇದರಿಂದ ನಿಕೋಲ ಟೆಸ್ಲಾ ಅವರ ಈ ಮಹತ್ವದ ಆವಿಷ್ಕಾರ ಮಣ್ಣು ಪಾಲಾಯಿತು.
2. ಕ್ಲೌಡ್ ಬಸ್ಟರ್ – Cloud Buster

ಆಸ್ಟ್ರಿಯ ದೇಶದ ವಿಜ್ಞಾನಿ “ವಿಲ್ಹೆಲ್ಮ್ ರೀಚ್(Wilhelm Reich)” ಅವರು ಕಂಡುಹಿಡಿದಿದ್ದ ಈ ಯಂತ್ರದಿಂದ ಆಕಾಶದಲ್ಲಿ ನೀರು ತುಂಬಿರುವ ಮೋಡಗಳನ್ನು ಸ್ಪೋಟಗೊಳಿಸಿ ಮಳೆ ಬರುವ ಹಾಗೆ ಮಾಡಬಹುದಿತ್ತು. ಅಕಸ್ಮಾತ್ ಈ ಯಂತ್ರವು ಪ್ರಪಂಚದ ಎಲಾ ದೇಶಗಳ ಕೈಗೆ ಸಿಕ್ಕರೆ ಎಲ್ಲಾ ದೇಶಗಳಲ್ಲೂ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆಯನ್ನು ರೈತರು ಬೆಳೆದು ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡಿ ಆ ದೇಶವು ಆರ್ಥಿಕವಾಗಿ ಸಮೃದ್ದಿ ಹೊಂದುತ್ತದೆ ಎಂದು ತಿಳಿದು ಈ ಆವಿಷ್ಕಾರವನ್ನು ಅಭಿವೃದ್ದಿ ಹೊಂದಲು ಬಿಡಲಿಲ್ಲ.
3. ನೀರಿನಿಂದ ಚಲಿಸುವ ವಾಹನಗಳು – Water Powered Vehicle

ಅದು 1980, ಸ್ಟಾನ್ಲಿ ಮೇಯರ್ಸ್(Stanley Meyer’s) ಎನ್ನುವ ಸಂಶೋದಕನು ನೀರಿನಿಂದ ಚಲಿಸುವ ಕಾರನ್ನು ಕಂಡುಹಿಡಿದಿದ್ದರು. ಇದರಿಂದ ಪೆಟ್ರೋಲ್ ಡೀಸೆಲ್ ನಿಂದ ಚಲಿಸುವ ವಾಹನಗಳಿಗೆ ಬಾರಿ ಹೊಡೆತವಾಯಿತು. ಇದನ್ನು ಕಂಡ ಜಗತ್ತಿನ ಅನೇಕ ತೈಲ ಉತ್ಪಾದನಾ ಕಂಪನಿಗಳು ಇನ್ನು ತಮಗೆ ಉಳಿಗಾಲವಿಲ್ಲ ಎಂದು ಅರಿತು ಸ್ಟಾನ್ಲಿ ಅವರು ಕಂಡು ಹಿಡಿದಿದ್ದ ಕಾರನ್ನು ನಾಶ ಮಾಡಿ ಅವರನ್ನು ನಿಗೂಡವಾಗಿ ಸಾಯಿಸಿ ಅವರ ಸಂಶೋದನೆಯನ್ನು ಯಾರಿಗೂ ತಿಳಿಯದ ರೀತಿಯಲ್ಲಿ ಮುಚ್ಚಿಡಲಾಯಿತು. ಅಕಸ್ಮಾತ್ ಈ ಅನ್ವೇಷಣೆ ಏನಾದರು ಅಂದು ಜಗತ್ತಿನಲ್ಲಿ ಜಾರಿಗೆ ಬಂದಿದ್ದರೆ ಇಂದು ರಸ್ತೆಗಳಲ್ಲಿ ಅನೇಕ ನೀರಿನಿಂದ ಚಲಿಸುವ ಮತ್ತು ವಾಯು ಮಾಲಿನ್ಯ ಮಾಡದಂತಹ ವಾಹನಗಳನ್ನು ನಾವುಗಳು ನೋಡಬಹುದಿತ್ತು.
4. ರೈಫ್ ಮಶಿನ್ – Rife Machine

