ಜಾಸ್ತಿ ಹೊತ್ತು ಓಡಾಡಲು ಆಗುತ್ತಿರಲಿಲ್ಲ, ಕೆಲವೊಮ್ಮೆ ತಲೆ ತಿರುಗುತ್ತಾ ಇತ್ತು. ಕೈ ಕಾಲುಗಳೆಲ್ಲಾ ತುಂಬಾ ನಡುಗುತ್ತಿದ್ದವು. ಎಷ್ಟೋ ಡಾಕ್ಟರ್ ಗಳಿಗೆ ತೋರಿಸಿದೆವು ಆದರೆ ಏನೂ ಪ್ರಯೋಜನ ಬರಲಿಲ್ಲ. ಇದಕ್ಕೆ ಪರಿಹಾರವೇ ಇಲ್ಲವೆಂದು ಕೊಂಡು ಎಷ್ಟೋ ಬಾರಿ ಅಳುತ್ತಾ ಕೂರುತ್ತಿದ್ದೆ. ಇದು ಯಾವ ತರಹದ ರೋಗವೆಂದು ತಿಳಿಯಲೇ ಇಲ್ಲ. ಎಲ್ಲಾ ಪ್ರಯತ್ನ ಮಾಡಿ ಅಪ್ಪ ಅಮ್ಮನು ಕೂಡ ಸುಮ್ಮನಾಗಿದ್ದರು. ಇನ್ನು ಇವಳನ್ನು ಯಾರು ಮದುವೆ ಆಗುತ್ತಾರೆ ಎಂದು ಅಜ್ಜಿಯು ಕೊಂಕು ಮಾತು ಆಡುತ್ತಿದ್ದಳು. ಅದನ್ನು ಕೇಳಿ ಅಳುತ್ತಿದ್ದೆ.

ನನ್ನ ಜೀವನ ಯಾಕೆ ಈ ರೀತಿ ಆಯಿತು ಎಂದು ರೋದಿಸುತ್ತಿದ್ದೆ. ಅದೊಂದು ದಿನ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸುಂದರ್ ನಮ್ಮ ಮನೆಗೆ ಬಂದಿದ್ದರು. ಅವರಿಗೆ ನೀರು ಕೊಡಲು ಎಂದು ಹೋದಾಗ ಅವರು ನನ್ನನ್ನು ನೋಡಿದರು. ನನಗೆ ಅವರ ಮೇಲೆ ಆಕರ್ಷಣೆ ಆಯಿತು. ನೋಡುವುದಕ್ಕೆ ತುಂಬಾ ಸುಂದರ ಮತ್ತು ಒಳ್ಳೆಯ ವ್ಯಕ್ತಿ ಅವರು. ಅಪ್ಪನ ಜೊತೆ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಲವು ಬಾರಿ ಮನೆಗೂ ಬಂದಿದ್ದರು. ಆದರೆ ಅವರನ್ನು ಪ್ರೀತಿಸುವ ಯೋಗ್ಯತೆ ನನಗೆ ಇಲ್ಲ, ಏಕೆಂದರೆ ನನಗೆ ಇರುವ ರೋಗವು ಇನ್ನೊಬ್ಬರ ಜೀವನವನ್ನು ಹಾಳು ಮಾಡುವುದು ನನಗೆ ಇಷ್ಟವಿರಲಿಲ್ಲ.

ಆದರೆ ಅಂದು ಸುಂದರ್ ನಮ್ಮ ಮನೆಗೆ ಬಂದಿದ್ದ ವಿಷಯವೇ ಬೇರೆಯದಾಗಿತ್ತು. ಅವರು ನಮ್ಮ ಅಪ್ಪನ ಹತ್ತಿರ ನಮ್ಮ ಮದುವೆಯ ವಿಚಾರವಾಗಿ ಮಾತನಾಡಲು ಬಂದಿದ್ದರು. ಇದನ್ನು ಕೇಳಿ ನಮ್ಮ ತಂದೆಗೆ ಆಶ್ಚರ್ಯ ಮತ್ತು ಆನಂದವಾಯಿತು. ನನ್ನ ಮಗಳನ್ನು ಮದುವೆ ಆಗಲು ಯಾರೂ ಮುಂದೆ ಬರುತ್ತಿಲ್ಲ ಅಂತಹುದರಲ್ಲಿ ನೀನು ಯಾಕೆ ಅವಳನ್ನೇ ಮದುವೆ ಆಗಬೇಕು ಅಂತ ಬಯಸುತ್ತಿರುವೆ ಎಂದು ಕೇಳಿದಾಗ, ನನಗೆ ಪವಿತ್ರ  ತುಂಬಾ ಇಷ್ಟ ಅವಳನ್ನು 3 ವರ್ಷದ ಹಿಂದೆ ಮೊದಲ ಬಾರಿಗೆ ನಿಮ್ಮ ಮನೆಗೆ ಬಂದಾಗ ನೋಡಿದ್ದೆ. ಅವಳನ್ನು ಮೊದಲ ಬಾರಿಗೆ ನೋಡಿದಾಗಲೇ ಅವಳ ಮೇಲೆ ನನಗೆ ಮನಸ್ಸು ಆಯಿತು, ಅವಳಿಗೆ ರೋಗವಿರುವುದು ನನಗೆ ಗೊತ್ತು ಆದರೂ ಅವಳನ್ನು ನಾನು ಮದುವೆ ಆಗುತ್ತೇನೆ, ಏಕೆಂದರೆ ಅವಳು ಅಂದರೆ ನನಗೆ ತುಂಬಾ ಇಷ್ಟ ಎಂದು ನೇರವಾಗಿ ನನ್ನತಂದೆ ತಾಯಿ ಮತ್ತು ಅಜ್ಜಿಗೆ ಹೇಳಿದರು. ಸುಂದರ್ ಹೇಳಿದ ಈ ಮಾತುಗಳನ್ನು ನಾನು ನನ್ನ ಕೋಣೆಯಿಂದ ಕದ್ದು ಕೇಳಿಸಿಕೊಂಡು ಕಣ್ಣೀರು ಇಟ್ಟೆ. ನನ್ನನ್ನು ಇಷ್ಟೊಂದು ಇಷ್ಟ ಪಡುವ ಜೀವ ಒಂದಿದೆ ಎಂದು ತಿಳಿದು ತುಂಬಾ ಖುಷಿಯಾಯಿತು. ನನ್ನ ತಂದೆಯು ಕೂಡ ಖುಷಿಯಿಂದ ಈ ಮದುವೆಗೆ ಒಪ್ಪಿಗೆ ನೀಡಿದರು.

