
ಜಗತ್ತಿನಲ್ಲಿ ಅನೇಕ ಪ್ರಾಣಿ’ ಪಕ್ಷಿಗಳು ಇಂದು ಮನುಷ್ಯನ ಕೈಯ್ಯಲ್ಲಿ ಸಿಕ್ಕು ಅವನತಿಯಾಗಿರುವುದು ನಮಗೆಲ್ಲ ತಿಳಿದ ವಿಚಾರವೆ. ಕೆಲವು ಪ್ರಾಣಿಗಳು ಅವನತಿಗೊಳ್ಳುವ ಅಂಚಿನಲ್ಲಿದ್ದು ಅವುಗಳನ್ನು ರಕ್ಷಿಸಲು ಅನೇಕರು ಶ್ರಮ ಪಡುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಮನುಷ್ಯನ ಕೈಯ್ಯಲ್ಲಿ ಸಿಕ್ಕು ಬರೋಬ್ಬರಿ 1 ಮಿಲಿಯನ್ ಜೀವಿಗಳು ಅವನತಿಯ ಅಂಚಿನಲ್ಲಿವೆ. ಈ ಸುದ್ದಿ ಕೇಳಿದ ನಂತರ ಅನೇಕ ಜನರು ತುಂಬಾ ದುಃಖ ಪಡುತ್ತಿದ್ದಾರೆ. ಆದರೆ ಸಾವಿರಾರು ವರ್ಷಗಳ ಹಿಂದೆ ಕೆಲವು ಜೀವಿಗಳಿದ್ದವು. ಇಂದು ಅವುಗಳು ಬದುಕಿದ್ದಿದ್ದರೆ ಮನುಷ್ಯನು ಅವನತಿಯ ಅಂಚಿನಲ್ಲಿ ಇರುತ್ತಿದ್ದ. ಏಕೆಂದರೆ ಹೇಗೆ ನಾವು ಇಂದು ಪ್ರಾಣಿಗಳ ಮೇಲೆ ದಬ್ಬಾಳಿಕೆ ನಡೆಸಿ ಅವುಗಳ ಅವನತಿಗೆ ಕಾರಣವಾಗುತ್ತಿದ್ದೇವೆ ಹಾಗೆಯೆ ಆ ಪ್ರಾಣಿಗಳ ಬಾಯಿಗೆ ಸಿಕ್ಕು ನಾವೆಲ್ಲರೂ ಅವನತಿಯ ಅಂಚಿಗೆ ಮುಟ್ಟುತ್ತಿದ್ದೆವು. ಬನ್ನಿ ಇಂದು ನಿಮಗೆ ಆ ಭಯಂಕರ ಪ್ರಾಣಿಗಳ ಕುರಿತು ತಿಳಿಸಿಕೊಡುತ್ತೇವೆ ಮುಂದೆ ಓದಿ.
1) ಮೆಗಾನುಯೆರ – Meganeura
ಈಗ ನಾವೆಲ್ಲರು ನೋಡುತ್ತಿರುವ “ಡ್ರ್ಯಾಗನ್ ಫ್ಲೈ” ಗಳು 300 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ “ಮೆಗಾನುಯೆರ” ಕೀಟಕ್ಕೆ ಸೇರಿದ ಹುಳುವಾಗಿದೆ. ಈ “ಮೆಗಾನುಯೆರ” ಕೀಟದ ರೆಕ್ಕೆಗಳು ಬರೋಬ್ಬರಿ 70 ಸೆಂಟಿಮೀಟರ್ ಉದ್ದ ಇರುತ್ತಿದ್ದವು. ದೊಡ್ಡ ದೊಡ್ಡ ಪ್ರಾಣಿಗಳನ್ನು ತಿನ್ನುವಷ್ಟು ಸಾಮರ್ಥ್ಯವನ್ನು ಈ ಕೀಟಗಳು ಹೊಂದಿದ್ದವು.1885 ರಲ್ಲಿ ಫ್ರೆಂಚ್ ಕೀಟಾನುತಜ್ಞ “ಚಾರ್ಲ್ಸ್” ಅವರಿಗೆ ಸಿಕ್ಕ ಪಲೆಯುಳಿಕೆಗಳಿಂದ ಇದನ್ನು ಪತ್ತೆ ಮಾಡಲಾಗಿದೆ.
