
2024 ರ ಐಪಿಎಲ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಹೊಸ ದಾಖಲೆಗಳು ಸುರುಮಳೆಗೊಳ್ಳುತ್ತಿದ್ದು ದರಲ್ಲಿ ಆರ್‌ಸಿಬಿಗೆ ಹೊಸ ಅಧ್ಯಾಯ ಕೂಡ ಒಂದು. ದಿನಾಂಕ 28/ 4 /2024 ಭಾನುವಾರ ಮಧ್ಯಾಹ್ನ GUJARAT TITANS VS ROYAL CHALLENGERS BANGALURU ನಡೆದ ರೋಚಕವಾದ ಪಂದ್ಯದಲ್ಲಿ ಟಾಸ್ಕ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡವು ಸಾಯಿ ಸುದರ್ಶನ ಮತ್ತು ಶಾರುಖ್ ಖಾನ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ 3 ವಿಕೆಟ್‌ಗಳನ್ನು ಕಳೆದುಕೊಂಡು 200 ರನ್ ಗಳಿಸಿತ್ತು. ಈ ಗುರಿಯನ್ನು ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಅವರ ವಿಕೆಟ್ ಮಾತ್ರ ಕಳೆದುಕೊಂಡು ಕೇವಲ 16 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವಿನ ಸಂಭ್ರಮಾಚರಣೆ ಮಾಡಿತು.

ಬ್ಯಾಟಿಂಗ್ ಕ್ರಮಅಂಕದಲ್ಲಿ ಆರ್ಸಿಬಿ ತಂಡದ VIRAT KHOLI (44 ಎಸೆತಗಳಲ್ಲಿ 70 ರನ್ ಹಾಗೂ WILL JACKS ( 41 ಎಸೆತಗಳಲ್ಲ 100 ರನ್ ಗಳಿಸಿದ ಇವರು. ಇಬ್ಬರ ಜೊತೆ ಆಟದಲ್ಲಿ 85 ಎಸೆತಗಳಲ್ಲಿ 170 ರನ್ಗಳನ್ನು ಗಳಿಸಿ ತಂಡವನ್ನು ಗಳಿಸುವಲ್ಲಿ ನಿರತರಾದರು. ಐಪಿಎಲ್ ಆಟಗಾರರಲ್ಲಿ ಅತಿ ವೇಗವಾಗಿ ಕಡಿಮೆ ಎಸೆತಗಳಲ್ಲಿ ಶತಕವನ್ನು ಬಾರಿಸಿದ ಎರಡನೆಯ ಆಟಗಾರನಾಗಿ ಆರ್‌ಸಿಬಿ ತಂಡದ WILL JACKS ಅವರು ಆಗಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಕಡಿಮೆ ಓವರ್‌ಗಳಲ್ಲಿ 200ಪ್ಲಸ್ ರನ್ಗಳನ್ನ 16 ಓವರ್ ಗಳಲ್ಲಿ ಮುಕ್ತಾಯಗೊಳಿಸಿದ ತಂಡವಾಗಿ ಆರ್‌ಸಿಬಿಯು ಹೊಸ ಅಧ್ಯಾಯವನ್ನ ಸೃಷ್ಟಿ ಮಾಡಿದೆ.
ಗುಜರಾತ್ ನೀಡಿದ ಟಾರ್ಗೆಟ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 16 ಓವರ್‌ಗಳಲ್ಲಿ ಬೆನ್ನಟ್ಟಿತು. ಆದರೆ ಕಳೆದ ವರ್ಷ ವಾಖೆಂಡೆ ಮೈದಾನದಲ್ಲಿ ಆರ್‌ಸಿಬಿ ವಿರುದ್ಧವೇ ಮುಂಬೈ ಇಂಡಿಯನ್ಸ್ 16.3 ಓವರ್‌ಗಳಲ್ಲಿ 200 ಪ್ಲಸ್ ರನ್ ಮಾಡಿತ್ತು. ಈ ದಾಖಲೆಯನ್ನು ಇದೀಗ ಆರ್‌ಸಿಬಿ ಬ್ರೇಕ್ ಮಾಡಿದ್ದು, ಅತಿ ವೇಗವಾಗಿ 200 ಪ್ಲಸ್ ರನ್ ಚೇಸ್ ಮಾಡಿದ ತಂಡ ಎಂ ಹೆಗ್ಗಳಿಕೆ ಪಾತ್ರವಾಗಿದೆ. ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲೆ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ ಆರ್‌ಸಿಬಿ 2013 ರಲ್ಲಿ (263) ಅತ್ಯಧಿಕ ಮೊತ್ತ ಕಲೆ ಹಾಕಿದ ತಂಡ ಎಂಬ ದಾಖಲೆಯನ್ನು ಹೊಂದಿತ್ತು. ಆದರೆ ಈ ಋತುವಿನಲ್ಲಿ ಆರ್‌ಸಿಬಿ ವಿರುದ್ಧವೆ ಸನ್ ರೈಸರ್ಸ್ ಹೈದರಾಬಾದ್ ತಂಡವು (287) ಈ ದಾಖಲೆಯನ್ನು ಮುರಿದು ಹಾಕಿದರುವುದು ಕಾಕತಾಳೀಯ.
ವಿರಾಟ್ ಕೊಹ್ಲಿ ದಾಖಲೆ:
ಅಜೇಯ 70 ರನ್ ಬಾರಿಸಿದ ವಿರಾಟ್ ಕೊಹ್ಲಿ, ಪ್ರಸಕ್ತ ಟೂರ್ನಿಯಲ್ಲಿ 500 ರನ್ಗಳ ಗಡಿ ದಾಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸಲ 500+ ರನ್ ಬಾರಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರು ಸಹ ತಲಾ ಏಳು ಬಾರಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್, 10 ಸಲ 400+ ಸ್ಕೋರ್ ಮಾಡಿದ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ.