ಈ ಪ್ರಕೃತಿಯೇ ಹಾಗೆ,ಅದೆಷ್ಟೋ ಅಚ್ಚರಿಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಹುಡುಕುತ್ತಾ ಹೋದಂತೆಲ್ಲ ಕಾಣಸಿಗುವ ಅಚ್ಚರಿಗಳು ಮನುಷ್ಯರನ್ನು ಧಿಗ್ಬ್ರ್ಹಮೆಗೊಳಿಸಿವೆ. ನಮಗೆಲ್ಲ ಗೊತ್ತಿರುವ ಹಾಗೆ ಅಮೆಜಾನ್ ಕಾಡು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಕಾಡು. 4 ದೇಶಗಳಲ್ಲಿ ವಿಸ್ತಾರವಾಗಿರುವ ಈ ಕಾಡು ಕೋಟಿ ಜೀವಿಗಳಿಗೆ ವಾಸಸ್ಥಾನವಾಗಿದೆ. ಈ ಕಾಡಿನ ಒಳ ಹುಡುಕುತ್ತಾ ಹೋದಂತೆ ಅದೆಷ್ಟೋ ರಹಸ್ಯಗಳು ಸಿಗುತ್ತಾ ಹೋಗುತ್ತವೆ. ವಿಜ್ಞ್ಯಾನಿಗಳು ಹೇಳುವ ಪ್ರಕಾರ ಈ ಕಾಡಿನಲ್ಲಿ ಇದುವರೆಗೂ ಕೇವಲ ಶೇಕಡ 30 ರಷ್ಟು ಮಾತ್ರ ಜೀವಿಗಳನ್ನು ಪತ್ತೆ ಹಚ್ಚಿದ್ದಾರಂತೆ. ಕಂಡು ಹಿಡಿಯಲು ಸಾಧ್ಯವಾಗದ ಇನ್ನೂ ಅನೇಕ ರಹಸ್ಯಗಳು ಈ ಕಾಡಿನ ಒಳಗಿದೆಯಂತೆ. ಇಂದು ಅಂತಹ ರಹಸ್ಯಗಳಲ್ಲಿ ಒಂದಾಗಿರುವ “ಕುದಿಯುವ ನದಿಯ” ಬಗ್ಗೆ ನಿಮಗೆ ತಿಳಿಸುತ್ತೇವೆ. ಸಾಮಾನ್ಯವಾಗಿ ನದಿಯೆಂದರೆ ನೂರಾರು ಜೀವಿಗಳಿಗೆ ನೆಲೆ ನೀಡಿ ಶಾಂತವಾಗಿ ಹರಿಯುತ್ತಿರುತ್ತದೆ. ಆದರೆ ಇಲ್ಲೊಂದು ನದಿಯಿದ್ದು ತನ್ನೊಳಗೆ ಯಾವ ಜೀವರಾಶಿಯನ್ನೂ ಇಟ್ಟುಕೊಳ್ಳದೆ ಕುದಿಯುತ್ತಿದೆ. ಬನ್ನಿ ಆ ವಿಚಿತ್ರವಾದ ನದಿಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಮುಂದೆ ಓದಿ.