2) ಟೈಟಾನೊಬೊವ – Titanoboa
60 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಈ ದೈತ್ಯ ಹಾವುಗಳು ಅದೆಷ್ಟು ದೊಡ್ಡ ಹಾವುಗಳೆಂದರೆ ತನ್ನ ದಾರಿಗೆ ಅಡ್ಡಲಾಗಿ ಬರುವ ಯಾವುದೇ ಪ್ರಾಣಿಗಳನ್ನು ಇದು ನುಂಗಿಹಾಕುತ್ತಿತ್ತು.ಚಿಕ್ಕ ಪ್ರಾಣಿಗಳಿಂದ ಹಿಡಿದು ದೊಡ್ಡ ಡೈನೋಸಾರ್ ನಂತಹ ಪ್ರಾಣಿಗಳನ್ನು ಇದು ನುಂಗಿ ಹಾಕುತ್ತಿತ್ತು. ಅಕಸ್ಮಾತ್ ಈ ಹಾವು ಇನ್ನೂ ಈ ಭೂಮಿಯ ಮೇಲೆ ಬದುಕಿ ಉಳಿದಿದ್ದರೆ ನದಿಯ ಸುತ್ತಮುತ್ತ ವಾಸಿಸುತ್ತಿದ್ದ ಎಲ್ಲಾ ಪ್ರಾಣಿಗಳನ್ನು ಈ ಹಾವು ನುಂಗಿ ಹಾಕುತ್ತಿತ್ತು.
3) ಮೆಗಾ ಪಿರಾನ – Mega piranha
ನಾವೆಲ್ಲರು ಪ್ರಸಿದ್ದ ಹಾಲಿವುಡ್ ಚಿತ್ರವಾದ “ಪಿರಾನ”ವನ್ನು ನೋಡಿದ್ದೇವೆ. ಮನುಷ್ಯರನ್ನು ಕಿತ್ತು ತಿನ್ನುವ ಸಾಮರ್ಥ್ಯ ಈ ಮೀನುಗಳು ಹೊಂದಿದ್ದು ಶಾರ್ಕ್ ಮೀನುಗಳ ತರಹ ಇವುಗಳು ಮಾರಕವಾಗಿವೆ. ಇಂದು ಈ ಮೀನುಗಳನ್ನು ಅಮೆಜಾನ್ ಕಾಡಿನ ನದಿಗಳಲ್ಲಿ ಕಾಣಬಹುದಾಗಿದೆ. ಆದರೆ 10 ಮಿಲಿಯನ್ ವರ್ಷಗಳ ಹಿಂದೆ 71 ಸೆಂಟಿಮೀಟರ್ ಉದ್ದದವರೆಗೂ ಬೆಳೆಯುತ್ತಿದ್ದ ಈ ಮೀನುಗಳು ಸಮುದ್ರದಲ್ಲಿ ಇರುವ ದೊಡ್ಡ ದೊಡ್ಡ ಮೀನುಗಳನ್ನು ತಿನ್ನುವಷ್ಟು ಸಾಮರ್ಥ್ಯ ಹೊಂದಿದ್ದವು. ಇಂದು ಇವುಗಳು ಬದುಕಿದಿದ್ದರೆ ಸಮುದ್ರದ ಒಳಗೆ ಕಾಲಿಡಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ.
