
1) ಸೊಳ್ಳೆಗಳು ಏಕೆ ಕಚ್ಚುತ್ತವೆ? ಎನ್ನುವುದರ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಸೊಳ್ಳೆಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ನೋಡಲು ಚಿಕ್ಕದಾಗಿದ್ದರು ಕೂಡ ಅನೇಕ ಮಾರಕ ರೋಗಗಳನ್ನು ಹರಡುವ ಸಾಮರ್ಥ್ಯ ಈ ಕೀಟಕ್ಕಿದ್ದೆ. ಕೆಲವರಂತು ಈ ಕೀಟಗಳನ್ನು ಕಂಡರೆ ಸಾಕು ಡೈನೋಸಾರ್ ನೋಡಿದ ಹಾಗೆ ಮಾಡುತ್ತಾರೆ. ಆದರೆ ಎಂದಾದರು ಈ ಸೊಳ್ಳೆಗಳು ಏಕೆ ಕಚ್ಚುತ್ತವೆ? ಇದರಿಂದ ಅವುಗಳಿಗೆ ಏನು ಲಾಭ ಎಂದು ಯೋಚಿಸಿದ್ದೀರ? ಬನ್ನಿ ಈ ಸಂಗತಿಯಲ್ಲಿ ಅದನ್ನು ವಿವರಿಸುತ್ತೇನೆ. ಮನುಷ್ಯರ ರಕ್ತದಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇರುತ್ತವೆ. ನಾವು ತಿನ್ನುವ ಆಹಾರದಿಂದ ಅವುಗಳು ನಮ್ಮ ರಕ್ತದಲ್ಲಿ ಉತ್ಪತ್ತಿಯಾಗಿರುತ್ತವೆ. ಈ ಪೋಷಕಾಂಶಗಳನ್ನು ಹೊಂದಿರುವ ರಕ್ತವನ್ನು ಸೊಳ್ಳೆಗಳು ತಮ್ಮ ಬಾಯಿಯ ಬಳಿಯಿರುವ proboscis ಮೂಲಕ ಹೀರಿಕೊಳ್ಳುತ್ತವೆ.ನೆನಪಿರಲಿ ನಮಗೆ ಕಚ್ಚುವುದು ಹೆಣ್ಣು ಸೊಳ್ಳೆ ಹೊರತು ಗಂಡು ಸೊಳ್ಳೆಯಲ್ಲ. ಈ ಹೆಣ್ಣು ಸೊಳ್ಳೆಗಳ ದೇಹದಲ್ಲಿ ಸಂತಾನೋತ್ಪತ್ತಿ ಕ್ರಿಯೆಯ ಮೂಲಕ ಹುಟ್ಟಿದ ಮೊಟ್ಟೆಗಳಿಗೆ ಬೇಕಾಗಿರುವ ಪೋಷಕಾಂಶಗಳು ಮನುಷ್ಯನ ರಕ್ತದಲ್ಲಿ ಇವೆ. ಆದ್ದರಿಂದಲೆ ಇವುಗಳು ನಮ್ಮ ರಕ್ತವನ್ನು ಹೀರುತ್ತವೆ. ಇನ್ನು ನಿಮ್ಮ ಪ್ರೀತಿಪಾತ್ರರು ನನಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತಿವೆ ಆದರೆ ನಿನಗೇಕೆ ಕಚ್ಚುತ್ತಿಲ್ಲ? ಇದಕ್ಕೆ ಕಾರಣವೇನು ಎಂದು ಕೇಳಿದಾಗ ನೀನು ತುಂಬಾ sweet ಆಗಿದ್ದೀಯ ಅದಕ್ಕೆ ಹೆಚ್ಚು ಕಚ್ಚುತ್ತವೆ ಎನ್ನುವ ಉತ್ತರವನ್ನು ನೀವು ಅನೇಕ ಬಾರಿ ನೀಡಿರುತ್ತೀರಿ. ಆದರೆ ವಿಜ್ಞಾನಿಗಳ ಪ್ರಕಾರ ಒಂದು ಸೊಳ್ಳೆಯು ಅನೇಕ ಕಾರಣಗಳಿಂದ ಕೆಲವರಿಗೆ ಹೆಚ್ಚು ಕಚ್ಚುತ್ತದೆ. ಆ ಕಾರಣಗಳನ್ನು ಈಗ ಹೇಳುತ್ತೇನೆ ಕೇಳಿ. ಮೊದಲನೆಯ ಕಾರಣ ಈ ಸೊಳ್ಳೆಗಳ ತಲೆಯ ಭಾಗದಲ್ಲಿ ಕೆಲವು ರೀತಿಯ ಪ್ರೊಟೀನ್ ಅಂಶಗಳು ಇರುತ್ತವೆ. ಇದೇ ಪ್ರೊಟೀನ್ ಗಳು ಮನುಷ್ಯನ ದೇಹದಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗುತ್ತವೆ. ನಿಮ್ಮ ದೇಹದಲ್ಲಿ ಇರುವ ಆ ಪ್ರೊಟೀನ್ ಅಂಶವನ್ನು ಸೊಳ್ಳೆಗಳು 35 ಮೀಟರ್ ದೂರದಿಂದ ಗಮನಿಸಬಲ್ಲವು. ಅಕಸ್ಮಾತ್ ನಿಮ್ಮ ದೇಹದಲ್ಲಿ ಅವುಗಳ ಅಂಶ ಹೆಚ್ಚಿದ್ದರೆ ಅವುಗಳು ನಿಮ್ಮ ಚರ್ಮದ ಮೇಲೆ ಬಂದು ಕುಳಿತುಕೊಂಡು ರಕ್ತ ಹೀರಲು ಶುರು ಮಾಡುತ್ತವೆ. ಎರಡನೆಯ ಕಾರಣ ನೀವು ದರಿಸುವ ಬಟ್ಟೆಯ ಬಣ್ಣ. ಅಕಸ್ಮಾತ್ ನಿಮ್ಮ ಬಟ್ಟೆಯು ಕಪ್ಪು ಅಥವ ಕೆಂಪು ಬಣ್ಣದಲ್ಲಿದ್ದರೆ ಆಗ ಸೊಳ್ಳೆಗಳು ನಿಮ್ಮ ಬಳಿ ಹೆಚ್ಚು ಆಕರ್ಷಿತವಾಗುತ್ತವೆ. ಮೂರನೆಯ ಕಾರಣ ನೀವು ಉಸಿರಾಡುವಾಗ ಅದರಿಂದ ಹೊರಬರುವ lactic acid. ಅಕಸ್ಮಾತ್ ನಿಮ್ಮ ದೇಹದ ಉಷ್ಣಾಂಶ ಹೆಚ್ಚಿದ್ದರೆ ನಿಮ್ಮ ಉಸಿರಾಟದ ಮೂಲಕ lactic acid ಅಂಶವು ಹೆಚ್ಚು ಹೊರಹೋಗುತ್ತಿರುತ್ತದೆ. ಇದನ್ನು ಸೊಳ್ಳೆಗಳು 35 ಮೀಟರ್ ದೂರದಿಂದ ಗಮನಿಸಿ ತನಗೆ ಬೇಕಾದ ಆಹಾರ ಅಲ್ಲಿದೆ ಎಂದು ನಿಮ್ಮ ಬಳಿ ಬರುತ್ತವೆ. ನಾಲ್ಕನೆಯ ಕಾರಣ ನೀವು ಹೊರಬಿಡುತ್ತಿರುವ ಇಂಗಾಲದ ಡೈ ಆಕ್ಸೈಡ್ ಅನಿಲ. ಇದನ್ನು ಕೂಡ ಸೊಳ್ಳೆಗಳು 35 ಮೀಟರ್ ದೂರದಿಂದ ಗಮನಿಸಬಲ್ಲವು. ಅಕಸ್ಮಾತ್ ಗರ್ಭವತಿಯಾಗಿದ್ದರೆ ಅವರ ಕಡೆಗೆ ಸೊಳ್ಳೆಗಳು ಬೇಗನೆ ಆಕರ್ಷಿತಗೊಳ್ಳುತ್ತವೆ. ಏಕೆಂದರೆ ಅವರು ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಹಾಕುತ್ತಿರುತ್ತಾರೆ. ಇನ್ನು ಕೊನೆಯ ಕಾರಣವೆ ನಮ್ಮ ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳು. ನೀವು ಗಮನಿಸಿರಬಹುದು, ಸೊಳ್ಳೆಗಳು ನಮ್ಮ ಕಾಲಿನ ಬಾಗಕ್ಕೆ ಹೆಚ್ಚಾಗಿ ಕಡಿಯುತ್ತವೆ. ಇದಕ್ಕೆ ಕಾರಣ ಅಲ್ಲಿ ಕೂತಿರುವ ಬ್ಯಾಕ್ಟೀರಿಯಾಗಳು. ಸೊಳ್ಳೆಗಳು ಅವುಗಳನ್ನು 35 ಮೀಟರ್ ದೂರದಿಂದ ಗಮನಿಸಿ ಅಲ್ಲಿ ತನಗೆ ಬೇಕಾದ ಆಹಾರವಿದೆ ಎಂದು ನಿಮ್ಮೆಡೆಗೆ ಬರುತ್ತವೆ. ಈ ಕಾರಣಗಳಿಂದಲೇ ಸೊಳ್ಳೆಗಳು ನಿಮ್ಮನ್ನು ಕಚ್ಚುವುದು ಹೊರತಾಗಿ sweet ಆಗಿ ಇರುವುದಕ್ಕಲ್ಲ.
2) ಮನೆಯಿಂದ ಹೊರಗೆ ಹೋಗುವಾಗ ನಮ್ಮ ಮನೆಯು ಸುರಕ್ಷಿತವಾಗಿ ಇರಲೆಂದು ಲಾಕ್ ಅನ್ನು ಮನೆಯ ಬಾಗಿಲಿಗೆ ಹಾಕುವುದು ಸಾಮಾನ್ಯ. ಆದರೆ ಈ ಲಾಕ್ ಅನ್ನು ನೀವು ಸರಿಯಾಗಿ ಗಮನಿಸಿದರೆ ಅದನ್ನು ತೆರೆಯಲು key ಹಾಕುವ ಸ್ಥಳದ ಪಕ್ಕದಲ್ಲಿ ಒಂದು ಪುಟ್ಟ hole ಇರುವುದನ್ನು ನೀವು ಕಾಣಬಹುದು. ಈ ಪುಟ್ಟ hole ಉಪಯೋಗವನ್ನು ಈ ಸಂಗತಿಯಲ್ಲಿ ತಿಳಿಸುತ್ತೇನೆ ಕೇಳಿ. ಅಕಸ್ಮಾತ್ lock ಒಳಗೆ ತೇವಾಂಶ ಸೇರಿಕೊಂಡಿದ್ದರೆ ಅದು ಹೊರಗೆ ಹೋಗಲಿ ಎನ್ನುವ ಉದ್ದೇಶದಿಂದ ಇದನ್ನು ಇಡಲಾಗಿದೆ. ಇದು ಇರದಿದ್ದರೆ ತೇವಾಂಶವು lock ಒಳಗೆ ಸೇರಿಕೊಂಡು ತುಕ್ಕು ಹಿಡಿಯುತ್ತದೆ. ಇದರಿಂದ key ಹಾಕಿ ಲಾಕ್ ಅನ್ನು ತೆರೆಯಲು ಪ್ರಯತ್ನ ಪಟ್ಟರೆ ಅದು open ಆಗುವುದಿಲ್ಲ.
