
ಜ್ವಾಲಾಮುಖಿ, ಇದರ ಹೆಸರನ್ನು ಕೇಳಿದರೆ ಸಾಕು ಮನುಷ್ಯನು ಹೆದರುತ್ತಾನೆ. ಹೇಗೆ ಭೂಕಂಪ, ಸುನಾಮಿ, ವೈರಸ್ ಗಳ ಹೆಸರನ್ನು ಕೇಳಿದರೆ ಮನುಷ್ಯನು ಹೆದರುತ್ತಾನೆ ಅದೇ ರೀತಿ ಜ್ವಾಲಾಮುಖಿ ಹೆಸರನ್ನು ಕೇಳಿದರೆ ಮತ್ತಷ್ಟು ಹೆದರುತ್ತಾನೆ. ನಮ್ಮ ಭೂಮಿಯ ಮೇಲೆ ಕೆಲವು ಜ್ವಾಲಾಮುಖಿ ಪರ್ವತಗಳಿದ್ದು ಅಕಸ್ಮಾತ್ ಅವುಗಳು ಸ್ಪೋಟವಾದರೆ ಭೂಮಿಯ ಮೇಲೆ ಅನೇಕ ಜೀವರಾಶಿಗಳು ಸರ್ವನಾಶವಾಗುತ್ತವೆ. ಆದರೆ ಈ ಪರ್ವತಗಳು ಅನೇಕ ವರ್ಷಗಳಿಗೊಮ್ಮೆ ಮಾತ್ರ ಸ್ಪೋಟವಾಗುತ್ತವೆ. ಇಂದು ನಿಮಗೆ ಇದುವರೆಗು ಮಾನವ ಇತಿಹಾಸ ಕಂಡ ಅತ್ಯಂತ ಭಯಾನಕ ಜ್ವಾಲಾಮುಖಿ ಸ್ಫೋಟದ ಕುರಿತು ಮಾಹಿತಿ ನೀಡುತ್ತೇವೆ.
1) ಕ್ರಕಟೋವ ಜ್ವಾಲಾಮುಖಿ ಪರ್ವತ ಸ್ಫೋಟ
ಮಾನವ ಇತಿಹಾಸ ಕಂಡ ಅತ್ಯಂತ ಭಯಾನಕ ಜ್ವಾಲಾಮುಖಿ ಪರ್ವತಗಳ ಸ್ಫೋಟದಲ್ಲಿ ಇದು ಮೊದಲ ಸ್ಥಾನದಲ್ಲಿದೆ.ಇಂಡೋನೇಷ್ಯಾದ Jakarta ನಗರದ ಬಳಿಯಿರುವ ಈ ಪರ್ವತವು 1883 ರಲ್ಲಿ ಸ್ಪೋಟವಾದಾಗ ಇದರ ಸದ್ದು 4000 ಕಿಲೋಮೀಟರ್ ದೂರದವರೆಗು ಕೇಳಿತ್ತು. ಈ ಶಬ್ದವನ್ನು ಇದುವರೆಗು ಭೂಮಿಯ ಮೇಲೆ ಉಂಟಾದ ಅತ್ಯಂತ ಭಯಾನಕ ಶಬ್ದವೆಂದು ಪರಿಗಣಿಸಲಾಗಿದೆ. ಅಂದು ಉಂಟಾದ ಈ ಸ್ಪೋಟದಿಂದ ಮತ್ತು ಅದರಿಂದ ಹೊರಬಂದ ಲಾವಾರಸದಿಂದ 36 ಸಾವಿರ ಜನರು ಸತ್ತಿದ್ದರು. ಈ ಪರ್ವತದಿಂದ ಹೊರ ಬಂದ ಬೂದಿಯು 27 ಕಿಲೋಮೀಟರ್ ಎತ್ತರದವರೆಗು ಚಿಮ್ಮಿ ಕಪ್ಪು ಮೋಡಗಳನ್ನು ಸೃಷ್ಟಿಸಿ ಸೂರ್ಯನ ಕಿರಣಗಳು ಭೂಮಿಗೆ ತಾಗದ ಹಾಗೆ ಮಾಡಿದ್ದವು.
