
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂದು ಒಂದಲ್ಲಾ ಒಂದು ದಿನ ಖಂಡಿತ ಅಂದುಕೊಂಡಿರುತ್ತಾನೆ. ಆದರೆ, ಎಲ್ಲರಿಗೂ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಅದಕ್ಕೆ ಹಲವು ಕಾರಣಗಳಿರಬಹುದು. ಅದು ನಮ್ಮ ಸ್ವಂತ ತಪ್ಪಾಗಿರಬಹುದು, ಮನೆಯವರ, ಸ್ನೇಹಿತರ, ಬಂಧುಗಳ ಸರಿಯಾದ ಬೆಂಬಲವಿಲ್ಲದೆ ಅಥವಾ ಅವರ ತಪ್ಪಿನಿಂದ ನಾವು ನಮ್ಮ ಕೆಲಸಗಳನ್ನು ಸಾಧಿಸಲು ಆಗುತ್ತಿರುವುದಿಲ್ಲ.
ಇನ್ನು ನಿಮಗೆ ಒಂದು ಕುತೂಹಲಕರ ಮಾಹಿತಿಯನ್ನು ನೀಡುತ್ತೇವೆ. ಪ್ರತಿಯೊಬ್ಬ ಮನುಷ್ಯ ತಾನು ಜೀವನದಲ್ಲಿ ಸಾಯುವ ವಯಸ್ಸಿಗೆ ಬಂದಾಗ ಈ ವಿಷಯಗಳ ಬಗ್ಗೆ ತನಗೆ ತಾನೇ ವಿಷಾದ ವ್ಯಕ್ತಪಡಿಸುತ್ತಾನೆ. ಅಷ್ಟಕ್ಕೂ ಆ ವಿಷಯಗಳಾದರು ಯಾವುದು ಎಂದು ತಿಳಿಯಲು ಮುಂದೆ ಓದಿ?
ಪ್ರಯಾಣ:
ಮನುಷ್ಯ ಸಾಯುವ ಹಂತಕ್ಕೆ ಬಂದಾಗ ಅವನಿಗೆ ಕಾಡುವ ಮೊದಲ ವಿಷಯವೆಂದರೆ ಅದು ಪ್ರಯಾಣ. ವಯಸ್ಸಿದ್ದಾಗ ದುಡ್ಡಿನ ಹಿಂದೆ ಓಡುತ್ತಾ ಮನಸಿಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಪ್ರಪಂಚ ಪರ್ಯಟನೆ ಮಾಡಬೇಕು ಎಂಬ ಆಸೆ ಇರುತ್ತದೆ ಅದು ಅವರ ಕೊನೆ ಕ್ಷಣದಲ್ಲಿ ನೆನಪಾಗುತ್ತದೆ.
ಬೇಡದ ಕೆಲಸ:
ನಮಗೆ ಬೇಡದ ಕೆಲಸ ಅಥವಾ ನಮಗೆ ಅದರಿಂದ ಬರುವ ಆದಾಯ ಸರಿಹೊಂದದಿದ್ದರೆ, ಸರಿಯಾದ ಸಮಯಕ್ಕೆ ವಿದಾಯ ಹೇಳದಿರುವುದರಿಂದ ಆಗುವ ಎಲ್ಲ ನಷ್ಟಗಳ ಬಗ್ಗೆ ಮನುಷ್ಯ ಸಾಯುವ ಘಳಿಗೆಯಲ್ಲಿ ನೆನಪಿಸಿಕೊಳ್ಳುತ್ತಾನೆ.
ಇಷ್ಟವಿರದ ಸಂಬಂಧ:
ನಮಗೆ ಇಷ್ಟವಿರದ ಸಂಭಂದವನ್ನು ಸರಿಯಾದ ವೇಳೆಗೆ ವಿದಾಯ ಹೇಳದೆ ಅಥವಾ ನಮಗೆ ಇಷ್ಟವಿರದವರ ಅಥವಾ ನಾವು ಪ್ರೀತಿಸದವರ ಜೊತೆ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡ ಬಗ್ಗೆ ನಾವು ಕೊನೆ ಕ್ಷಣದಲ್ಲಿ ನೆನಪಿಸಿಕೊಳ್ಳುತ್ತೇವೆ.