3) ತಾಯಿಯ ಗರ್ಭದಲ್ಲಿ ಮಗುವೊಂದು ಜನಿಸಿದ ಮೇಲೆ 5 ರಿಂದ 6 ವಾರಗಳವರೆಗು ಮೊದಲಿಗೆ ಹೆಣ್ಣಾಗಿಯೆ ಇರುತ್ತದೆ.ಅದಾದ ಬಳಿಕ ಅದು ಗಂಡು ಮಗು ಅಥವ ಹೆಣ್ಣು ಮಗುವಾಗಿ ಪರಿವರ್ತನೆಯಾಗುತ್ತದೆ. ಹೌದು, ನಿಮಗಿದು ಅಚ್ಚರಿ ಎನಿಸಿದರು ಕೂಡ ಸತ್ಯ. ಇದು ಹೇಗೆ ಎಂದು ಈ ಸಂಗತಿಯಲ್ಲಿ ವಿವರಿಸುತ್ತೇನೆ ಕೇಳಿ. ನಮ್ಮ ದೇಹದಲ್ಲಿ 23pairs chromosomes ಗಳಿರುತ್ತವೆ. ಇದರಲ್ಲಿ X ಮತ್ತು Y chromosomes ನಮ್ಮ ಲಿಂಗವನ್ನು ನಿರ್ಧರಿಸುತ್ತವೆ. ಗರ್ಭದಲ್ಲಿ ಪ್ರತಿಯೊಂದು ಮಗುವಿನ ಜನ್ಮವು X chromosomes ಗಳಿಂದ ಶುರುವಾಗುತ್ತದೆ. 5 ವಾರಗಳ ಬಳಿಕ ಈ X Chromosomes ಗೆ ಮತ್ತೊಂದು X chromosome ಸೇರಿದಾಗ ಮಗುವು ಹೆಣ್ಣಾಗಿ ಹುಟ್ಟುತ್ತದೆ. ಅಕಸ್ಮಾತ್ Y chromosome ಸೇರಿದರೆ ಗಂಡು ಮಗು ಆಗಿ ಪರಿವರ್ತನೆಯಾಗುತ್ತದೆ. ಇದರೊಂದಿಗೆ ನಮಗೆ ತಿಳಿಯುವುದೇನೆಂದರೆ ನಾವು ಜನಿಸಿದಾಗ ಮೊದಲು ಹೆಣ್ಣಾಗಿಯೇ ಇರುತ್ತೇವೆ ಹೊರತು ನೇರವಾಗಿ ಗಂಡಾಗಿ ಜನಿಸುವುದಿಲ್ಲ.
4) ನಮಗೆ ಅದೆಷ್ಟೇ ಬಾಯಾರಿಕೆಯಾದರು ಕೂಡ ಸಮುದ್ರದ ನೀರನ್ನು ಮಾತ್ರ ನಾವು ಕುಡಿಯುವುದಿಲ್ಲ. ಅಕಸ್ಮಾತ್ ಆ ನೀರನ್ನು ಕುಡಿದರೆ ನಮ್ಮ ದೇಹದಲ್ಲಿ ಏನಾಗುತ್ತದೆ ಎಂದು ಈ ಸಂಗತಿಯಲ್ಲಿ ವಿವರಿಸುವೆ ಕೇಳಿ. ಸಮುದ್ರದ ನೀರಿನಲ್ಲಿ ಉಪ್ಪಿನ ಅಂಶವು ಹೆಚ್ಚಿರುವ ವಿಷಯ ನಿಮಗೆ ತಿಳಿದೇ ಇದೆ. ಇದನ್ನು ಕುಡಿಯುವುದರಿಂದ ಅದರಲ್ಲಿರುವ ಉಪ್ಪಿನ ಅಂಶವನ್ನು ಹೊರಹಾಕಲು ನಮ್ಮ ಕಿಡ್ನಿಯು ಹೆಚ್ಚೆಚ್ಚು ಮೂತ್ರವನ್ನು ಉತ್ಪತ್ತಿ ಮಾಡುತ್ತದೆ. ಇನ್ನು ಪದೇ ಪದೇ ಮೂತ್ರ ಮಾಡುವುದರಿಂದ ನಮ್ಮ ದೇಹದಲ್ಲಿ dehydration ಹೆಚ್ಚಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸಮಸ್ಯೆಯಾಗುತ್ತದೆ.
5) ನಾವು ಸೀನಿದಾಗ ನಮ್ಮ ಬಾಯಿಂದ ಹೊರಬರುವ liquid ಅಂಶವು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಒಂದೇ ಒಂದು ಬಾರಿ ಸೀನಿದರೆ ಸಾಕು 1 ಲಕ್ಷ ಕೀಟಾಣುಗಳು ಹೊರಬರುತ್ತವೆ. ಆದ್ದರಿಂದಲೆ ಸೀನುವ ವೇಳೆ ಮೂಗು ಮತ್ತು ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಇನ್ನು ಸೀನುವ ವೇಳೆ ನಮ್ಮ ಹೃದಯವು ಒಂದು ಕ್ಷಣ ಬಡಿದುಕೊಳ್ಳುವುದನ್ನು ನಿಲ್ಲಿಸುತ್ತದೆ. ಇದರ ಅರ್ಥ ಒಂದು ಕ್ಷಣ ನಾವು ಸತ್ತು ಬದುಕಿದ ಹಾಗೆ.