ಮದುವೆಯಾದ ದಿನದಿಂದ ಸುಂದರ್ ನನ್ನನ್ನು ಚಿಕ್ಕ ಮಗುವಿನ ತರಹ ನೋಡಿಕೊಳ್ಳುತ್ತಿದ್ದಾರೆ. ಎಷ್ಟೋ ಸಲ ನಾನು ತಲೆ ತಿರುಗಿ ಬೀಳುವಾಗ ನನ್ನನ್ನು ಹಿಡಿದುಕೊಂಡು ಹಾಸಿಗೆಯ ಮೇಲೆ ಮಲಗಿಸಿ ತಲೆ ಸವರುತ್ತ ನಿನಗೆ ಏನೂ ಆಗುವುದಿಲ್ಲ ನಾನು ಇದ್ದೇನೆ ಎಂದು ಹೇಳುತ್ತಾರೆ. ಹೀಗೆ ವರ್ಷಗಳೇ ಕಳೆದವು. ನಮಗೆ ಒಂದು ಮುದ್ದಾದ ಮಗಳು ಹುಟ್ಟಿದ್ದಾಳೆ. ಮಗುವು ಆದ ನಂತರ ನನ್ನ ಆರೋಗ್ಯದಲ್ಲಿ ತುಂಬಾ ಏರು ಪೇರು ಆಗ ತೊಡಗಿತು. ಮೈಯ್ಯ ಮೇಲಿನ ಚರ್ಮವೆಲ್ಲ ಕೀಳತೊಡಗಿತು, ಹೊರಗಡೆ ಹೋಗದೆ ಯಾವಾಗಲೂ ರೂಮಿನಲ್ಲೇ ಕೂರುತ್ತಿದ್ದೆ.

ನೀನು ಯಾವತ್ತೂ ಈ ತರಹ ಒಬ್ಬಳೇ ಕೂಡಬಾರದು ಎಂದು ಧೈರ್ಯ ತುಂಬಿ ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು. ಅವರ ಮತ್ತು ನನ್ನ ಮಗಳ ಪ್ರೀತಿಯು ಇಂದು ನನ್ನನ್ನು ನಿಧಾನವಾಗಿ ಗುಣಪಡಿಸುತ್ತ ಇದೆ. ದೂರದ ಊರಿನಲ್ಲಿ ಇದ್ದ ವೈದ್ಯರ ಬಳಿ ನನ್ನನ್ನು ಕರೆದುಕೊಂಡು ಹೋಗಿ ಔಷದಿಗಳನ್ನು ಕೊಡಿಸಿ ನನ್ನನ್ನು ಪ್ರೀತಿಯಿಂದ ನೋಡಿಕೊಂಡ ಕಾರಣ ಇವತ್ತು ನಿಧಾನವಾಗಿ ನನ್ನ ರೋಗವು ಗುಣಮುಖವಾಗುತ್ತಿದೆ. ಅದ್ಯಾವ ಜನ್ಮದಲ್ಲಿ ಮಾಡಿದ ಪುಣ್ಯವೋ ಗೊತ್ತಿಲ್ಲ ಸುಂದರ್ ನಂತಹ ಗಂಡನು ನನಗೆ ಸಿಕ್ಕಿದ್ದಾನೆ. ಅವನ ಪ್ರೀತಿಯೇ ನನಗೆ ದೊಡ್ಡ ಔಷದಿ.

For more Stories follow Karunadu Today

Click here to Join Our Whatsapp Group