
1) ಬಾಹ್ಯಾಕಾಶಕ್ಕೆ ಹೋಗುವುದೆಂದರೆ ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಇದಕ್ಕೆಂದು ಬಾಹ್ಯಾಕಾಶ ಸಂಸ್ಥೆಗಳು ಬಾರೀ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಇನ್ನು ಬಾಹ್ಯಾಕಾಶದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವ ವಿಜ್ಞಾನಿಗಳಿಗೆ ತಾವು ಮಾಡುತ್ತಿರುವ ಕೆಲಸಗಳಿಗೆ ಏನಾದರು ವಸ್ತುಗಳ shortage ಆದರೆ ಮೊದಲೆಲ್ಲ ಭೂಮಿಯ ಮೇಲಿರುವ ಬಾಹ್ಯಾಕಾಶ ಸಂಸ್ಥೆಗಳಿಗೆ ಅದನ್ನು ತಿಳಿಸಿ ಅವರು ರಾಕೆಟ್ ಮೂಲಕ ಆ ವಸ್ತುವನ್ನು ಕಳುಹಿಸುವವರೆಗು ಕಾಯಬೇಕಿತ್ತು. ಆದರೆ ಈಗ ಬಾಹ್ಯಾಕಾಶದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನ ಈ ಸಮಸ್ಯೆಗೆ ಪರಿಹಾರ ನೀಡಿದೆ. ಒಂದು email ಮೂಲಕ ಆ ವಸ್ತುವನ್ನು ಕಳುಹಿಸಬಹುದಾಗಿದೆ. ಹೌದು, 3d printing technique ಮೂಲಕ ತಮಗೆ ಬೇಕಾಗಿರುವ ವಸ್ತುವನ್ನು ಬಾಹ್ಯಾಕಾಶದಲ್ಲಿಯೇ ಸೃಷ್ಟಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಮೊದಲಿನ ಹಾಗೆ ರಾಕೆಟ್ ಮೂಲಕ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಅವಶ್ಯಕತೆ ಬರುವುದಿಲ್ಲ. ಈ 3d printing technology ಗೆ ನಿಜಕ್ಕು ಧನ್ಯವಾದ ಹೇಳಲೇಬೇಕು.
2) ತಂಪಾಗಿ ಇರುವ ಆಹಾರದ ಪದಾರ್ಥಗಳನ್ನು ಕೆಲವೇ ಕ್ಷಣಗಳಲ್ಲಿ ಬಿಸಿ ಮಾಡುವ micro owen ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇದನ್ನು ಹೇಗೆ ಮತ್ತು ಯಾರು ಕಂಡುಹಿಡಿದರು ಎನ್ನುವುದು ನಿಮಗೆ ಗೊತ್ತೆ? ಬನ್ನಿ ಅದರ ಕುರಿತು ತಿಳಿದುಕೊಳ್ಳೋಣ. ಆ ವ್ಯಕ್ತಿಯ ಹೆಸರು percy spencer. ಅಮೇರಿಕದ Raytheon ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಅದೊಂದು ದಿನ ಒಂದು experiment ಮೇಲೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಈ owen ಕಂಡುಹಿಡಿದರು. ಇದನ್ನು ಕಂಡುಹಿಡಿದ ಮೇಲೆ ಅದನ್ನು ಕಂಪನಿಯ ಮಾಲೀಕನಿಗೆ ತಿಳಿಸಿದಾಗ ಅದರ ಪೇಟೆಂಟ್ ಅನ್ನು ತೆಗೆದುಕೊಂಡು percy ಅವರಿಗೆ ಕೇವಲ 2 ಡಾಲರ್ bonus ನೀಡಿದ್ದರು. ಅಕಸ್ಮಾತ್ percy ಅವರಿಗೆ ಮುಂದೊಂದು ದಿನ owen ಗಳ ಬಳಕೆ ಪ್ರಪಂಚದಾದ್ಯಂತ ಆಗಲಿದೆ ಎನ್ನುವುದು ತಿಳಿದಿದ್ದರೆ ಅಂದು ಅವರೇ ಪೇಟೆಂಟ್ ತೆಗೆದುಕೊಳ್ಳುತ್ತಿದ್ದರು. ಆದರೆ ಅವರ ಕಂಪನಿಯು ಇವರಿಗೆ ಅಂದು ಮೋಸ ಮಾಡಿತು.