credit-treehugger.com_

ಆ ನದಿಯ ಹೆಸರು “Shanay-Timpishka”. ಪೆರು ದೇಶದ “ಹುವಯನುಕೋ” ಎನ್ನುವ ನಗರದ ಬಳಿ ಇರುವ “ಮಾಯನ್ಟುಯಕು” ಎನ್ನುವ ಅರಣ್ಯಧಾಮದ ಹತ್ತಿರ ಇದೆ. ಈ ನದಿಯು ಅನೇಕ ವರ್ಷಗಳಿಂದ ಕುದಿಯುತ್ತಿದ್ದು ಇದರ ದಂಡೆಯ ಮೇಲೆ ವಾಸಿಸುತ್ತಿರುವ ಜನರು ಈ ನದಿಯನ್ನು ಪವಿತ್ರ ನದಿಯೆಂದು ನಂಬಿ ಅದನ್ನು ಕಾಪಾಡುತ್ತಿದ್ದಾರೆ. ಅಲ್ಲಿನ ಜನರು ಅವರು ನಂಬಿರುವ ದೇವತೆಯು ತಣ್ಣನೆಯ ನದಿ ಹಾಗು ಕುದಿಯುವ ನದಿಗೆ ಜನ್ಮ ನೀಡಿರುವುದರಿಂದ ಈ ರೀತಿಯಾಗಿ ಅದು ಕುದಿಯುತ್ತಿದೆ ಎಂದು ನಂಬಿದ್ದಾರೆ. “ಜಿಯೋಥರ್ಮಲ್ ವಿಜ್ಞ್ಯಾನಿಯಾಗಿರುವ” “ಅಯಾನ್ದ್ರಸ್ ರುಜೊ” ಈ ನದಿಯನ್ನು ಹೊರ ಜಗತ್ತಿಗೆ ತೋರಿಸಿದ ಮೊದಲ ವ್ಯಕ್ತಿ. ತನ್ನ ಬಾಲ್ಯದಲ್ಲಿ ಈತನ ಅಜ್ಜ ಆ ನದಿಯ ಬಗ್ಗೆ ಸದಾ ಕಥೆ ಹೇಳುತ್ತಿದ್ದರಂತೆ. ಅದನ್ನು ಕೇಳುತ್ತಿದ್ದ ಆತನಿಗೆ ಆ ನದಿಯನ್ನು ಒಮ್ಮೆಯಾದರು ಬೇಟಿ ಮಾಡಬೇಕು ಎನ್ನುವ ಆಸೆಯಿತ್ತಂತೆ. ಬೆಳೆದು ದೊಡ್ಡವನಾದ ಮೇಲೆ ಈ ನದಿಯನ್ನು ಬೇಟಿ ಕೊಟ್ಟ ರುಜೊ ನದಿಯ ದಂಡೆಯ ಮೇಲಿದ್ದ ಊರಿನ ನಾಯಕನನ್ನು ಬೇಟಿ ಮಾಡಿ ಆ ನದಿಯ ಬಗ್ಗೆ ತನಿಖೆ ನಡೆಸಲು ಅಪ್ಪಣೆ ಪಡೆದುಕೊಂಡನು. ನಂತರ ಅ ನದಿಯ ಹತ್ತಿರ ಹೋಗುತ್ತಿದ್ದಂತೆ ದಂಡೆಯ ಮೇಲೆ ಸತ್ತು ಬಿದ್ದಿದ್ದ ಕಪ್ಪೆ ಹಾಗು ಕೆಲವು ಜೀವಿಗಳನ್ನು ಕಂಡು ಆಶ್ಚರ್ಯನಾಗಿದ್ದ.

ಬರೋಬ್ಬರಿ 95 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಆ ನದಿಯ ಹತ್ತಿರ ಯಾವುದೇ ಜೀವಿ ಬಂದರೂ ಉಷ್ಣಾಂಶ ತಾಳಲಾರದೆ ಬೆಂದು ಹೋಗುತ್ತದೆ. ಇದರ ಹಿಂದಿರುವ ವೈಜ್ಞ್ಯಾನಿಕ ರಹಸ್ಯ ತಿಳಿಯಲು ತೀರ್ಮಾನಿಸಿದ “ರುಜೊ” ಇದಕ್ಕೆಂದು ತನ್ನ ಬಳಿ ಇದ್ದ ಉಪಕರಣಗಳಿಂದ ಪರೀಕ್ಷಿಸಿದಾಗ ಅವನಿಗೆ ತಿಳಿದಿದ್ದು ಆ ನದಿಯ ನೀರು ಭೂಮಿಯ ತಳಭಾಗದವರೆಗೂ ಹೋಗಿ ಲಾವಾದಿಂದ ಉತ್ಪತ್ತಿಯಾಗುವ ಉಷ್ಣಾಂಶದಿಂದ ಬಿಸಿಯಾಗುತ್ತದೆಆದ್ದರಿಂದ ಈ ನದಿಯು ಈ ರೀತಿಯಾಗಿ ಕುದಿಯುತ್ತಿದೆ ಎಂದು ರುಜೋ ಅದನ್ನು ಪತ್ತೆ ಮಾಡಿದ್ದಾರೆ.
ಇದೇ ರೀತಿ 7 ಕಿಲೋಮೀಟರ್ ಉದ್ದಗಲಕ್ಕೂ ದಗ ದಗ ಕುದಿಯುತ್ತಿದ್ದು ಪ್ರಪಂಚದಲ್ಲಿಯೇ ಈ ರೀತಿ ಕುದಿಯುವ ಏಕೈಕ ನದಿ ಇದಾಗಿದೆ. ಆದರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆ ಮಾಡುತ್ತ ಹೋದಂತೆ ಸುತ್ತಮುತ್ತಲು ಇರುವ ಕಾಡು ಹೆಚ್ಚು ನಾಶವಾದಲ್ಲಿ ಇದರ ಉಷ್ಣಾಂಶ ಕೂಡ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.


ಅದೇನೇ ಇರಲಿ ಪ್ರಕೃತಿಯ ಮಡಿಲಲ್ಲಿ ಅಡಗಿರುವ ಇಂತಹ ರಹಸ್ಯವನ್ನು ನೋಡಿದಾಗ ಮನುಷ್ಯರಾದ ನಮಗೆ ಅಚ್ಚರಿಯಾಗುವುದು ಸಹಜ. ಇದರ ಸುತ್ತಲಿನ ಕಾಡು ನಾಶವಾಗದೆ ನದಿಯನೀರಿನ ಉಷ್ಣಾಂಶ ಹೆಚ್ಚಾಗದಿರಲಿ ಎನ್ನುವುದೇ ನಮ್ಮ ಆಸೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group