ಕೆ ಶಿವರಾಂ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ತಮ್ಮನ್ನ ತಾವು ರಾಜಕೀಯದಲ್ಲೂ ಕೂಡ ತೊಡಗಿಸಿಕೊಂಡಿದ್ದರು, 2013 ರಲ್ಲಿ ಜೆಡಿಎಸ್ ಪಕ್ಷದ ಮುಖಂಡರಾಗಿ ಸೇರ್ಪಡೆಗೊಂಡಿದ್ದರು.

ಅದಾದ ನಂತರ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
2016 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು.

ಐಎಎಸ್ ಅಧಿಕಾರಿ ಆದಂತಹ ಕೆ ಶಿವರಾಂ ಅವರು ನಟನೆಯಲ್ಲಿಯೂ ಕೂಡ ಮೇಲುಗೈ ರಾಜಕೀಯ ಪಕ್ಷದಲ್ಲೂ ಕೂಡ ಮೇಲುಗೈ, ಹಾಗೆ ಸಾಮಾಜಿಕ ಸೇವೆಗಳಲ್ಲಿ ಕೂಡ ಇವರನ್ನ ಇವರು ತೊಡಗಿಸಿಕೊಂಡಿದ್ದರು.

ಇವರು ಮಹಾನ್ ಹಠವಾದಿ ಛಲವಾದಿ ಹಾಗೆ ಮಹಾಸಭಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೆ ಶಿವರಾಂ ಅವರು 6 ಎಪ್ರಿಲ್ 1953ರಲ್ಲಿ ರಾಮನಗರ ಜಿಲ್ಲೆಯ ಊರ್ಗಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು.
ತಂದೆ ಕೆಂಪಯ್ಯ ತಾಯಿ ಚಿಕ್ಕ ಬೋರಮ್ಮ.

ಕನ್ನಡ ಚಲನಚಿತ್ರದ ಹಿರಿಯ ನಟರಾದಂತ ಕೆ ಶಿವರಾಂ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಕೂಡ ಇವರು ನಟಿಸಿದ್ದಾರೆ.