3) ಅನೇಕ ಬಾರೀ ಫ್ಲಿಪ್ಕಾರ್ಟ್ ಹಾಗು ಅಮೆಜಾನ್ ತರಹದ ಆನ್ಲೈನ್ ಕಂಪನಿಗಳಿಂದ ಮನೆಗೆ ಬಂದ ಕೊರಿಯರ್ ಅನ್ನು ತೆಗೆದು ನೋಡಿದಾಗ ನಾವು ಮಾಡಿದ ವಸ್ತುವಿನ ಆರ್ಡರ್ ಇರದೆ ಬೇರೆ ವಸ್ತುಗಳು ಬಂದಿರುವುದನ್ನು ಕಂಡಿದ್ದೇವೆ. ಇದರಿಂದ ಕೆಲ ಗ್ರಾಹಕರು ಸಿಟ್ಟಿಗೆದ್ದು ಆ ಕಂಪನಿಗಳ ವಿರುದ್ಧ ದೂರನ್ನು ಕೂಡ ದಾಖಲಿಸಿರುವುದು ಉಂಟು. ಆದರೆ ಅಮೇರಿಕದ seth Horvitz ಎನ್ನುವ ವ್ಯಕ್ತಿಗೆ ಅಮೆಜಾನ್ ಏನು ಕಳುಹಿಸಿತ್ತು ಎಂದು ಕೇಳಿದರೆ ನೀವು ಕಂಡಿತ ಆಶ್ಚರ್ಯ ಪಡುವಿರಿ. ಏಕೆಂದರೆ ಈ ವ್ಯಕ್ತಿಯು ಟಿವಿಯನ್ನು ಆರ್ಡರ್ ಮಾಡಿದ್ದರೆ ಅಮೆಜಾನ್ ಕಂಪನಿಯು ರೈಫಲ್ ಒಂದನ್ನು ಕಳುಹಿಸಿಕೊಟ್ಟಿತ್ತು. ಇದನ್ನು ಕಂಡು ದಂಗಾದ seth ಕೂಡಲೆ ಪೊಲೀಸರಿಗೆ ಕರೆ ಮಾಡಿ ಈ ವಿಷಯ ತಿಳಿಸಿದರು. ಆಗ ತಪ್ಪಾಗಿ ಈ ರೀತಿ ಕಳುಹಿಸಿರುವ ವಿಷಯ ತಿಳಿದುಬಂದಿತು.
4) ಕ್ರಿಕೆಟ್ ಮೈದಾನದಲ್ಲಿ ಅನೇಕ advertisement board ಗಳು ಇರುವುದನ್ನು ನಾವು ನೋಡಿದ್ದೇವೆ. ಆದರೆ ಇವುಗಳನ್ನು ಹೇಗೆ ಮಾಡಲಾಗುತ್ತದೆ ಗೊತ್ತೆ? ಮೊದಲೆಲ್ಲ ಇವುಗಳನ್ನು spray painting ಬಳಸಿ ಹುಲ್ಲುಗಳ ಮೇಲೆ paint ಮಾಡಲಾಗುತ್ತಿತ್ತು, ಆದರೆ ಈಗ 3d morphing ಮತ್ತು computer graphics ಬಳಸಿ live match ಗಳಲ್ಲಿ ತೋರಿಸಲಾಗುತ್ತಿದೆ. ಆದರೆ ಇದನ್ನು ನೋಡಿದರೆ ಹುಲ್ಲುಗಳ ಮೇಲೆಯೇ paint ಮಾಡಲಾಗಿದೆ ಎನ್ನುವ ರೀತಿ ಕಾಣುತ್ತದೆ.
5) ನಮ್ಮೆಲ್ಲರ ಮೊಬೈಲ್ ಗಳಲ್ಲಿ flight mode ಇರುವುದು ತಿಳಿದೆ ಇದೆ. ವಿಮಾನದಲ್ಲಿ ಚಲಿಸುವಾಗ ಈ flight mode ಅನ್ನುon ಮಾಡಲು ಹೇಳುತ್ತಾರೆ. ಈ ರೀತಿ ಮಾಡಲು ಕಾರಣವೇನೆಂದರೆ ಅಕಸ್ಮಾತ್ ಮೊಬೈಲ್ ಅನ್ನು flight mode ಗೆ ಹಾಕದೆ ಇದ್ದರೆ ರೇಡಿಯೋ ಸಿಗ್ನಲ್ ಗಳನ್ನು ಮೊಬೈಲ್ ನೆಟ್ವರ್ಕ್ ಸೆಳೆದುಕೊಳ್ಳುತ್ತದೆ. ಇದರಿಂದಾಗಿ pilot ಮತ್ತು controller room ಮಧ್ಯೆ signal ಸರಿಯಾಗಿ ಸಿಗದೆ communicate ಮಾಡಲು ತೊಂದರೆ ಆಗುತ್ತದೆ. ಆದ್ದರಿಂದ ಮೊಬೈಲ್ ಅನ್ನು flight mode ಗೆ ಹಾಕಲು ಹೇಳುತ್ತಾರೆ.