ಅಮೇರಿಕನ್ ಸಂಶೋಧಕ ಮತ್ತು ವಿಜ್ಞಾನಿ “ರಾಯಲ್ ರೇಮಂಡ್ ರೈಫ್” ಅವರು ಕಂಡುಹಿಡಿದ ಈ ಯಂತ್ರದ ಮೂಲಕ ಯಾವುದೇ ರೋಗವನ್ನು “ಆಡಿಯೊ ಆವರ್ತನ(Audio frequency)” ಮೂಲಕ ಗುಣಪಡಿಸಬಹುದಾಗಿತ್ತು. ಅಂದರೆ ರೋಗಗಳನ್ನು ಹರಡುವ ಸೂಕ್ಷ್ಮ ಜೀವಿಗಳು ಈ ಯಂತ್ರದ ಮೂಲಕ ಹೊರ ಬರುವ “ಆಡಿಯೊ ಆವರ್ತನ(Audio frequency)”ನಿಂದ ಸಾಯುತ್ತಿದ್ದವು. ರೈಫ್ ಅವರು ಈ ಯಂತ್ರವನ್ನು ಬಳಸಿಕೊಂಡು ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದರು. ನಂತರ ಕ್ಯಾನ್ಸರ್ ರೋಗವನ್ನು ಹೊಂದಿರುವ ಅನೇಕ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಿದರು. ಕೆಲವೇ ಕೆಲವು ದಿನಗಳಲ್ಲಿ ಅನೇಕ ವ್ಯಕ್ತಿಗಳು ಇದರಿಂದ ಗುಣಮುಖರಾಗುತ್ತಿರುವುದನ್ನು ಕಂಡ ಜಗತ್ತಿನ ಅನೇಕ ಜನರು ಇದರಿಂದ ವೈದ್ಯಕೀಯ ಸಂಸ್ಥೆಯಲ್ಲಿ ಸಾಕಷ್ಟು ನಷ್ಟವಾಗುತ್ತದೆ ಎಂದು ಭಾವಿಸಿ ಈ ಯಂತ್ರವನ್ನು ಮುಂದೆ ಅಭಿವೃದ್ದಿ ಹೊಂದಲು ಬಿಡಲಿಲ್ಲ. ಇದರ ಪರಿಣಾಮದಿಂದ ಈ ಆವಿಷ್ಕಾರವು ಮಣ್ಣುಪಾಲಾಯಿತು.
5. ಡೆತ್ ರೇ- Death Ray

ನಿಕೋಲ ಟೆಸ್ಲಾ, ವಿಜ್ಞಾನ ಲೋಕದಲ್ಲಿ ಮರೆಯಲಾಗದ ಹೆಸರು. ಇವರ ಅನೇಕ ಆವಿಷ್ಕಾರಗಳನ್ನು ಕಂಡು ಇವರಲ್ಲಿ ಅದ್ಬುತವಾದ ಅಲೌಕಿಕ ಶಕ್ತಿಯಿದೆ ಎಂದು ಜಗತ್ತು ಭಾವಿಸಿತ್ತು. ಇವರ ಆವಿಷ್ಕಾರಗಳು ಆಗಿನ ಕಾಲದಲ್ಲಿ ತುಂಬಾ ಆಧುನಿಕವಾಗಿದ್ದವು. ಆದರೆ ಇವರ ಆವಿಷ್ಕಾರಗಳನ್ನು ಕಂಡು ಅನೇಕ ಜನರು ಇವರನ್ನು ಪ್ರಶಂಶಿಸದೆ ಅಸೂಹೆ ಪಟ್ಟಿದ್ದೆ ಹೆಚ್ಚು. ಇಂತಹ ಅನೇಕ ಆವಿಷ್ಕಾರಗಳಲ್ಲಿ “ಡೆತ್ ರೇ” ಎನ್ನುವ ಆವಿಷ್ಕಾರವು ಕೂಡ ಒಂದಾಗಿದೆ. ಮೊದಲ ಮತ್ತು ಎರಡನೆಯ ಪ್ರಪಂಚ ಯುದ್ದ ನಡೆಯುತ್ತಿರುವ ವೇಳೆಯಲ್ಲಿ ಈ ಅತ್ಯಾದುನಿಕ ಶಸ್ತ್ರಾಸ್ತ್ರವನ್ನು ಟೆಸ್ಲ ಅವರು ಕಂಡು ಹಿಡಿದಿದ್ದರು. ಈ ಶಸ್ತ್ರಾಸ್ತ್ರದಿಂದ ಒಮ್ಮೆಲೇ ಮಿಂಚಿನ ರೀತಿಯಲ್ಲಿ ಹೊರಬರುವ ಎಲೆಕ್ಟ್ರಿಕ್ ಕಿರಣಗಳು ಆಕಾಶದಲ್ಲಿ ಹಾರುವ ಶತ್ರುಗಳ ವಿಮಾನಗಳನ್ನು ಕ್ಷಣಮಾತ್ರದಲ್ಲಿ ಹೊಡೆದು ಉರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ1937 ರಲ್ಲಿ ಟೆಸ್ಲಾ ಅವರ ನಿಧನದ ನಂತರ ಎಲ್ಲಿ ಈ ಆವಿಷ್ಕಾರವು ಶತ್ರುಗಳ ಕೈಗೆ ಸಿಗುತ್ತದೊ ಎನ್ನುವ ಭಯದಿಂದ ಈ ಆವಿಷ್ಕಾರವನ್ನು ಅಮೆರಿಕ ಸರ್ಕಾರ ಗುಪ್ತವಾಗಿ ಇಟ್ಟಿತು. ಅಂದಿನಿಂದ ಇಲ್ಲಿಯವರೆಗು ಈ ಆವಿಷ್ಕಾರವು ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ.
Follow Karunadu Today for more Interesting Facts & Stories.
Click here to Join Our Whatsapp Group