4) ಜೇಕಿಲೋಪೆತ್ರಸ್ – Jaekelopterus
ವಿಷ ತುಂಬಿರುವ ಚೇಳನ್ನು ಕಂಡರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅವುಗಳ ಒಂದೇ ಒಂದು ಕಡಿತವು ನಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ನಮಗಿಂತ ಗಾತ್ರದಲ್ಲಿ ಚಿಕ್ಕದಾದರೂ ಕೂಡ ನಮ್ಮ ಪ್ರಾಣ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ಚೇಳು ಹೊಂದಿದೆ. ಆದರೆ ಜೇಕಿಲೋಪೆತ್ರಸ್ ಪ್ರಾಣಿಯು ಬರೋಬ್ಬರಿ ಎರಡು ಮೀಟರ್ ನಷ್ಟು ಉದ್ದ ಇರುತ್ತಿದ್ದವು. ಅವುಗಳು ಈಗ ಬದುಕಿ ಉಳಿದಿದ್ದರೆ ಆನೆಯಂತಹ ದೊಡ್ಡ ಪ್ರಾಣಿಯನ್ನೇ ತಿನ್ನುತ್ತಿದ್ದವು.
5) ಮೆಗಾಲಾಡನ್ – Megalodon
ಮೆಗಾಲಾಡನ್ ಎಂದರೆ ಬೃಹತ್ ಹಲ್ಲು. ಶಾರ್ಕ್ ಮೀನುಗಳ ಜಾತಿಗೆ ಸೇರಿದ್ದ ಈ ಮೀನು 3.6 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದವು. ಈ ಮೀನುಗಳು ಅದೆಷ್ಟು ದೊಡ್ಡ ಮೀನುಗಳಾಗಿದ್ದವೆಂದರೆ ಇಂದು ನಾವೆಲ್ಲ ತಿಳಿದಿರುವ ಬೃಹತ್ ಮೀನಾದ ತಿಮಿಂಗಲದಂತಹ ದೈತ್ಯ ಜೀವಿಯನ್ನು ಸುಲಭವಾಗಿ ತಿನ್ನುತ್ತಿದ್ದವು. ಬರೋಬ್ಬರಿ 20ಮೀಟರ್ ಉದ್ದದವರೆಗೂ ಇರುತ್ತಿದ್ದ ಈ ಮೀನಿನ ಕಡಿತವು 180,000 ನ್ಯೂಟನ್ ಶಕ್ತಿ ಉತ್ಪತ್ತಿ ಮಾಡುವಷ್ಟು ಸಾಮರ್ಥ್ಯ ಹೊಂದಿತ್ತು.ಇಂದು ಈ ಮೀನು ಸಮುದ್ರದಲ್ಲಿ ಉಳಿದಿದ್ದರೆ ಸಮುದ್ರದಲ್ಲಿ- ಯಾವ ಜೀವಿಯು ಕೂಡ ಬದುಕಿ ಉಳಿಯುತ್ತಿರಲಿಲ್ಲ.
6) ಪುರುಸರಸ್ – Purussaurus
ಮೊಸಳೆಯ ಜಾತಿಯ ಈ ಬೃಹತ್ ಪ್ರಾಣಿಯು 8 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದವು. ಡೈನೋಸಾರ್ ನಂತಹ ಬೃಹತ್ ಪ್ರಾಣಿಗಳನ್ನು ತಿನ್ನುವಷ್ಟು ಸಾಮರ್ಥ್ಯ ಈ ಮೊಸಳೆಯು ಹೊಂದಿದ್ದವು. ಬರೋಬ್ಬರಿ 10 ಮೀಟರ್ ಉದ್ದದವರೆಗೂ ಬೆಳೆಯುತ್ತಿದ್ದ ಈ ಮೊಸಳೆಗಳು ದಿನಕ್ಕೆ 40 ಕೆಜಿ ತೂಕದ ಆಹಾರವನ್ನು ತಿನ್ನುತ್ತಿದ್ದವು.
ಇದೇ ತರಹ ಇನ್ನೂ ಅನೇಕ ಪ್ರಾಣಿಗಳು ಬೃಹತ್ ಆಕಾರದಲ್ಲಿ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಕಸ್ಮಾತ್ ಅವುಗಳು ಇಂದು ಬದುಕಿ ಉಳಿದಿದ್ದರೆ ಮನುಷ್ಯನ ಅವನತಿ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.
Follow Karunadu Today for more Interesting Facts & Stories.
Click here to Join Our Whatsapp Group