ನೋಡಿದಿರಲ್ಲ ಹೇಗೆ ಈ ಮಹಾನ್ ಸ್ಪೋಟಗಳಿಂದ ನಮ್ಮ ಭೂಮಿಯ ಮೇಲೆ ಅನಾಹುತ6
ಗಳು ಸಂಭವಿಸಿವೆ ಎನ್ನುವುದನ್ನು. ಅನೇಕ ವರ್ಷಗಳಿಗೊಮ್ಮೆ ಸ್ಪೋಟವಾಗುವ ಇಂತಹ ಜ್ವಾಲಾಮುಖಿ ಪರ್ವತಗಳು ನಮ್ಮ ದೇಶದಲ್ಲಿ ಇರದೆ ಇರುವುದು ಒಳ್ಳೆಯದಾಯಿತು. ಇಲ್ಲವಾದಲ್ಲಿ ನಮ್ಮ ದೇಶದಲ್ಲೂ ಕೂಡ ಸಾಕಷ್ಟು ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದವು.
2) ಮೌಂಟ್ ತಂಬೋರಾ (Mount Tambora)
ಜ್ವಾಲಾಮುಖಿ ಪರ್ವತ ಸ್ಫೋಟ ಇಂಡೋನೇಷ್ಯಾದ “Sumbawa” ದ್ವೀಪದ ಮೇಲಿರುವ ಈ ಜ್ವಾಲಾಮುಖಿ ಪರ್ವತವು ಏಪ್ರಿಲ್ 5, 1815 ರಂದು ಸ್ಪೋಟವಾದಾಗ ಅದರ ಸದ್ದು 2400 ಕಿಲೋಮೀಟರ್ ದೂರದಲ್ಲಿರುವ ನಗರ ಪ್ರದೇಶದ ಜನರಿಗೆ ಕೇಳಿಸಿತ್ತು. ಅಷ್ಟೊಂದು ಭಯಂಕರವಾಗಿತ್ತು ಇದರ ಸ್ಫೋಟ. ನಂತರ ಏಪ್ರಿಲ್ 6 ರಿಂದ 10 ರವರೆಗು ಈ ಜ್ವಾಲಾಮುಖಿ ಪರ್ವತದಿಂದ ಹೊರಬಂದ ಬೂದಿಯು 1300 ಕಿಲೋಮೀಟರ್ ದೂರದವರೆಗು ಬೀಳುತ್ತ ಭಯಾನಕ ಶಬ್ದವನ್ನು ಸೃಷ್ಟಿಸುತ್ತಿತ್ತು. ಏಪ್ರಿಲ್ 10 ರ ಸಂಜೆಯ ವೇಳೆಗೆ ಇದರ ಒಳಗಿಂದ ಸಾಕಷ್ಟು ಪ್ರಮಾಣದ ಲಾವಾರಸ ಹೊರಚಿಮ್ಮುತ್ತ ಬೃಹತ್ ಕಲ್ಲು ಮತ್ತು ಬೂದಿಯ ಮಳೆ ಬರುವ ಹಾಗೆ ಮಾಡಿತ್ತು. ಈ ಪರ್ವತದ ಸ್ಫೋಟದ ತೀವ್ರತೆಗೆ ಆ ದ್ವೀಪದ ಸುತ್ತ ಇರುವ ಸಮುದ್ರದಲಿ ಸುನಾಮಿ ಉಂಟಾಗಿ ಸಂಪೂರ್ಣ ದ್ವೀಪದಲ್ಲಿ ವಾಸಿಸುತ್ತಿರುವ ಎಲ್ಲಾ ಜನರು ಹಾಗು ಅಲ್ಲಿ ಬೆಳೆದಿರುವ ಬೆಳೆಯು ನಾಶವಾಗಿತ್ತು. ಅಂದು ಈ ಪರ್ವತದಿಂದ ಹೊರಚಿಮ್ಮಿದ ಲಾವಾರಸವು 43 ಕಿಲೋಮೀಟರ್ ಎತ್ತರದವರೆಗು ಜಿಗಿದಿತ್ತು. ಅಂದರೆ ಭೂಮಿಯ “Stratosphere” ಪದರದವರೆಗು. ಈ ಸ್ಪೋಟದಿಂದ 10 ಸಾವಿರ ಜನರು ಸತ್ತಿದ್ದರೆ ಇದರ ಸ್ಫೋಟದ ನಂತರ ಎಲ್ಲವನ್ನೂ ಕಳೆದುಕೊಂಡು ತಿನ್ನಲು ಆಹಾರ ಸಿಗದೆ ಅನೇಕ ರೋಗಗಳಿಗೆ ತುತ್ತಾಗಿ ಸತ್ತ ಜನರ ಸಂಖ್ಯೆ 1 ಲಕ್ಷವಿದೆ. ಇದರೊಂದಿಗೆ ಇತಿಹಾಸ ಕಂಡ ಅತ್ಯಂತ ಭಯಾನಕ ಜ್ವಾಲಾಮುಖಿ ಪರ್ವತಗಳ ಸ್ಫೋಟದಲ್ಲಿ ಇದು ಕೂಡ ಒಂದಾಗಿದೆ.
3) ಸಾಂಟಾ ಮಾರಿಯಾ (SANTA MARIA)
ಜ್ವಾಲಾಮುಖಿ ಪರ್ವತ ಸ್ಫೋಟ ಮಧ್ಯ ಅಮೆರಿಕದ “Guatemala” ದೇಶದ ಬಳಿಯಿರುವ “Santa María” ಜ್ವಾಲಾಮುಖಿ ಪರ್ವತವು 500 ವರ್ಷಗಳಿಂದ ಶಾಂತವಾಗಿತ್ತು. ಆದರೆ ಅಕ್ಟೋಬರ್ 24, 1902 ರಲ್ಲಿ ಸ್ಪೋಟವಾಯಿತು. ಇದು ಸ್ಪೋಟವಾಗುವುದಕ್ಕಿಂತ ಮೊದಲು ಇನ್ನು ಕೆಲವೇ ತಿಂಗಳುಗಳಲ್ಲಿ ತಾನು ಸ್ಪೋಟವಾಗುತ್ತಿದ್ದೇನೆ ಎಂದು ಭೂಕಂಪಗಳ ಮೂಲಕ ಮುನ್ಸೂಚನೆ ಕೂಡ ನೀಡಿತ್ತು. ಆದರೆ ಯಾವಾಗ ಇದು ಸ್ಪೋಟವಾಯಿತೊ ಆಗ ಇದರಿಂದ ಹೊರಬಂದ ಬೂದಿಯು 4000 ಕಿಲೋಮೀಟರ್ ದೂರದಲ್ಲಿರುವ sanfrancisco ವರೆಗು ಹಬ್ಬಿತ್ತು. 500 ವರ್ಷಗಳ ಕಾಲ ಶಾಂತವಾಗಿದ್ದ ಈ ಜ್ವಾಲಾಮುಖಿ ಪರ್ವತವು ಒಮ್ಮೆಲೆ ಸ್ಪೋಟವಾಗಿದ್ದರಿಂದ 6000 ಜನರು ಪ್ರಾಣಕಳೆದುಕೊಂಡಿದ್ದರು. ಈ ಪರ್ವತವು ಸ್ಪೋಟವಾದಾಗ ಇದರಿಂದ ಹೊರಚಿಮ್ಮಿದ ಬೃಹತ್ ಗಾತ್ರದ ಕಲ್ಲುಗಳು ಬರೋಬ್ಬರಿ 14 ಕಿಲೋಮೀಟರ್ ದೂರದ ಊರುಗಳ ಮೇಲೆ ಬಿದ್ದಿದ್ದವು. ಇದರಿಂದ ಅನೇಕ ಮನೆಗಳು ಹಾಗು ಕಟ್ಟಡಗಳು ನೆಲಕ್ಕುರುಳಿದ್ದವು.