ಹಲ್ಲಿನ ಬಗ್ಗೆ ಕಾಳಜಿವಹಿಸದಿರುವುದು:
ನಾವು ವಯಸ್ಸಲ್ಲಿದಾಗ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಮ್ಮ ಹಲ್ಲುಗಳು ಹಾಳಾಗಿರುವ ಬಗ್ಗೆ ವಯಸ್ಸಾದಾಗ ಅದರಿಂದ ಆಗುವ ತೊಂದರೆಗಳನ್ನು ಅನುಭವಿಸುವಾಗ ಆಗ ಮಾಡಿದ ತಪ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ.
ಹೆಚ್ಚಿನ ಕೆಲಸ:
ನಮಗೆ ಲಭ್ಯವಿರುವ ಎಲ್ಲಾ ಸಮಯವನ್ನು ಬರೀ ಕೆಲಸ ಮಾಡುವುದರಲ್ಲಿಯೇ ಕಳೆದು, ಮನೆಯವರು, ಸ್ನೇಹಿತರು, ಬಂಧುಗಳ ಜೊತೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳದಿರುವ ಬಗ್ಗೆ ಕೊನೆ ಸಮಯದಲ್ಲಿ ವಿಷಾದ ವ್ಯಕ್ತಪಡಿಸುತ್ತೇವೆ.
ಶಾಲೆ ಮತ್ತು ಕಾಲೇಜು:
ಶಾಲೆ ಮತ್ತು ಕಾಲೇಜಿನಲ್ಲಿ ಸರಿಯಾಗಿ ಕಲಿಯದೇ ಅಥವಾ ಅಲ್ಲಿ ಸರಿಯಾದ ರೀತಿಯಲ್ಲಿ ಎಂಜಾಯ್ ಮಾಡದಿರುವ ಬಗ್ಗೆ ಕೊನೆಗೆ ನೆನೆಸಿಕೊಂಡು ತುಂಬಾ ದುಃಖ ಪಡುತ್ತೇವೆ.
ದೃಢ ನಿರ್ಧಾರ:
ನಾವು ಏನಾದರೊಂದು ಸಾಧಿಸಬೇಕು ಎಂದು ಮುಂದೆ ಸಾಗುವಾಗ ದಾರಿಯಲ್ಲಿ ಬರುವ ಅಡೆ ತಡೆಗಳಿಗೆ ಹೆದರಿ ರಿಸ್ಕ್ ತೆಗೆದುಕೊಳ್ಳದೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿರುವ ಬಗ್ಗೆ ನಾವು ಕೊನೆಯಲ್ಲಿ ವಿಷಾದ ವ್ಯಕ್ತಪಡಿಸುತ್ತೇವೆ.
ಖುಷಿ:
ಎಲ್ಲ ಸಮಯದಲ್ಲಿಯೂ ದುಃಖಿಯಾಗಿದ್ದು ನಮ್ಮ ಸುತ್ತ ಮುತ್ತಲು ನಡೆಯುವ ಸಣ್ಣ ಘಟನೆಗಳನ್ನು ನೋಡದೆ ಅದರಿಂದ ಸಿಗುವ ಸಣ್ಣ ಖುಷಿಯನ್ನು ಅನುಭವಿಸದೆ ಯಾವಾಗಲೂ ಇನ್ನು ಉತ್ತಮವನ್ನು ಬಯಸಿದ ಬಗ್ಗೆ ಮನುಷ್ಯ ಸಾಯುವ ಕೊನೆ ಸಮಯದಲ್ಲಿ ವಿಷಾದ ವ್ಯಕ್ತಪಡಿಸುತ್ತಾನೆ.
ಅದಕ್ಕಾಗಿ ನಾವು ಹೇಳುವುದೇನೆಂದರೆ ಪ್ರತಿಕ್ಷಣವನ್ನು ಖುಷಿಯಿಂದ ಕಳೆಯಿರಿ. ಎಲ್ಲರ ಜೊತೆ ನಗುತ್ತ ಬೆರೆಯಿರಿ. ಏಕೆಂದರೆ ಕಳೆದುಕೊಂಡ ಸಮಯ ಮತ್ತೆ ತಿರುಗಿ ಬರುವುದಿಲ್ಲ.
For more Stories follow Karunadu Today
Click here to Join Our Whatsapp Group