4) ಲಾಕಿ ಜ್ವಾಲಾಮುಖಿ ಪರ್ವತ ಸ್ಫೋಟ
Iceland ದೇಶದಲ್ಲಿರುವ ಈ ಜ್ವಾಲಾಮುಖಿ ಪರ್ವತವು 1783 ರಲ್ಲಿ ಸ್ಪೋಟವಾದಾಗ ಆ ದೇಶದಲ್ಲಿರುವ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರು ಸತ್ತಿದ್ದರು. 1783 ರ ಜೂನ್ ತಿಂಗಳಿನಲ್ಲಿ ಲಾವಾರಸವನ್ನು ಹೊರಚಿಮ್ಮಲು ಶುರು ಮಾಡಿದ ಈ ಪರ್ವತವು 1784 ರ ಫೆಬ್ರವರಿವರೆಗು ಸತತವಾಗಿ ಹೊರಚಿಮ್ಮುತ್ತಿತ್ತು. ಅಂದರೆ ಬರೋಬ್ಬರಿ 8 ತಿಂಗಳುಗಳ ಕಾಲ. ಈ 8 ತಿಂಗಳಲ್ಲಿ 42 ಸಾವಿರ ಕೋಟಿಯಷ್ಟು ಲಾವಾರಸವನ್ನು ಹೊರಚಿಮ್ಮಿದ ಈ ಪರ್ವತವು ಅದರ ಜೊತೆಗೆ hydrofluoric acid ಮತ್ತು sulfur dioxide ಎನ್ನುವ ವಿಷಪೂರಿತ ಅನಿಲಗಳನ್ನು ಹೊರಹಾಕಿತ್ತು. ಇದರಿಂದ Iceland ದೇಶದ ಮಣ್ಣುಗಳಲ್ಲಿ ಈ ವಿಷಪೂರಿತ ಅನಿಲಗಳು ಸೇರಿಕೊಂಡು ಬೆಳೆಗಳನ್ನೆಲ್ಲ ನಾಶ ಮಾಡಿತ್ತು. ಇತ್ತ ತಿನ್ನಲು ಆಹಾರ ಸಿಗದೆ ಮತ್ತು ಉಸಿರಾದಳು ಶುದ್ದ ಗಾಳಿಯು ಸಿಗದೆ ಅನೇಕ ಜೀವಿಗಳು ಮತ್ತು ಮನುಷ್ಯರು ಪ್ರಾಣ ಕಳೆದುಕೊಂಡಿದ್ದರು. ಇನ್ನು ಈ ಜ್ವಾಲಾಮುಖಿ ಪರ್ವತದಿಂದ ಹೊರ ಬಂದ ಲಾವಾರಸವು ಬರೋಬ್ಬರಿ 20 ಹಳ್ಳಿಗಳನ್ನು ನಾಶ ಮಾಡಿತ್ತು. ಈ ಜ್ವಾಲಾಮುಖಿ ಪರ್ವತದಿಂದ ಹೊರಬಂದ ಅನಿಲಗಳಿಂದ ಕೇವಲ Iceland ದೇಶದಲ್ಲಿ ಮಾತ್ರವಲ್ಲದೆ ಯುರೋಪ್ ನಲ್ಲು ಕೂಡ ಬೆಳೆಗಳು ನಾಶವಾಗುವುದರ ಜೊತೆಗೆ ಉತ್ತರ ಆಫ್ರಿಕ ಮತ್ತು ಭಾರತದಲ್ಲಿ ಭಯಂಕರ ಬರಗಾಲವನ್ನು ಸೃಷ್ಟಿಸಿತ್ತು.
5) ನೋವರುಪ್ತ ಜ್ವಾಲಾಮುಖಿ ಪರ್ವತ ಸ್ಫೋಟ
ಅಮೇರಿಕದ ಆಲಾಸ್ಕ ರಾಜ್ಯದ Katmai National Park and Preserve ಬಳಿಯಿರುವ Novarupta ಜ್ವಾಲಾಮುಖಿ ಪರ್ವತವು 1912 ರಲ್ಲಿ ಸೃಷ್ಟಿಯಾಗಿದೆ. ಇದು ಸೃಷ್ಟಿಯಾಗುವ ವೇಳೆ ಆದಂತಹ ಸ್ಪೋಟವನ್ನು 20 ನೆಯ ಶತಮಾನದಲ್ಲಿ ಆದ ಭಯಾನಕ ಜ್ವಾಲಾಮುಖಿ ಸ್ಫೋಟವೆಂದು ಪರಿಗಣಿಸಲಾಗಿದೆ. ಅದು ಜೂನ್ 6,1912. ಇದ್ದಕ್ಕಿದ್ದಂತೆ ಈ ಪರ್ವತದ ಸುತ್ತಲಿನ ಪ್ರದೇಶಗಳಲ್ಲಿ ಭೂಕಂಪಗಳು ಉಂಟಾಗತೊಡಗಿದ್ದವು. ರಿಕ್ಟರ್ ಮಾಪಕದಲ್ಲಿ 6 ಕ್ಕಿಂತ ಹೆಚ್ಚು ದಾಖಲಾಗಿದ್ದ ಭೂಕಂಪಗಳು ಜ್ವಾಲಾಮುಖಿ ಪರ್ವತವು ಸ್ಪೋಟವಾಗುವುದರ ಮುನ್ಸೂಚನೆ ನೀಡಿತ್ತು.ನೋಡ ನೋಡುತ್ತಿದ್ದಂತೆ ಜ್ವಾಲಾಮುಖಿ ಪರ್ವತವು ಸ್ಪೋಟವಾಯಿತು. ಸ್ಪೋಟವಾಗುವ ವೇಳೆ ಹೊರಬಂದ ಸದ್ದು ಅದೆಷ್ಟು ಭಯಾನಕವಾಗಿತ್ತೆಂದರೆ ಬರೋಬ್ಬರಿ 1207 ಕಿಲೋಮೀಟರ್ ದೂರದವರೆಗು ಅದರ ಸದ್ದು ಕೇಳಿತ್ತು. ಸ್ಪೋಟವಾದ ಮೇಲೆ ಈ ಪರ್ವತದಿಂದ ಹೊರಬಂದ ಬೂದಿಯು ಮೋಡಗಳಾಗಿ ಪರಿವರ್ತನೆಯಾಗಿ ಆಕಾಶದ ತುಂಬೆಲ್ಲಾ ಹರಡಿ ಸಂಪೂರ್ಣ ಪ್ರದೇಶವನ್ನು ಆವರಿಸಿ ಸೂರ್ಯನ ಕಿರಣಗಳು 3 ದಿನಗಳವರೆಗು ಭೂಮಿಗೆ ತಾಗದ ಹಾಗೆ ಮಾಡಿದ್ದವು.ಇಷ್ಟೇ ಅಲ್ಲದೆ ಆ ಬೂದಿಯ ತೀವ್ರತೆಯಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಉಸಿರಾಡಲು ಕಷ್ಟಪಟ್ಟಿದ್ದರು. 3 ದಿನಗಳ ಕಾಲ ಈ ಪರ್ವತದಿಂದ ಸತತವಾಗಿ ಲಾವಾರಸವು ಹೊರಚಿಮ್ಮಿ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಾಶಮಾಡಿತ್ತು. ಅದೃಷ್ಟವಶಾತ್ ಈ ಪರ್ವತದ ಸುತ್ತ ಮುತ್ತಲು ಹೆಚ್ಚು ಜನರು ವಾಸಿಸುತ್ತಿರಲಿಲ್ಲ. ಆದ್ದರಿಂದ ಹೆಚ್ಚು ಸಾವು ನೋವುಗಳು ಸಂಭವಿಸಿಲ್ಲ. ಇಲ್ಲವಾಗಿದ್ದರೆ ಸಾವಿರಾರು ಜನರು ಈ ಪರ್ವತದ ಸ್ಫೋಟದ ತೀವ್ರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರು.
Follow Karunadu Today for more Interesting Facts & Stories.
Click here to Join Our Whatsapp Group